ಸಚಿವರಾಗಿ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು..!

ಸಚಿವರಾಗಿ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು..!

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಶಿವರಾಮ್ ಹೆಬ್ಬಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ಅಂದಹಾಗೆ, ಸಚಿವರಾಗಿ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು ಇವು..!

ಹೆಬ್ಬಾರ್ ಸಚಿವರಾಗಿ ಪ್ರಮಾಣ ವಚನ; ಮುಂಡಗೋಡಿನಲ್ಲಿ ಬಿಜೆಪಿಗರ ಸಂಭ್ರಮ..!

ಹೆಬ್ಬಾರ್ ಸಚಿವರಾಗಿ ಪ್ರಮಾಣ ವಚನ; ಮುಂಡಗೋಡಿನಲ್ಲಿ ಬಿಜೆಪಿಗರ ಸಂಭ್ರಮ..!

ಮುಂಡಗೋಡ: ಶಾಸಕ ಶಿವರಾಮ್ ಹೆಬ್ಬಾರ್ ಎರಡನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸುತ್ತಿರೋ ಹಿನ್ನೆಲೆಯಲ್ಲಿ, ಇಂದು ಪ್ರಮಾಣ ವಚನ ಸ್ವೀಕರಿಸಿದ ವೇಳೆ ಮುಂಡಗೋಡಿನಲ್ಲಿ ಹೆಬ್ಬಾರ್ ಬೆಂಬಲಿಗರು ಸಂಭ್ರಮಿಸಿದ್ರು‌. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು , ಹೆಬ್ಬಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಈ ವೇಳೆ ಬಿಜೆಪಿ ಮುಖಂಡ ಸಿದ್ದಪ್ಪ ಹಡಪದ್, ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ, ಭರತ್ ಹದಳಗಿ, ಪ್ರಶಾಂತ್ ಲಮಾಣಿ, ರಾಮಣ್ಣ ಲಮಾಣಿ, ಯಲ್ಲಪ್ಪ ಮಜ್ಜಿಗೇರಿ, ಅಶೋಕ ಹಸರಂಬಿ ಸೇರಿದಂತೆ ಹಲವ್ರು ಭಾಗವಹಿಸಿದ್ರು.

ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ಬಂಧಿತ ಆರೋಪಿಗಳು ಇವರೇ ನೋಡಿ..!

ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ಬಂಧಿತ ಆರೋಪಿಗಳು ಇವರೇ ನೋಡಿ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಪಿಐ ಪ್ರಭುಗೌಡ ಹಾಗೂ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ, ಮಹ್ಮದ್ ಇರ್ಫಾನ್ ತಿಮ್ಮಾಪುರ, ಶೇಖ್ ಅಹ್ಮದ್ ಅಶ್ಪಕ್ ಬಂಧಿತ ಆರೋಪಿಗಳು. ಇನ್ನು, ಬಂಧಿತರಿಂದ 20 ಸಾವಿರ ಮೌಲ್ಯದ 628 ಗ್ರಾಂ ಗಾಂಜಾ ಹಾಗೂ 350 ರೂ. ನಗದು ಜಪ್ತಿ ಮಾಡಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯಾಸರ್ಗಿ ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ..!

ನ್ಯಾಸರ್ಗಿ ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ..!

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನ್ಯಾಸರ್ಗಿ ಸೂರ್ಯನಾರಾಯಣ, ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಬಾಚಣಕಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಬಾಚಣಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಇದ್ದರು,  ಅಯ್ಯಪ್ಪ ಭಜಂತ್ರಿ, ಉದಯ ಶಿರಾಲಿ, ವೆಂಕಟೇಶ್ ಕಾಟ್ವೆಕರ್, ಮಾಂತೇಶ್ ಕೇಣಿ, ಅಣ್ಣಪ್ಪ ಬೋವಿ ಸೇರಿದಂತೆ ಹಲವರು ಮನವಿ ಅರ್ಪಿಸಿದ್ರು.

ಪ್ರಮಾಣ ವಚನಕ್ಕೆ ರೆಡಿಯಾಗಿರಿ; ಶಿವರಾಮ್ ಹೆಬ್ಬಾರ್ ಗೆ ಸಿಎಂ ರಿಂದ ಕರೆ..!

