ಮುಂಡಗೋಡಿನ NMD ಜಮೀರ್ ಕಿಡ್ನ್ಯಾಪ್ ಕೇಸಲ್ಲಿ ಪೊಲೀಸ್ರು ಮತ್ತಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೇಸಿನ ಬಹುತೇಕ ಮಾಸ್ಟರ್ ಮೈಂಡ್ ಅಂತಲೇ ಹೇಳಲಾಗಿರೋ ಇಬ್ಬರು ಆರೋಪಿಗಳನ್ನು ದೂರದ ಮುಂಬಯಿಂದ ಎಳೆದು ತಂದಿದ್ದಾರೆ. ಈ ಮೂಲಕ ಕೇಸಿನ ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ. ಅಂದಹಾಗೆ, ಫಯಾಜ್ ಬಿಜಾಪುರ್ ಹಾಗೂ ಸಾದಿಕ್ ವಾಲಿಕಾರ್ ಬಂಧಿತರು. ಸಣ್ಣದೊಂದು ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿರೋ ಮುಂಡಗೋಡ ಪೊಲೀಸ್ರು ಮಹಾರಾಷ್ಟ್ರದ ಮುಂಬಯಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ:-11/01/2024 ರಂದು ಆರೋಪಿರಾದ 1].ಅಲ್ಲಾಹುದ್ದೀನ್ @ ರಹೀಮ್ ತಂದೆ ಮಹಮ್ಮದ್ ಜಾಪರ್ ರಜ್ಜಬಅಲಿ 2].ಅಜಯ @ ಅಜ್ಯಾ ತಂದೆ ಪಕ್ಕೀರಪ್ಪ ಮಡ್ಲಿ (ದಿನಾಂಕ:-20/01/2025) G].ಸಾಗರ ತಂದೆ ನಾಗರಾಜ ಕಲಾಲ್ 4) ಹನನ್ ತಂದೆ ಮೈನುದ್ದಿನ ಕಿಲ್ಲೆದಾರ 5).ದಾದಾಪೀರ ತಂದೆ ಅಲ್ಲಾಭಕ್ಷ ಬಿಜಾಪೂರ 6].ಖಾಜಾಮೊಹಿದ್ದಿನ ತಂದೆ ಮಹಮ್ಮದಹನೀಪ್ ಬೀಜಾಪೂರ 7].ಉಮೇಜ್‌ವುಲ್ಲಾ ತಂದೆ ಪೈಜುಲ್ಲಾ ಬೇಪಾರಿ 8].ಅಲ್ತಾಪ್ ತಂದೆ ರಿಯಾಜ್ ಅಹ್ಮದ್ ಬೇಪಾರಿ 9].ರಹಮತ್ ತಂದೆ ಮೆಹಬೂಬಸಾಬ ಧಾರವಾಡ 10]ಅವೇಜ್ ತಂದೆ ಪೈಜುಲ್ಲಾ ಬೇಪಾರಿ 13].ಸಂಜು ತಂದೆ...
Top Stories
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ನ್ಯಾಸರ್ಗಿಯಲ್ಲಿ ಶ್ರೀಗಂಧದ ಮರ ಕಡಿದುಕೊಂಡು ಹೋದ್ರು ಕಳ್ಳರು, ಆಮೇಲೆ ಓಡೋಡಿ ಬಂದ್ರು “ಅ”ರಣ್ಯ ಅಧಿಕಾರಿಗಳು..!
