ವಿಶೇಷ ವರದಿ
ಕಾಳ ಸರ್ಪ ದೋಷ, ನಾಗದೋಷಗಳ ಪರಿಹಾರಕ್ಕಾಗಿ ಸಾಕಷ್ಟು ಜನ ಕುಕ್ಕೆ ಸುಬ್ರಮ್ಮಣ್ಯ ಕ್ಷೇತ್ರಕ್ಕೆ ಹೋಗ್ತಾರೆ.. ಆದ್ರೆ ಕುಕ್ಕೆ ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಂತೆಯೇ ಮತ್ತೊಂದು ಸನ್ನಿಧಾನ ನಮ್ಮ ಸಮೀಪದಲ್ಲೇ ಇದೆ..
ಹೌದು, ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಲದ ಆವರಣದಲ್ಲಿ ಶ್ರೀ ಸುಬ್ರಮ್ಮಣ್ಯ ಸ್ವಾಮಿ ನೆಲೆ ನಿಂತಿದ್ದಾರೆ.. ಭವ್ಯವಾದ ಆಲದ ಮರದ ಕೆಳಗೆ ವಿರಾಜಮಾನವಾಗಿರೋ ಸುಭ್ರಮ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರತ್ತೆ..
ಇನ್ನು ಸರ್ಪದೋಷ, ಕಾಳಸರ್ಪದೋಷ ಮುಂತಾದ ದೋಷಗಳಿಂದ ಮುಕ್ತಿ ಪಡೆಯಲು ಇಲ್ಲಿ ಪ್ರತೀ ಗುರುವಾರ ಹಾಗೂ ಅಮವಾಸ್ಯೆ ದಿನಗಳಲ್ಲಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ..
ಸುಬ್ರಮ್ಮಣ್ಯ ಶ್ರೀ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದೇ ಇರೋ ಬಹುತೇಕರು ಅರಟಾಳದ ದಿವ್ಯ ಸನ್ನಿಧಾನದಲ್ಲೇ ತಮ್ಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಳ್ತಾರೆ. ಅಲ್ದೇ ಇಲ್ಲಿಯೇ ತಮ್ಮ ದೋಷ ನಿವಾರಣೆಯ ವೃತಗಳನ್ನು ಮಾಡ್ತಾರೆ..
ಅರಟಾಳಕ್ಕೆ ಹೋಗೋದು ಹೇಗೆ..?
ನೀವು ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ, ಹಾನಗಲ್ ಗೆ ಹೊರಟಿರುವಿರಿ ಎಂದಾದರೆ, ಕುನ್ನೂರು, ದುಂಢಸಿ ನಂತರದಲ್ಲಿ ಸ್ವಲ್ಪ ಮುಂದೆ ಸಾಗಿದರೆ ರಸ್ತೆಯ ಎಡಗಡೆಗೆ ತಿರುಗಿದ್ರೆ ಸಾಕು, ಅರಟಾಳ ಗ್ರಾಮಕ್ಕೆ ಸಾಗುವ ರಸ್ತೆ ಸಿಗತ್ತೆ.. ಅಲ್ಲಿಂದ ಕೇವಲ ಒಂದು ಕಿ.ಮೀ ಕ್ರಮಿಸಿದ್ರೆ ಸಿಗೋದೆ ಅರಟಾಳ ಗ್ರಾಮ. ಗ್ರಾಮಕ್ಕೆ ಎಂಟ್ರಿ ಆಗುತ್ತಲೇ ನಮಗೆ ದರ್ಶನವಾಗೋದು ಶ್ರೀ ವೀರಭದ್ರೇಶ್ವರ ದೇವಸ್ಥಾನ, ಅದೇ ದೇವಸ್ಥಾನದ ಆವರಣದಲ್ಲೇ ಇರೋ ಆಲದ ಮರದ ಕೆಳಗೆ ಸ್ವಾಮಿಯ ಸನ್ನಿದಾನ..
ನೀವೂ ಒಮ್ಮೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದುಕೊಳ್ಳಿ..