ಪ್ರಮಾಣ ವಚನಕ್ಕೆ ರೆಡಿಯಾಗಿರಿ; ಶಿವರಾಮ್ ಹೆಬ್ಬಾರ್ ಗೆ ಸಿಎಂ ರಿಂದ ಕರೆ..!

ಯಲ್ಲಾಪುರ: ಶಾಸಕ ಶಿವರಾಮ್ ಹೆಬ್ಬಾರ್ ಸಂಪುಟ ಸೇರ್ಪಡೆಗೊಳ್ಳೋದು ಬಹುತೇಕ ಖಚಿತವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಗೆ ರೆಡಿಯಾಗಿರಿ ಅಂತಾ ಈಗಾಗಲೇ ಶಿವರಾಮ್ ಹೆಬ್ಬಾರ್ ಗೆ ಕರೆ ಮಾಡಿದ್ದಾರೆ ಅನ್ನೋ ಖಚಿತ ಮಾಹಿತಿ ಲಭ್ಯವಾಗಿದೆ. ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿರೋ ಹೆಬ್ಬಾರ್ ಇನ್ನೇನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರೆಡಿಯಾಗ್ತಿದ್ದಾರೆ. ಕಾರ್ಮಿಕ ಸಚಿವರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದ ಹೆಬ್ಬಾರ್ ರಿಗೆ, ವಲಸಿಗರ ಕೋಟಾದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯೊ ಅದೃಷ್ಟ ಒಲಿದಿದೆ.

ಸನವಳ್ಳಿಯ ಬಡವರ ನಿವೇಶನ ಅತಿಕ್ರಮಣ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಕ್ರಮ..!

ಸನವಳ್ಳಿಯ ಬಡವರ ನಿವೇಶನ ಅತಿಕ್ರಮಣ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಕ್ರಮ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ ಹಂಚಿದ್ದ 16 ನಿವೇಶನಗಳನ್ನು ಪಕ್ಕದ ಜಮೀನಿನ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಾಲಾದ ಜಮೀನಿನ ಅಳತೆ ಮಾಡಿ, ಅಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಕ್ರಮ‌ಕೈಗೊಂಡಿದ್ದಾರೆ. ಅತಿಕ್ರಮಣ ತೆರವು ಗೊಳಿಸಲು ಕ್ರಮ ಕೈಗೊಂಡಿರೋ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಥ್ ನೀಡಿದ್ರು..

ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ನಾಲ್ವರ ಬಂಧನ..!

ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ನಾಲ್ವರ ಬಂಧನ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಖಡಕ್ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಾಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ, ಮಹ್ಮದ್ ಇರ್ಫಾನ್ ತಿಮ್ಮಾಪುರ, ಶೇಖ್ ಅಹ್ಮದ್ ಅಶ್ಪಕ್ ಬಂಧಿತ ಆರೋಪಿಗಳು. ಇನ್ನು, ಬಂಧಿತರಿಂದ 20 ಸಾವಿರ ಮೌಲ್ಯದ 628 ಗ್ರಾಂ ಗಾಂಜಾ ಹಾಗೂ 350 ರೂ. ನಗದು ಜಪ್ತಿ ಮಾಡಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ 22 ಸಾವಿರ ಹಣ ದೋಚಿದ ಖದೀಮರು..!

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ 22 ಸಾವಿರ ಹಣ ದೋಚಿದ ಖದೀಮರು..!

