ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!

ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!

ಮುಂಡಗೋಡ ತಾಲೂಕಿನ ಶಿಂಗನಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಡಿಕೆ ಕಳ್ಳರು ಕರಾಮತ್ತು ತೋರಿಸಿದ್ದಾರೆ‌. ಮನೆಯ ಅಂಗಳದಲ್ಲಿ ರಾಶಿ ಮಾಡಿದ್ದ ಸುಮಾರು 8 ಕ್ವಿಂಟಾಲ್ ಅಡಿಕೆಯನ್ನು ಅನಾಮತ್ತಾಗಿ ಕದ್ದೊಯ್ದಿದ್ದಾರೆ‌. ಹಾಗೆ ಕದ್ದು ಒಯ್ದಿರೋ ಅಡಿಕೆಯ ಅಂದಾಜು ಮೌಲ್ಯ ಏನಿಲ್ಲವೆಂದ್ರೂ ಮೂರೂವರೇ ಲಕ್ಷಕ್ಕೂ ಹೆಚ್ಚು. ಹೀಗಾಗಿ , ಈ ಭಾಗದ ಜನ ಕಂಗಾಲಾಗಿದ್ದಾರೆ‌. ಅಂದಹಾಗೆ, ಸಿಂಗನಳ್ಳಿಯ ರೈತ ಪ್ರಭು ಪಾಟೀಲ್ ಎಂಬುವವರ ಅಡಿಕೆ ಕಳ್ಳತನವಾಗಿದೆ. ಇವರ ಮನೆ ಪಕ್ಕದಲ್ಲೇ ಕಣ ಮಾಡಿ ಅಡಿಕೆ ಒಣಗಲು ಇಡಲಾಗಿತ್ತು. ಇದನ್ನು ಗಮನಿಸಿರೋ ಅಡಿಕೆ ಕಳ್ಳರು ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಅಡಿಕೆ ಕದ್ದೊಯ್ದಿದ್ದಾರೆ. ಖಾಲಿ ಚೀಲಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!

ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!

ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಮನೆ ಕಳ್ಳತನವಾಗಿದೆ. ಇಲ್ಲಿನ ದೇಶಪಾಂಡೆ ನಗರದಲ್ಲಿ ಎರಡು ಮನೆಗಳಿಗೆ ಕಳ್ಳರು ನುಗ್ಗಿದ್ದು ಒಂದು ಮನೆಯಿಂದ 25 ಸಾವಿರ ನಗದು ಹಾಗೂ ಅರ್ದ ತೊಲೆ ಚಿನ್ನ ಎಗರಿಸಿಕೊಂಡು ಹೋಗಿದ್ದಾರೆ‌. ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಅಂದಹಾಗೆ, ಹುನಗುಂದದ ದೇವಕ್ಕ ಹನ್ಮಂತಪ್ಪ ವಡ್ಡರ ಎಂಬುವವರ ಮನೆಗೆ ನುಗ್ಗಿರೋ ಕಳ್ಳರು 25ಸಾವಿರ ಹಣ, ಹಾಗೂ ಅರ್ಧ ತೊಲೆ ಚಿನ್ನ ಕದ್ದೊಯ್ದಿದ್ದಾರೆ. ಹಾಗೆಯೇ, ಅದೇ ಮನೆಯ ಹತ್ತಿರದ ಹಸನ್ ಸಾಬ್ ನಬಿಸಾಬ್ ಮೊರಬ ಎಂಬುವವರ ಮನೆಗೆ ನಿಗ್ಗಿರೋ ಕಳ್ಳರು, ಕಳ್ಳತನಕ್ಕೆ ವಿಫಲ ಯತ್ನ‌ ನಡೆಸಿದ್ದಾರೆ‌. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್, ಹಲವು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್, ಹಲವು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

