ಪ್ರವೀಣ್ ಹತ್ಯೆಗೆ ಖಂಡನೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರ “ರಾಜೀನಾಮೆ” ಬಾಣ..!

ಪ್ರವೀಣ್ ಹತ್ಯೆಗೆ ಖಂಡನೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರ “ರಾಜೀನಾಮೆ” ಬಾಣ..!

ವಿಜಯಪುರ: ಬಿಜೆಪಿ ಮುಖಂಡ ಪ್ರವೀಣ್ ಕೊಟ್ಟಾರು ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಖುದ್ದು ಬಿಜೆಪಿ ಪಕ್ಷದಲ್ಲಿ ತಮ್ಮದೇ ಪಕ್ಷದ ಆಡಳಿತದ ವಿರುದ್ಧ ಕಾರ್ಯಕರ್ತರು ಸಿಡಿದೇಳುತ್ತಿದ್ದಾರೆ. ಜೊತೆಗೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಪದಾಧಿಕಾರಿಗಳು ತಮ್ಮ ಒಡಲಾಳದ ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಂಡು ಹಿಂಡು ರಾಜೀನಾಮೆ..! ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಹಾಗೂ ಒಂಭತ್ತು ಮಂಡಳಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳಗೆ ರಾಜಿನಾಮೆ ಸಲ್ಲಿಸಿರೋ ಪದಾಧಿಕಾರಿಗಳು ಈ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜೀನಾಮೆ ಪತ್ರದಲ್ಲೇನಿದೆ..? ಇನ್ನು ಬಿಜೆಪಿ ಪದಾಧಿಕಾರಿಗಳು ನೀಡಿರೋ ರಾಜೀನಾಮೆ ಪತ್ರದಲ್ಲಿ “ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸವಿದೆ, ಬಲಿಷ್ಟ ಸಿದ್ದಾಂತಕ್ಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತಹದ್ದು...

ನಂದಿಕಟ್ಟಾದಲ್ಲಿ ಪ್ರವೀಣ್ ಹತ್ಯೆಗೆ ಖಂಡನೆ, ಬಿಜೆಪಿ ಯುವ ಮೋರ್ಚಾದಿಂದ ಶೃದ್ಧಾಂಜಲಿ..!

ನಂದಿಕಟ್ಟಾದಲ್ಲಿ ಪ್ರವೀಣ್ ಹತ್ಯೆಗೆ ಖಂಡನೆ, ಬಿಜೆಪಿ ಯುವ ಮೋರ್ಚಾದಿಂದ ಶೃದ್ಧಾಂಜಲಿ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಕೊಟ್ಟಾರು ಸಾವಿಗೆ, ಬಿಜೆಪಿ ಯುವ ಮೋರ್ಚಾ ಘಟಕ ಕಂಬನಿ ಮಿಡಿದಿದೆ. ಹತ್ಯೆಯಾಗಿರೋ ಪ್ರವೀಣ್ ಕೊಟ್ಟಾರು ಭಾವಚಿತ್ರಕ್ಕೆ ಹೂ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸಿದ ಯುವ ಕಾರ್ಯಕರ್ತರು, ಹಂತಕರಿಗೆ ಹೆಡೆಮುರಿ ಕಟ್ಟುವಂತೆ ಆಗ್ರಹಿಸಿದ್ದಾರೆ. ಈ ವೇಳೆ ನಂದಿಕಟ್ಟಾ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂಡಗೋಡ ಬಿಜೆಪಿ ಯುವ ಮೋರ್ಚಾದಿಂದ ಪ್ರವೀಣ್ ನೆಟ್ಟಾರು ಗೆ ಶೃದ್ಧಾಂಜಲಿ..!

ಮುಂಡಗೋಡ ಬಿಜೆಪಿ ಯುವ ಮೋರ್ಚಾದಿಂದ ಪ್ರವೀಣ್ ನೆಟ್ಟಾರು ಗೆ ಶೃದ್ಧಾಂಜಲಿ..!

