ರಮೇಶ್ ಜಾರಕಿಹೊಳಿ ನಿಗೂಢ ನಡೆ: RSS ಮುಖಂಡರ ಭೇಟಿ ಹಿಂದಿನ ಮರ್ಮವೇನು..?

ರಮೇಶ್ ಜಾರಕಿಹೊಳಿ ನಿಗೂಢ ನಡೆ: RSS ಮುಖಂಡರ ಭೇಟಿ ಹಿಂದಿನ ಮರ್ಮವೇನು..?

ಬೆಳಗಾವಿ: ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಶನಿವಾರ ಬೆಳಗ್ಗೆ ಆರ್ ಎಸ್ಎಸ್ ಪ್ರಭಾವಿ ನಾಯಕ ಅರವಿಂದರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವ ಸ್ಥಾನಕ್ಕಾಗಿ..? ಅಥಣಿಯ ದೇಶಪಾಂಡೆ ಮನೆಗೆ ತೆರಳಿದ ಜಾರಕಿಹೊಳಿ, ಸಚಿವಸ್ಥಾನ ಮರಳಿ ಪಡೆಯುವ ದಿಸೆಯಲ್ಲಿ ಸಂಘ ಪರಿವಾರದ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿದರೆಂದು ಗೊತ್ತಾಗಿದೆ. ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ನಾಗಪುರದ ಆರ್ ಎಸ್ಎಸ್ ಕಚೇರಿಗೂ ಅವರು ಭೇಟಿ ನೀಡಿದ್ದರು. ಅರವಿಂದ ರಾವ್ ದೇಶಪಾಂಡೆ ಜೊತೆಗಿನ ಮಾತುಕತೆಯ ವಿವರ ನೀಡಲು ನಿರಾಕರಿಸಿದ ರಮೇಶ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡದೆ ತೆರಳಿದರು. ಸುತ್ತೂರು ಮಠಕ್ಕೂ ಬೇಟಿ..! ನಿನ್ನೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸಧ್ಯದ ಪ್ರಭಾವಿ ಲಿಂಗಾಯತ ಸ್ವಾಮೀಜಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ. ಇನ್ನು 8 -10 ದಿನದಲ್ಲಿ ತಾವು ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಸಾಧ್ಯತೆಯನ್ನು ಅವರು ಬಹಿರಂಗ ಪಡಿಸಿದ್ದು, ತನ್ಮೂಲಕ ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದಾರೆ. ಸಚಿವಸ್ಥಾನಕ್ಕೆ ರಾಜಿನಾಮೆ...

ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ..! 1ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ ನಟ..!! ಏನಿದು ಕತೆ..?

ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ..! 1ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ ನಟ..!! ಏನಿದು ಕತೆ..?

ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟನಲ್ಲಿ ಚಿತ್ರ ನಟ ಚೇತನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕೇವಲ 1 ರೂ. ಕೇಸ್.. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಚಿವ ಹೆಬ್ಬಾರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಕೇವಲ ಒಂದು ರೂಪಾಯಿ ಮಾನನಷ್ಟ ಪರಿಹಾರ ಕೋರಿ ನಟ ಚೇತನ್ ಮೊಕದ್ದಮೆ ದಾಖಲಿಸಿದ್ದಾರೆ. ಏನಿದು ವಿವಾದ..? ಇತ್ತಿಚೆಗೆ ನಟ ಚೇತನ್ ಬ್ರಾಹ್ಮಣರ ವಿರುದ್ಧ ಮಾತನಾಡಿದ್ರು ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಗರಂ ಆಗಿದ್ರು. ಚೇತನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೇ ಠಕ್ಕರ್ ಕೊಟ್ಟಿದ್ರು. ಬ್ರಾಹ್ಮಣರ ವಿರುದ್ಧ ಮಾತನಾಡಿದ್ದ ನಟ ಚೇತನರ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ರು. ಕೇವಲ 1 ರೂ. ಪರಿಹಾರ ಬೇಕಂತೆ..! ಹೀಗಾಗಿ, ನಟ ಚೇತನ ಸಚಿವ ಹೆಬ್ಬಾರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹೆಬ್ಬಾರ್ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ. ನನಗೆ ಅದ್ರಿಂದ ಮಾನಹಾನಿಯಾಗಿದೆ. ಹೀಗಾಗಿ, ನನಗೆ 1 ರೂ. ಮಾನಹಾನಿ...

ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?

ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ. ಬ್ಯಾಟ್ಸ್ ಮೆನ್ ಆಗಿ ಕ್ರೀಸ್ ಗೆ ಅಂಟಿಕೊಂಡು ನಿಂತ್ರೆ ಸುನಾಮಿಯಂತೆ ರನ್‍ಗಳು ಹರಿದುಬರುತ್ತೆ. ಎದುರಾಳಿಯ ಸವಾಲು ಎಷ್ಟೇ ಇರಲಿ, ಬ್ಯಾಟ್ ಝಳಪಿಸಲು ಶುರು ಮಾಡಿದ್ರೆ ಚೇಸಿಂಗ್ ಗಾಡ್. ಇನ್ನು ಫಿಟ್ ನೆಸ್ ಬಗ್ಗೆ ಹೇಳುವುದೇ ಬೇಡ. ಮಿಂಚಿನ ಗತಿಯಲ್ಲಿ ಓಡಾಡುತ್ತಾ ಚುರುಕಿನ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಆಕ್ರಮಣಕಾರಿ ಪ್ರವೃತ್ತಿ, ಹೋರಾಟ ಛಲ, ಗೆಲ್ಲಲೇಬೇಕು ಅನ್ನೋ ಹಠ ಹಾಗೂ ಸೋಲನ್ನು ಒಪ್ಪಿಕೊಳ್ಳದಂತಹ ಮನಸ್ಥಿತಿಯ ಆಟಗಾರ. ಒಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿಯವರಲ್ಲಿ ಯಾವುದೇ ಒಂದು ತಪ್ಪನ್ನು ಹುಡುಕಲು ಸಾಧ್ಯವಿಲ್ಲ. ನಾಯಕನಾಗಿ ಮಿಂಚಲೇ ಇಲ್ಲ..! ಆದ್ರೆ ನಾಯಕನಾಗಿ ವಿರಾಟ್ ಕೊಹ್ಲಿ ಇಷ್ಟವಾಗುವುದಿಲ್ಲ. ನಾಯಕತ್ವದ ಗುಣಗಳಿದ್ರೂ ವಿರಾಟ್ ಕೊಹ್ಲಿ ಸತತವಾಗಿ ಎಡವುತ್ತಿದ್ದಾರೆ. ತನ್ನ ಮನೋಭಾವನೆ ಮತ್ತು ತೆಗೆದುಕೊಳ್ಳುವ ನಿರ್ಧಾರಗಳಿಂದ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ತಾನೊಬ್ಬ ವಿಶ್ವದ ಶ್ರೇಷ್ಠ ತಂಡದ ನಾಯಕ ಎಂಬುದನ್ನು ಮರೆತುಬಿಡುತ್ತಾರೆ. ಒಬ್ಬ ಆಕ್ರಮಣಕಾರಿಯಾಗಿ ಆಟಗಾರನಾಗಿ ಕಾಣುತ್ತಾರೆ ಹೊರತು ಒಬ್ಬ ನಾಯಕನಾಗಿ...

ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ: ಭಾರತೀಯ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವಿಕ್ಷಣೆ ಮಾಡಿದ್ದಾರೆ. ಗೋವಾ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಆಗಿರುವ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ರಿಯಲ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ನೌಕಾನೆಲೆ ಹ್ಯಾಲಿಪ್ಯಾಡ್‍ನಲ್ಲಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಕಾಮಗಾರಿ ವೀಕ್ಷಣೆ..! ಸೀಬರ್ಡ್ ಪ್ರವೇಶದ ಬಳಿಕ ನೌಕಾನೆಲೆಯ ಸುತ್ತಲೂ ತೆರಳಿ ವೀಕ್ಷಣೆ ನಡೆಸಿದ ಸಚಿವರು ಶಿಪ್ ರಿಪೇರ್ ಯಾರ್ಡ್ ಬಳಿ ಹಡಗುಗಳನ್ನು ಲಿಫ್ಟ್ ಮಾಡುವ ಸಾಮರ್ಥ್ಯದ ಪ್ರದರ್ಶನವನ್ನು ವೀಕ್ಷಿಸಿದರು. ಇಲ್ಲಿನ ವಿವಿಧ ಸೈಟ್‍ಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಸೀಬರ್ಡ್ ಯೋಜನೆಯ ಎರಡನೇ ಹಂತದ ವಿಸ್ತರಣೆ...

ಇದು ಟಿಬೇಟಿಯನ್ ಕಾಲೋನಿಯಲ್ಲಿ  ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಇದು ಟಿಬೇಟಿಯನ್ ಕಾಲೋನಿಯಲ್ಲಿ ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.6 ರಲ್ಲಿ ಇವತ್ತು ಒಂದು ಅದ್ಭುತ ನಡೆದಿದೆ. ಕಾಳಿಂಗ ಸರ್ಪವೊಂದು ಗಿಡದ ಮೇಲೇರಿ ಹೆಡೆ ಎತ್ತಿ ಸ್ವಚ್ಚಂದವಾಗಿ ಆಟವಾಡಿದೆ. ಯಸ್, ಇದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಕಂಡು ಬಂದ ಅದ್ಭುತ ದೃಷ್ಯ. ಹೇಗಿದೆ ಅಂತಾ ಈ ವಿಡಿಯೋ ನೋಡಿ..  

