Home ದೈವ ದರ್ಶನ..

Category: ದೈವ ದರ್ಶನ..

Post

ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣ ದೇವಾಲಯ ಈಗ ನವನವೀನ..!

ವಿಶೇಷ ವರದಿ.. ಮುಂಡಗೋಡ ತಾಲೂಕು ಅಂದ್ರೆ ಪುಟ್ಟದೊಂದು ಪ್ರಪಂಚ ಇದ್ದಂಗೆ.. ಒಮ್ಮೆ ನೀವು ಮುಂಡಗೋಡ ತಾಲೂಕನ್ನು ಸುತ್ತಿ ಬಂದ್ರೆ ಸಾಕು ಇಡೀ ವಿಶ್ವವನ್ನೇ ಸುತ್ತಿ ಬಂದಷ್ಟು ಜ್ಙಾನ ಸಿಗೋದು ಗ್ಯಾರಂಟಿ.. ಇಲ್ಲಿನ ವೈವಿದ್ಯತೆ ಅನ್ನೋದೇ ಹಾಗಿದೆ.. ಯಾಕಂದ್ರೆ ಇಲ್ಲಿ ಜಗತ್ತಿನಾದ್ಯಂತ ಇರೋ ಬಹುತೇಕ ಜನಾಂಗಗಳು ನೆಲೆ ನಿಂತಿವೆ.. ಟಿಬೇಟಿಗರು, ಸಿದ್ದಿಗಳು, ಲಂಬಾಣಿಗರು, ಗೌಳಿಗರು ಹೀಗೆ ವಿವಿಧ ಜನಾಂಗಗಳು ಇಲ್ಲಿ ನೆಲೆ ನಿಂತಿವೆ.. ಹೀಗಾಗಿ ವಿಶ್ವದ ಬಹುತೇಕ ಜನಾಂಗಗಳನ್ನು ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು… ಇದು ನಮ್ಮೇಲ್ಲರ ಹೆಮ್ಮೆ.. ಇನ್ನು...

Post
ಉತ್ತರ ಕನ್ನಡದಲ್ಲೂ ರಾಮಪೂಜೆ

ಉತ್ತರ ಕನ್ನಡದಲ್ಲೂ ರಾಮಪೂಜೆ

  ಅಯೋಧ್ಯೆಯಲ್ಲಿ ಇಂದು ಶ್ರೀರಾಮ ಮಂದಿರಕ್ಕೆ ಪ್ರಧಾನಿ ಮೋದಿಯವರು ಭೂಮಿಪೂಜೆ ನೆರವೇರಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೂಡ ವಿಶೇಷ ಪೂಜೆಗಳು ನೆರವೇರಿದವು. ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಿರ್ಮಾಣ ವಾಗಲಿ ಎಂದು ಕಾರವಾರದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಕಾರವಾರದ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಕಚೇರಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಕರಸೇವಕರನ್ನು ಸನ್ಮಾನಿಸಿದರು.

Post

ಮಂಗಳೂರಲ್ಲಿ ಅಯೋಧ್ಯಾ ಸಂಭ್ರಮ

  ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದ್ದಂತೆ ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಂಭ್ರಮದ ಕಳೆ ಎದ್ದಿದೆ. ಕಳೆದ ಅನೇಕ ವರ್ಷಗಳಿಂದ ಎದುರುನೋಡುತ್ತಿದ್ದ ಸಂಭ್ರಮದ ಕ್ಷಣ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. 1992ರ ಅಯೋಧ್ಯೆ ಕರಸೇವೆಯಲ್ಲಿ ಕರಾವಳಿಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಅನೇಕ ಮಂದಿ ಇಂದು ಸಂಭ್ರಮ ಪಟ್ಟಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ರಾಮಚಂದ್ರನಿಗೆ ಪೂಜೆ ಅರ್ಪಿಸಿ ನಮಿಸಿದ ಕಾರ್ಯಕರ್ತರು, ಅಯೋಧ್ಯೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರ ಪ್ರಸಾರ...

Post
ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ

ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ

  ಅಯೋಧ್ಯೆಯಲ್ಲಿ ಸರ್ವಭೂತಹಿತ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಭೂಮಿ ಪೂಜೆ ಅನ್ನು ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಇಂದು ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಪುಣ್ಯ ಕ್ಷಣಕ್ಕೆ ವಿವಿಧ ಮಠದ ಮಠಾಧೀಶರು, ಸಾಧು ಸಂತರು, ಶ್ರೀರಾಮ ಭಕ್ತರು ಸಾಕ್ಷಿಯಾಗುತ್ತಿದ್ದಾರೆ,ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ರಾಮ ಭಕ್ತರ ಪರಿಶ್ರಮ,ಬಲಿದಾನವನ್ನು ಸ್ಮರಿಸುತ್ತಾ,ಈ ಶುಭ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ,ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸೋಣ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ..

error: Content is protected !!