ಮುಂಡಗೋಡ ಗೊಟಗೋಡಿಕೊಪ್ಪದಲ್ಲಿ ಹಾಡಹಗಲೇ ತಾಯಿ ಮಗಳ‌ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ..!

ಮುಂಡಗೋಡ ಗೊಟಗೋಡಿಕೊಪ್ಪದಲ್ಲಿ ಹಾಡಹಗಲೇ ತಾಯಿ ಮಗಳ‌ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ..!

ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆಯಾಗಿದೆ. ಖುದ್ದು ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ‌ ಮಾರಣಾಂತಿಕವಾಗಿ ಎರ್ರಾಬಿರ್ರಿ ಕೊಚ್ಚಿದ್ದಾನೆ ಅನ್ನೋ ಅರೋಪ ಕೇಳಿ ಬಂದಿದೆ, ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಟಗೋಡಿಕೊಪ್ಪದ ಹೊನ್ನಮ್ಮ ಬಸವರಾಜ್ ಚಿನ್ನಳ್ಳಿ ಹಾಗೂ ಮಗಳು ಅನ್ನಪೂರ್ಣ ಎಂಬುವವರೇ ಕುಡುಗೋಲಿನಿಂದ ಹಲ್ಲೆಗೆ ಒಳಗಾದವರಾಗಿದ್ದಾರೆ. ಘಟನೆ ಏನು..? ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪದಲ್ಲಿ ಅನ್ನಪೂರ್ಣ ಎಂಬುವ ಯುವತಿಯನ್ನು ಅದೇ ಗ್ರಾಮದ ನಾಗರಾಜ್ ವಡಲಣ್ಣವರ್ ಎಂಬುವ ಯುವಕನಿಗೆ ಕಳೆದ 10 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಮದುವೆ ಆದಾಗಿನಿಂದ ಗಂಡನ ಕಿರುಕುಳ ವಿಪರೀತವಾಗಿತ್ತಂತೆ. ನಿತ್ಯವೂ ಕುಡಿದು ಬಂದು ಪತ್ನಿಯನ್ನು ಹೊಡೆಯುವ ಹೀನ ಚಾಳಿಯಿತ್ತಂತೆ. ಇದರ ನಡುವೆಯೇ ಅದು ಹೇಗೋ ಹೊಂದಿಕೊಂಡು ಸಂಸಾರ ಮಾಡಿದ್ದರ ಫಲವಾಗಿ ಇಬ್ಬರು ಮುದ್ದಾದ ಗಂಡು ಮಕ್ಕಳು ಹುಟ್ಟಿದ್ದಾರೆ. ಆದ್ರೆ, ಇದರ ಮೇಲೆಯೂ ಗಂಡನ ಕಿರುಕುಳ ನಿರಂತರವಾಗಿಯೇ ಇತ್ತು ಅನ್ನೋ ಆರೋಪ...

ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!

ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!

ಮುಂಡಗೋಡ ಪಟ್ಟಣದ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತವಾಗಿದೆ‌. ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಬರೋಬ್ಬರಿ 7 ಆಕಳುಗಳು ಸಜೀವ ದಹನವಾಗಿ ಸುಟ್ಟು ಕರಕಲಾಗಿವೆ. ಆದ್ರೆ, ಬೆಂಕಿ ತಗುಲಿದ್ದು ಹೇಗೆ ಅಂತಾ ಇನ್ನು ಖಚಿತತೆ ಸಿಕ್ಕಿಲ್ಲ. ಹಳೂರಿನ ಮಂಜುನಾಥ್ ನಾಗೇಶ್ ಶೇಟ್ ಎಂಬುವವರಿಗೆ ಸೇರಿದ, ದನದ ಕೊಟ್ಟಿಗೆಯಲ್ಲಿ ದುರಂತ ಸಂಭವಿಸಿದೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಇಡೀ ದನದ ಕೊಟ್ಟಿಗೆ ಆಕಳುಗಳ ಸಮೇತವಾಗಿಯೇ ಸುಟ್ಟು ಕರಕಲಾಗಿದೆ. ದುರಂತ ಅಂದ್ರೆ ಘಟನೆ ನಡೆದಾಗ ರಾತ್ರಿ ಯಾರಿಗೂ ಗಮನಕ್ಕೆ ಬಂದಿಲ್ಲ, ಬೆಳಿಗ್ಗೆಯಷ್ಟೇ ಘಟನೆ ಬೆಳಕಿಗೆ ಬಂದಿದೆ. ಈ ಅನಾಹುತದಲ್ಲಿ ಹಾನಿಯಾದ ಅಂದಾಜು ಇನ್ನು ಲಭ್ಯವಾಗಿಲ್ಲ. ಸದ್ಯ ಮುಂಡಗೋಡ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!

ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಬಳಿಮಿನಿ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ‌. ಲಾರಿಯಡಿ ಚಾಲಕ ಸಿಲುಕಿಕೊಂಡಿದ್ದು ಚಾಲಕನ ರಕ್ಷಣಾ ಕಾರ್ಯ ನಡಿತಿದೆ. ಜಿಯೋ ಟವರ್ ಕೆಲಸ ಮಾಡಲು ಮುಂಡಗೋಡಿಗೆ ಬಂದಿದ್ದ ಕೃಷ್ಣ ಸಿಂಗನಳ್ಳಿ ಹಾಗೂ ಚಾಲಕ ಶಶಿ, ಶಿರಸಿ ಕಡೆಗೆ ಹೋಗುತ್ತಿದ್ದಾಗ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಮಿನಿ ಲಾರಿ ಪಲ್ಟಿಯಾಗಿದೆ‌. ಇನ್ನು ಘಟನೆಯಲ್ಲಿ ಚಾಲಕ ಲಾರಿಯಡಿಯಲ್ಲೇ ಸಿಲುಕಿಕೊಂಡಿದ್ದು, ನರಳುತ್ತಿದ್ದಾನೆ. ಹೀಗಾಗಿ, ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಟ್ಟರ್ ಸಹಾಯದಿಂದ ಚಾಲಕನನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕಟ್ಟರ್ ನಿಂದ ಕಾರ್ಯಾಚರಣೆ ಮಾಡುವ ವೇಳೆ ಯುವಕನೊಬ್ಬನಿಗೆ ಕಟ್ಟರ್ ತಾಗಿ ಗಾಯವಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ..!

ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಹಲವು ಅನಾಹುತಗಳಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮುಂಡಗೋಡ ತಾಲೂಕು ಸೇರಿದಂತೆ ನಾಳೆ ಜುಲೈ 25 ರ ಮಂಗಳವಾರವೂ ಜಿಲ್ಲೆಯ ಅಂಗನವಾಡಿಗಳೂ ಸೇರಿ, ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಹವಾಮಾನ (Meteorological Department) ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಅಲ್ಲದೇ, ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೆಜುಗಳಿಗೆ ರಜೆ ನೀಡಿದ್ದು ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

ನಾಳೆ ಹಾವೇರಿಗೆ ಸಿಎಂ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆ ನಡೆಸಲಿರೋ ಸಿಎಂ..!

ನಾಳೆ ಹಾವೇರಿಗೆ ಸಿಎಂ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆ ನಡೆಸಲಿರೋ ಸಿಎಂ..!

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಕೆಲವು ಕಡೆ ಹಾನಿಯಾದ ಹಿನ್ನಲೆಯಲ್ಲಿ, ನಾಳೆ ಮೊದಲ ಬಾರಿಗೆ ಏಲಕ್ಕಿ ನಾಡಿಗೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಕೃಷಿ,ಆರೋಗ್ಯ,ಆಹಾರ, ಮಳೆ-ಬೆಳೆ ಹಾನಿ ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಹೀಗಾಗಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರಿಂದ ಪೂರ್ವ ಭಾವಿ ಸಭೆ ನಡೆಯಿತು. ತವರು ಜಿಲ್ಲೆಯವರಾಗಿದ್ದರು ಬಸವರಾಜ್ ಬೊಮ್ಮಾಯಿ ಈ ಹಿಂದೆ ಸಿಎಂ ಆಗಿದ್ದಾಗ ಒಂದು ಬಾರಿಯೂ ಪ್ರಗತಿ ಪರಿಶೀಲನಾ ಸಭೆ ಮಾಡಿರಲಿಲ್ಲ. ಹೀಗಾಗಿ, ಸಿದ್ದರಾಮಯ್ಯ ನವರ ಹಾವೇರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಮಹತ್ವ ಪಡೆದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಿನ ಹಲವು ಲೋಪದೋಷಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಹಾನಗಲ್: ತುಂಬಿ ಹರಿಯುತ್ತಿರೋ ಧರ್ಮಾ ನದಿಯಲ್ಲಿ ಎಮ್ಮೆ ಮೈತೊಳೆಯುವಾಗ ಕಾಲುಜಾತಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯಮನಪ್ಪ ಬಂಡಿವಡ್ಡರ (24)ಮೃತ ಯುವಕನಾಗಿದ್ದಾನೆ. ಎಮ್ಮೆ ಮೇಯಿಸಲು ಜಮೀನಿಗೆ ತೆರಳಿದ್ದ ಮೃತ ಯಮನಪ್ಪ, ಮರಳಿ ವಾಪಸ್ಸು ಮನೆಗೆ ಬರುವಾಗ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯುವಾಗ ದುರಂತ ಸಂಭವಿಸಿದೆ. ಕಾಲು ಜಾರಿ ನದಿಗೆ ಬಿದ್ದಾಗ ಈಜು ಬಾರದೆ ಯುವಕ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಡೂರು ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ಶಾಲಾ ಕಾಲೇಜುಗಳಿಗೆ ರಜೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ಶಾಲಾ ಕಾಲೇಜುಗಳಿಗೆ ರಜೆ..!

