ಕಾರವಾರ: ಜಿಲ್ಲೆಯಲ್ಲಿ ಮಾನ್ಸೂನ್ ಅವಧಿಯಲ್ಲಿ ಕಂಡು ಬರುವ ನರೆ ಮತ್ತು ಗುಡ್ಡ ಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಈಗಿನಿಂದಲೇ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಗಾಲದ ಸಂದರ್ಭದಲ್ಲಿ ರಾಷ್ಟೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮತ್ತು ನೌಕಾನೆಲೆಯ ಸಮೀಪದ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ, ಈ ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಕುರಿತಂತೆ ನೀರು ಹರಿಯುವ ಪ್ರದೇಶದಲ್ಲಿ ಯಾವುದೇ ಅಡೆ ತಡೆಗಳು ಇಲ್ಲದಂತೆ ಸ್ವಚ್ಛಗೊಳಿಸಬೇಕು, ಬಿಣಗಾ, ಚೆಂಡಿಯಾ, ಅರಗಾ ವ್ಯಾಪ್ತಿಯಲ್ಲಿ ನೀರು ಹರಿಯುವ ನಾಲೆಗಳ ಡ್ರೆಜ್ಜಿಂಗ್ ಮತ್ತು ಅಗಲೀಕರಣ ಕೆಲಸಗಳನ್ನು ಕೈಗೊಳ್ಳಬೇಕು. ಹಾಗೂ ಈ ಕಾರ್ಯವನ್ನು ನೌಕಾಪಡೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ...
Top Stories
ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..!
ಪಾಕ್ ಉಗ್ರವಾದಕ್ಕೆ 4 ದಶಕದಲ್ಲಿ 20000 ಭಾರತೀಯರು ಬಲಿ!
ಜಪಾನ್ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!
ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಸಾವು..!
ಸ್ಕೂಟಿ ಹಾಗೂ ಬೈಕ್ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮೊದಲೇ RCB ತಂಡಕ್ಕೆ ಸಂತಸದ ಸುದ್ದಿ ಸಿಕ್ಕಿದೆ..!
ಬೈಲಹೊಂಗಲದಲ್ಲಿ 3 ವರ್ಷದ ಪುಟ್ಟ ಕಂದಮ್ಮನನ್ನ ಮಲತಂದೆಯೇ ಮುಗಿಸಿಬಿಟ್ಟ..!
ಕಾಳಿ ನದಿಯಲ್ಲಿ ಕಾಲುಜಾರಿಬಿದ್ದು ಯುವಕ ನಾಪತ್ತೆ, ನದಿಯ ಹಿನ್ನಿರಿನಲ್ಲಿ ಯುವಕನಿಗೆ ಶೋಧ ಕಾರ್ಯ..!
ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!
ವಾಡಿಕೆಗಿಂತ ಒಂದು ವಾರ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ..!
ದೇಶದಲ್ಲಿ ಮತ್ತೆ ಕೋವಿಡ್ ಆತಂಕ : ರಾಜ್ಯದಲ್ಲಿ 38 ಕೇಸ್, ಬೆಂಗಳೂರಲ್ಲೇ 32 ಸೋಂಕಿತರು..!
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್ ಮೇಲೆ ಬೆಂಗಳೂರಿಗರ ಕಣ್ಣು..!
