ವಿಶೇಷ ವರದಿ..

ಮುಂಡಗೋಡ ತಾಲೂಕು ಅಂದ್ರೆ ಪುಟ್ಟದೊಂದು ಪ್ರಪಂಚ ಇದ್ದಂಗೆ.. ಒಮ್ಮೆ ನೀವು ಮುಂಡಗೋಡ ತಾಲೂಕನ್ನು ಸುತ್ತಿ ಬಂದ್ರೆ ಸಾಕು ಇಡೀ ವಿಶ್ವವನ್ನೇ ಸುತ್ತಿ ಬಂದಷ್ಟು ಜ್ಙಾನ ಸಿಗೋದು ಗ್ಯಾರಂಟಿ.. ಇಲ್ಲಿನ ವೈವಿದ್ಯತೆ ಅನ್ನೋದೇ ಹಾಗಿದೆ.. ಯಾಕಂದ್ರೆ ಇಲ್ಲಿ ಜಗತ್ತಿನಾದ್ಯಂತ ಇರೋ ಬಹುತೇಕ ಜನಾಂಗಗಳು ನೆಲೆ ನಿಂತಿವೆ..

ಟಿಬೇಟಿಗರು, ಸಿದ್ದಿಗಳು, ಲಂಬಾಣಿಗರು, ಗೌಳಿಗರು ಹೀಗೆ ವಿವಿಧ ಜನಾಂಗಗಳು ಇಲ್ಲಿ ನೆಲೆ ನಿಂತಿವೆ.. ಹೀಗಾಗಿ ವಿಶ್ವದ ಬಹುತೇಕ ಜನಾಂಗಗಳನ್ನು ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು… ಇದು ನಮ್ಮೇಲ್ಲರ ಹೆಮ್ಮೆ..

ಇನ್ನು ಇಲ್ಲಿನ ಜನಾಂಗಗಳ ವಿವಿಧ ಪ್ರಕಾರದ ಪಾರಂಪರಿಕ ಸೊಗಡು ಒಂದೆಡೆಯಾದ್ರೆ, ಮತ್ತೊಂದೆಡೆ ಐತಿಹಾಸಿಕ ತಾಣಗಳ ಸೊಬಗೂ ಕಣ್ಮನ ಸೆಳೆಯುತ್ತವೆ.. ಅದ್ರಲ್ಲೂ ತಾಲೂಕಿನ ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯ ಕಣ್ಮನ ಸೆಳೆಯುತ್ತಿದೆ.. ಇನ್ನು ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯಕ್ಕೆ ರಾಜ್ಯಾದೆಲ್ಲೆಡೆಯಿಂದ ನಿತ್ಯವೂ ನೂರಾರು ಭಕ್ತರು ಬಂದು ದರ್ಶನ ಪಡಿತಾರೆ.. ಇನ್ನು ಈ ದೇವಾಲಯದ ಗೋಡೆಯ ಮೇಲೆ ವಿಶೇಷ ಮೀನಿನ ಉಬ್ಬು ಶಿಲ್ಪವಿದ್ದು ದೇವಸ್ಥಾನಕ್ಕೆ ಮೂರು ರಹಸ್ಯ ಗುಹೆಗಳ ಮಾರ್ಗಗಳನ್ನು ಸೂಚಿಸುತ್ತದೆ ಅಂತಾ ಇಲ್ಲಿನ ಅರ್ಚಕರು ಮಾಹಿತಿ ನೀಡ್ತಾರೆ..

ಅಂದಹಾಗೆ ಬಹುತೇಕ ಶೀಥಿಲಾವಸ್ಥೆಯಲ್ಲಿದ್ದ ದೇವಾಲಯಕ್ಕೆ ಈಗ ವಿನೂತನ ಟಚ್ ನೀಡಲಾಗ್ತಿದೆ.. ಧರ್ಮಸ್ಥಳದ ಧರ್ಮಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ಗ್ರಾಮಸ್ಥರು ಹಾಗೂ ಭಕ್ತರು ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡುತ್ತಿದ್ದಾರೆ.. ಸದ್ಯ ದೇವಸ್ಥಾನದ ನಿರ್ಮಾಣ ಕಾರ್ಯ ಹಣಕಾಸಿನ ಅಡಚಣೆಯಿಂದ ಸ್ತಗಿತಗೊಂಡಿದ್ದು ದಾನಿಗಳು ದೇವಾಲಯದ ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಬೇಕು ಅಂತಾ ಮನವಿ ಮಾಡಿದ್ದಾರೆ ಗ್ರಾಮಸ್ಥರು..

 

error: Content is protected !!