ಫಿನಿಕ್ಸ್ ನಂತೆ ಪುಟಿದೇಳುತ್ತಿದೆ ಮುಂಡಗೋಡ ಕಾಂಗ್ರೆಸ್..! ಅಷ್ಟಕ್ಕೂ ಬಿಜೆಪಿ ಒಳಗುದಿಗೆ ಹೊರಬಿದ್ದ ಹುದ್ದರಿಗಳೆಷ್ಟು..?

ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಟವಾಗ್ತಿದೆಯಾ..? ಹೌದು ಅಂತಿದೆ ಇತ್ತಿಚಿನ ಬೆಳವಣಿಗೆಗಳು. ಪ್ರಶಾಂತ್ ದೇಶಪಾಂಡೆ ಇಡಿ ಇಡಿಯಾಗಿ ಫಿಲ್ಡಿಗಿಳಿದ ಬಳಿಕ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅದೇಲ್ಲಿಂದಲೋ ಶಕ್ತಿ ತುಂಬಿಕೊಂಡಂಗಿದೆ. ಹೀಗಾಗಿನೇ ಕಾಂಗ್ರೆಸ್ ಗೆ ಹಿಂಡುಗಟ್ಟಲೇ ಬಿಜೆಪಿಯ ಕಾರ್ಯಕರ್ತರು ಸೇರಿಕೊಳ್ತಿದಾರೆ.


ಫಿನಿಕ್ಸ್ ನಂತೆ..!
ಅಷ್ಟಕ್ಕೂ ಬಿಜೆಪಿ ಅನ್ನೋ ಆಡಳಿತಾರೂಢ ಪಕ್ಷದ ಅಂಗಳದಿಂದ ಕಾಂಗ್ರೆಸ್ ಪಡಸಾಲೆಗೆ ಯಾಕೆ ಈ ರೀತಿಯ ಜಿಗಿತಗಳಾಗ್ತಿವೆ..? ಇದನ್ನೇಲ್ಲ ಬಹುಶಃ ಹೆಬ್ಬಾರ್ ಪಡೆಗೆ ಯೋಚಿಸಲು ಪುರುಸೋತ್ತೇ ಇಲ್ಲವೆನೊ. ಅಸಲು, ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಗಿಯೇ ಹೋಯ್ತು ಅಂತಾ ಎಲ್ಲೆಂದರಲ್ಲಿ ಎದೆಯುಬ್ಬಿಸಿ ಹೇಳಕೊಂಡು ತಿರುಗಾಡ್ತಿದ್ದ ಮಂದಿಗೇಲ್ಲ ಈಗ ಅದೇ ಕಾಂಗ್ರೆಸ್ ಹೊಚ್ಚಹೊಸ ಖದರ್ರಿನಲ್ಲಿ ಫಿನಿಕ್ಸ್ ನಂತೆ ಪುಟಿದೇಳುತ್ತಿದೆ ಅಂತಾ ಅರ್ಥವೂ ಆಗಿಲ್ಲವಾ..?

“ಮಾನೆ” ಪವಾಡ..!                                    ಅಂದಹಾಗೆ, ಎರಡು ದಿನದ ಹಿಂದೆ ತಾಲೂಕಿನಲ್ಲಿ ಹಾನಗಲ್ ನೂತನ ಶಾಸಕ ಶ್ರೀನಿವಾಸ್ ಮಾನೆ ಪ್ರಚಾರಕ್ಕೆ ಬಂದಿದ್ರು. ವಿಧಾನ ಪರಿಷತ್ ಚುನಾವಣೆ ರಣರೋಚಕ ಅಖಾಡದಲ್ಲಿ ಕಾಂಗ್ರೆಸ್ ಪರವಾಗಿ ಒಂದರ್ಥದಲ್ಲಿ ಸ್ಟಾರ್ ಪ್ರಚಾರಕರೆಂಬಂತೆ ಬಿಂಬಿತವಾಗಿದ್ರು ಮಾನೆ. ಪಕ್ಕದ ಹಾನಗಲ್ ಕ್ಷೇತ್ರದಲ್ಲಿ ಇತ್ತಿಚೆಗೆ ನಡೆದ ಉಪಕದನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಅಕ್ಷರಶಃ ಮಕಾಡೆ‌ ಮಲಗಿಸಿದ್ದ ಶ್ರೀನಿವಾಸ್ ಮಾನೆ ನಿಜಕ್ಕೂ ಇಡೀ ರಾಜ್ಯದ ಗಮನ ಸೆಳೆದಿದ್ರು. ಅಂತವರು ಈಗ ಕಾಂಗ್ರೆಸ್ ಗೆ ಟಾನಿಕ್ ನೀಡಬಲ್ಲ ಶಕ್ತಿ ಹೊಂದಿರೋದು ಸುಳ್ಳೇನಲ್ಲ. ಹೀಗಾಗಿನೇ ವಿಧಾನ ಪರಿಷತ್ ಚುನಾವಣೆ ರಣಕಣದಲ್ಲಿ ಕಾಂಗ್ರೆಸ್ ಪರವಾಗಿ ಮತಕೇಳಲು ಬಂದಿದ್ದ ಶ್ರೀನಿವಾಸ್ ಮಾನೇ ಸಾಹೇಬ್ರಿಗೆ ಹೋದ ಕಡೆಯೆಲ್ಲ ಭರ್ಜರಿ ಸ್ವಾಗತವೇ ಸಿಕ್ಕಿತ್ತು.