ಮುಂಡಗೋಡ ತಾಲೂಕಿನಲ್ಲಿ ಮತ್ತೆ ಶ್ರೀಗಂಧದ ಮರಗಳ್ಳರು ತಮ್ಮ ಕರಾಮತ್ತು ಶುರು ಮಾಡಿದ್ದಾರೆ. ರಾತ್ರಿ ನ್ಯಾಸರ್ಗಿಯಲ್ಲಿ ಕಳ್ಳರು ಮನೆಯ ಹಿತ್ತಲಿನಲ್ಲಿ ಇದ್ದ ಬೆಲೆಬಾಳುವ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ನಿತ್ಯ ನಿರಂತರವೆಂಬಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ತಾಲೂಕಿನಲ್ಲಿ ಅರಣ್ಯ ಸಂಪತ್ತು ಲೂಟಿಯಾಗ್ತಿದೆ. ಅಂದಹಾಗೆ, ನ್ಯಾಸರ್ಗಿ ಗ್ತಾಮದ ಪಿಎಸ್ ಸದಾನಂದ ಎಂಬುವವರ ಮನೆ ಪಕ್ಕದಲ್ಲಿನ ಶ್ರೀಗಂಧದ ಮರ ದೋಚಿದ್ದಾರೆ ಖದೀಮರು. ಲಕ್ಷ ಲಕ್ಷ ಬೆಲೆ ಬಾಳುವ ಗಂಧದ ಮರ ಕಡಿದುಕೊಂಡು ಹೋಗಿರೊ ಸುದ್ದಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆದ್ರೆ, ಎಂದಿನಂತೆ, ಸುದ್ದಿ ತಿಳಿದ “ಅ”ರಣ್ಯ ಅಧಿಕಾರಿಗಳು ಚಳಿಯನ್ನೂ ಲೆಕ್ಕಿಸದೇ ಓಡೋಡಿ ಬಂದಿದ್ದಾರೆ. ಕೇಸು ದಾಖಲಿಸಿಕೊಂಡಿದ್ದಾರೆ. ಅದು ಇದು ಅಂತೇಲ್ಲ ಕೇಳಾಡಿಕೊಂಡು ಕಳ್ಳರನ್ನು ಹಿಡಿಯಲೇ ಬೇಕು ಅಂತಾ ಪಣ ತೊಟ್ಟು ಕೂತಿದ್ದಾರಂತೆ.. ಅದ್ರಲ್ಲೂ ನಮ್ಮ ಮುಂಡಗೋಡಿನ “ಅರಣ್ಯ” ಸಾಹೇಬ್ರು ಈ ಕೇಸನ್ನು ಹೇಗಾದ್ರೂ ಸರಿ ಪೂರ್ತಿ ಒಂದು ಗತಿ ಕಾಣಿಸಲೇಬೇಕು ಅಂತಾ ತೀರ್ಮಾನಿಸಿದ್ದಾರಂತೆ. ಅದಕ್ಕಾಗಿನೇ, ನ್ಯಾಸರ್ಗಿಯ ಮಂದಿಯ ಜೊತೆ ಇಡೀ ತಾಲೂಕಿನ ಪರಿಸರ...
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಯಲ್ಲಾಪುರದ ಅರಬೈಲು ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತವಾಗಿದೆ. ತರಕಾರಿ ಸಾಗಿಸುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ರಸ್ತೆಬದಿಯ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಪರಿಣಾಮ 10 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ, 15 ಜನರಿಗೆ ಗಾಯವಾಗಿದೆ. ಇದ್ರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮೃತರೇಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದ್ದು. ಕುಮಟಾಗೆ ತರಕಾರಿ ಸಾಗಿಸುತ್ತಿದ್ದರು ಎನ್ನಲಾಗಿದೆ. 