ಯಲ್ಲಾಪುರ ವಿಧಾನಸಭಾ ಕ್ಷೇತ್ರ ನಾಲ್ವರು ಪಕ್ಷೇತರರು ಸೇರಿ ಒಟ್ಟೂ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳೂ ಸೇರಿ ಒಟ್ಟೂ 10 ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.

ನಾಮಪತ್ರ ಸಲ್ಲಿಸಿದವರ ವಿವರ ಹೀಗಿದೆ.
1. ಅಂದಲಗಿ ವೀರಭದ್ರಗೌಡ ಪಾಟೀಲ್, ಕಾಂಗ್ರೆಸ್
2. ಲಕ್ಷ್ಮಣ ಭೀಮಣ್ಣ ಬನಸೋಡೆ, ಕಾಂಗ್ರೆಸ್ ಬಂಡಾಯ
3. ಆನಂದ ಗಣಪತಿ ಭಟ್ಟ, ಪಕ್ಷೇತರ
4.ಅರಬೈಲ ಹೆಬ್ಬಾರ ಶಿವರಾಮ, ಬಿಜೆಪಿ
5.ನಾಗೇಶ ಹೊನ್ನಯ್ಯ ನಾಯ್ಕ, ಜೆಡಿಎಸ್
6. ಸಂತೋಷ ಮಂಜುನಾಥ ಶೇಟ್ ರಾಯ್ಕರ, ಕೆಆರ್ ಪಿಪಿ
7.ಮಂಜುನಾಥ ಲವಾ ಕುಲುಮಕರ, ಆಮ್ ಆದ್ಮಿ ಪಾರ್ಟಿ
8. ಮಂಜುನಾಥ ಶಿರಹಟ್ಟಿ, ಕರ್ನಾಟಕ ರಾಷ್ಟ್ರ ಸಮಿತಿ
9.ಚಿದಾನಂದ ಹನ್ಮಂತಪ್ಪ ಹರಿಜನ, ಪಕ್ಷೇತರ
10. ಶೆಟ್ಟಪ್ಪ ಯಲ್ಲಪ್ಪ ಭೋವಿವಡ್ಡರ, ಪಕ್ಷೇತರ

ಇವ್ರೆಲ್ಲರೂ ಯಲ್ಲಾಪುರ ವಿಧಾನಸಭೆಗೆ ಆಯ್ಕೆ ಬಯಸಿ ಸಧ್ಯ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಅಂತಿಮವಾಗಿ ಕಣದಲ್ಲಿ ಉಳಿಯೋದು ಯಾರ್ಯಾರು ಅನ್ನೋದು ಇನ್ನೇನು ಎರಡು ದಿನದಲ್ಲಿ ತಿಳಿಯಲಿದೆ.

error: Content is protected !!