Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!

ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಡಗೋಡ ಪಟ್ಟಣಕ್ಕೆ ಭೇಟಿ ನೀಡಿದ್ರು. ಶಿರಸಿಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮುಂಡಗೋಡ ಪಟ್ಟಣದಲ್ಲೂ ಕೆಲಹೊತ್ತು ನಿಂತು ಕಾರ್ಯಕರ್ತರನ್ನು ಭೇಟಿ ಮಾಡಿದ್ರು. ಡಿಕೆಶಿ ಬರ್ತಿದ್ದಾರೆ ಅಂತಾ ಮಾಹಿತಿ ತಿಳಿದು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಜಮಾವಣೆ ಆಗಿದ್ರು. ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಘೋಷಣೆ ಕೂಗಿ ಹೂವಿನ ಮಳೆ ಸುರಿಸಿದ್ರು. ಹಾರ...

Post
ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?

ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?

ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಉಸಿರಾಡ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಬಹುತೇಕ ಕ್ಷೇತ್ರದ ಜನರಲ್ಲಿದೆ. ಯಾಕಂದ್ರೆ, ಯಾವಾಗ, ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಿಡಿದ್ರೊ, ಆ ಕ್ಷಣದಿಂದಲೇ ಇಡೀ ಮುಂಡಗೋಡ ತಾಲೂಕಿನ “ಕೈ” ಪಡೆಯ ಜಂಘಾಬಲವೇ ಕುಗ್ಗಿಹೋಯ್ತು, ಇನ್ನೇನು ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಯ್ತು ಅನ್ನೋ ವಾತಾವರಣ ಇತ್ತು. ಇದು ಇತಿಹಾಸ..! ಹಾಗೆ ನೋಡಿದ್ರೆ, ಇದುವರೆಗೂ ತಾಲೂಕಿನ ಮೂರೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಲವಾಗಿಯೇ ಇತ್ತು. ಬಿಜೆಪಿ ಯಾವುದೇ ಒಂದು...

Post
ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ..! ಗಣ್ಯರ ಸಂತಾಪ..!!

ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ..! ಗಣ್ಯರ ಸಂತಾಪ..!!

ಮುಂಡಗೋಡ ತಾಲೂಕಿನ ಹನುಮಾಪುರ ಕಾಳಿಕಾಮಠದ (ಹೀರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಒಂದು ತಿಂಗಳಿಂದ ಅನಾರೋಗ್ಯ..! ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆ ಉಸಿರೆಳೆದಿದ್ದಾರೆ. ಪ್ರತಿಷ್ಠಿತ ಮಠ..! ಮುಂಡಗೋಡ ತಾಲೂಕಿನ ಪ್ರತಿಷ್ಠಿತ ಕಾಳಿಕಾಮಠದಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಕೈಗೊಂಡಿದ್ರು. ಹೀಗಾಗಿ, ಶ್ರೀ ಮಠ ತಾಲೂಕು ಸೇರಿದಂತೆ...

Post
ತವರಿಗೆ ಹೋದ ಪತ್ನಿ ವಾಪಸ್ ಬರಲೇ ಇಲ್ಲ: ಮನನೊಂದ ಪತಿ ಮಾಡಿಕೊಂಡಿದ್ದು ಮಾತ್ರ ದುರಂತ..!

ತವರಿಗೆ ಹೋದ ಪತ್ನಿ ವಾಪಸ್ ಬರಲೇ ಇಲ್ಲ: ಮನನೊಂದ ಪತಿ ಮಾಡಿಕೊಂಡಿದ್ದು ಮಾತ್ರ ದುರಂತ..!

ಮುಂಡಗೋಡ : ಅವನು ಹೆಂಡತಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ, ನೀನಿಲ್ಲದೇ ನಾನಿಲ್ಲ, ನನಗೆ ನೀನು; ನಿನಗೆ ನಾನು ಅಂತಿದ್ದ, ಆದ್ರೆ ಆತನ ಬಾಳಲ್ಲಿ ಅದು ಹಾಗಾಗಲೇ ಇಲ್ಲ. ಆದ್ರೆ, ತವರಿಗೆ ಹೋದ ತನ್ನ ಹೆಂಡ್ತಿ ವಾಪಸ್ ಬರಲೇ ಇಲ್ಲ ಅಂತಾ ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜ್ ಬರಮಣ್ಣ ಕುರಿಯವರ್ ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈಗಷ್ಟೇ 36 ವರ್ಷಕ್ಕೆ ಕಾಲಿಟ್ಟಿದ್ದ, ಹೀಗಾಗಿ, ವಯಸ್ಸಲ್ಲದ ವಯಸ್ಸಲ್ಲೇ ದುರಂತ ಅಂತ್ಯ ಕಂಡಿದ್ದಾನೆ. ಅಂದಹಾಗೆ, ಈ ಘಟನೆ ನಡೆದಿರೋದು ಮುಂಡಗೋಡ ತಾಲೂಕಿನ...