15 ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅದ್ರಲ್ಲಿ ಹಲವರ ಸ್ಥಿತಿ ಗಂಭಿರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಇದೆ ಎನ್ನಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಮುಂಡಗೋಡ ತಾಲೂಕಿಗೆ ಬಂದಿರೋ ಬಡ ಕಾರ್ಮಿಕರ ಗುಂಪಿನಲ್ಲಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ಮಾಡಿ, ಎಲ್ಲಿಗೋ ಕರೆದೊಯ್ದಿದ್ದ ಅನ್ನೋ ಬಗ್ಗೆ ಆ ಬಾಲಕಿಯ ಪೋಷಕರು ಮುಂಡಗೋಡ ಠಾಣೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅಲ್ಲದೇ ದೂರು ಕೊಡಲು ರೆಡಿಯಾಗಿದ್ದರಂತೆ, ಆದ್ರೆ ಆ ಪ್ರಕರಣ ಏನಾಯ್ತು ಅನ್ನೊ ಬಗ್ಗೆ ತಾಲೂಕಿನಾದ್ಯಂತ ಈಗ ಚರ್ಚೆ ಆಗ್ತಿದೆ. ದೂರು ಕೊಡಲು ಬಂದಿದ್ರು..! ಯಾವಾಗ, ಸಂತ್ರಸ್ಥ ಬಾಲಕಿಯ ಪೋಷಕರು ಮುಂಡಗೋಡ ಠಾಣೆಯ ಮೆಟ್ಟಿಲೇರಿ, ನನ್ನ ಮಗಳಿಗೆ ಹೀಗೇಲ್ಲ ಆಗಿದೆ. ನಮಗೆ ನ್ಯಾಯ ಕೊಡಿ ಅಂತಾ ಪೊಲೀಸರಿಗೆ ಅಲವತ್ತು ಕೊಂಡಿದ್ದರು. ಈ ಮಾಹಿತಿ ಆದರಿಸಿ ಅವತ್ತು ಬೆಳಿಗ್ಗೆ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಹುಡುಗನನ್ನು ಠಾಣೆಗೆ ಕರೆತಂದಿದ್ದರು ಅನ್ನೋ ಮಾಹಿತಿ ಕೂಡ ಲಭಿಸಿದೆ. ಆದ್ರೆ, ಆ ಕೇಸು ಮಾತ್ರ ದಾಖಲಾಗಿಲ್ಲ ಯಾಕೆ ಅದರ ಹಿನ್ನೆಲೆ ಏನು..? ಯಾವ ಕಾರಣಕ್ಕೆ ಫೋಕ್ಸೋ ಕೇಸು ದಾಖಲಿಸಲಿಲ್ಲ ಇಲ್ಲಿನ ಪೊಲೀಸ್ರು ಅನ್ನೋ...
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನು ಎರಡೂವರೆ ತಿಂಗಳು ಬಾಕಿ ಇರುವಾಗಲೇ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಯ ಶೇ.100 ರಷ್ಟ್ಟು ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕರ ಸಂಗ್ರಹಣೆಯಲ್ಲಿ ವಿನೂತನ ದಾಖಲೆ ಬರೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ 1.52 ಕೋಟಿ ರೂ. ತೆರಿಗೆ ಸಂಗ್ರಹ ಗುರಿಗೆ ಪ್ರತಿಯಾಗಿ 1.53 ಕೋಟಿ ರೂ. ಕರ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬೇಡಿಕೆಯ ಅರ್ಧದಷ್ಟ್ಟು ಗುರಿ ಸಾಧಿಸಲು ಹರ ಸಾಹಸ ಪಡುತ್ತಿರುವ ಸಂದರ್ಭದಲ್ಲಿ ಮುಂಡಗೋಡು ತಾಲೂಕು ಇಷ್ಟು ಬೇಗ ಗುರಿ ಸಾಧಿಸಲು ಕಾರಣ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಕ್ತ ಮಾರ್ಗದರ್ಶನ. ಅಧಿಕಾರಿಗಳು, ಸಿಬ್ಬಂದಿ ಮತ್ತು ಜನರ ಸಹಕಾರ, ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ಎಂಬ ವಿನೂತನ ಪ್ರಯತ್ನ ಹಾಗೂ ವಿಶೇಷ ತೆರಿಗೆ ಅಭಿಯಾನಗಳು...