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಮುಂಡಗೋಡ ತಾಲೂಕಿನಲ್ಲಿ ಸದ್ಯ SSLC ಪರೀಕ್ಷೆಯ ಸಲುವಾಗಿ ಇಡೀ ಶಿಕ್ಷಣ ಇಲಾಖೆಯೇ ತಲೆ ಕೆಡಿಸಿಕೊಂಡು 100% ಫಲಿತಾಂಶ ತರಲೇ ಬೇಕು ಅಂತಾ ಹಗಲಿರುಳು ಶ್ರಮಿಸುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇಡೀ ಪ್ರೌಢಶಾಲಾ ವಿಭಾಗದ ಶಿಕ್ಷಕ ವೃಂದ ಕಣ್ಣಿಗೆ ಎಣ್ಣೆಬಿಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ರೆಡಿ ಮಾಡ್ತಿದಾರೆ. ಸತ್ಯ ಅಂದ್ರೆ ನಮ್ಮ ಮುಂಡಗೋಡಿಗೆ ನೂತನವಾಗಿ ಬಂದಿರೋ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಜಕ್ಕೂ ನಮ್ಮ ಪಾಲಿನ ಹೆಮ್ಮೆ. ಪ್ರಬುದ್ದ ತೆಯ ಸಾಕಾರ ಮೂರ್ತಿ..! ಆದ್ರೆ, ಇದೇಲ್ಲದರ ನಡುವೆಯೂ ಕೆಲವ್ರು “ತಾವು ನಡೆದದ್ದೇ ದಾರಿ” ಅನ್ನೋ ರೀತಿಯಲ್ಲಿದ್ದಾರೆನೋ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ…? “ಫೈನಾನ್ಸ್” ಗೆ ರಿಬ್ಬನ್ ಕಟ್..! ಅಸಲು, ಮುಂಡಗೋಡ ತಾಲೂಕಿನ ಇಡೀ ಶಿಕ್ಷಕ ವೃಂದವೇ ಪರೀಕ್ಷಾ ತಯಾರಿಯಲ್ಲಿ ಬ್ಯುಸಿಯಾಗಿದ್ದರೆ, ಇಲ್ಲಿನ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಮಾತ್ರ, ಖಾಸಗಿ ಗೋಲ್ಡ್ ಲೋನ್ ಫೈನಾನ್ಸ್ ನ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಬೆಳಿಗ್ಗೆಯಿಂದಲೇ ತಮ್ಮ ಮತ್ತೋರ್ವ ಶಿಕ್ಷಕರನ್ನು ಜೊತೆಗೆ ಕರೆದುಕೊಂಡು ಬಂದು ನೂತನ ಖಾಸಗಿ ಫೈನಾನ್ಸ್ ನ ಉದ್ಘಾಟನೆಯ ರಿಬ್ಬನ್...
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಕಾರವಾರ : ಇಲ್ಲಿನ ಸರ್ವೆ ಅಧಿಕಾರಿ ಒಬ್ಬರ ಕರ್ತವ್ಯಕ್ಕೆ ಪತ್ರಕರ್ತ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ನಾಯ್ಕ ಬರ್ಗಿ ಹಾಗೂ ಸಾಯಿಕಿರಣ ಬಾಬ್ರೇಕರ್ ಎನ್ನುವವರಿಗೆ ತಲಾ ಆರು ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ ತಲಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪತ್ರಕರ್ತ ಉದಯ ಬರ್ಗಿ ಅವರು ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಈ ಇಬ್ಬರ ಪರವಾಗಿ ಕುಮಟಾದ ಖ್ಯಾತ ಯುವ ನ್ಯಾಯವಾದಿ, ವಿರೇಂದ್ರ ಗಿರಿಯಣ್ಣ ನಾಯಕ, ತೋರ್ಕೆ ಅವರು ವಾದವನ್ನು ಮಂಡಿಸಿದ್ದರು. ಇವರ ವಾದ ಆಲಿಸಿದ ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಮುಂಡಗೋಡ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಅವರ ಜನ್ಮ ದಿನವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು. ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಎನ್ ದುಂಡಸಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಪ.ಪಂ ಸದಸ್ಯ ಮಹ್ಮದಗೌಸ ಮಖಾಂದಾರ, ಶಿವರಾಜ ಸುಬ್ಬಾಯವರ, ನಜೀರ್ ಅಹ್ಮದ ದರ್ಗಾವಾಲೆ, ಆಲೆಹಸನ ಬೆಂಡಿಗೇರಿ, ಧರ್ಮರಾಜ ನಡಗೇರ, ಶಾರದಾ ರಾಠೋಡ, ಸಲೀಂ ನಂದಿಗಟ್ಟಿ, ಬಸವರಾಜ ಆಸ್ತಕಟ್ಟಿ, ರಪೀಕ್ ಇನಾಮದಾರ, ಬಾಬುರಾವ ಲಾಡನವರ, ಬಸವರಾಜ ಕುಂದರ್ಗಿ ಮುಂತಾದವರು ಉಪಸ್ಥಿತರಿದ್ದರು
