ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಮಳೆಯ ಆತಂಕ ಶುರುವಾಗಿದೆ ಹೀಗಾಗಿ, ಅನ್ನದಾತರು ಫಸಲುಗಳ ರಕ್ಷಣೆಗೆ ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯ ಆತಂಕದ ನಡುವೆ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ ರೈತ.. ಇನ್ನು, ಈ ಸಾರಿ ಮಳೆಯಲ್ಲಿ ಸಿಲುಕಿ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರೋ ಭತ್ತದ ಫಸಲು ಕಟಾವು ಮಾಡಲು ರೈತ ಭತ್ತ ಕಟಾವು ಮಾಡುವ ಯಂತ್ರಗಳ ಮೊರೆ ಹೋಗಿದ್ದಾನೆ.. ಹೀಗಾಗಿ ತಾಲೂಕಿನೆಲ್ಲೆಡೆ ಈಗ ಭತ್ತ ಕಟಾವು ಮಾಡೋ ಯಂತ್ರಗಳ ಸದ್ದೇ ಕೇಳುತ್ತಿದೆ. ಸಮಯವೂ ಉಳಿಯತ್ತೆ ಕೆಲಸವೂ ಕಡಿಮೆಯಾಗತ್ತೆ ಅನ್ನೋ ಕಾರಣಕ್ಕೆ ರೈತರು ತಂತ್ರಗಳ ಮೊರೆ ಹೋಗಿದ್ದಾರೆ..
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ನಂದಿಕಟ್ಟಾದಲ್ಲೂ ವಿಧಾನ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೂ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಸದಸ್ಯರೇಲ್ಲರೂ ಒಂದೆಡೆ ಸೇರಿ ಸಭೆ ಮಾಡಿದ್ರು. ಮತದಾನ ಪ್ರಕ್ರಿಯೆಯ ಕುರಿತು ಚರ್ಚಿಸಿದ್ರು. ಮತದಾನ ಮಾಡುವ ವಿಧಾನಗಳ ಬಗ್ಗೆ ತಿಳುವಳಿಕೆ ಹಂಚಿಕೊಂಡ್ರು.. ಆನಂತರದಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ರು. ಅಂದಹಾಗೆ, ಮತದಾನ ಕೇಂದ್ರದಲ್ಲಿ ಸುಗಮ ಮತದಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದ್ದು ಅಧಿಕಾರಿಗಳು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ಹುನಗುಂದದಲ್ಲಿ ವಿ.ಪರಿಷತ್ ಚುನಾವಣೆ ಭರ್ಜರಿ ಮತದಾನ..!
ಮುಂಡಗೋಡ: ತಾಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಬೆಳಗಿನಿಂದಲೂ ಭರ್ಜರಿಯಾಗೇ ನಡೆದಿದೆ. ತಾಲೂಕಿನ ಹುನಗುಂದದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಹುನಗುಂದದ ಶ್ರೀ ವಿಠಲ ರುಕ್ಮಾಯಿ ಹರಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ಸದಸ್ಯರು, ಅಲ್ಲೇ ಸಭೆ ನಡೆಸಿದ್ರು. ಆ ನಂತರದಲ್ಲಿ ಇಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ರು. ಅದ್ರಂತೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರೂ ಕೂಡ ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದ್ರು.
ಫಿನಿಕ್ಸ್ ನಂತೆ ಪುಟಿದೇಳುತ್ತಿದೆ ಮುಂಡಗೋಡ ಕಾಂಗ್ರೆಸ್..! ಅಷ್ಟಕ್ಕೂ ಬಿಜೆಪಿ ಒಳಗುದಿಗೆ ಹೊರಬಿದ್ದ ಹುದ್ದರಿಗಳೆಷ್ಟು..?
ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಟವಾಗ್ತಿದೆಯಾ..? ಹೌದು ಅಂತಿದೆ ಇತ್ತಿಚಿನ ಬೆಳವಣಿಗೆಗಳು. ಪ್ರಶಾಂತ್ ದೇಶಪಾಂಡೆ ಇಡಿ ಇಡಿಯಾಗಿ ಫಿಲ್ಡಿಗಿಳಿದ ಬಳಿಕ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅದೇಲ್ಲಿಂದಲೋ ಶಕ್ತಿ ತುಂಬಿಕೊಂಡಂಗಿದೆ. ಹೀಗಾಗಿನೇ ಕಾಂಗ್ರೆಸ್ ಗೆ ಹಿಂಡುಗಟ್ಟಲೇ ಬಿಜೆಪಿಯ ಕಾರ್ಯಕರ್ತರು ಸೇರಿಕೊಳ್ತಿದಾರೆ. ಫಿನಿಕ್ಸ್ ನಂತೆ..! ಅಷ್ಟಕ್ಕೂ ಬಿಜೆಪಿ ಅನ್ನೋ ಆಡಳಿತಾರೂಢ ಪಕ್ಷದ ಅಂಗಳದಿಂದ ಕಾಂಗ್ರೆಸ್ ಪಡಸಾಲೆಗೆ ಯಾಕೆ ಈ ರೀತಿಯ ಜಿಗಿತಗಳಾಗ್ತಿವೆ..? ಇದನ್ನೇಲ್ಲ ಬಹುಶಃ ಹೆಬ್ಬಾರ್ ಪಡೆಗೆ ಯೋಚಿಸಲು ಪುರುಸೋತ್ತೇ ಇಲ್ಲವೆನೊ. ಅಸಲು, ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಗಿಯೇ ಹೋಯ್ತು ಅಂತಾ ಎಲ್ಲೆಂದರಲ್ಲಿ ಎದೆಯುಬ್ಬಿಸಿ ಹೇಳಕೊಂಡು ತಿರುಗಾಡ್ತಿದ್ದ ಮಂದಿಗೇಲ್ಲ ಈಗ ಅದೇ ಕಾಂಗ್ರೆಸ್ ಹೊಚ್ಚಹೊಸ ಖದರ್ರಿನಲ್ಲಿ ಫಿನಿಕ್ಸ್ ನಂತೆ ಪುಟಿದೇಳುತ್ತಿದೆ ಅಂತಾ ಅರ್ಥವೂ ಆಗಿಲ್ಲವಾ..? “ಮಾನೆ” ಪವಾಡ..! ಅಂದಹಾಗೆ, ಎರಡು ದಿನದ ಹಿಂದೆ ತಾಲೂಕಿನಲ್ಲಿ ಹಾನಗಲ್ ನೂತನ ಶಾಸಕ...
ಕೊರೋನಾ ಹೆಚ್ಚಾದ್ರೆ ಶಾಲೆಗಳು ಬಂದ್: ಶಿಕ್ಷಣ ಸಚಿವ ಬಿ.ಸಿ.ನಾಗೇಶ್..!
ಬೆಂಗಳೂರು: ರಾಜ್ಯದಲ್ಲಿ ಒಮೈಕ್ರಾನ್ ವೈರಸ್ ಆತಂಕ ಹುಟ್ಟಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಒಮೈಕ್ರಾನ್ ವೈರಸ್ ಕರ್ನಾಟಕದಲ್ಲೇ ಪತ್ತೆಯಾಗಿದೆ. ಹೀಗಾಗಿ, ಒಮೈಕ್ರಾನ್ ರಾಜ್ಯಕ್ಕೆ ಕಾಲಿಟ್ಟ ನಂತರ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಒಲ್ಲದ ಮನಸ್ಸಿನಿಂದಲೇ ಕಳಿಸುತ್ತಿದ್ದಾರೆ. ಕೊರೋನಾ ಹೆಚ್ಚಾದ್ರೆ ಶಾಲೆ ಬಂದ್..! ಇದೇ ಸಂದರ್ಭದಲ್ಲಿ ಕೊರೋನಾ ಹೆಚ್ಚಾದ್ರೆ ಶಾಲೆಗಳನ್ನು ಬಂದ್ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ರಾಜ್ಯದಲ್ಲಿನ ಕೊರೋನಾ ಸೋಂಕಿನ ತೀವ್ರತೆ ಬಗ್ಗೆ ತಜ್ಞರಿಂದ ಪ್ರತಿ ದಿನ ವರದಿಯನ್ನು ಪಡೆಯುತ್ತಿದ್ದೇವೆ. ಕೋವಿಡ್ ತೀವ್ರತೆಯನ್ನು ಆಧರಿಸಿ, ಶಾಲಾ ಕಾಲೇಜು ಮುಚ್ಚುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ತಜ್ಞರು ನೀಡುತ್ತಿರುವ ವರದಿಯ ಪ್ರಕಾರ ಯಾರೂ ಆತಂಕ ಪಡುವಂತೆ ಕೊರೋನಾ ತೀವ್ರತೆ ಇಲ್ಲ. ಕೊರೋನಾ ತೀವ್ರತೆ ಆಧರಿಸಿ, ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಯವರು, ತಾಂತ್ರಿಕ ಸಲಹಾ ಸಮಿತಿ...