 ಮುಂಡಗೋಡ ತಾಲೂಕಿನ ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಟ್ಟಿದೆ. ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಿಂದ “ಅಪರೇಶನ್ ಹಸ್ತ” ನಡೆದು ಹೋಗಿದೆ ಪರಿಣಾಮ ಹಲವು ಬಿಜೆಪಿಗರು ಅನಾಯಾಸವಾಗಿ “ಕೈ” ವಶವಾಗಿದ್ದಾರೆ. ಚಿಗಳ್ಳಿಯ ಸಹಕಾರಿ ಧುರೀಣ, ಬಿಜೆಪಿ ಮುಖಂಡ ಅಶೋಕ ಶಿರ್ಮಾಪುರ, ಮಹಾದೇವ ಬಯಲವಾಡ, ಚಂದ್ರು ಅಜ್ಜಳ್ಳಿ, ಸಂಪತ್ ಕೆಮೋಜ್ಜಿ, ರಾಮಚಂದ್ರ ನಿಂಬಾಯಿ, ನಾಮದೇವ ಜಾಧವ, ನಾಗಣ್ಣ ಹಂಚಿನಮನಿ, ಬಾಬುರಾಯ್ ಆಲದಕಟ್ಟಿ ಸೇರಿದಂತೆ ಹಲವರು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಹಾಗೂ ಯುವ ನಾಯಕರು, ಕೆ.ಪಿ.ಸಿ.ಸಿ ಸದಸ್ಯ ವಿವೇಕ್ ಹೆಬ್ಬಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡ ಮುಖಂಡರು ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಿಕಟಪೂರ್ವ ಅಧ್ಯಕ್ಷ ಜ್ಞಾನೇಶ್ವರ ಗುಡಿಹಾಳ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ಪ್ರಮುಖರಾದ ಎಚ್.ಎಮ್.ನಾಯ್ಕ, ರವಿಗೌಡ ಪಾಟೀಲ್, ಎಮ್.ಪಿ.ಕುಸೂರ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ ಸೇರಿದಂತೆ...

ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅಕ್ಷರಶಃ ಸಂಭ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನೇನು ಬಿಜೆಪಿಯಿಂದ ಉಚ್ಚಾಟನೆಯೋ ಅಥವಾ ಇನ್ಯಾವುದೋ ಕಠಿಣ ಕ್ರಮದ ಮಾತು ಹೊರಬಿದ್ದ ಗಳಿಗೆಯಿಂದ ಹೆಬ್ಬಾರ್ ಪಡಸಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ‌. ಯಾಕಂದ್ರೆ, ಇಲ್ಲಿ ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು, ಎರಡೂ ಒಂದೇಯಾಗುವ ಸಮಯ ಬಹುತೇಕ ಹತ್ತಿರವಾಗಿದೆ ಅಂತಲೇ ಹೆಬ್ಬಾರ್ ಬಳಗದಲ್ಲಿ ಚರ್ಚೆಯಾಗ್ತಿದೆ. STS ಹಾಗೂ ಹೆಬ್ಬಾರ್ ಮೇಲೆ ಕ್ರಮ..! ಅಸಲು, ವಿಜಯಪುರ ಶಾಸಕ, ಬಿಜೆಪಿಯ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಎಸ್ ವೈ ಬಣದ ನಡುವೆ ಠಫ್ ವಾರ್ ನಡೀತಿದೆ. ಹೀಗಾಗಿ, ರಾಜ್ಯದ ಬಿಜೆಪಿ ಸದ್ಯ ಬೀದಿ ರಂಪಾಟ, ಹಾದಿ ರಂಪಾಟದಲ್ಲಿ ಬಸವಳಿದಿದೆ. ಇದೇ ಹೊತ್ತಲ್ಲಿ, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಮುಖಂಡರು ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಜೊತೆಗೆ, ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ಧವೂ ಕ್ರಮವಾಗಲಿ ಅಂತಾ ಹೈಕಮಾಂಡಿಗೆ ಮನವಿ ಮಾಡಿದ್ದಾರೆ. ಅಲ್ರಿ ಇದು ಯಾವ ಲೆಕ್ಕ..? ಅಸಲು,...

ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!

ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!

ಮುರುಡೇಶ್ವರ : ಸಮುದ್ರದಲ್ಲಿ ಈಜಲು ತೆರಳಿದ ಕೋಲಾರ ಮೂಲದ ಮೂವರು ಪ್ರವಾಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಓರ್ವ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಶ್ರಾವಂತಿ (15) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಇನ್ನು ಮೂವರು ವಿಧ್ಯಾರ್ಥಿಗಳ ರಕ್ಷಣೆ ಮಾಡಲಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಕ್ಷಾ, ಲಾವಣ್ಯ, ಲಿಪಿಕಾ ನಾಪತ್ತೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಕೋಲಾರದ ಮುಳಬಾಗಿಲು ಮೂಲದ 54 ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದರು. ಸಂಜೆ ವೇಳೆ ಈಜುವಾಗ ಘಟನೆ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಾಪತ್ತೆಯಾದವರ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.

ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆ, ಅಷ್ಟಕ್ಕೂ, ಆ ತಾಯಿ ಗೋಳೋ ಅಂತ ಕಣ್ಣೀರು ಹಾಕಿದ್ಯಾಕೆ..?

ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆ, ಅಷ್ಟಕ್ಕೂ, ಆ ತಾಯಿ ಗೋಳೋ ಅಂತ ಕಣ್ಣೀರು ಹಾಕಿದ್ಯಾಕೆ..?

 ಮುಂಡಗೋಡ ತಾಲೂಕಿನಲ್ಲಿ ಒಳಗೊಳಗೇ ಒಂದಿಷ್ಟು ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ದಿಢೀರ್ ಎಂಬಂತೆ ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಕಲ್ಮೇಶ್ ಗೋಸಾವಿ ಗೋಳೋ ಅಂತಾ ಕಣ್ಣೀರು ಹಾಕ್ತಾ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ‌. ಬಿಜೆಪಿ ಮುಖಂಡ ಎಲ್ಟಿ ಪಾಟೀಲರ ನಿವಾಸದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲರ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ. ಹೀಗಾಗಿ, ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಈಗ ಅಧ್ಯಕ್ಷರ ಬದಲಾವಣೆಯ ಗುಮ್ಮ ಬಹುತೇಕ ತಣ್ಣಗಾಗುವ ಲಕ್ಷಣಗಳಿವೆ. ಅಸಲು, 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರಿದ್ದಾರೆ. ಬಿಜೆಪಿ ಬೆಂಬಲಿತ ಐವರು ಸದಸ್ಯರು ಗೆದ್ದು ಬಂದಿದ್ದಾರೆ. ಹೀಗಾಗಿ, ಸಹಜವಾಗೇ ಕಾಂಗ್ರೆಸ್ಸಿನ ಪುಷ್ಪಾ ಕಲ್ಮೇಶ್ ಗೋಸಾವಿ ಒಂದು ವರ್ಷದ ಹಿಂದೆ, ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದರು. ಆದ್ರೆ, ಅದ್ಯಾಕೋ ಏನೋ ಕಾಂಗ್ರೆಸ್ಸಿನ ಕೆಲವ್ರಿಗೆ ಪುಷ್ಪಾ ಮೇಡಮ್ಮು ಅಧ್ಯಕ್ಷ ಗಾದಿಯಲ್ಲಿರೋದು ಬೇಡವಾಗಿತ್ತಂತೆ. ಮಾನಸಿಕ ಹಿಂಸೆ ಕೊಟ್ರಾ..? ಹೀಗಾಗಿನೇ ನಂಗೆ ತುಂಬಾ ಹರ್ಯಾಷ್ಮೆಂಟ್ ಮಾಡ್ತಿದಾರೆ. ರಾಜೀನಾಮೆ ಕೊಡಿ ಅಂತಾ ನಿತ್ಯವೂ ಮಾನಸಿಕ...

ಮುಂಡಗೋಡಿನ ಸಾಯಿ ಭಕ್ತ, ಹಿರಿಯ ಸಮಾಜ ಸೇವಕ ಅಶೋಕ ಗೋಕರ್ಣ ವಿಧಿವಶ..!

ಮುಂಡಗೋಡಿನ ಸಾಯಿ ಭಕ್ತ, ಹಿರಿಯ ಸಮಾಜ ಸೇವಕ ಅಶೋಕ ಗೋಕರ್ಣ ವಿಧಿವಶ..!

ಮುಂಡಗೋಡಿನ ಹಿರಿಯ ಮುಖಂಡ, ಸಮಾಜ ಸೇವಕ, ಸಾಯಿ ಮಂದಿರದ ಭಕ್ತ ಮಂಡಳಿಯ ಪ್ರಮುಖರಾದ ಅಶೋಕ ಗೋಕರ್ಣ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಇಂದು ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಮುಂಡಗೋಡಿನ ಬಸ್ ನಿಲ್ದಾಣದ ಹತ್ತಿರ ತಮ್ಮದೇ ಜಾಗದಲ್ಲಿ ಸಾಯಿ ಮಂದಿರ ನಿರ್ಮಿಸಿ, ಸಾಯಿ ಭಗವಾನರ ಮೂರ್ತಿ ಪ್ರತಿಷ್ಠಾಪಿಸಿದ್ದರು. ಪತ್ನಿ ಹಿರಿಯ ಆಕಾಶವಾಣಿ ಸಂಗೀತ ಕಲಾವಿದೆ ಭಾರತಿ ಗೋಕರ್ಣರವರ ಮುಖಾಂತರ ಸಾಯಿ ಮಂದಿರದಲ್ಲಿ ಪ್ರತೀ ಗುರುವಾರ ಸತ್ಸಂಗ ನಡೆಸುತ್ತಿದ್ದರು‌. ಹೀಗಾಗಿ, ತಾಲೂಕಿನ ಸಾಯಿ ಭಕ್ತರ ಪಾಲಿಗೆ ಭಕ್ತ ಬಂಧುಗಳಾಗಿದ್ದರು. ಹೀಗಾಗಿ, ಅಶೋಕ ಗೋಕರ್ಣರವರ ನಿಧನಕ್ಕೆ ಮುಂಡಗೋಡಿನ ಹಲವು ಧಾರ್ಮಿಕ ಮುಖಂಡರು, ಸಾಯಿ ಭಕ್ತ ಬಳಗ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಈ ಬಾರಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನಮ್ಮ ಉದ್ದೇಶ- ಸಿಎಂ ಸಿದ್ಧರಾಮಯ್ಯ

