ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ವ್ಯಕ್ತಿಯನ್ನು ಹುಬ್ಬಳ್ಳಿ ಸಮೀಪದ ಹಳ್ಯಾಳ ಗ್ರಾಮದಲ್ಲಿ ಭೀಕರ ಕೊಲೆ ಮಾಡಲಾಗಿದೆ. ತಲೆ ಮೇಲೆ ಪಾಟಿ ಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಅರಶಿಣಗೇರಿಯ ಶರೀಫ್ ಸಾಬ್ ಮಾಬುಸಾಬ್ ಕಮಡೊಳ್ಳಿ ಎಂಬುವವನನ್ನು ಭೀಕರವಾಗಿ ಕೊಂದು ಹಾಕಲಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು ಶಶಿಧರ ಚೆನ್ನೋಜಿ ಅಂತಾ ತಿಳಿದು ಬಂದಿದೆ. ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿಯಲ್ಲಿ ಕೊಲೆ ಮಾಡಲಾಗಿದೆ. ಅಂದಹಾಗೆ, ಶರೀಫ್ ಸಾಬ್ ಕಮಡೊಳ್ಳಿ ಮುಂಡಗೋಡ ತಾಲೂಕಿನ ಅರಷಣಗೇರಿ ಗ್ರಾಮದ ನಿವಾಸಿ, ಸದ್ಯ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿಯೇ ನೆಲೆಸಿದ್ದ ಎನ್ನಲಾಗಿದೆ. ಮೊನ್ನೆಯಷ್ಟೆ ಚುನಾವಣೆಯ ಸಲುವಾಗಿ ಅರಶಿಣಗೇರಿ ಗ್ರಾಮಕ್ಕೆ ಬಂದು ಮತ ಚಲಾಯಿಸಿ ಹೋಗಿದ್ದ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Top Stories
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಕೊಪ್ಪ, ಹುನಗುಂದದಲ್ಲಿ ಸಂಭ್ರಮದ ಬಸವ ಜಯಂತಿ, ಕೊಪ್ಪದಲ್ಲಿ 12 ಅಡಿ ಬಸವೇಶ್ವರ ಪುತ್ಥಳಿ ಪ್ರತಿಷ್ಟಾಪನೆ..!
ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಬಸವ ಜಯಂತಿ ಆಚರಿಸಲಾಯಿತು. ತಾಲೂಕಿನ ಇಂದೂರು ಕೊಪ್ಪ ಗ್ರಾಮದಲ್ಲಿ ಬಸವೇಶ್ವರರ ನೂತನ ಪುತ್ಥಳಿ ಪ್ರತಿಷ್ಟಾಪಿಸಲಾಯಿತು. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರರ 12 ಅಡಿಯ ಪುತ್ಥಳಿ ಅನಾವರಣ ಮಾಡಲಾಯಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾದ ಬಸವ ಜಯಂತಿ ಹಾಗೂ ಪುತ್ಥಳಿ ಪ್ರತಿಷ್ಟಾಪನೆ ಕಾರ್ಯದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ರು. ಹುನಗುಂದದಲ್ಲಿ..! ಇನ್ನು ತಾಲೂಕಿನ ಹುನಗುಂದದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಅಲಂಕೃತಗೊಂಡ ಚಕ್ಕಡಿಗಳಲ್ಲಿ ಬಸವೇಶ್ವರ ರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮದ ಮುಖಂಡರು ಭಾಗಿಯಾಗಿದ್ರು.
