ಛತ್ತೀಸಗಡದಲ್ಲಿ ಸಂಭವಿಸಿದ್ದ ಬಾಂಬ್ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಹಾನಗಲ್ ತಾಲೂಕಿನ CRPF ಯೋಧ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ದುರಂತ ಅಂದ್ರೆ, ತನ್ನ ಮದುವೆ ವಾರ್ಷಿಕೋತ್ಸವದ ದಿನವೇ ಇಹಲೋಕ ತ್ಯಜಿಸಿರೋ ವೀರಯೋಧನ ಪತ್ನಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾರೆ.
ತಂದೆ ತಾಯಿಗೆ ಸುದ್ದಿ ತಿಳಿಸಿಲ್ಲ..!
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಸೈನಿಕ, 26 ವರ್ಷ ವಯಸ್ಸಿನ ರವಿ ಕೆಳಗಿನಮನಿ ಎಂಬುವ ಯೋಧ ಹುತಾತ್ಮರಾಗಿದ್ದಾರೆ. ಇನ್ನು ಮತ್ತೊಂದು ಮನಕಲಕುವ ಸಂಗತಿಯೆಂದ್ರೆ, ತನ್ನ ಮಗನ ಸಾವಿನ ಸುದ್ದಿ ಆತನ ಪತ್ನಿಗೆ, ತಂದೆ-ತಾಯಿಗೆ ಹೇಳದೆ ಮುಚ್ಚಿಡಲಾಗಿದೆ. ಯಾಕಂದ್ರೆ, ಕಾರಣ 2 ಮೃತ ಯೊಧನ ಹೆಂಡತಿ ಅಶ್ವಿನಿ ಈಗ ಎರಡು ತಿಂಗಳ ಗರ್ಭಿಣಿ.
ಮಾರ್ಚ 30 ರಂದು ಛತ್ತಿಸಗಡದಲ್ಲಿ ಬಾಂಬ್ ದಾಳಿಯಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಯೋಧ ರವಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಸದೆ ಛತ್ತೀಸಗಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನು, ಮೃತ ಯೋಧನ ಪಾರ್ಥೀವ ಶರೀರ ದೆಹಲಿಯಲಿಂದ ಕರ್ನಾಟಕಕ್ಕೆ ಇಂದು ಬರಲಿದೆ. ಹಾಗೆನೇ, ನಾಳೆ ಯೋಧನ ಹುಟ್ಟೂರು ಬ್ಯಾತನಾಳ ಗ್ರಾಮಕ್ಕೆ ಮೃತದೇಹ ಬರುವ ನಿರೀಕ್ಷೆ ಇದ್ದು ನಾಳೆಯೇ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಹಾವೇರಿ ಜಿಲ್ಲಾಡಳಿತದಿಂದ ವೀರ ಯೋಧನ ಅಂತ್ಯಕ್ರೀಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.