ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಿತ್ಯವೂ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಅದ್ರ ಜೊತೆ ನಿತ್ಯವೂ ಪಕ್ಷಾಂತರದ ಪರ್ವ ಚಾಲ್ತಿಯಲ್ಲಿದೆ. ಇವತ್ತು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪರ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅಬ್ಬರದ ಪ್ರಚಾರ ಕೈಗೊಂಡ್ರು.
ಶ್ರೀನಿವಾಸ್ ಮಾನೆ ಪ್ರಚಾರ..!
ಬೆಳಿಗ್ಗೆ ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಪ್ರಚಾರ ನಡೆಸಿದ ಶ್ರೀನಿವಾಸ್ ಮಾನೆ, ಬಾಂಬೆ ಬಾಯ್ಸ್ ಬಗ್ಗೆ ಲೇವಡಿ ಮಾಡಿದ್ರು. ನಿಮ್ಮ ಹತ್ತಿತ ಮತ ಪಡೆದ ಬಾಂಬೆ ಬಾಯ್ಸ್ ಆ ಮತವನ್ನು ಕೋಟಿ ಕೋಟಿಗೆ ಮಾರಿಕೊಂಡು ಶ್ರೀಮಂತರಾಗಿದ್ದಾರೆ, ಆದ್ರೆ ಮತ ಕೊಟ್ಟ ನಿಮ್ಮನ್ನೇಲ್ಲ ಬಡವರನ್ನಾಗಿಸಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಇನ್ನು, ಕಳೆದ ಹಾನಗಲ್ ಉಪ ಚುನಾವಣೆ ವೇಳೆ ಇಡೀ ಆಡಳಿತವೇ ನನ್ನ ಸೋಲಿಸಲು ಠಿಕಾಣಿ ಹೂಡಿದ್ರು, ಆದ್ರೆ ಅವತ್ತು ಪ್ರಬುದ್ಧ ಮತದಾರರು ನನ್ನ ಗೆಲ್ಲಿಸುವ ಮೂಲಕ ಬಿಜೆಪಿ ಆಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು ಅಂತಾ ಹೇಳಿದ್ರು.
ಕಿಟ್ ಹಂಚಿಕೆಯಲ್ಲಿ ಗೋಲ್ಮಾಲ್..!
ಇನ್ನು ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಪಾಟೀಲ್, ಕೊರೊನಾ ಸಂದರ್ಭದಲ್ಲಿ ನಮ್ಮ ಸಚಿವರು ಬಡವರಿಗೆ ರೇಶನ್ ಕಿಟ್ ಹಂಚಿದ್ರು, ಆ ವೇಳೆ ಒಂದು ಕಿಟ್ ಗೆ 600 ರೂಪಾಯಿ ಆದ್ರೆ, ಅವ್ರು ಸರ್ಕಾರಕ್ಕೆ ಲೆಕ್ಕ ಕೊಟ್ಟು ಖರ್ಚು ಹಾಕಿದ್ದು ಒಂದು ಕಿಟ್ ಗೆ 6,500 ರೂ. ಹೀಗಾಗಿ ಅವತ್ತು ಕಿಟ್ ಹಂಚಿಕೆಯಲ್ಲೇ ಇವ್ರು ಕೋಟಿ ಕೋಟಿ ಲೂಟಿ ಹೊಡೆದ್ರು. ಇದ್ರಲ್ಲಿ 40% ಅಷ್ಟೆ ಆಗಲಿಲ್ಲ, ಬದಲಾಗಿ 400% ಪರ್ಸೆಂಟೇಜ್ ಹೊಡೆದ್ರು ಅಂತಾ ವ್ಯಂಗ್ಯವಾಡಿದ್ರು. ಇದೇ ಹಣದಲ್ಲಿ ಬೇರೆ ತಾಲೂಕಿನಲ್ಲಿ ಹೋಗಿ ಸಕ್ಕರೆ ಫ್ಯಾಕ್ಟರಿ ಪ್ರಾರಂಭಿಸಿದ್ರು ಅಂತಾ ವಾಗ್ದಾಳಿ ನಡೆಸಿದ್ರು.
ಈ ವೇಳೆ ತಾಲೂಕಿನ ಕಾಂಗ್ರೆಸ್ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.