ಈ ಬಾರಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನಮ್ಮ ಉದ್ದೇಶ- ಸಿಎಂ ಸಿದ್ಧರಾಮಯ್ಯ

 ಹುಬ್ಬಳ್ಳಿ :ಈ ಬಾರಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನಮ್ಮ ಉದ್ದೇಶ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಾಳೆಯಿಂದ ಅಧಿವೇಶನ ಎರಡು ವಾರ ನಡೆಯಬೇಕು ಅಂತ ನಮ್ಮ ‌ಉದ್ದೇಶ ಆಗಿದೆ. ಆದರೆ ವಿಪಕ್ಷ ಹೇಗೆ ಸಹಕಾರ ನೀಡುತ್ತೆ ನೋಡೋಣ ಎಂದರು. ಆರ್ಥಿಕ ಸಂಕಷ್ಟ ಇಲ್ಲೆ ಇಲ್ಲ ಬಿಜೆಪಿ ಸುಳ್ಳು ಹೇಳುತ್ತಿದ್ದು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ವಿರೋಧ ಮಾಡತ್ತಾರೆ ಬೇರೆ ಕಡೆ ಬಿಜೆಪಿ ಅವರೇ ಗ್ಯಾರಂಟಿ ಘೋಷಣೆ ಮಾಡ್ತಾರೆ ಇದು ಇಬ್ಬಂಧಿತನ ಅಲ್ವಾ..? ಇದರಲ್ಲಿ ಬಿಜೆಪಿಗೆ ಸ್ಪಷ್ಟ ನಿಲುವು ಇಲ್ಲ ಬರೀ ಸುಳ್ಳು ಅಪ್ರಚಾರ ಮಾಡತ್ತಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯಾವ ಕೆಲಸ ದುಡ್ಡು ಇಲ್ಲದೆ ನಿಂತಿದೆ ಅನ್ನೋದನ್ನ ಬಿಜೆಪಿ ಅವರು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಬಳ್ಳಾರಿಯಲ್ಲಿ ಬಾಣಂತಿಯ ಸಾವು...

ಶಿಗ್ಗಾವಿಯಲ್ಲಿ ಭರ್ಜರಿ ಜಯ ಸಿಕ್ಕ ಹಿನ್ನೆಲೆ, ಸವಣೂರಿಗೆ ಇಂದು ಸಿಎಂ ಸಿದ್ದರಾಮಯ್ಯ..! ಕ್ಷೇತ್ರಕ್ಕೆ ವಿಶೇಷ ಗಿಫ್ಟ್ ಕೊಡ್ತಾರಾ ಸಿಎಂ..?

ಶಿಗ್ಗಾವಿಯಲ್ಲಿ ಭರ್ಜರಿ ಜಯ ಸಿಕ್ಕ ಹಿನ್ನೆಲೆ, ಸವಣೂರಿಗೆ ಇಂದು ಸಿಎಂ ಸಿದ್ದರಾಮಯ್ಯ..! ಕ್ಷೇತ್ರಕ್ಕೆ ವಿಶೇಷ ಗಿಫ್ಟ್ ಕೊಡ್ತಾರಾ ಸಿಎಂ..?

