ಮುಂಡಗೋಡ: ತಾಲೂಕಿನ ಯರೇಬೈಲು ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ಮುಂಡಗೋಡ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಯರೆಬೈಲು ಗ್ರಾಮದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಗ್ರಾಮದಲ್ಲಿ ಇನ್ನು ಮುಂದೆ ಸರಾಯಿ ಮಾರಾಟ ಮಾಡದಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಯಾರಾದ್ರೂ ಸರಾಯಿ ಮಾರಾಟ ಮಾಡಿದರೇ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
Category: ಮುಂಡಗೋಡ ಸುದ್ದಿ
ವಡಗಟ್ಟಾ ಅಗಡಿ ರಸ್ತೆ ಬಂದ್; ಹುನಗುಂದ ರೈತರ ಗೋಳು ಕೇಳೋರ್ಯಾರು..?
ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ವಡಗಟ್ಟಾ-ಅಗಡಿ ರಸ್ತೆ ಬಂದ್ ಆಗಿದೆ. ಮುಂಡಗೋಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ. ಆಗಿದ್ದೇನು..? ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತಿ, ಇನ್ನೇನು ಮೊಳಕೆ ಒಡೆದು ಸಸಿಯಾಗುವ ಹಂತದಲ್ಲಿರುವಾಗಲೇ ಭಾರೀ ಮಳೆಯ ಕಾರಣಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ. ಅರಶಿಣಗೇರಿ ಕೆರೆ ಕಾಲುವೆ ಫುಲ್.! ಈ ಮದ್ಯೆ, ಅರಶಿಣಗೇರಿ ಕೆರೆಯಿಂದ ರೈತರ ಜಮೀನುಗಳಿಗೆ ಸಂಪರ್ಕಿಸೋ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ...
ಮುಂಡಗೋಡ ತಾಲೂಕಿನಲ್ಲಿ ಮಳೆಯಿಂದ 12 ಮನೆಗಳಿಗೆ ಹಾನಿ..!
ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆ, ಗಾಳಿ ಅವಾಂತರ ತಂದಿಟ್ಟಿದೆ. ತಾಲೂಕಿನಲ್ಲಿ ಮಳೆ ಗಾಳಿಗೆ ಒಟ್ಟೂ 12 ಮನೆಗಳಿಗೆ ಹಾನಿಯಾಗಿದ್ದು ಸಂಕಷ್ಟ ತಂದೊಡ್ಡಿದೆ. ಮಳೆಯಿಂದ ಹಾನಿ ಎಲ್ಲೇಲ್ಲಿ..? ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 12 ಮನೆಗಳಿಗೆ ಮಳೆ, ಗಾಳಿಯಿಂದ ಹಾನಿಗೊಳಗಾಗಿದ್ದು, ಹುನಗುಂದ, ಹರಗನಳ್ಳಿ, ಭದ್ರಾಪುರ, ಶ್ಯಾನವಳ್ಳಿ, ಇಂದೂರು, ಗಣೇಶಪುರ, ಚಿಗಳ್ಳಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಇನ್ನು ಮುಂಡಗೋಡ ಪಟ್ಟಣ ಹಾಗೂ ಸನವಳ್ಳಿ ಗ್ರಾಮದಲ್ಲಿ ತಲಾ ಎರಡು ಮನೆಗಳು ಜಖಂಗೊಂಡಿವೆ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ...
ತಾಲೂಕಿನಲ್ಲಿಂದು ಕೊರೋನಾ ಖೇಲ್ ಖತಂ..! ಶೂನ್ಯವಾಯ್ತು ಸೋಂಕಿತರ ಸಂಖ್ಯೆ..!
ಮುಂಡಗೋಡ:ತಾಲೂಕಿನ ಮಟ್ಟಿಗೆ ಇದು ಸಂತಸದ ಸುದ್ದಿ. ತಾಲೂಕಿನಲ್ಲಿ ಇಂದು ಹೊಸತಾಗಿ ಯಾವುದೇ ಕೊರೋನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿಲ್ಲ. ಸದ್ಯ ತಾಲೂಕಿನಲ್ಲಿ ಒಟ್ಟೂ 105 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 41 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 21 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ದುರಂತದ ಸಂಗತಿಯೆಂದ್ರೆ, ಇಂದು ತಾಲೂಕಿನಲ್ಲಿ ಒಟ್ಟು 2 ಜನ ಸೋಂಕಿತರು ಮೃತ ಪಟ್ಟಿದ್ದಾರೆ. ಟಿಬೇಟಿಯನ್...