Post
ಇಂದೂರು ಜಿಪಂ ಕ್ಷೇತ್ರ: ಏನಿದು ಅಚ್ಚರಿ..?  ಆ “ಯುವ ನಾಯಕ” ನಿಗೆ ಪಟ್ಟ ಕಟ್ಟಲು ಮುಹೂರ್ತ ಫಿಕ್ಸಾ..?

ಇಂದೂರು ಜಿಪಂ ಕ್ಷೇತ್ರ: ಏನಿದು ಅಚ್ಚರಿ..? ಆ “ಯುವ ನಾಯಕ” ನಿಗೆ ಪಟ್ಟ ಕಟ್ಟಲು ಮುಹೂರ್ತ ಫಿಕ್ಸಾ..?

ಮುಂಡಗೋಡ: ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ. ಕೇವಲ ಮೀಸಲಾತಿ ಮಾತ್ರ ಪ್ರಕಟವಾಗಿದೆ. ಆದ್ರೆ ಇಷ್ಟರೊಳಗೆ ಮುಂಡಗೋಡ ತಾಲೂಕಿನಾಧ್ಯಂತ ಇನ್ನಿಲ್ಲದ ರಾಜಕೀಯ ಚರ್ಚೆಗಳು ಶುರುವಾಗಿವೆ. ತಾಲೂಕಿನಲ್ಲಿರೋ ಮೂರು ಜಿಪಂ ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಪಡೆಯಲು “ಬಹುಪರಾಕ್” ಸಂಪ್ರದಾಯಗಳು ಚಾಲ್ತಿ ಪಡೆದುಕೊಂಡಿವೆ. ಎಲ್ಲವೂ ಟಿಕೆಟ್ ಗಾಗಿ..!                              ಅದ್ರಲ್ಲೂ, ಬಿಜೆಪಿ ಪಾಳಯದಲ್ಲಂತೂ ಈಗಾಗಲೇ ನಂಗೇ ಟಿಕೆಟ್...

Post
ಮುಂಡಗೋಡಿನ “ಅನಾಸಾಗರ್” ಇಸ್ಮಾಯಿಲ್ ಇನ್ನು ನೆನಪು ಮಾತ್ರ..!

ಮುಂಡಗೋಡಿನ “ಅನಾಸಾಗರ್” ಇಸ್ಮಾಯಿಲ್ ಇನ್ನು ನೆನಪು ಮಾತ್ರ..!

ಮುಂಡಗೋಡ: ಪಟ್ಟಣದಲ್ಲಿ ಪ್ಲೈವುಡ್ ಹಾಗೂ ಹಾರ್ಡವೇರ್ ಟ್ರೇಡರ್ಸ್ ನಡೆಸುತ್ತಿದ್ದ ಇಸ್ಮಾಯಿಲ್ ದೊಡ್ಮನಿ (40) ರವಿವಾರ ರಾತ್ರಿ ನಿಧನರಾಗಿದ್ದಾರೆ. ಅನಾಸಾಗರ್ ಅಂತಲೇ ತಾಲೂಕಿನಲ್ಲಿ ಖ್ಯಾತಿ ಪಡೆದಿದ್ದ ಇಸ್ಮಾಯಿಲ್, ಮುಂಡಗೋಡಿನಲ್ಲಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಾಸಾಗರ್, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತಿಚೆಗಷ್ಟೇ ಇಸ್ಮಾಯಿಲ್ ರವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಇಸ್ಮಾಯಿಲ್ ನಿಧನಕ್ಕೆ ಮುಂಡಗೋಡಿನ ಅಪಾರ ಸ್ನೇಹ ಬಳಗ ಸಂತಾಪ ಸೂಚಿಸಿದೆ.  