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ತಾಲೂಕಿನಲ್ಲೂ ಗೋಕಳ್ಳರು, ದನಗಳ್ಳರು ಬಂದಿದ್ದಾರಾ..? ಇಂತಹದ್ದೊಂದು ಅನುಮಾನ ಅಗಡಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಘಟನೆಯಿಂದ ಆತಂಕಮೂಡಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನೇ ಖದೀಮರು ಕದ್ದು ಹೋಗಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಅಗಡಿ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಗಳಗಿ ಎಂಬುವವರಿಗೆ ಸೇರಿದ ಎರಡು ಎತ್ತುಗಳನ್ನು ಶನಿವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ರಾತ್ರಿ ಮೇವು ಹಾಕಿ ನೀರು ಕುಡಿಸಿ, ಕೊಟ್ಟಿಗೆಯಲ್ಲಿ ಕಟ್ಟಿದ್ದ ರೈತ ನಿಂಗಪ್ಪ ಮನೆಯಲ್ಲಿ ಮಲಗಿದ್ದ. ಇದೇ ಹೊತ್ತಲ್ಲಿ, ತಡರಾತ್ರಿ ದಾಳಿ ಇಟ್ಟಿರೋ ಕಳ್ಳರು ಎರಡೂ ಎತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಅನ್ನೊ ಅನುಮಾನ ಮೂಡಿದೆ. ಸ್ಥಳದಲ್ಲಿ ಯಾವುದೋ ಒಂದು ವಾಹನದ ಟೈಯರ್ ಗುರುತುಗಳು ಇದ್ದು ಬಹುಶಃ ಟಾಟಾ ಎಸ್ ಅಥವಾ ಬೊಲೆರೋ ವಾಹನದಲ್ಲಿ ಎತ್ತುಗಳನ್ನು ಸಾಗಿಸಲಾಗಿದೆ ಅನ್ನೋ ಸಂಶಯ ಮೂಡಿದೆ. ಮದ್ಯದಂಗಡಿಗೆ ಬಂದು ಸ್ಕೆಚ್ ಹಾಕಿದ್ರಾ..? ಅಸಲು, ಈ ಎತ್ತುಗಳನ್ನು ಕಳ್ಳತನ ಮಾಡಿರೋದರ ಹಿಂದೆ ಬಹುತೇಕ ಪರಿಚಯದವರ ಕೈವಾಡ ಅಥವಾ ಆ ಸ್ಥಳದ ಮಾಹಿತಿ...
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಮುಂಡಗೋಡ ಪಟ್ಟಣದ ನೆಹರು ನಗರದಲ್ಲಿ ಜೇನು ನೋಣಗಳ ದಾಳಿಯಾಗಿದೆ. ಪರಿಣಾಮ ಆರು ಜನರಿಗೆ ಗಾಯವಾಗಿದೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪಟ್ಟಣದ ನೆಹರು ನಗರದ ನನ್ನೇಸಾಬ್ ಶೇಖ್ ಮನೆಯ ಹತ್ತಿರದ ಗಿಡದಲ್ಲಿ ಜೇನು ಗೂಡು ಕಟ್ಟಿತ್ತು. ಇವತ್ತು ಮದ್ಯಾನ ಬಿಸಿಲಿನ ತಾಪಕ್ಕೋ ಅಥವಾ ಯಾರಾದ್ರೂ ಕಲ್ಲೆಸೆದ ಕಾರಣಕ್ಕೋ ಜೇನು ನೋಣಗಳು ಎದ್ದಿವೆ. ಈ ಹೊತ್ತಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಆರು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯಗೊಳಿಸಿವೆ. ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿ ಅರುಣ್ ಕುಮಾರ್ ಕಾಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣ ಪಂಚಾಯತಿಅಧಿಕಾರಿಗಳು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು, ಪಟ್ಟಣದಲ್ಲಿನ ಭಯಾನಕ ಜೇನುಗೂಡುಗಳ ತೆರವು ಕಾರ್ಯ ಮಾಡಬೇಕು ಅನ್ನೋದು ಸಾರ್ವಕನಿಕರ ಆಗ್ರಹವಾಗಿದೆ.