ಚಿಗಳ್ಳಿಯಲ್ಲಿ ತೆಪ್ಪದ ರಥೋತ್ಸವ ಅಜ್ಜನ ರಥ ನೋಡಿ ಕಣ್ತುಂಬಿಕೊಂಡ ಭಕ್ತರು..!
ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಗುರುವೀರಯೋಗೇಂದ್ರ ಸ್ವಾಮೀಜಿಯ ತೆಪ್ಪದ ರಥೋತ್ಸವ ಶೃದ್ಧಾಭಕ್ತಿಯಿಂದ ಜರುಗಿತು. ಇಲ್ಲಿನ ಕಲ್ಯಾಣಿಯಲ್ಲಿ ನಡೆದ ತೆಪ್ಪದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಹೊಂಡದ ದಡದಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದರು ಭಕ್ತಿ ತೋರಿದ್ರು. ಸಂಜೆಯಾಗುತ್ತಿದ್ದಂತೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆಪ್ಪದ ರಥವು ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ, ಭಕ್ತರ ಜಯಘೋಷಗಳು ಮೊಳಗಿದವು.
ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗಳಲ್ಲಿ ಕೆಲಸಕ್ಕೆ ಹೋಗುವ ಸುತ್ತ ಮುತ್ತಲ ಹಳ್ಳಿಗಳ ಕೂಲಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ. ರವಿವಾರ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕಕ್ಕೇ ಕಾರಣವಾಗಿದೆ. ನಿತ್ಯವೂ ಇಲ್ಲಿನ ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ತೆರಳುವ ನೂರಾರು ಕಾರ್ಮಿಕರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿಗಳು ಸೂಚನೆ ನೀಡಿವೆ.
ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಆಚರಿಸಲಾಯಿತು. ವಿವಿದ ಚಿತ್ರಗಳ ರೂಪದಲ್ಲಿ ದೀಪ ಬೆಳಗಿಸಿ ಭಕ್ತರು ಸಂಭ್ರಮಿಸಿದ್ರು. ದೇವಸ್ಥಾನದ ಅಂಗಳದಲ್ಲಿ ರಂಗೋಲಿ ಬಿಡಿಸಿ ಅದರ ಪ್ರಕಾರವೇ ದೀಪಗಳನ್ನು ಬೆಳಗಿಸಿದ್ರು. ಕಾರ್ತಿಕ ದೀಪ ಬೆಳಗಿಸೋ ಮೊದಲು ದೇವಿಗೆ ವಿಶೇಷ ಪೂಜೆ ಮಾಡಲಾಯಿತು.. ಇನ್ನು ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!
ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿ ಇತ್ತಿಚೆಗೆ ಸಂಭವಿಸಿದ ಕಾರು ದುರಂತದಲ್ಲಿ ದಂಪತಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಹೀಗಾಗಿ, ಅಪಘಾತಗಳಿಗೆ ಆಮಂತ್ರಣ ನೀಡುತ್ತಿದ್ದ ಅಮ್ಮಾಜಿ ಕೆರೆಯ ದಂಡೆಯ ಮೇಲೆ ಬೇಲಿ ಹಾಕಲಾಗಿದೆ. ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಈಗಷ್ಟೆ ಎಚ್ಚೆತ್ತುಕೊಂಡಿದ್ದು ಕೆರೆಯ ದಂಡೆಯ ಮೇಲೆ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಸಣ್ಣ ಸಣ್ಣ ಚೀಲಗಳನ್ನು ತುಂಬಿ ಇಡಲಾಗಿದೆ.. ಇದ್ರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವುದನ್ನು ಕೊಂಚ ತಪ್ಪಿಸಲು ಕ್ರಮ ಕೈಗೊಂಡಿದೆ.