ಮುಂಡಗೋಡ- ನಿಜಕ್ಕೂ ಅದೊಂದು ಅದ್ಭುತ ಕಾರ್ಯಕ್ರಮ.. ಅವಾಗೇಲ್ಲಾ ನಾವು ಹೇಗಿದ್ವಿ..? ಅಂತಾ ಪ್ರತೀಕ್ಷಣ ನೆನಪಿನ ಪುಟಗಳ ಮೇಲೆ ಹಾದು ಹೋಗುತ್ತಿದ್ದ ಭಾವನೆಗಳೆಲ್ಲ ಥಟ್ಟನೇ ಎದ್ದು ಕುಳಿತ ಅನುಭವ.. ಕೀಟಲೆ, ಮೋಜು, ಮಸ್ತಿ ಒಂದಾ ಎರಡಾ..? ನಮಗೆ ಮತ್ತೆ ಅಂತಹದ್ದೊಂದು ಗೋಲ್ಡನ್ ಲೈಫ್ ಸಿಗತ್ತಾ..? ಇಂತಹದ್ದೊಂದು ಪ್ರಶ್ನೆಗೆ ಬಹುಶಃ ಯಾರೂ ಉತ್ತರಿಸಲಿಕ್ಕಿಲ್ಲ.. ಆದ್ರೆ, ಮುಂಡಗೋಡಿನ ಕೆಲವು ಭಾವನಾತ್ಮಕ ಜೀವಿಗಳ ಕೂಟ ಮತ್ತದೇ ಹಳೆಯ ನೆನಪಿನ ದೋಣಿ ಏರಿದೆ.. ಆ ಹೊತ್ತಲ್ಲಿ ನಡೆದುಹೋದ ಅಷ್ಟೂ ಘಟನೆಗಳನ್ನ ಭಾವದಂಗಳದಲ್ಲಿ ಮತ್ತೊಮ್ಮೆ ಮೆಲಕು ಹಾಕಿದೆ.. ಹೌದು, ಮುಂಡಗೋಡಿನಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಇಂದು ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ರು..

ಹಳೆಯ ವಿದ್ಯಾರ್ಥಿಗಳ ಕೂಟ

1988-91 ರ ಸಾಲಿನಲ್ಲಿ ಮುಂಡಗೋಡಿನ ಪದವಿ ಪೂರ್ವ ಹಾಗೂ ಪ್ರಥಮಧರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಮುಂಡಗೋಡಿನಲ್ಲಿ ಇಂದು ನಡೆಯಿತು.

ಎಷ್ಟೋ ವರ್ಷಗಳ ಬಳಿಕ ಮತ್ತೆ ಸ್ನೇಹಮಿಲನ ಕಾರ್ಯಕ್ರಮದ ಮೂಲಕ ಹಳೆಯ ಗೆಳೆಯರು ಒಂದೆಡೆ ಸೇರಿದ್ರು.. ಎಲ್ರೂ ಒಂದಿಲ್ಲೊಂದು ಕೆಲಸದಲ್ಲಿ ಇದ್ದವರೇ, ಅಂತಹ ಬಹುಮೂಲ್ಯ ಕೆಲಸಗಳನ್ನ ಬದಿಗಿಟ್ಟು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು..

ಹಳೆಯ ವಿದ್ಯಾರ್ಥಿಗಳ ಮಿಲನ

ಮತ್ತೆ ಸಿಗೋಣ ಅಂದವರು…

ಬಹುಶಃ ಕಾಲೇಜಿನ ದಿನಗಳನ್ನ ಮುಗಿಸಿ ಮನೆಗೆ ಹೊರಡುವಾಗ ಮತ್ತೆ ಸಿಗೋಣ ಸಿಗ್ತಾ ಇರೋಣ ಅಂತ ಹೇಳಿ ಹೊರಟವರು ಮತ್ತೆಂದು ಸಿಕ್ಕಿರಲೇ ಇಲ್ಲವೇನೋ..ಆದರೆ ಅದಕ್ಕೆ ಅಂತಹದ್ದೊಂದು ವೇದಿಕೆ ಒದಗಿಸಿ ಕೊಟ್ಟಿದ್ದೇ ಸ್ನೇಹ ಮಿಲನ ಕಾರ್ಯಕ್ರಮ..

ಹೀಗಾಗಿ, ಇವತ್ತಿನ ಸ್ಬೇಹ ಮಿಲನ ಕಾರ್ಯಕ್ರಮದಲ್ಲಿ ಸೇರಿದ್ದ ಅಷ್ಟೂ ಗೆಳೆಯರೂ ಹಳೆಯ ನೆನಪುಗಳನ್ನ ಮತ್ತೆ ಕೆಣಕಿಕೊಂಡ್ರು.. ಕಾಲೇಜು ಹೊತ್ತಲ್ಲಿ ಆಡಿದ್ದ ಆಟಗಳನ್ನ ಮತ್ತೆ ಆಡಿ ಸಂಭ್ರಮಿಸಿದ್ರು.. ಮತ್ತದೇ ಹಳೆಯ ಕೀಟಲೆಗಳನ್ನ ಮಾಡಿ ಕುಣಿದಾಡಿದ್ರು..

ಹಳೆಯ ವಿದ್ಯಾರ್ಥಿಗಳ ಗೋಲಿ ಆಟ

ಗುರುದೇವೋ ಭವ..

ಇದೇ ಹೊತ್ತಲ್ಲಿ, ಅವತ್ತು ಮಾರ್ಗದರ್ಶನ ನೀಡಿ, ವಿದ್ಯೆ ಕಲಿಸಿಕೊಟ್ಟ ಗುರುವೃಂದವನ್ನೂ ನೆನಪಿಸಿದ್ರು.. ಅವ್ರೇಲ್ಲರನ್ನೂ ಕರೆದು ಹೃದಯಸ್ಪರ್ಷಿ ಗುರುವಂದನೆ ಸಲ್ಲಿಸಿದ್ರು..

ಗುರುವಂದನೆ

ಅಂದು ಶಿಕ್ಷಕರಾಗಿದ್ದ S.D ನಾಯ್ಕ್ , K.B ನಾಯ್ಕ್ ,A.G. ಬುದ್ನಿ , N.I. ಬುದ್ನೂರ್ , B.C ಪಾಟೀಲ್ ,G. P. ಮಡಿವಾಳರ , B.H ಮೊರೆ , A.R. ಅಮರನಾಥ್ , A.T. ಹೊಂಗಲ್ , A.F. ಲೋಟಗೇರಿ, A.G. ಅವಘಾನ್, ಲವಪ್ಪ ಕುರುಬೆಟ್ಟ ಹಾಗೂ ಶ್ರೀಮತಿ ರೇಣುಕಾ ನಾಯ್ಕ್,  ಗೌರಿ ನಾಯ್ಕ್ , ವಿದ್ಯಾ ನಾಯ್ಕ್ ಸೇರಿ ಮುಂಡಗೋಡದ ಶಾಲಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದ್ರು..

ಒಟ್ನಲ್ಲಿ, ಹಳೆಯ ಮಧುರ ಮಧುರ ನೆನಪುಗಳನ್ನ ಹರವಿಕೊಂಡು ಸಂಭ್ರಮಿಸಿದ ಸ್ನೇಹಿತರ ಕೂಟ ಮುಂಡಗೋಡದಲ್ಲಿಂದು ಎಂದೂ ಮರೆಯದ ಕಾರ್ಯಕ್ರಮ ಮಾಡಿದ್ದಂತೂ ಸತ್ಯ..

error: Content is protected !!