ರಸ್ತೆಯ ಮದ್ಯೆ ಕಾಮಗಾರಿಯ ಗುಂಡಿ: ಆ ಗ್ರಾಮಗಳಿಗೆ ತೆರಳಬೇಕೆಂದ್ರೆ ಕಷ್ಟ ಕಷ್ಟ..!! ಎಲ್ಲದು..?
ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯಲ್ಲಿ ಅದ್ವಾನ ಶುರುವಾಗಿದೆ. ಚೌಡಳ್ಳಿ, ಕ್ಯಾಸನಕೇರಿ, ಮಲವಳ್ಳಿ, ಲಕ್ಕೊಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಅಧಿಕಾರಿಗಳ ನಿರ್ಲಕ್ಷದಿಂದ ಮಳೆಗಾಲದಲ್ಲಿ ಎದ್ದು ಬಿದ್ದು ಹೋಗುವ ಸ್ಥಿತಿಗೆ ತಂದಿಟ್ಟಿದೆ. ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿದೆ. ಪೈಪ್ ಲೈನ್ ಕಾಮಗಾರಿ ಎಫೆಕ್ಟ್..! ಆದ್ರೆ ಹಾಗೆ ಗುಂಡಿ ತೋಡಿ, ಪೈಪುಗಳನ್ನು...
ಮುಂಡಗೋಡ ತಾಲೂಕಿನಲ್ಲಿ ಮಳೆರಾಯನ ಅರ್ಭಟ: ಮನೆ ಮೇಲ್ಚಾವಣಿ ಕುಸಿದು ಟ್ರಾಕ್ಟರ್ ಜಖಂ..!
ಮುಂಡಗೋಡ: ತಾಲೂಕಿನಾಧ್ಯಂತ ಮಳೆರಾಯನ ಅರ್ಭಟ ಜೋರಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಇನ್ನು, ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಸನವಳ್ಳಿ ಗ್ರಾಮದಲ್ಲಿ ಅವಘಡ ಸಂಭವಿಸಿದೆ. ಮನೆಯ ಮುಂದೆ ಶೆಡ್ ನಲ್ಲಿ ನಿಂತಿದ್ದ ಟ್ರಾಕ್ಟರ್ ಮೇಲೆ ಮನೆಯ ಮೇಲ್ಚಾವಣಿ ಕಿಸಿದು ಬಿದ್ದಿದೆ. ಪರಿಣಾಮ ಟ್ರಾಕ್ಟರ್ ಮೇಲ್ಭಾಗ ಸಂಪೂರ್ಣ ಜಖಂ ಗೊಂಡಿದೆ. ಸನವಳ್ಳಿಯ ಶಿವಾನಂದ್ ನಾಗಪ್ಪ ಕೇರಿಹೊಲದವರ ಎಂಬುವರಿಗೆ ಸೇರಿದ ಟ್ರಾಕ್ಟರ್ ಇದಾಗಿದ್ದು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಬಂದು ಸ್ಥಳ ಪರಿಶೀಲನೆ ಕೈಗೊಂಡಿದ್ದಾರೆ. ಸೂಕ್ತ...
ಮುಂಡಗೋಡಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ “ಶ್ರಮಿಕರಿಗೆ ನೆರವು”
ಮುಂಡಗೋಡ: ರಾಜ್ಯ ಬಿಜೆಪಿ ಸರಕಾರ 11 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸಹಾಯ ಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ನೆರವಾಗುವ ನಿಟ್ಟಿನಲ್ಲಿ ತಾಲೂಕಾ ಬಿಜೆಪಿ ಯುವ ಮೋರ್ಚಾ “ಶ್ರಮಿಕರಿಗೆ ನೆರವು ” ಕಾರ್ಯಕ್ರಮ ಆಯೋಜಿಸಿದೆ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಕಾರ್ಯಕ್ರಮ ಉದ್ಘಾಟಿಸಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಘೋಷಿಸಿರೋ ಸಹಾಯಧನ ಪಡೆದುಕೊಳ್ಳುವಂತೆ ಕರೆ ನೀಡಿದ್ರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಯುವಮೋರ್ಚಾ ತಾಲೂಕಾ...
ಇಂದೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ..!
ಮುಂಡಗೋಡ: ತಾಲೂಕಿನ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ 7 ಜನ ಆಶಾ ಕಾರ್ಯಕರ್ತೆಯರು ಕೊರೋನಾ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಆಶಾ ಕಾರ್ಯಕರ್ತರ ಸೇವೆ ಪರಿಗಣಿಸಿ ತಾಲೂಕಿನೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸನ್ಮಾನ ಸಮಾರಂಭದಲ್ಲಿ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.