ಮುಂಡಗೋಡ ತಾಲೂಕಿನ ಅರಶಿಣಗೇರಿಯ ಗೋವಿನಜೋಳ ಬೆಳೆದ ರೈತರು ಭಾರೀ ಮೋಸಕ್ಕೆ ಬಲಿಯಾಗ್ತಿದಾರಾ..? ತೀವ್ರ ಬರದ ಮದ್ಯೆಯೂ ಸಾಲಸೋಲ ಮಾಡಿ ಗೋವಿನಜೋಳ ಬೆಳೆದ ರೈತನಿಗೆ ಸದ್ಯ ವ್ಯಾಪಾರದ ಹೆಸ್ರಲ್ಲಿ ಮೋಸ ಮಾಡ್ತಿದಾರೆ ಜನ. ಅರಶಿಣಗೇರಿಯಲ್ಲಿ ಇವತ್ತು ಅಂತಹ ಹಲಾಲುಕೋರ ವ್ಯಾಪಾರಿಗಳ ಏಜೆಂಟರುಗಳನ್ನು ರೈತರೇ ಹಿಡಿದು ಜಾಡಿಸಿದ್ದಾರೆ. ಅಂದಹಾಗೆ, ಬರೋಬ್ಬರಿ ಒಂಬತ್ತು ಜನ ದಂಧೆಕೋರರು ರೆಡ್ ಹ್ಯಾಂಡಾಗೇ ರೈತರಿಗೆ ಸಿಕ್ಕು, ಮೋಸ ಬಯಲಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಅಸಲು, ಇವ್ರೇಲ್ಲ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಂತೆ…! ಅಂದಹಾಗೆ, ಭಾರಿ ವ್ಯವಸ್ಥಿತವಾಗಿ ನಡಿಯೋ ಈ ಮಹಾಮೋಸದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕ್ವಿಂಟಾಲುಗಟ್ಟಲೇ ಗೋವಿನಜೋಳವನ್ನು ಮೋಸದಿಂದಲೇ ಕದಿಯುವ ವ್ಯಾಪಾರಿಗಳು ಸದ್ಯ ಅರಶಿಣಗೇರಿ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂದಹಾಗೆ, ಈ ಖತರ್ನಾಕ ದಂಧೆಕೋರರು ಹೇಗೇಲ್ಲ ಮೋಸ ಮಾಡ್ತಾರೆ ಗೊತ್ತಾ..? ಹಮಾಲರಿಂದಲೇ ಕೃತ್ಯ..? ಅಸಲು, ಮುಂಡಗೋಡ ತಾಲೂಕಿನಾದ್ಯಂತ ಸದ್ಯ ಗೋವಿನಜೋಳ ಬೆಳೆದ ರೈತ ತಾನು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಅಷ್ಟೊ ಇಷ್ಟೊ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾನೆ. ಮೊದಲೇ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಗೋಂಜ್ಯಾಳ ಬೆಳೆದ ರೈತನಿಗೆ ಮಹಾಮೋಸ, ಅರಶಿಣಗೇರಿಯಲ್ಲಿ ರೆಡ್ ಹ್ಯಾಂಡಾಗೇ ಹಿಡಿದ್ರು ರೈತರು..!