ಮುಂಡಗೋಡ: ಬಿಜೆಪಿ ಯುವ ಮುಖಂಡ, ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಖಂಡನೆ ವ್ಯಕ್ತ ಪಡಿಸಿದೆ. ಪಟ್ಟಣದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಹತ್ಯೆಯಾದ ಪ್ರವೀಣ್ ಕೊಟ್ಟಾರುಯವರಿಗೆ ಶೃದ್ಧಾಂಜಲಿ ಅರ್ಪಿಸಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ತೀವ್ರ ಖಂಡನೆ ವ್ಯಕ್ತ ಪಡಿಸಿರೋ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಯುವ ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಕಾರ್ಯಕರ್ತರು, ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ.!

ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಕಾರ್ಯಕರ್ತರು, ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ.!

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಇಡೀ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಖುದ್ದು ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟ‌ನೆ ಕಾರ್ಯಕರ್ತರೇ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಾಧ್ಯಂತ ಹಲವು ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ, ಜವಾಬ್ದಾರಿಗಳಿಗೆ ಹಿಂಡು ಹಿಂಡಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ನಡುವೆ ನಾಳೆಯೇ ಮಾನ್ಯ “ಬೊಮ್ಮಾಯಿ ಸರ್ಕಾರ” ಒಂದು ವರ್ಷ ಪೂರೈಸಿದ ಸಂಭ್ರಮೋತ್ಸವ ಆಚರಣೆಯಲ್ಲಿ ಬ್ಯುಸಿಯಾಗಿದೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಣಾನೇಂದ್ರ ವಿರುದ್ಧ ಇನ್ನಿಲ್ಲದಂತೆ ಆಕ್ರೋಶ ಹೊರ ಹಾಕ್ತಿದಾರೆ. ಬಹುಶಃ ಇತಿಹಾಸದಲ್ಲಿ ಆಡಳಿತಾರೂಢ ಪಕ್ಷವೊಂದರ ಕಾರ್ಯಕರ್ತರು ತಮ್ಮ ಪಕ್ಷದ ಆಡಳಿತದ ವಿರುದ್ಧವೇ ಇಷ್ಟೊಂದು ಆಕ್ರೋಶ ಹೊರಹಾಕಿದ್ದು ಇದೇ ಮೊದಲು ಇರಬೇಕು. ಹಾಗಿದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೇಗೆಲ್ಲ ಆಕ್ರೋಶ ವ್ಯಕ್ತವಾಗ್ತಿದೆ ಗೊತ್ತಾ..? ಹೇಗೆಲ್ಲ ಸರ್ಕಾರದ ಬಿಜೆಪಿ ಕಾರ್ಯಕರ್ತರು ಕಿಡಿ ಕಾರ್ತಿದಾರೆ ಗೊತ್ತಾ..? ಇಲ್ಲಿದೆ ಕೆಲವು ತುಣುಕುಗಳು..

ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!

ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!

 ಮುಂಡಗೋಡ: ತಾಲೂಕಿನ ಉಗ್ನಿಕೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಶ್ರೀರಾಮ ಸೇನೆ ಗ್ರಾಮ ಘಟಕದ ವತಿಯಿಂದ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಇರುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು. ಹಲವು ದಿನಗಳಿಂದ ಸ್ವಚ್ಚತೆ ಮಾಡದೇ ಇದ್ದಿದ್ದ ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಿದ ಕಾರ್ಯಕರ್ತರು, ಟ್ಯಾಂಕ್ ಸುತ್ತಮುತ್ತಲಿನ ಗಿಡಗಂಟಿಗಳನ್ನು ಹಾಗೂ ಕೊಳಚೆಯನ್ನು ಸ್ವಚ್ಚಗೊಳಿಸಿದ್ರು. ಈ ಮೂಲಕ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದ್ರು.

