Home ನಮ್ಮ ಸಾಧಕ

Category: ನಮ್ಮ ಸಾಧಕ

Post

ಮುಂಡಗೋಡ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ..! ಮರೆಯಲಾರದ ಅದ್ಭುತ ಕ್ಷಣ..!!

ಮುಂಡಗೋಡ- ನಿಜಕ್ಕೂ ಅದೊಂದು ಅದ್ಭುತ ಕಾರ್ಯಕ್ರಮ.. ಅವಾಗೇಲ್ಲಾ ನಾವು ಹೇಗಿದ್ವಿ..? ಅಂತಾ ಪ್ರತೀಕ್ಷಣ ನೆನಪಿನ ಪುಟಗಳ ಮೇಲೆ ಹಾದು ಹೋಗುತ್ತಿದ್ದ ಭಾವನೆಗಳೆಲ್ಲ ಥಟ್ಟನೇ ಎದ್ದು ಕುಳಿತ ಅನುಭವ.. ಕೀಟಲೆ, ಮೋಜು, ಮಸ್ತಿ ಒಂದಾ ಎರಡಾ..? ನಮಗೆ ಮತ್ತೆ ಅಂತಹದ್ದೊಂದು ಗೋಲ್ಡನ್ ಲೈಫ್ ಸಿಗತ್ತಾ..? ಇಂತಹದ್ದೊಂದು ಪ್ರಶ್ನೆಗೆ ಬಹುಶಃ ಯಾರೂ ಉತ್ತರಿಸಲಿಕ್ಕಿಲ್ಲ.. ಆದ್ರೆ, ಮುಂಡಗೋಡಿನ ಕೆಲವು ಭಾವನಾತ್ಮಕ ಜೀವಿಗಳ ಕೂಟ ಮತ್ತದೇ ಹಳೆಯ ನೆನಪಿನ ದೋಣಿ ಏರಿದೆ.. ಆ ಹೊತ್ತಲ್ಲಿ ನಡೆದುಹೋದ ಅಷ್ಟೂ ಘಟನೆಗಳನ್ನ ಭಾವದಂಗಳದಲ್ಲಿ ಮತ್ತೊಮ್ಮೆ ಮೆಲಕು...

Post
ಲೆಫ್ಟಿನೆಂಟ್ ಅಭಯ್ ಪಂಡಿತ್ ಸಾಧನೆ; ಕನಸಿನ ಮುಂಡಗೋಡ ತಂಡದಿಂದ ಸನ್ಮಾನ

ಲೆಫ್ಟಿನೆಂಟ್ ಅಭಯ್ ಪಂಡಿತ್ ಸಾಧನೆ; ಕನಸಿನ ಮುಂಡಗೋಡ ತಂಡದಿಂದ ಸನ್ಮಾನ

ಮುಂಡಗೋಡ- ಮುಂಡಗೋಡಿನ ಯುವಕ ಅಭಯ್ ಪಂಡಿತ್ ಚೆನ್ನೈನ ಭಾರತೀಯ ಸೇನೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ನವೆಂಬರ್ 21 ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಸಾಧನೆಗೈದಿದ್ದಾರೆ. ಮುಂದೆ ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಹೊರಟಿದ್ದಾರೆ. ಈ ಮೂಲಕ ಮುಂಡಗೋಡಿನ ಮೊದಲ ಲೆಫ್ಟಿನೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ, ನಮ್ಮ ಕನಸಿನ ಮುಂಡಗೋಡ ವೇದಿಕೆ ವತಿಯಿಂದ ಲೆಫ್ಟಿನೆಂಟ್ ಅಭಯ್ ಪಂಡಿತ್ ಅವರಿಗೆ ಮುಂಡಗೋಡಿನ ಪರವಾಗಿ ಅಭಿನಂದಿಸಿ ,ಗೌರವಿಸಲಾಯಿತು.

Post
ಲೆಫ್ಟಿನೆಂಟ್ ಹುದ್ದೆ: ಮುಂಡಗೋಡ ಯುವಕನ ಹೆಮ್ಮೆ*

ಲೆಫ್ಟಿನೆಂಟ್ ಹುದ್ದೆ: ಮುಂಡಗೋಡ ಯುವಕನ ಹೆಮ್ಮೆ*

ಮುಂಡಗೋಡ: ಇದು ನಿಜಕ್ಕೂ ಮುಂಡಗೋಡಿಗರಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ ನಮ್ಮ ಭಾರತೀಯ ಸೇನಾಧಿಕಾರಿ ಹುದ್ದೆ ಅಲಂಕರಿಸಿದ್ದಾನೆ. ಸತತ ಛಲ.. ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಲೇಬೇಕು ಎಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ, ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಪಟ್ಟಣದ ಹಳೂರಿನ ಯುವಕ ಅಭಯ ಪಂಡಿತ್ ಯಶಸ್ವಿಯಾಗಿದ್ದಾರೆ. ಕರ್ನಾಟಕದಿಂದ ಒಟ್ಟು ಆರು ಜನರು ಈ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಿಂದ ಇವರೊಬ್ಬರೇ ಆಯ್ಕೆಯಾಗಿರುವುದು ವಿಶೇಷ. ಚೆನ್ನೈನ ಭಾರತೀಯ ಸೇನಾಧಿಕಾರಿಗಳ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ,...

  • 1
  • 2
error: Content is protected !!