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಇವತ್ತು ಸವಣೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಸವಣೂರಿನ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರೋ ಬೃಹತ್ ಅಭಿನಂದನಾ ಸಮಾರಂಭಸಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಬಹುಶಃ, ಶಿಗ್ಗಾವಿ ಕ್ಷೇತ್ರಕ್ಕಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಗಿಫ್ಟ್ ಕೊಡ್ತಾರಾ..? ಅನ್ನೋ ಭರವಸೆ ಯಲ್ಲಿದ್ದಾರೆ ಜನ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರು ಪಟ್ಟಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಗ್ಗಾವಿ ಕ್ಷೇತ್ರದ ಜನತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ ಹಿನ್ನೆಲೆಯಲ್ಲಿ, ಕೃತಜ್ಞತೆ ಸಲ್ಲಿಸಲಿದ್ದಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನೀಡಿದ ಕ್ಷೇತ್ರದ ಎಲ್ಲ ಮತದಾರರಿಗೆ ಅಭಿನಂದನಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸವಣೂರಿನ ತಾಲೂಕಾ ಕ್ರೀಡಾಂಗಣದಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಕೃತಜ್ಞತಾ ಸಮಾವೇಶ ನಡೆಯಲಿದೆ. ಇದೇ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂಪರ ಅನುದಾನ ನೀಡ್ತಾರಾ ಅನ್ನೊ ಕುತೂಹಲ ಹೆಚ್ಚಾಗಿದ್ದು ಕ್ಷೇತ್ರದ ಜನ ಭರವಸೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜೊತೆಗೆ ಡಿಸಿಎಂ ಡಿ.ಕೆ.ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ...

ಮುಂಡಗೋಡ ಪ.ಪಂಚಾಯತ್ ಪೈಪಲೈನ್ ಕಾಮಗಾರಿಯಲ್ಲಿ ಬಾರಾ ಬಾನಗಡಿ..? ದಾಖಲೆಯಲ್ಲಿ ಇದ್ದ ಪೈಪ್, ಸ್ಥಳದಲ್ಲಿ ಇಲ್ಲವೇ ಇಲ್ಲಾರಿ..!

ಮುಂಡಗೋಡ ಪ.ಪಂಚಾಯತ್ ಪೈಪಲೈನ್ ಕಾಮಗಾರಿಯಲ್ಲಿ ಬಾರಾ ಬಾನಗಡಿ..? ದಾಖಲೆಯಲ್ಲಿ ಇದ್ದ ಪೈಪ್, ಸ್ಥಳದಲ್ಲಿ ಇಲ್ಲವೇ ಇಲ್ಲಾರಿ..!

 ಮುಂಡಗೋಡ: 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ಬಾರಾಬಾನಗಡಿ ಆಗಿದೆಯಾ..? ಅದ್ಯಾವನೋ ಕಾಂಟ್ರಾಕ್ಟರ್ ಕಾಮಗಾರಿ ಹಳ್ಳ ಹಿಡಿಸಿದ್ರಾ..? ಇಂತಹದ್ದೊಂದು ಅನುಮಾನದೊಂದಿಗೆ ಶನಿವಾರ ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಕಾವೇರಿದ ಆರೋಪ, ಚರ್ಚೆಗೆ ಕಾರಣವಾಯ್ತು. ಅಂದಹಾಗೆ, ಕಾಮಗಾರಿಯ ದಾಖಲೆಯಲ್ಲಿ ಪೈಪ್ ಲೈನ್ ತೋರಿಸಲಾಗಿದೆ ಆದರೆ ಆ ಸ್ಥಳಗಳಲ್ಲಿ ಪೈಪ್ ಇಲ್ಲದೆ ಇರುವುಕಂಡು ಬಂದಿದೆ. ಹಾಗಾದರೇ ಆ ಪೈಪಗಳು ಎಲ್ಲಿ ಹೋದವು ಈ ಬಗ್ಗೆ ಸಮಗ್ರ ತನಿಖೆ‌ ಆಗಬೇಕೆಂದು ಪ.ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಏಕದಂ ಏರುದನಿಯಲ್ಲಿ ಆಗ್ರಹಿಸಿದ್ರು. ಶನಿವಾರ ಇಲ್ಲಿನ ಪ.ಪಂ ಸಭಾಭವನದಲ್ಲಿ ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಮ್ಮದಗೌಸ ಮಕಾಂದಾರ್ ಈ ಬಗ್ಗೆ ಆರೋಪಿಸಿ ಮಾತನಾಡಿದರು, ಸರಕಾರದ  ಕೋಟ್ಯಾಂತರ ರೂ ಅನುದಾನದಲ್ಲಿ ಪಟ್ಟಣದ ಜನರಿಗೆ 24×7 ಕುಡಿಯುವ ಯೋಜನೆ ಇದಾಗಿತ್ತು. ಆದರೆ ಗುತ್ತಿಗೆದಾರರು ಈ ಯೋಜನೆಯ ಮ್ಯಾಪ್ ನಲ್ಲಿ ಪೈಪ್ ಲೈನ್ ಅಳವಡಿಸಿದ ಬಗ್ಗೆ ತೊರಸಿದ್ದಾರೆ. ಮ್ಯಾಪಿನ ಪ್ರಕಾರ ಕೆಲ...

error: Content is protected !!