ಮುಂಡಗೋಡಿನಲ್ಲಿ ಹಿರಿಯ ಸಾಧಕರಿಗೆ ಸಚಿವರಿಂದ ಸನ್ಮಾನ..!

ಮುಂಡಗೋಡಿನಲ್ಲಿ ಹಿರಿಯ ಸಾಧಕರಿಗೆ ಸಚಿವರಿಂದ ಸನ್ಮಾನ..!

 ಮುಂಡಗೋಡ: ಪಟ್ಟಣದ ಎಲ್.ವಿ.ಕೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ” ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನ ” ಕಾರ್ಯಕ್ರಮದಲ್ಲಿ ಹುನಗುಂದದ ಹಿರಿಯ ಶುಶ್ರೂಕಿ ಶಾಲಿನಿ ನಾಯ್ಕ್ ಸೇರಿದಂತೆ ಹಲವು ಸಾಧಕರಿಗೆ ಸನ್ಮಾನಿಸಲಾಯಿತು. ಸಚಿವ ಶಿವರಾಮ್ ಹೆಬ್ಬಾರ್, ಹಲವು ಹಿರಿಯ ಶುಶ್ರೂಕಿಯರು ಹಾಗೂ ಹಿರಿಯ ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಇದ್ರ ಜೊತೆ ತಾಲೂಕಿನ ಹಿರಿಯ ಆಶಾ ಕಾರ್ಯಕರ್ತೆಯರನ್ನು ಸಚಿವರು ಸನ್ಮಾನಿಸಿದ್ರು. ಈ ವೇಳೆ ಹಲವು ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಸಂಘದ ಪ್ರಚಾರಕ ಸತೀಶ್ ಕಟ್ಟಿಯವರಿಗೆ ಶೃದ್ಧಾಂಜಲಿ ಕಾರ್ಯಕ್ರಮ..!

ಸಂಘದ ಪ್ರಚಾರಕ ಸತೀಶ್ ಕಟ್ಟಿಯವರಿಗೆ ಶೃದ್ಧಾಂಜಲಿ ಕಾರ್ಯಕ್ರಮ..!

 ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳಿಂದ ದಿ. ಸತೀಶ್ ಕಟ್ಟಿವರಿಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸೋಮವಾರ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸತೀಶ್ ಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕಾ ಭಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಶೃದ್ದಾಂಜಲಿ ಅರ್ಪಿಸಲಾಯಿತು. ಈ ವೇಳೆ ಭಜರಂಗದಳದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಭಕ್ತಿಪೂರ್ವಕವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು

ಮುಂಡಗೋಡಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ..!

ಮುಂಡಗೋಡಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ..!

 ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಛತ್ರಪತಿ ಶಿವಾಜಿ ಮಂಡಳದ ವತಿಯಿಂದ ಗೌರವ ಸಮರ್ಪಣೆ ಹಾಗೂ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಭಕ್ತಿಯ ಘೋಷಣೆಗಳೊಂದಿಗೆ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಯೋಧರಾದ ಗಣಪತಿ ರವಳಪ್ಪನವರ್, ಯಲ್ಲಪ್ಪ ನಾಯ್ಕರ್, ಅಣ್ಣಪ್ಪ ಶಿಗ್ಗಾವಿ ಹಾಗೂ ಗಣಪತಿ‌ ಮಟ್ಟಿಮನಿ ಎಂಬುವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಈ ವೇಳೆ ಹಲವು ಮುಖಂಡರು ಭಾಗಿಯಾಗಿದ್ರು.

ಹುನಗುಂದದ ಸಹಕಾರಿ ಧುರೀಣ ಸಿದ್ದಪ್ಪ ಬೀರವಳ್ಳಿ ವಿಧಿವಶ..!