ಹಾಗೆ ನೋಡಿದ್ರೆ, ಮುಂಡಗೋಡ ತಾಲೂಕಿನಲ್ಲಿ ಶ್ರೀನಿವಾಸ್ ಮಾನೆಯವ್ರಿಗೆ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಅದ್ರಲ್ಲೂ ತಾಲೂಕಿನಲ್ಲಿ ಹೇರಳವಾಗಿರೋ ಮರಾಠಾ ಸಮುದಾಯ, ಮಾನೆ ಸಾಹೇಬ್ರು ಬಂದ ನಂತ್ರ ನಮಗೊಬ್ಬ ಗಟ್ಟಿ ನಾಯಕ ಸಿಕ್ಕ ಅನ್ನೋ ದೈರ್ಯದಲ್ಲಿದ್ದಾರೆ‌ ಹೀಗಾಗಿನೇ, ತಾಲೂಕಿನಲ್ಲಿ ಮರಾಠಾ ಸಮುದಾಯ ಬಹುತೇಕ ಕಾಂಗ್ರೆಸ್ ನತ್ತ ಒಲವು ತೋರುತ್ತಿದೆ ಅನ್ನೋ ಸ್ಪಷ್ಟ ಸೂಚನೆಗಳು ಸಿಕ್ತಿವೆ. ಈ ಮೊದಲು ಕಲಘಟಗಿ ಶಾಸಕರಾಗಿದ್ದ ಸಂತೋಷ ಲಾಡ್ ಕಳೆದ ಗ್ರಾಮ ಪಂಚಾಯತಿ ಚುನಾವಣೆ ಹೊತ್ತಲ್ಲಿ, ಹಾಗೆ ಬಂದು ಹೀಗೆ ಹೋದ ಕಾರಣಕ್ಕೇನೇ ತಾಲೂಕಿನಲ್ಲಿ ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಲಾಭವಾಗಿತ್ತು. ಅಂದಮೇಲೆ, ಈಗ ಶ್ರೀನಿವಾಸ್ ಮಾನೆ ಹಾಗೂ ಸಂತೋಷ ಲಾಡ್ ಜೋಡಿ ಮುಂಡಗೋಡ ತಾಲೂಕಿನ ಕಾಂಗ್ರೆಸ್ ಗೆ ಬಲಿಷ್ಟ ಪಡೆ ಕಟ್ಟುವ ಎಲ್ಲಾ ಸಾಧ್ಯತೆಗಳೂ ಇದೆ. ಪ್ರಶಾಂತ ದೇಶಪಾಂಡೆಯವ್ರಿಗೆ ನಿಜಕ್ಕೂ ಇದು ಆನೆಬಲ ಅಂದ್ರೂ ತಪ್ಪಿಲ್ಲ.

ಪಕ್ಷಾಂತರ ಪರ್ವ..!
ಇನ್ನು, ಬಿಜೆಪಿಯೊಳಗಿನ ಹಳಬರು ಹೊಸಬರ ಪೀಕಲಾಟಗಳಿಗೆ ಬೇಸತ್ತಿರೋ ಹಿಂಡುಗಟ್ಟಲೇ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಈ ಹಿಂದೆಯೇ ಪಕ್ಕಾ ವರದಿಯೊಂದನ್ನ ನಿಮ್ಮ ಕೈಗಿಟ್ಟಿತ್ತು. ಅದೇಲ್ಲ ಈಗ ಚಾಲ್ತಿ ಪಡೆದುಕೊಂಡಿದೆ. ಅದರ ಭಾಗವಾಗೇ, ನ್ಯಾಸರ್ಗಿಯ ಮಾಜಿ ತಾಲೂಕಾ ಪಂಚಾಯತಿ ಸದಸ್ಯ, ಶಿವರಾಮ ಹೆಬ್ಬಾರರ ಅಭಿಮಾನಿಯೂ ಅಗಿದ್ದ ಜ್ಞಾನೇಶ್ವರ ಗುಡಿಹಾಳ ಬಿಜೆಪಿ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಶ್ರೀನಿವಾಸ್ ಮಾನೆ ಸಮ್ಮುಖದಲ್ಲೇ ಕೈ ಪಡೆಯ ಶಾಲು ಹಾಕಿಸಿಕೊಂಡ ಗುಡಿಹಾಳ “ಉಪವಾಸವಿದ್ರೂ ನೆಮ್ಮದಿಯಿಂದ ಇರಬೇಕು ಅಂತಾ ಕಾಂಗ್ರೆಸ್ ಸೇರ್ಪಡೆಯಾದೆ” ಅಂತಾರೆ..