ಉತ್ತರ ಕನ್ನಡ ಜಿಲ್ಲಾಧ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮುಂಡಗೋಡ ತಾಲೂಕು ಸೇರಿದಂತೆ ನಾಳೆ ಸೋಮವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೆಜುಗಳೊಗೆ ರಜೆ ನೀಡಿದ್ದು ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಕರೆ ನೀಡಲಾಗಿದೆ.

ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಮುಂಡಗೋಡ: ಕರಡಿ ದಾಳಿಯಿಂದ ಸ್ಥಳದಲ್ಲೇ ಸಾವುಕಂಡಿದ್ದ ರೈತನ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ನೀಡಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಪರಿಹಾರದ ಆಸರೆ ಒದಗಿಸುವಲ್ಲಿ ಜವಾಬ್ದಾರಿ ಮೆರೆದಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಹ್ಯಾಟ್ಸ್ ಅಪ್.. ಅಂದಹಾಗೆ, ಕರಡಿ ದಾಳಿಯಿಂದ ಮುಂಡಗೋಡ ತಾಲೂಕಿನ ಮರಗಡಿ ಗೌಳಿದಡ್ಡಿಯ ಜಿಮ್ಮು ವಾಘು ತೋರವತ್ ಎಂಬುವ ರೈತ ಭೀಕರ ಸಾವು ಕಂಡಿದ್ದ‌. ಹೀಗಾಗಿ, ಅಕ್ಷರಶಃ ನಲುಗಿ ಹೋಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ CCF ವಸಂತ ರೆಡ್ಡಿ, ಯಲ್ಲಾಪುರ ವಿಭಾಗದ DFO ಶಶಿಧರ್ ಹೆಗಡೆ, ACF ರವಿ ಹುಲಕೋಟಿ, RFO ಸುರೇಶ್ ಕುಲ್ಲೋಳ್ಳಿ, DRFO ನಾಗರಾಜ್ ಕಲಾಲ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಹಾವೇರಿ: ಡಿಡಿಪಿಐ ಹಾಗೂ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಡಿಡಿಪಿಐ ಅಂದಾನೆಪ್ಪ ಒಡಿಗೇರಿ ಹಾಗೂ ಕೇಸ್ ವರ್ಕರ್ ದತ್ತಾತ್ರೆಯ್ ಕುಂಟೆಯವರನ್ನ ಲೋಕಾ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮಹಮ್ಮದ್ ಗೌಸ್ ಎಂಬ ಶಿಕ್ಷಕ, ತಮ್ಮ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಿದ್ದರು. ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ಕೋರಿದ್ದರು. ಅದಕ್ಕಾಗಿ ಡಿಡಿಪಿಐ 7 ಸಾವಿರ ರು. ಲಂಚ ಕೇಳಿದ್ದರು ಎನ್ನಲಾಗಿದೆ. ಹೀಗಾಗಿ, 7 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತಿದೆ.

ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿದ್ದಾನೆ. ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ಭೀಕರವಾಗಿ ಕೊಂದು ಹಾಕಿದೆ. ಮರಗಡಿ ಗೌಳಿ ದಡ್ಡಿಯ ಜಿಮ್ಮು ವಾಘು ತೋರವತ್(58) ಕರಡಿ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಅಂದಹಾಗೆ, ನಿನ್ನೆ ಗುರುವಾರ ಈತ ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದ. ಆದ್ರೆ, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರಬೇಕಿದ್ದ ರೈತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಹುಡುಕಲು ಹೋಗಿದ್ದಾರೆ. ಈ ವೇಳೆ ಕರಡಿ ದಾಳಿಯಿಂದ ಮೃತಪಟ್ಟು ಬಿದ್ದಿರೋದು ಕಂಡು ಬಂದಿದೆ. ಕರಡಿ ದಾಳಿಯಿಂದ ಮೃತಪಟ್ಟ ಘಟನೆ ಅರಿವಾದ ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರೋ ಕುಟುಂಬಸ್ಥರು, ಗ್ರಾಮಸ್ಥರು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!