ಹುನಗುಂದದ ಸಹಕಾರಿ ಧುರೀಣ ಸಿದ್ದಪ್ಪ ಬೀರವಳ್ಳಿ ವಿಧಿವಶ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಸಹಕಾರಿ ಧುರೀಣ, ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಪ್ಪ ಸಣ್ಣಕಲ್ಲಪ್ಪ ಬೀರವಳ್ಳಿ(65) ಹೃದಯಾಘತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿರೋ ಸಿದ್ದಪ್ಪ ಬೀರವಳ್ಳಿ, ಮೃದುಸ್ವಭಾವದ, ಜನಾನುರಾಗಿ ವ್ಯಕ್ತಿತ್ವದವರಾಗಿದ್ದರು. ಈ ಹಿಂದೆ ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಿದ್ದಪ್ಪ ಬೀರವಳ್ಳಿ, ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರೋ, ಸಿದ್ದಪ್ಪ ಬೀರವಳ್ಳಿಯವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

ಅಗಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ರಾ ಅಧಿಕಾರಿಗಳು..?

ಅಗಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ರಾ ಅಧಿಕಾರಿಗಳು..?

 ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಂದಿದ್ರು.. ಆದ್ರೆ ಈ ಕಾರ್ಯಕ್ರಮದ ಸಲುವಾಗಿ ಬರೋಬ್ಬರಿ 24 ವಿದ್ಯಾರ್ಥಿಗಳ ಜೀವ ಒತ್ತೆ ಇಡಲಾಗಿತ್ತಾ ಅನ್ನೊ ಆತಂಕ ಇತ್ತು. ಯಾಕಂದ್ರೆ ಆ ವಿದ್ಯಾರ್ಥಿಗಳ ಕಾಲಡಿಯೇ ಯಮರೂಪಿ ವಿದ್ಯುತ್ ತಂತಿ ಹಾದು ಹೋಗಿತ್ತು. ಇಲಾಖಾ ಅಧಿಕಾರಿಗಳ ಎದುರೇ..! ಅಸಲು, ಹಾಗೆ ವಿದ್ಯುತ್ ತಂತಿ ಹಾದು ಹೋಗಿತ್ತು ಅನ್ನೊದಕ್ಕಿಂತ ಆ ಕಾರ್ಯಕ್ರಮದ ಆಯೋಜಕರೇ ಹಾಗೆ ಬೇಜಾವಾಬ್ದಾರಿ ತೋರಿಸಿದ್ರು. ಇದು ಖುದ್ದು ಆ ಕ್ಲಾಸ್ ನಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ಆತಂಕಕ್ಕೂ ಕಾರಣವಾಗಿತ್ತು. ನಿಜ ಅಂದ್ರೆ, ಶಿಕ್ಷಣ ಇಲಾಖೆಯ ದೊಡ್ಡ ದೊಡ್ಡ ತಾಲೂಕಾಧಿಕಾರಿಗಳೇ ಅಲ್ಲಿ ಹಾಜರಿದ್ರು. ಆದ್ರೂ ಆ ಅಧಿಕಾರಿಗಳ‌ ಕಣ್ಣಿಗೆ ಇದೇಲ್ಲ ಕಾಣಲೇ ಇಲ್ಲ. ಅವ್ರು ಸಚಿವರ ಆಗಮನಕ್ಕಾಗಿ ಕಾಯುತ್ತ ಹರಟೆ ಹೊಡೆಯುವುದರಲ್ಲೇ ಬ್ಯುಸಿಯಾಗಿದ್ರು. ತುಂಡು ತುಂಡಾದ ವೈಯರ್..! ಅಂದಹಾಗೆ, ಸಚಿವರು ನೂತನವಾಗಿ ನಿರ್ಮಾಣಗೊಳ್ಳುತ್ತಿರೋ ಶಾಲಾ ಕಟ್ಟಡದ ಶಂಕು ಸ್ಥಾಪನೆಗೆ ಬಂದಿದ್ರು. ಹಾಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ...

error: Content is protected !!