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮುಂಡಗೋಡ ಪಟ್ಟಣದ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಭೀಕರ ಅಪಘಾತವಾಗಿದೆ. ಪೆಟ್ರೊಲ್ ತುಂಬಿಸಿಕೊಂಡು ಬರುತ್ತಿದ್ದ ಲೂನಾ ಎಕ್ಸೆಲ್ ಬೈಕ್ ಗೆ ಡಿಕ್ಕಿಯಾಗಿದೆ. ಪರಿಣಾಮ ಲೂನಾ ಎಕ್ಸೆಲ್ ಸವಾರನ ಬಲಗಾಲು ಕಟ್ ಆಗಿದ್ದು ಗಂಭೀರ ಗಾಯವಾಗಿದೆ. ಚೌಡಳ್ಳಿಯ ಸಹದೇವ್ ಮಾಯಣ್ಣವರ (65) ಎಂಬುವವರೇ ಅಪಘಾತಕ್ಕೀಡಾಗಿದ್ದಾರೆ. ಸದ್ಯ ತಾಲೂಕಾಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡ ತಾಲೂಕಿನ ಮಳಗಿ ಸಮೀಪದ ಬನವಾಸಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ನೀಲಗಿರಿ ಕಟ್ಟಿಗೆ ತುಂಬಿಕೊಂಡು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದು, ಹಿಂಬದಿಯ ಸವಾರನಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ತಾಲೂಕಿನ ಕಲ್ಲಹಕ್ಕಲ ಗ್ರಾಮದ ಮಹೇಶ್ ಬಸವಂತಪ್ಪ ಶೃಂಗೇರಿ(50) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಇನ್ನು ಪರಶುರಾಮ್ ಕುರುಬರ (32) ಎಂಬುವ ಹಿಂಬದಿಯ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿಲುತ್ತಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಕಿಡ್ನ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಮತ್ತೊಂದು ಭಯಾನಕ ಘಟನೆ ನಡೆದಿದೆ. ಕಿಡ್ನ್ಯಾಪರ್ ಗಳನ್ನು ಹಿಡಿಯಲು ತೆರಳಿದ್ದ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್ ಮಿರ್ಜಿಗಿ ಹಾಗೂ ಯಲ್ಲಾಪುರ ಪೊಲೀಸ್ ಶಫಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಹೀಗಾಗಿ, ಪೊಲೀಸರು ಪ್ರತಿದಾಳಿ ನಡೆಸಿ ಆಗಂತುಕರ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಕಿಡ್ನ್ಯಾಪಿಂಗ್ ಕೇಸಲ್ಲಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ, 18 ಲಕ್ಷ ರೂ ಎಚ್ಚರಿಕೆ ನೀಡಿ ಅವರನ್ನು ಬಿಟ್ಟು ಪರಾರಿಯಾಗಿದ್ರು. ಹೀಗಾಗಿ, ಈ ಕೇಸಿಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ರು ಐವರು ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದರು. ಅವ್ರಷ್ಟೇ ಅಲ್ಲ..! ಅಸಲು, ಈ ಪ್ರಕರಣದಲ್ಲಿ ಅವ್ರಷ್ಟೇ ಅಲ್ಲ, ಇನ್ನಷ್ಟು ಜನ ಆರೋಪಿಗಳಿರುವ ಮಾಹಿತಿ ನಮ್ಮ ಪೊಲೀಸ್ರಿಗೆ ಇತ್ತು. ಹೀಗಾಗಿ, ಮುಂಡಗೋಡಿನ ಪಿಐ ರಂಗನಾಥ್ ನೀಲಮ್ಮನವರ್ ಹಾಗೂ ಪಿಎಸ್ಐ...