ಮನೆ ಮೇಲ್ಚಾವಣಿ ಕುಸಿದು ಕಾರ್ಮಿಕ ಸಾವು: ಮತ್ತೋರ್ವ ಗಂಭೀರ..!

ಮನೆ ಮೇಲ್ಚಾವಣಿ ಕುಸಿದು ಕಾರ್ಮಿಕ ಸಾವು: ಮತ್ತೋರ್ವ ಗಂಭೀರ..!

ಕಾರವಾರ: ಮನೆ ಮೇಲ್ಚಾವಣಿ ಕುಸಿದು ಒರ್ವ ಕಾರ್ಮಿಕ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯವಾದ ಘಟನೆ, ಕಾರವಾರ ತಾಲೂಕಿನ ಸದಾಶಿವಗಡದಲ್ಲಿ ನಡೆದಿದೆ. ಹುಚ್ಚಪ್ಪ ಸಂಗಪ್ಪ(35) ಮೃತ ಕೂಲಿ ಕಾರ್ಮಿಕನಾಗಿದ್ದಾನೆ. ಗಾಯಗೊಂಡ ಮತ್ತೋರ್ವ ಕಾರ್ಮಿಕನನ್ನ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಳೆಯ ಮನೆಯನ್ನ ರಿನಿವೇಶನ್ ಮಾಡುವ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ ಇಬ್ಬರೂ ಕಾರ್ಮಿಕರ ಮೇಲೆ ಗೋಡೆ ಕುಸಿದು ಬಿದ್ದಿದೆ. ಗೋಡೆಯಡಿ ಸಿಲುಕಿ ಹುಚ್ಚಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು, ಗೋಡೆಯಡಿ ಸಿಲುಕಿದ್ದವರನ್ನ ಅಗ್ನಿಶಾಮಕದಳದ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸದ್ಯ ತಾಲೂಕಿನಲ್ಲಿ ಒಟ್ಟೂ 88 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಯಾವುದೇ ಸೋಂಕಿತರು ಇಂದು ಗುಣಮುಖರಾಗಿಲ್ಲ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ

ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ಮುಂಡಗೋಡ: ದೇಶಪಾಂಡೆ ರುಡ್ ಸೆಟಿ ಸಂಸ್ಥೆಯ ಮುಖಾಂತರ ಇಂದು ತಾಲೂಕಿನ ಇಂದೂರ ಗ್ರಾಮದಲ್ಲಿ ಇಂದೂರು, ನಂದಿಕಟ್ಟಾ ಹಾಗೂ ಹುನಗುಂದ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮರಾಜ ನಡಿಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪ್ರವೈಜರ್ ಫಾತಿಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಇಮ್ರಾನ್ ಖಾನ್ ಬಾಳಿಕಾಯಿ, ರಾಜು ಹರಿಜನ, ಸಂಸ್ಥೆಯ ಸುಪ್ರವೈಜರ್ ಈರಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಬಿಜೆಪಿ ಮಹಿಳಾ ಮೋರ್ಚಾ ಮಂಡಲ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ 68 ನೇ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ ಚಲವಾದಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜೀವನ, ಸಾಧನೆಗಳ ಕುರಿತು ಮಾತನಾಡಿದ್ರು. ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ್, ತಾಲೂಕಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೈಸಾ ಥಾಮಸ್, ಮಹಿಳಾ ಮೋರ್ಚಾ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಾಲತಿ ಮಿರಜಕರ್, ಸರಸ್ವತಿ ಕೋಂಡ್ಲಿ, ಫಕ್ಕೀರವ್ವ ಪಾಟೀಲ್, ಸವಿತಾ, ಅಂಜು ಪಾಯಣ್ಣವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ: ಓರ್ವ ಎಎಸ್ಐ ಸೇರಿದಂತೆ ಒಟ್ಟು 7 ಜನ ಪೊಲೀಸರಿಗೆ ಮುಂಡಗೋಡ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿದೆ. ಎಎಸ್ಐ ಅಶೋಕ ರಾಠೋಡ್, ಖೀರು ಘಟಕಾಂಬಳೆ, ರಾಘೂ ನಾಯ್ಕ್, ಭಗವಾನ್ ಗಾಂವಕರ್, ಕುಮಾರ್ ಬಣಕಾರ್, ಗುರು ನಾಯಕ ಹಾಗೂ ಮಹಿಳಾ ಪೇದೆ ಪೂಜಾ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಮುಂಡಗೋಡ ಠಾಣೆಯಲ್ಲಿ ವರ್ಗಾವಣೆಗೊಂಡ ಪೊಲೀಸರಿಗೆ ಬಿಳ್ಕೋಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಪಿಐ ಪ್ರಭುಗೌಡ ಕಿರೇದಳ್ಳಿ, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್, ಪಿಎಸ್ಐ ಬಸವರಾಜ್ ಮಬೆನೂರು ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

error: Content is protected !!