Post
ತಾಲೂಕಿನಲ್ಲಿ ನಾಳೆ ಹಾಗೂ ನಾಡಿದ್ದು ನಡೆಯಬೇಕಿದ್ದ ಸಚಿವ ಹೆಬ್ಬಾರ್ ಕಾರ್ಯಕ್ರಮಗಳು ರದ್ದು..!

ತಾಲೂಕಿನಲ್ಲಿ ನಾಳೆ ಹಾಗೂ ನಾಡಿದ್ದು ನಡೆಯಬೇಕಿದ್ದ ಸಚಿವ ಹೆಬ್ಬಾರ್ ಕಾರ್ಯಕ್ರಮಗಳು ರದ್ದು..!

ಮುಂಡಗೋಡ: ತಾಲೂಕಿನಲ್ಲಿ ನಾಳೆ ಸೋಮವಾರ ದಿನಾಂಕ ಜು.5 ರಂದು ಮಧ್ಯಾಹ್ನ ಮುಂಡಗೋಡ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಾಡಿದ್ದು ಮಂಗಳವಾರ ಜು.6 ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಚಿವ ಶಿವರಾಮ ಹೆಬ್ಬಾರ್ ರವರ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾಗಿವೆ. ಅನಿವಾರ್ಯ ಕಾರಣಗಳಿಂದ ಸಚಿವ ಶಿವರಾಮ ಹೆಬ್ಬಾರ್ ಅವರು ತುರ್ತಾಗಿ ಬೆಂಗಳೂರಿನಲ್ಲಿ ಸಭೆಗೆ ಹಾಜರಾಗಬೇಕಾಗಿರುವುದರಿಂದ ನಾಳೆ ಮಧ್ಯಾಹ್ನದ ಹಾಗೂ ಮಂಗಳವಾರದ ಮುಂಡಗೋಡ ತಾಲೂಕಿನ ಎಲ್ಲಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅಂತಾ ಸಚಿವರ ಆಪ್ತ ವಲಯ ಮಾಹಿತಿ ನೀಡಿದೆ‌....

Post
ಇಂದೂರಿನಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ, ಮುರಿದು ಬಿದ್ದ 2 ವಿದ್ಯುತ್ ಕಂಬಗಳು..! ತಪ್ಪಿದ ಭಾರೀ ಅನಾಹುತ..!!

ಇಂದೂರಿನಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ, ಮುರಿದು ಬಿದ್ದ 2 ವಿದ್ಯುತ್ ಕಂಬಗಳು..! ತಪ್ಪಿದ ಭಾರೀ ಅನಾಹುತ..!!

ಮುಂಡಗೋಡ: ತಾಲೂಕಿನ ಇಂದೂರಿನ ಹೊರವಲಯದ ಚರ್ಚ ಬಳಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ, ಚರ್ಚ ಬಳಿ ಇರೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಸಂಚಾರ ಇದ್ದಾಗಲೇ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.. ಇನ್ನು ಸ್ಥಳಕ್ಕೆ ಮುಂಡಗೋಡ 112 ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲಿಸಿದ್ದಾರೆ. ಘಟ‌ನೆಯ ಕಾತರಕ್ಕೆ ಆ ಭಾಗದಲ್ಲಿ ವಿದ್ಯುತ್...

Post
ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 1 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಒಟ್ಟೂ 23 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಗುಣಮುಖರಾಗಿಲ್ಲ . ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲೂ ಯಾವುದೇ ಸೋಂಕಿತರು ದಾಖಲಾಗಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

Post
ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ‌ ನೇಣಿಗೆ ಶರಣು..!

ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ‌ ನೇಣಿಗೆ ಶರಣು..!

ಮುಂಡಗೋಡ;ತಾಲೂಕಿನ ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ನೇಣಿಗೆ ಶರಣಾಗಿದ್ದಾನೆ. 38 ವರ್ಷದ ಗಿರೀಶ್ ಕೃಷ್ಣಮೂರ್ತಿ ಅರ್ಕಸಾಲಿ ಎಂಬುವ ಯುವಕನೇ ನೇಣಿಗೆ ಶರಣಾದವನಾಗಿದ್ದು, ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದ್ರೂ ಗುಣಮುಖ ಆಗಿರಲಿಲ್ಲ. ಹೀಗಾಗಿ ಅದನ್ನೇ ಮನಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ ಅಂತಾ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!