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ನ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಸೇಫಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಳಿ ಕಾರಲ್ಲಿ ಎತ್ತಾಕೊಂಡು ಹೋಗಿ, ಹಲ್ಲೆ ಮಾಡಿ ಹುಬ್ಬಳ್ಳಿ ಸಮೀಪ ಕಿಡ್ನ್ಯಾಪರ್ಸ್ ಬಿಟ್ಟು ಹೋಗಿದ್ದಾರಂತೆ. ಇನ್ನು ನಮ್ಮ ಮುಂಡಗೋಡ ಪೊಲೀಸ್ ಐದು ಜನ ಕಿಡ್ನ್ಯಾಪರ್ ರನ್ನು ಚಿಕ್ಕೋಡಿ ಸಮೀಪ ಹೆಡೆಮುರಿ ಕಟ್ಟಿದ್ದಾರೆ ಅನ್ನೋ ಮಾಹಿತಿ ಕೂಡ ಬರ್ತಿದೆ. ಆದ್ರೆ ಇನ್ನೂ ಖಚಿತತೆ ಸಿಗಬೇಕಿದೆ. ಥೇಟು ಸಿನಿಮಾ ಸ್ಟೈಲು..! ಅಂದಹಾಗೆ, ನಿನ್ನೆ ಮುಸ್ಸಂಜೆ ಹೊತ್ತಲ್ಲಿ ನಡೆದಿದ್ದ ಕಿಡ್ನ್ಯಾಪ್ ಕೇಸಿನಲ್ಲಿ ಆಗಂತುಕರ ಕೈಯಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆ ಬಂಧಿಯಾಗಿದ್ದರು. ತಾಲೂಕಾ ಕ್ರೀಡಾಂಗಣದಿಂದ ಸಂತೆ ಮಾರುಕಟ್ಟೆ ರಸ್ತೆ ಮೂಲಕ ಬರ್ತಿದ್ದ ದರ್ಗಾವಾಲೆಯ ಸ್ಕೂಟಿಗೆ ಹಿಂದಿನಿಂದಲೇ ಕಾರು ಡಿಕ್ಕಿ ಹೊಡೆಸಿ ಕೆಡವಿದ್ದರು. ನಂತರ ಕಾರಲ್ಲಿ ಅಪಹರಿಸಿ ಪರಾರಿಯಾಗಿದ್ದರು. ಬಹುಶಃ ಮೇಲ್ನೋಟಕ್ಕೆ ಇದೊಂದು ಭಯಾನಕ ಸಿನಿಮಾ ಶೈಲಿಯ ಅಟ್ಯಾಕ್ ಆಗಿತ್ತು. ಹೀಗಾಗಿ, ಬಹುತೇಕ ಇಡೀ ಮುಂಡಗೋಡ ಬೆಚ್ಚಿ ಬಿದ್ದಿತ್ತು. ಹಣಕ್ಕಾಗಿ ನಡೀತಾ..? ಅಸಲು, ನಿನ್ನೆ ನಡೆದ ಕಿಡ್ನ್ಯಾಪಿಂಗ್ ಕೇಸನ್ನು ನೋಡಿದ್ರೆ, ಇದು...
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಮುಂಡಗೋಡಿನಲ್ಲಿ ಭಯಾನಕ ಥೇಟು ಸಿನಿಮಾ ಶೈಲಿಯ ಅಟ್ಯಾಕ್ ನಡೆದಿದೆ. ದುಷ್ಕರ್ಮಿಗಳ ಗುಂಪು ಏಕಾಏಕಿ ಸಿನಿಮಿಯ ರೀತಿಯಲ್ಲಿ ಅಟ್ಯಾಕ್ ಮಾಡಿ ಮುಂಡಗೋಡಿನ NMD ಗ್ರೂಪ್ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಎಂಬುವವರನ್ನ ಚಾಕುವಿನಿಂದ ಚುಚ್ಚಿ? ವಾಹನದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ. ಅದು ಮುಸ್ಸಂಜೆ ಹೊತ್ತು..! ಅದು ಗುರುವಾರದ ಸಂಜೆ ಹೊತ್ತು, ಮುಂಡಗೋಡಿನ ಸಂತೆ ಮಾರ್ಕೆಟ್ ಹತ್ತಿರದ ಶಾಸಕರ ಮಾದರಿ ಶಾಲೆ ಹತ್ತಿರ ಸ್ಕೂಟಿ ಮೇಲೆ ಬರುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದು ಏಕಾಏಕಿ ವಾಹನ ಡಿಕ್ಕಿ ಹೊಡೆದು ಕೆಡವಿ, ವಾಹನದಲ್ಲಿ ಥೇಟು ಸಿನಿಮಾಸ್ಟೈಲಿನಲ್ಲೇ ಎತ್ತಿ ಹಾಕೊಂಡು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಅದು ಪಕ್ಕಾ ರೌಡಿಗಳ ತಂಡ..? ಅಂದಹಾಗೆ, ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಅನ್ನೊ ವ್ಯಕ್ತಿಯೇ ಸದ್ಯ ಕಿಡ್ನ್ಯಾಪ್ ಆಗಿದ್ದಾರೆ. ಇವ್ರು ತನ್ನ ಸ್ನೇಹಿತನೊಂದಿಗೆ ಸ್ಕೂಟಿ ಮೇಲೆ ಸಂಜೆ 7.50 ರ ಸುಮಾರಿಗೆ ಸಂತೆ ಮಾರುಕಟ್ಟೆ ಹತ್ಯಿರದ ಶಾಸಕರ ಮಾದರಿ ಶಾಲೆ ಬಳಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ವಾಹನದ ಮೇಲೆ ಬಂದಿದ್ದ ರೌಡಿಗಳ...