ನಂದಿಕಟ್ಟಾದಲ್ಲೂ ಪಕ್ಷಾಂತರ..!
ಹಾಗೇನೇ, ನಂದಿಕಟ್ಟಾ ಗ್ರಾಮದಲ್ಲೂ ಹಿಂಡುಗಟ್ಟಲೇ ಬಿಜೆಪಿಗರು ಕಾಂಗ್ರೆಸ್ ಮಾಲೆ ಹಾಕಿಕೊಂಡಿದ್ದಾರೆ. ಈ ಭಾಗದಲ್ಲಿ ಈಗಾಗಲೇ ಕಾಂಗ್ರೆಸ್ ಗೆ ಅದೇನೋ ಒಂಥರಾ ಗಾಳಿ ಬೀಸಿಯಾಗಿದೆ. ಬಿಜೆಪಿಯಲ್ಲಿದ್ದು ರಾತ್ರಿ ಹಗಲು ಶ್ರಮಿಸಿ ಪಕ್ಷ ಕಟ್ಟಿದ್ದವರೇಲ್ಲ ಅದ್ಯಾಕೋ ಏನೋ ಬಿಜೆಪಿಯೊಂದಿಗೆ ಒಳಗೊಳಗೇ ಮುನಿಸಿಕೊಂಡಿದ್ದಾರೆ. ನಂದಿಕಟ್ಟಾದ ಬಿಜೆಪಿ ಮುಖಂಡ ಕಲ್ಲನಗೌಡ್ರು ತಮಗೆ ವಹಿಸಿದ್ದ ರೈತ ಮೋರ್ಚಾ ಅಧ್ಯಕ್ಷ ಪದವಿ ಬೇಡವೇ ಬೇಡ ಸಾಕು ನಿಮ್ಮ ಸಹವಾಸ ಅಂತಾ ರಾಜೀನಾಮೆ ಪತ್ರ ನೀಡಿ ತಿಂಗಳೇ ಕಳೆದಿದೆ‌. ಆದ್ರೆ ಅವ್ರಿನ್ನೂ ಬಿಜೆಪಿಯಲ್ಲೇ ಇದ್ದಾರೆ ಬಿಟ್ರೆ ಪಕ್ಷಾಂತರ ಮಾಡಿಲ್ಲ.

ಚುನಾವಣೆ ನಂತ್ರ ಪಕ್ಷಾಂತರಿ ಹಬ್ಬ..?
ಅಂದಹಾಗೆ, ತಾಲೂಕಿನಲ್ಲಿ ಕಾಂಗ್ರೆಸ್ ಸೇರಲು ಸಾಲು ಸಾಲು ಬಿಜೆಪಿಗರು ಒಳಗೊಳಗೇ ಬೇಕಾದ ಎಲ್ಲಾ ತಯಾರಿ ಶುರುವಿಟ್ಟಿದ್ದಾರೆ. ಪ್ರಶಾಂತ್ ದೇಶಪಾಂಡೆ ಜೊತೆ ನಿಕಟ ಸಂಪರ್ಕದಲ್ಲಿರೋ ಹಲವ್ರು, ಇನ್ನೇನು ವಿಧಾನ ಪರಿಷತ್ ಚುನಾವಣೆ ಮುಗಿದ ನಂತ್ರ ಭರ್ಜರಿ ಕಾರ್ಯಕ್ರಮ ಮಾಡಿ “ಕೈ” ಹಿಡಿತಾರೆ ಅನ್ನೋ ಅಂದರ್ ಕೀ ಬಾತ್ ಇದೆ.. ಒಟ್ನಲ್ಲಿ ಅದೇಷ್ಟು ಬಿಜೆಪಿ ಮನೆಯ ಹುದ್ದರಿಗಳು ಕೈ ಪಡೆಗೆ ಜಂಪ್ ಆಗ್ತಿದಾರೋ ಚುನಾವಣೆ ನಂತ್ರ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿವರೆಗೂ ಕಾಯಬೇಕಷ್ಟೆ..

 

error: Content is protected !!