Home ಅಪಘಾತ

Category: ಅಪಘಾತ

Post
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು...

Post
8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

ಹಳಿಯಾಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಾಕಿ ಚಾಲಕನೊಬ್ಬ ಬರೋಬ್ಬರಿ ಎಂಟು ವರ್ಷಗಳ ನಂತ್ರ ಅರೆಸ್ಟ್ ಆಗಿದ್ದಾನೆ. ಭರ್ಜರಿ ಕಾರ್ಯಾಚರಣೆ ನಡೆಸಿರೊ ಹಳಿಯಾಳ ಪೊಲೀಸರು ಆರೋಪಿಯನ್ನು ಬೆಳಗಾವಿಯ ಸವದತ್ತಿಯಲ್ಲಿ ಪತ್ತೆ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಹೀಗಾಗಿ, ಹಳಿಯಾಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ. ಪಂಚಪ್ಪ ಅಯ್ಯಪ್ಪ ಪವಾಡಿ ಎಂಬುವವನನ್ನ ಎಳೆದು ತರಲಾಗಿದೆ. 2014 ರಲ್ಲಿ..! ಅಂದಹಾಗೆ, 31.10.2014 ರಲ್ಲಿ, ಅಂದ್ರೆ ಎಂಟು ವರ್ಷಗಳ ಹಿಂದೆ, ಹಳಿಯಾಳದ ಯಲ್ಲಾಪುರ...

Post
ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಮುಂಡಗೋಡ ತಾಲೂಕಿನ ಇಂದೂರು ಹಾಗೂ ಕೊಪ್ಪ ನಡುವೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರೊ ಬೆಳಗಾವಿ ಮೂಲದ ಮಂಜುನಾಥ್ ದಡ್ಡಿ ಎಂಬುವವನೇ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇಂದು ಈತ ಬೈಕ್‌ ಮೇಲೆ ಬರುತ್ತಿದ್ದಾಗ, ಕೊಪ್ಪ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಹೀಗಾಗಿ, ತಲೆಗೆ, ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ‌. ಮುಂಡಗೋಡ...

Post
ತಡಸ ಬಳಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು..! ಮೈಲಾರಕ್ಕೆ ಟ್ರಾಕ್ಟರ್ ನಲ್ಲಿ ಹೊರಟಿದ್ದವರು ಮಸಣ ಸೇರಿದ್ರು,

ತಡಸ ಬಳಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು..! ಮೈಲಾರಕ್ಕೆ ಟ್ರಾಕ್ಟರ್ ನಲ್ಲಿ ಹೊರಟಿದ್ದವರು ಮಸಣ ಸೇರಿದ್ರು,

ಶಿಗ್ಗಾವಿ: ತಾಲೂಕಿನ ಹೊನ್ನಾಪುರ ಬಳಿ ಭೀಕರ ಅಪಘಾತವಾಗಿದೆ. ಶ್ರೀ ಕ್ಷೇತ್ರ ಮೈಲಾರ ದೇವರ ದರ್ಶನಕ್ಕೆಂದು ಹೊರಟ್ಟಿದ್ದವರು ಮಸಣಕ್ಕೆ ಸೇರಿದ್ದಾರೆ. ವೇಗವಾಗಿ ಬಂದ್ ಸ್ವಿಪ್ಟ್ ಕಾರು ಟ್ಯಾಕ್ಟರ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ, ಸ್ಥಳದಲ್ಲೆ ಇಬ್ಬರ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹನುಮಂತಪ್ಪ ಮುಲಗಿ (55), ಚಂದ್ರು ಸಿರಕೋಳ (40) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಹುಬ್ಬಳ್ಳಿ ಸಮೀಪದ ಸೆರೆವಾಡ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ನೂಲ್ವಿ ಗ್ರಾಮದಿಂದ...

Post
ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?

ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?