ಟಿಬೇಟಿಯನ್ ಕ್ಯಾಂಪ್ ನಂ.1 ಕ್ರಾಸ್ ಬಳಿ ಮೊಬೈಲ್ ಶಾಪ್ ಕಳ್ಳತನ, ಬೆಲೆ ಬಾಳುವ ಮೊಬೈಲ್ ಎಗರಿಸಿದ ಕಳ್ಳರು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಕ್ರಾಸ್ ಬಳಿ ಮೊಬೈಲ್ ಅಂಗಡಿ ಕಳ್ಳತನವಾಗಿದೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಮೊಬೈಲ್ ಅಂಗಡಿ ಮೇಲಿನ ಸೀಟ್ ಕೊರೆದು ಕಳ್ಳರು ಒಳ ನುಗ್ಗಿದ್ದು ಬೆಲೆಬಾಳುವ ಮೊಬೈಲ್ ಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಸುರೇಶ್ ಶೇಟ್ ಎಂಬುವವರಿಗೆ ಸೇರಿದ ಮೊಬೈಲ್ ಶಾಪ್ ನಲ್ಲಿ ಹತ್ತಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಗಳನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ. ಏನಿಲ್ಲವೆಂದರೂ ಈ ಮೊಬೈಲ್ ಗಳ ಮೌಲ್ಯ ಒಂದು ಲಕ್ಷ ರೂ. ಗೂ ಹೆಚ್ಚು ಅಂತಾ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಾತೂರು ಉಮ್ಮಚಗಿ ರಸ್ತೆಯ ಅಟ್ಟಣಗಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ತಾಯಿ ಮಗನಿಗೆ ಗಂಭೀರ ಗಾಯವಾಗಿದೆ. ಹಿಂದಿನಿಂದ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಅಟ್ಟಣಗಿ ಗ್ರಾಮದ ಶಿವಪುತ್ರ ರಾಮಣ್ಣ ಹೋತ್ನಳ್ಳಿ (45) ಹಾಗೂ ಆತನ ತಾಯಿ ದೇವಕ್ಕ ರಾಮಣ್ಣ ಹೋತ್ನಳ್ಳಿ(70) ಗಾಯಗೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಚಾಲಕ ಕೆಂಚೇಶ್ ತಕ್ಷಣ ಧಾವಿಸಿ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು ತಾಲ್ಲೂಕು ಆಸ್ಪತ್ರೆ ಮುಂಡಗೋಡಿಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ಪುರಸಭೆಯಲ್ಲಿ ಗೋಲಮಾಲ್ ಆರೋಪ, ಸಚಿವ ಶಿವಾನಂದ ಪಾಟೀಲ್ ದಿಢೀರ್ ಭೇಟಿ, ಮುಖ್ಯಾಧಿಕಾರಿಗೆ ತರಾಟೆ..!
ಶಿಗ್ಗಾವಿ ಪುರಸಭೆಗೆ ಇಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ದೀಡೀರ್ ಭೇಟಿ ನೀಡಿದ್ರು. ಶಿಗ್ಗಾವಿ ಪುರಸಭೆಯಲ್ಲಿನ ಅವಾಂತರಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಅಲ್ದೆ ಮುಖ್ಯಾಧಿಕಾರಿ ಸೇರಿದಂತೆ ಇನ್ನುಳಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಸಮಸ್ಯೆಗಳ ಸರಮಾಲೆ..! ಇನ್ನು ಸಚಿವ್ರು ಪುರಸಭೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ, ಸಾರ್ವಜನಿಕರಿಂದ ಪುರಾಭೆಯ ದುರಾಡಳಿತದ ಬಗ್ಗೆ ಸಮಸ್ಯೆಗಳ ಸುರಿಮಳೆಯೇ ಸುರಿಸಲಾಯಿತು. ಇನ್ನು ಸ್ಟ್ರೀಟ್ ಲೈಟ್ ಅಳವಡಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಪುರಸಭೆಯ ಮುಖ್ಯಾಧಿಕಾರಿ ಸಂಗನಬಸಯ್ಯರನ್ನು ತೀವ್ರ ತರಾಟೆಗೆ ಪಡೆದ ಸಚಿವ್ರು ಗರಂ ಆದ್ರು. ಒಟ್ನಲ್ಲಿ, ಮಾಜಿ ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಶಿಗ್ಗಾವಿ ಪುರಸಭೆಯಲ್ಲಿ ಭಾರೀ ಬ್ರಷ್ಟಾಚಾರ, ದುರಾಡಳಿತದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ದಿಢೀರ್ ಭೇಟಿ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಮುಂಡಗೋಡ PWD ಇಂಜಿನೀಯರ್ ಆಗಿದ್ದ ಎಂ.ರಾಮರಾವ್ ಹೃದಯಾಘಾತದಿಂದ ವಿಧಿವಶ..!
