ಬೆಂಗಳೂರು: ರಾಜ್ಯದಲ್ಲಿ ಒಮೈಕ್ರಾನ್ ವೈರಸ್ ಆತಂಕ ಹುಟ್ಟಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಒಮೈಕ್ರಾನ್ ವೈರಸ್ ಕರ್ನಾಟಕದಲ್ಲೇ ಪತ್ತೆಯಾಗಿದೆ. ಹೀಗಾಗಿ, ಒಮೈಕ್ರಾನ್ ರಾಜ್ಯಕ್ಕೆ ಕಾಲಿಟ್ಟ ನಂತರ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಒಲ್ಲದ ಮನಸ್ಸಿನಿಂದಲೇ ಕಳಿಸುತ್ತಿದ್ದಾರೆ.
ರಾಜ್ಯದಲ್ಲಿನ ಕೊರೋನಾ ಸೋಂಕಿನ ತೀವ್ರತೆ ಬಗ್ಗೆ ತಜ್ಞರಿಂದ ಪ್ರತಿ ದಿನ ವರದಿಯನ್ನು ಪಡೆಯುತ್ತಿದ್ದೇವೆ. ಕೋವಿಡ್ ತೀವ್ರತೆಯನ್ನು ಆಧರಿಸಿ, ಶಾಲಾ ಕಾಲೇಜು ಮುಚ್ಚುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ತಜ್ಞರು ನೀಡುತ್ತಿರುವ ವರದಿಯ ಪ್ರಕಾರ ಯಾರೂ ಆತಂಕ ಪಡುವಂತೆ ಕೊರೋನಾ ತೀವ್ರತೆ ಇಲ್ಲ. ಕೊರೋನಾ ತೀವ್ರತೆ ಆಧರಿಸಿ, ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಯವರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾ ತೀವ್ರತೆ ಇಲ್ಲ. ಪೋಷಕರು ಆತಂಕ ಪಡಬಾರದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.