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಹುಬ್ಬಳ್ಳಿ: ನಗರದಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಮನೆಯೊಂದರಲ್ಲಿ ದರೋಡೆ ಮಾಡಿದ್ದ ಇಬ್ಬರು ಅಂತರರಾಜ್ಯ ದರೋಡೆಕೋರರಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಅಂತರರಾಜ್ಯ ಕಳ್ಳರಾದ ಇರ್ಷಾದ್ ಹಾಗೂ ಅಕ್ಬರ್ ಕಾಲಿಗೆ ಹುಬ್ಬಳ್ಳಿಯ ಉಪನಗರ ಪೊಲೀಸರು ಗುಂಡು ಹಾರಿಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿಯವರ ಹುಬ್ಬಳ್ಳಿಯ ನಿವಾಸದ ಬಳಿ ಆರೋಪಿಗಳು ದರೋಡೆ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ, ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರಿಂದ ಗುಂಡೇಟು ತಿಂದ ಆರೋಪಿಗಳನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ಬ್ರೇಕಿಂಗ್ ಬೆಳಗಾವಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಘನಘೋರ ದುರಂತ. ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿ ಬಿದ್ದ ಲಾರಿ. ಕಾರಿನಲ್ಲೇ ಸಿಲುಕಿ ಹಾಕಿ ಒದ್ದಾಡುತ್ತಿರುವ ಇಬ್ಬರು. ಬೆಳಗಾವಿ ನಗರ ಹೊರ ವಲಯದ ಕೆಎಲ್ಇ ಆಸ್ಪತ್ರೆ ಬಳಿ ಘಟನೆ. ಕಾರಿನಲ್ಲಿದ್ದವರನ್ನ ಹೊರ ತೆಗೆಯಲು ಹರಸಾಹಸ ಪಡುತ್ತಿರುವ ಸಾರ್ವಜನಿಕರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಇಬ್ಬರು ಶಾಸಕರನ್ನು ಈ ತಿಂಗಳಾಂತ್ಯಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗುವದು ಅಂತಾ ಬಿಜೆಪಿ ಶಿಸ್ತು ಸಮಿತಿ ರಾಜ್ಯ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ನಂತ್ರ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ನಿರಂತರ ಪಕ್ಷ ದ್ರೋಹ ಮಾಡಿದ್ದಾರೆ. ಕಳೆದ ಲೋಕಸಭಾ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಬಗ್ಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗಿದೆ ಎಂದರು. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ತೆರಳಿ ವರದಿ ಸಿದ್ಧಪಡಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಮತ್ತು ಅಲ್ಲಿನ ಮಂಡಳ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿಂದ ವರದಿ ಸಿದ್ದಪಡಿಸಿ ನೀಡಿದ್ದೇನೆ. ಅಲ್ಲದೇ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ ಮತ್ತು ಪೇಪರ್ ಕಟಿಂಗ್ಗಳನ್ನ ವರದಿಯ ಜೊತೆಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಇಬ್ಬರ ಶಾಸಕರ ಉಚ್ಚಾಟನೆ...
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತದ ಕಳಕಿಕಾರೆ ಮಜಿರೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಹುತೇಕ ಇಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಸಂಕಟ ಒಂದೆಡೆಯಾದ್ರೆ, ಗ್ರಾಮಸ್ಥರಿಗೆ ನೀರು ಪೂರೈಸಲು ಮೈನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಪರದಾಡುವ ಸ್ಥಿತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಂದಹಾಗೆ, ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಕೀಕಾರೆಯಲ್ಲಿ RWS ಇಲಾಖೆಯಿಂದ ಬೋರ್ವೆಲ್ ಕೊರೆದಿದ್ದಾರೆ. ಆದ್ರೆ, ಜೀವಜಲ ಮಾತ್ರ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿನ ಜನ್ರಿಗೆ ಕುಡಿಯುವ ನೀರು ಅನ್ನೋದು ನಿತ್ಯದ ಪರದಾಟವಾಗಿದೆ. ಈ ಕಾರಣಕ್ಕಾಗೇ, ಕಳೆದ ಎಂಟು ದಿನಗಳಿಂದ ಟ್ಯಾಂಕರ್ ಮೂಲಕ ಗ್ರಾಪಂ ನೀರು ಪೂರೈಸುತ್ತಿದೆ. ಆದ್ರೆ ಇದೇಲ್ಲ ಎಷ್ಟು ದಿನ..? ಇದೇ ರೀತಿ ಆದ್ರೆ, ನೀರು ಪೂರೈಸಲು ಬೇಕಾದ ಆರ್ಥಿಕ ವ್ಯವಸ್ಥೆ ಇಲ್ಲದೆ, ಗ್ರಾಪಂ ಅಧಿಕಾರಿಗಳಿಗೆ ಕಷ್ಟವಾಗಬಹುದು. ಹೀಗಾಗಿ, ಜಿಲ್ಲಾಡಳಿತ ಈ ಕಡೆ ಒಂದಿಷ್ಟು ಗಮನ ಹರಿಸೋದು ಅವಶ್ಯವಿದೆ.