ರೈತರೇ ಗಮನಿಸಿ: ಬೆಳೆ ಹಾನಿ ಪರಿಹಾರ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಿ: ಅಪರ ಜಿಲ್ಲಾಧಿಕಾರಿ
ಕಾರವಾರ: ಬೆಳೆ ಹಾನಿ ಕುರಿತು ಬಿಡುಗಡೆಯಾದ ಪರಿಹಾರದ ಅನುದಾನ ರೈತರ ಖಾತೆಗೆ ಜಮಾ ಆದ ಬಗ್ಗೆ ಪರಿಶೀಲಿಸುವ ಕುರಿತು, ಹಾಗೂ ಅನುದಾನ ಜಮಾ ಆಗದೇ ಇರುವ ತಾಂತ್ರಿಕ ತೊಂದರೆಗಳನ್ನು ಹಾಗೂ ಬ್ಯಾಂಕ್ ಖಾತೆಯ ಕೆಲವೊಂದು ನ್ಯೂನತೆಗಳನ್ನು ಪರಿಹರಿಸುವ ಬಗ್ಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿಯ ತಹಶೀಲ್ದಾರ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಬಂದಿಸಿದ ತಹಶೀಲ್ದಾರ ಕಚೇರಿಯನ್ನು ಈ ಕೆಳಗಿನ ದೂರವಾಣಿಗಳಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದ್ದು,ತಾಲ್ಲೂಕಿನ ಹೆಸರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಲ್ಲಿದೆ. 1. ಕಾರವಾರ- 08382-223350 2 . ಅಂಕೋಲಾ- 08388-230243 3 . ಕುಮಟಾ- 08386-222054 4 . ಭಟ್ಕಳ – 08385-226422 5 . ಶಿರಸಿ- 08384-226383 6 . ಸಿದ್ದಾಪುರ- 08389-230127 7 . ಯಲ್ಲಾಪುರ – 9902571927 8 . ಮುಂಡಗೋಡ- 08301-222122 9. ಹಳಿಯಾಳ- 08284-220134 10. ಜೋಯಡಾ- 08284-282723 11. ದಾಂಡೇಲಿ- 08284-295959 ಈ ಕುರಿತು ಮಾದ್ಯಮ...
ಹೃದಯಾಘಾತದಿಂದ ಹುನಗುಂದದ ಮತ್ತೋರ್ವ ಯುವಕ ಸಾವು, ಒಂದೇ ದಿನ ಇಬ್ಬರು ಯುವಕರ ಸಾವು..! ಗ್ರಾಮದಲ್ಲಿ ಸೂತಕದ ಛಾಯೆ..!!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಈ ಅಮವಾಸ್ಯೆ ಅಕ್ಷರಶಃ ಕರಾಳ ಅಮವಾಸ್ಯೆ ಆದಂತಾಗಿದೆ. ಇವತ್ತೊಂದೇ ದಿನ ಗ್ರಾಮದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ತುಮಕೂರು ಸಮೀಪ ಯುವಕನೋರ್ವ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ, ಆತನ ಶವಸಂಸ್ಕಾರಕ್ಕೆ ಬಂದು ಹೆಂಡತಿ ಮನೆಗೆ ತೆರಳಿದ್ದ ಮತ್ತೋರ್ವ ಯುವಕ ಹೃದಯಾಘಾತದಿಂದ ಸಂಜೆ ಮೃತಪಟ್ಟಿದ್ದಾನೆ. ಹೀಗಾಗಿ, ಹುನಗುಂದ ಗ್ರಾಮದಲ್ಲಿ ಅಕ್ಷರಶಃ ಸೂತಕದ ವಾತಾವರಣ ನಿರ್ಮಾಣವಾಗಿದೆ. ಗಂಗಾಧರ ಸಂಗಪ್ಪ ಬಗಡಗೇರಿ(38) ಇವತ್ತು ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತ ನಿನ್ನೆಯಷ್ಟೇ ಮೃತಪಟ್ಟಿದ್ದ ಹುನಗುಂದ ಗ್ರಾಮದ ಸ್ನೇಹಿತ ರಾಜು ನಾಗಪ್ಪ ಕುಸುಗಲ್ ಅಂತ್ಯ ಸಂಸ್ಕಾರಕ್ಕಾಗಿ ಬುಧವಾರ ಬೆಳಿಗ್ಗೆ ಹುನಗುಂದ ಗ್ರಾಮಕ್ಕೆ ಬಂದಿದ್ದ. ಅಂತ್ಯ ಸಂಸ್ಕಾರ ಮುಗಿಸಿ ಹುಬ್ಬಳ್ಳಿ ಸಮೀಪದ ಶೆರೆವಾಡ ಗ್ರಾಮಕ್ಕೆ ತೆರಳಿದ್ದ. ಸಂಜೆ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇನ್ನು, ಮೃತ ಯುವಕನ ಪಾರ್ಥೀವ ಶರೀರವನ್ನು ಹುನಗುಂದ ಗ್ರಾಮಕ್ಕೆ ತರಲಾಗಿದ್ದು, ನಾಳೆ ಗುರುವಾರ ಹುನಗುಂದ ಗ್ರಾಮದಲ್ಲಿ ಶವ ಸಂಸ್ಕಾರ ನಡೆಯಲಿದೆ. ಈ ಒಂದೇ ವಾರದಲ್ಲಿ ಹುನಗುಂದ ಗ್ರಾಮದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದು ಗ್ರಾಮದಲ್ಲಿ...
ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿ, ಆಸ್ಪತ್ರೆಗೆ ದಾಖಲು..!
ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿಯಾಗಿದೆ. ಪರಿಣಾಮ ಶಿರಸಿಯ ಟಿಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆ ಮಾಡುತ್ತಿದ್ದ ವೇಳೆ ಜೇನುನೋಣಗಳು ಏಕಾಏಕಿ ದಾಳಿ ಮಾಡಿವೆ ಅಂತಾ ಮಾಹಿತಿ ಬಂದಿದೆ. ಹೀಗಾಹಿ ಶಾಸಕ ಭೀಮಣ್ಣ ನಾಯ್ಕ್ ಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶಾಸಕರ ಜೊತೆಗಿದ್ದ ಹಲವರ ಮೇಲೂ ಜೇನು ನೋಣಗಳಿ ದಾಳಿ ಮಾಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ ಅನ್ನೋ ಮಾಹಿತಿ ಇದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಜೆವರೆಗಿನ ಮತದಾನದ ವಿವರ..!
ಉತ್ತರ ಕನ್ಮಡ ಜಿಲ್ಲೆಯಲ್ಲಿ ಸಂಜೆಯವರೆಗೆ ಜಿಲ್ಲೆಯಲ್ಲಿ ಶೇ. 73.52 ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಮತದಾನದ ವಿವರ ಶಿರಸಿ ಕ್ಷೇತ್ರ- 76.6% ಯಲ್ಲಾಪುರ ಕ್ಷೇತ್ರ-79.95% ಖಾನಾಪುರ ಕ್ಷೇತ್ರ-71.87% ಹಳಿಯಾಳ ಕ್ಷೇತ್ರ-72.35% ಕುಮಟಾ ಕ್ಷೇತ್ರ-70.1 % ಭಟ್ಕಳ ಕ್ಷೇತ್ರ-73% ಕಾರವಾರ ಕ್ಷೇತ್ರ-70.61% ಕಿತ್ತೂರ ಕ್ಷೇತ್ರ- 75.25% ಇದು ಈ ಕ್ಷಣದವರೆಗಿನ ಮತದಾನ ಪ್ರಮಾಣವಾಗಿದ್ದು, ಇನ್ನು ಮತದಾನ ಪ್ರಮಾಣದ ನಿಖರ ವಿವರ ನಾಳೆ ಹೊರಬೀಳಲಿದೆ ಅನ್ನೊ ಮಾಹಿತಿ ಜಿಲ್ಲಾಡಳಿತದಿಂದ ಲಭ್ಯವಾಗಿದೆ.