ಮುಂಡಗೋಡ: ತಾಲೂಕಿನ ಕಾತೂರು ಸಮೀಪದಲ್ಲಿ ಲಾರಿ ಚಾಲಕನನ್ನು ಅಪಹರಿಸಿ ಅವನಲ್ಲಿದ್ದ 22 ಸಾವಿರ ಹಣ ದೋಚಿಕೊಂಡು ಹೋದ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಅಬ್ದುಲ್ ಪೀರಸಾಬ್ ಶೇಖ್ ಎಂಬುವ ಲಾರಿ ಚಾಲಕನೇ ಹಣ ಕಳೆದುಕೊಂಡವನಾಗಿದ್ದಾನೆ. ಹುಬ್ಬಳ್ಳಿಯಿಂದಲೇ ಬೊಲೆರೋ ವಾಹನದಲ್ಲಿ ಹಿಂಬಾಲಿಸಿದ್ದ ನಾಲ್ಕು ಜನ ದುಷ್ಕರ್ಮಿಗಳು, ಲಾರಿ ಚಾಲಕ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದಾಗ ಏಕಾಏಕಿ ಬಂದು ಅಟ್ಯಾಕ್ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ‌ ಬೊಲೆರೋ ವಾಹನದಲ್ಲೇ ಲಾರಿ ಚಾಲಕನನ್ನು ಹೊತ್ತೊಯ್ದಿದ್ದಾರೆ. ನಂತರ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಒಯ್ದು ಹಣ ಕಿತ್ತುಕೊಂಡಿದ್ದಾರೆ. ಬಳಿಕ ಲಾರಿ ಚಾಲಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಹಾಗಂತ, ಲಾರಿ ಚಾಲಕ ಮುಂಡಗೋಡ ಪೊಲೀಸರಿಗೆ ದೂರು ನೀಡಿದ್ದಾನೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿದ್ಯುತ್ ತಗುಲಿ ಇಬ್ಬರು ರೈತರ ದಾರುಣ ಸಾವು..!

ವಿದ್ಯುತ್ ತಗುಲಿ ಇಬ್ಬರು ರೈತರ ದಾರುಣ ಸಾವು..!

ಶಿಗ್ಗಾವಿ : ಪಂಪ್ ಸೆಟ್ ಚಾಲನೆಗೊಳಿಸಲು ಹೋದ ವೇಳೆ ವಿದ್ಯುತ್ ತಗಲಿ ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ರಾತ್ರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಸವನಾಳ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ರೈತರನ್ನು ರೇವಣಯ್ಯ ಪಂಚಾಕ್ಷರಿಮಠ (50) ಮತ್ತು ಯಲ್ಲಪ್ಪ ಹಡಪದ (55) ಎಂದು ಗುರುತಿಸಲಾಗಿದೆ. ತೋಟದಲ್ಲಿನ ಬೋರವೆಲ್ ಗೆ ಸ್ಟಾರ್ಟರ್ ಕೂಡಿಸಲು ಹೋಗಿದ್ದ ವೇಳೆ ದುರ್ಘಟ‌ನೆ ನಡೆದಿದ್ದು. ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಇಬ್ಬರು ರೈತರು ಮೃತಪಟ್ಟಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದೇಶದಲ್ಲಿ ಸದ್ದಿಲ್ಲದೇ ಕೊರೋನಾ ಕೇಕೆ..! ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ..!!

ದೇಶದಲ್ಲಿ ಸದ್ದಿಲ್ಲದೇ ಕೊರೋನಾ ಕೇಕೆ..! ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ..!!

ಬೆಂಗಳೂರು: ದೇಶಾದ್ಯಂತ ಕೊರೊನಾ ಮೂರನೇ ಅಲೆ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಆತಂಕ ಶುರುವಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್ ಡೌನ್ ಭೀತಿ ಎದುರಾಗಿದೆ. ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ 22,000 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಎರಡು ದಿನಗಳ ಲಾಕ್ ಡೌನ್ ಗೆ ಸರ್ಕಾರ ಮುಂದಾಗಿದೆ. ಕೇರಳದಲ್ಲಿ ಜುಲೈ 31 ಹಾಗೂ ಆಗಸ್ಟ್ 1ರಂದು ವೀಕೆಂಡ್ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಕೇರಳದಲ್ಲಿ ಬುಧವಾರ ಒಂದೇ ದಿನ 22,129 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕೋವಿಡ್ ಸಂಖ್ಯೆ ರಾಜ್ಯದಲ್ಲಿ ಏಕಾಏಕಿ ಏರಿಕೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ 6 ಸದಸ್ಯರ ತಂಡವನ್ನು ರವಾನಿಸಿದೆ. ಮಹಾರಾಷ್ಟ್ರದಲ್ಲೂ ಪ್ರತಿದಿನ ಆರು ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದುವಾರದಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು,...

error: Content is protected !!