ಮುಂಡಗೋಡಿನ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸಿದ್ದ, ಸದ್ಯ ಕಲಘಟಗಿ PWD ಉಪವಿಭಾಗದ ಸಹಾಯಕ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸ್ತಿದ್ದ ಎಂ.ರಾಮರಾವ್ ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದು, ಹುಬ್ಬಳ್ಳಿಯ ಸನ್ಪೋಲ್ ಚರ್ಚ್ ಹತ್ತಿರ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಂ.ರಾಮರಾವ್ ರವರ ಅಂತಿಮ ಸಂಸ್ಕಾರ ನಾಳೆ ದಿನಾಂಕ 28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಸನ್ ಪೀಟರ್ ಚರ್ಚನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಅಂತಾ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಸಮಯಕ್ಕೆ ಬಾರದ ಬಸ್ ಹುನಗುಂದದಲ್ಲಿ ವಿದ್ಯಾರ್ಥಿಗಳಿಂದ ಬಸ್ ತಡೆದು ದಿಢೀರ್ ಪ್ರತಿಭಟನೆ..!
ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ನಿತ್ಯವೂ ಶಾಲಾ, ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನೆಲೆ ಸುಮಾರು 3 ತಾಸಿಗೂ ಹೆಚ್ಚು ಕಾಲ ಬಸ್ ತಡೆದು ಪ್ರತಿಭಟಿಸಿದ್ದಾರೆ. ಸೋಮವಾರ ಮುಂಜಾನೆ 7 ಗಂಟೆಯಿಂದ ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಯಾವೊಂದು ಬಸ್ಸೂ ಕೂಡ ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ. ಹೀಗಾಗಿ, ನಿತ್ಯವೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗುತ್ತದೆ. ಕೆಲವು ಸಾರಿ ಸಮಯ ಮೀರಿ ಕಾಲೆಜುಗಳಿಗೆ ವಿದ್ಯಾರ್ಥಿಗಳು ಹೋಗದೇ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಓಟದ ಸ್ಪರ್ಧೆಯಲ್ಲಿ ಬಹುಮಾನ ಸಿಗದ ಹಿನ್ನೆಲೆ, ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ..!
ಪುತ್ತೂರು : ಓಟದ ಸ್ಪರ್ಧೆಯಲ್ಲಿ ಬಹುಮಾನ ಸಿಗದ ಹಿನ್ನೆಲೆಯಲ್ಲಿ ಮನನೊಂದು, ತೋಟಕ್ಕೆ ಬಳಸುವ ವಿಷಕಾರಿ ಕೀಟನಾಶಕ ಸೇವಿಸಿದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮೃತ ಯುವತಿ ನಿಶಾ(17) ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡರ ಪುತ್ರಿ ಎಂದು ಗುರುತಿಸಲಾಗಿದೆ. ನಿಶಾ ಬಿ ಎಮ್ ರವರು ಪುತ್ತೂರು ನಗರ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹದಿನೈದು ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ (ಓಟ ಸ್ಪರ್ಧೆ) ಭಾಗವಹಿಸಿ ಅಲ್ಲಿ ಯಾವುದೇ ಬಹುಮಾನ ದೊರೆಯದೇ ಹಿಂತಿರುಗಿ ಮನೆಗೆ ಬಂದು ಬೇಸರದಲ್ಲಿದ್ದಳು. ಆದ್ರೆ, ನ.14 ರಂದು ವಿಪರೀತವಾಗಿ ವಾಂತಿ ಮಾಡುತ್ತಿದ್ದು, ಇದರಿಂದ ಅಸ್ವಸ್ಥಳಾದವಳನ್ನು ಈ ಬಗ್ಗೆ ವಿಚಾರಿಸಿದಾಗ ನ.13 ರಂದು ಸಂಜೆ ತೋಟಕ್ಕೆ ಬೀಡುವ ಕೀಟನಾಶಕವನ್ನು ಸೇವಿಸಿರುವುದಾಗಿ ತಿಳಿಸಿದ್ದಳು. ನಂತರ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ...
ಬಂಧಿಸಲು ಹೋದ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ, ರೌಡಿ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ ಹುಬ್ಬಳ್ಳಿ ಪೊಲೀಸರು..!