ಕೊನೆಗೂ ಮತದಾನಕ್ಕೆ ಒಪ್ಪಿಕೊಂಡ ಬಸಾಪುರ ಗ್ರಾಮಸ್ಥರು, ಶಿರಸಿ ಎಸಿ ಭರವಸೆ ಬಳಿಕ ಮತಗಟ್ಟೆಗೆ ಎಂಟ್ರಿ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಕೊನೆಗೂ ಮತದಾನಕ್ಕೆ ಒಪ್ಪಿಕೊಂಡಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ರು. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಈ ಕುರಿತು ವಿಸ್ತೃತ ವರದಿ ಬಿತ್ತರಿಸಿತ್ತು. ಬೆಳಿಗ್ಗೆಯಿಂದಲೂ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿ, ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು, ತಹಶೀಲ್ದಾರ್ ಮುಖಾಂತರ ಮನವಿ ಅರ್ಪಿಸಿದ್ದರು. ಆದ್ರೆ, ತಹಶೀಲ್ದಾರ್ ಸಾಹೇಬ್ರು ಗ್ರಾಮಸ್ಥರ ಮನವಿ ಸ್ವೀಕರಿಸಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ ಬಂದಿದ್ದರು. ಆದ್ರೆ, ಗ್ರಾಮಸ್ಥರು ನಮಗೆ ಪಕ್ಕಾ ಭರವಸೆ ನೀಡುವಂತೆ ಪಟ್ಟು ಹಿಡಿದು ಸಂಜೆವರೆಗೂ ಮತದಾನ ಬಹಿಷ್ಕರಿಸಿಯೇ ಕುಳಿತಿದ್ರು. ಯಾವಾಗ, ಈ ಸುದ್ದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತೊ ಆವಾಗ ಶಿರಸಿ ಸಹಾಯಕ ಕಮೀಶನರ್ ರವರ ಮೂಲಕ ಗ್ರಾಮಸ್ಥರಿಗೆ ಖಚಿತ ಭರವಸೆ ಕೊಟ್ಟು ಮತದಾನ ಮಾಡುವಂತೆ ಮನ ಒಲಿಸಿದ್ರು. ನಂತರ 4.30 ನಂತರ ಗ್ರಾಮಸ್ಥರು ಮತದಾನಕ್ಕೆ ತೆರಳಿದ್ರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮದ್ಯಾನ 1 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಮದ್ಯಾನ 1 ಗಂಟೆಗೆ ಜಿಲ್ಲೆಯಲ್ಲಿ ಶೇ. 43.31 ರಷ್ಟು ಮತದಾನ ಕ್ಷೇತ್ರವಾರು ಮತದಾನದ ವಿವರ ಮದ್ಯಾನ 1 ಗಂಟೆಗೆ ಶಿರಸಿ ಕ್ಷೇತ್ರ- 49.51% ಯಲ್ಲಾಪುರ ಕ್ಷೇತ್ರ-47.63% ಖಾನಾಪುರ ಕ್ಷೇತ್ರ-45.96% ಹಳಿಯಾಳ ಕ್ಷೇತ್ರ-44.79% ಕುಮಟಾ ಕ್ಷೇತ್ರ-45.64 % ಭಟ್ಕಳ ಕ್ಷೇತ್ರ-43.52% ಕಾರವಾರ ಕ್ಷೇತ್ರ-43.67% ಕಿತ್ತೂರ ಕ್ಷೇತ್ರ- 40.42%
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಶೇ.27.58 ರಷ್ಟು ಮತದಾನ ಕ್ಷೇತ್ರವಾರು ಮತದಾನದ ವಿವರ 11 ಗಂಟೆಗೆ ಶಿರಸಿ ಕ್ಷೇತ್ರ- 31.86% ಯಲ್ಲಾಪುರ ಕ್ಷೇತ್ರ-29.4% ಖಾನಾಪುರ ಕ್ಷೇತ್ರ-28.37% ಹಳಿಯಾಳ ಕ್ಷೇತ್ರ-26.84 % ಕುಮಟಾ ಕ್ಷೇತ್ರ- 30.03% ಭಟ್ಕಳ ಕ್ಷೇತ್ರ-27.41% ಕಾರವಾರ ಕ್ಷೇತ್ರ-28.01% ಕಿತ್ತೂರ ಕ್ಷೇತ್ರ- 23.31%
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ಶೇ.11.42 ಮತದಾನ ಕ್ಷೇತ್ರವಾರು ಮತದಾನದ ವಿವರ 9 ಗಂಟೆಗೆ ಶಿರಸಿ ಕ್ಷೇತ್ರ- 13.66% ಯಲ್ಲಾಪುರ ಕ್ಷೇತ್ರ-12.05% ಖಾನಾಪುರ ಕ್ಷೇತ್ರ-11.45% ಹಳಿಯಾಳ ಕ್ಷೇತ್ರ- 10.82% ಕುಮಟಾ ಕ್ಷೇತ್ರ- 12.98% ಭಟ್ಕಳ ಕ್ಷೇತ್ರ- 11.64% ಕಾರವಾರ ಕ್ಷೇತ್ರ- 10.97% ಕಿತ್ತೂರ ಕ್ಷೇತ್ರ- 8.32%