ಹುಬ್ಬಳ್ಳಿ: ಕೊಲೆ ಯತ್ನ, ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡ ರೌಡಿಯೊಬ್ಬ ಹಿಡಿಯಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಪ್ರತಿಯಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕೊಲೆಗೆ ಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸತೀಶ ಗೋನಾ ಎಂಬಾತನ ಕಾಲಿಗೆ ಗುಂಡೇಟು ಬಿದ್ದಿದೆ. ಹೆಂಡತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ ಗೋನಾ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಶನಿವಾರ ಗದಗ ರಸ್ತೆಯಲ್ಲಿ ಈತ ಇದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಹಿಡಿಯಲು ಹೋದಾಗ, ಅವರ ಮೇಲೆ ಕಲ್ಲು ತೂರಿದ್ದಲ್ಲದೆ, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಶಹರ ಠಾಣೆ ಇನ್ಸ್ಪೆಕ್ಟರ್ ರಫಿಕ್ ತಹಶೀಲ್ದಾರ್ ಹಲ್ಲೆಗೆ ಮುಂದಾದ ರೌಡಿಯನ್ನು ತಡೆಯಲು ಆತನ ಕಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರೋ ರೌಡಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೌಡಿಶೀಟರ್ ನ ದಾಳಿಯಿಂದಾಗಿ ಶಹರ ಠಾಣೆ ಪಿಎಸ್ ಐ ವಿನೋದ...
ಬಗಡಗೇರಿ ಗ್ರಾ. ಪಂಚಾಯತಿ ಸದಸ್ಯನ ಕೊಲೆ- ಇಬ್ಬರ ಬಂಧನ, ಆಸ್ತಿ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ..!
ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಪ್ರಕರಣವನ್ನು ಕಲಘಟಗಿ ಪೊಲೀಸರು ಬೇಧಿಸಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗ್ರಾಮದ ಮಲ್ಲಪ್ಪ ದಂಡಿನ ಹಾಗೂ ನಾಗಪ್ಪ ದಂಡಿನ ಎಂದು ಗುರುತಿಸಲಾಗಿದೆ. ಆರೋಪಿಗಳು ಗುರುವಾರ ಸಂಜೆ ಕೊಲೆಯಾದ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಎಂಬವರ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದರು. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ನಿಂಗಪ್ಪನ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಓಪನ್ ನ್ಯಾಷನಲ್ ಮಾಸ್ಟರ್ ಗೇಮ್ ನಲ್ಲಿ ಸಾಧನೆ, ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಗೆ ಇಬ್ಬರು ಆಯ್ಕೆ..!
ಹುಬ್ಬಳ್ಳಿ: ಮಾಸ್ಟರ್ ಗೇಮ್ ಆಫ್ ಕರ್ನಾಟಕ ವತಿಯಿಂದ ಧಾರವಾಡದಲ್ಲಿ ಇತ್ತೀಚಿಗೆ ನಡೆದ ಓಪನ್ ಮಾಸ್ಟರ್ ಗೇಮ್ ನಲ್ಲಿ ನಿಂಗಪ್ಪ ಪುಟ್ಟಣ್ಣವರು, ಮಾರುತಿ ಬಸವರಾಜ್ ಅವರು ಉತ್ತಮ ಸಾಧನೆ ಮಾಡಿ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಗೆ ಆಯ್ಕೆಯಾಗಿದ್ದಾರೆ. ರೈಲ್ವೆ ಹೆಡ್ ಕಾನ್ಸ್ಟೇಬಲ್(RPF) ನಿಂಗಪ್ಪ ಪುಟ್ಟಣ್ಣವರು 60 ಮೀಟರ್,100 ಮೀಟರ್, 200 ಮೀಟರ್, 300 ಮಿಟರ್, 400 ಮಿಟರ್, ಲಾಂಗ್ ಜಂಪ್ ಮತ್ತು ಪುರುಷರ ರಿಲೇ 400 ಮಿಟರ್ ಮತ್ತು ಮಿಕ್ಸ್ ರಿಲೇ 400 ಮಿಟರ್ ಸ್ಪರ್ಧೆಯಲ್ಲಿ ಒಟ್ಟು ಏಳು ಚಿನ್ನದ ಪದಕ ಗಳಿಸಿದ್ದಾರೆ. ಹಾಗೂ ಇವರು ಕಬ್ಬಡಿಯ ಯುನಿವರ್ಸಿಟಿ ಬ್ಲೂ ನ್ಯಾಷನಲ್ ಕಬಡ್ಡಿ ಆಟಗಾರ ಆಗಿರುತ್ತಾರೆ. ಈ ಸಾಧನೆಗೈದ ಕ್ರೀಡಾಪಟುಗಳಿಗೆವಹಲವು ಗಣ್ಯರು ಶುಭ ಹಾರೈಸಿದ್ದಾರೆ.