ಗೋಕರ್ಣ: ಮೂತ್ರ ವಿಸರ್ಜನೆಗೆ ಹೋಗಿ ಪ್ರವಾಸಿಗನೊಬ್ಬ ಬಾವಿಗೆ ಬಿದ್ದು ಕೆಲಹೊತ್ತು ಅಲ್ಲೇ ಪರದಾಡಿದ ವಿಚಿತ್ರ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮೇಲಿನಕೇರಿಯಲ್ಲಿ ನಡೆದಿದೆ. ದೆಹಲಿ ಮೂಲದ ರಾಮೇಶ್ವರ್ ಬಾವಿಗೆ ಬಿದ್ದ ಪ್ರವಾಸಿಗನಾಗಿದ್ದಾನೆ. ಯುವತಿಯೊಂದಿಗೆ ಗೋಕರ್ಣದ ಪ್ರವಾಸಕ್ಕೆ ಬಂದಿದ್ದ ಯುವಕ, ಮೂತ್ರವಿಸರ್ಜನೆಗೆ ಎಂದು ಕತ್ತಲಲ್ಲಿ ತೆರಳಿದ್ದಾಗ ತೆರದ ಬಾವಿಗೆ ಬಿದ್ದಿದ್ದ, ಹೀಗಾಗಿ, ಬಾವಿಯಲ್ಲಿ ಬಿದ್ದು ಹೊರಬರಲಾರದೇ ಕೆಲಹೊತ್ತು ಅಲ್ಲೇ ಪರದಾಡಿದ್ದ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ವಿ.ಎಸ್.ಪಾಟೀಲರ ಕಾರಿಗೆ ಹಿಂಬದಿಯಿಂದ ಗುದ್ದಿದ ಟ್ರಾಕ್ಟರ್,ಅದೃಷ್ಟವಶಾತ್ ತಪ್ಪಿದ ಅನಾಹುತ..!

ವಿ.ಎಸ್.ಪಾಟೀಲರ ಕಾರಿಗೆ ಹಿಂಬದಿಯಿಂದ ಗುದ್ದಿದ ಟ್ರಾಕ್ಟರ್,ಅದೃಷ್ಟವಶಾತ್ ತಪ್ಪಿದ ಅನಾಹುತ..!

ಮುಂಡಗೋಡ: ಮಾಜಿ ಶಾಸಕ, ಯಲ್ಲಾಪುರ ಕ್ಷೇತ್ರದ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲರ ಕಾರಿಗೆ ಪುಟ್ಟ ಅಪಘಾತವಾಗಿದೆ. ಮುಂಡಗೋಡ ಪಟ್ಟಣದ ಬನ್ನಿಕಟ್ಟಿ ಹತ್ತಿರ ಕಬ್ಬು ತುಂಬುವ ಟ್ರಾಕ್ಟರ್ ಹಿಂಬದಿಗೆ ಎರಡು ಬಾರಿ ಗುದ್ದಿದ ಪರಿಣಾಮ ಕಾರಿನ ಹಿಂಬದಿಯ ಭಾಗ ಕೊಂಚ ಜಖಂ ಆಗಿದೆ. ಅದೃಷ್ಟವಶಾತ್ ವಿ.ಎಸ್.ಪಾಟೀಲರಿಗೆ ಯಾವುದೇ ಅಪಾಯವಾಗಿಲ್ಲ. ಮುಂಡಗೋಡಿನಿಂದ ಯಲ್ಲಾಪುರ ಕಡೆಗೆ ಹೊರಟಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲರ ಕಾರಿಗೆ, ಹಿ‌ಂದಿನಿಂದ ಅದೇ ಮಾರ್ಗದಲ್ಲಿ ಹೊರಟಿದ್ದ ಕಬ್ಬು ಸಾಗಿಸುವ ಟ್ರಾಕ್ಟರ್ ಗುದ್ದಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ, ತಕ್ಷಣವೇ ಸ್ಥಳೀಯರು...

Post
ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!

ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!

ಕುಮಟಾ: ತಾಲೂಕಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದೋಳಿ ಮುಳುಗಡೆಯಾಗಿ ಮೀನುಗಾರ ಸಾವು ಕಂಡಿದ್ದಾನೆ. ಕುಮಟಾದ ಲುಕ್ಕೇರಿ ನಿವಾಸಿಯಾಗಿದ್ದ ವಿಘ್ನೇಶ್ವರ ಅಂಬಿಗ (24) ಮೃತ ದುರ್ದೈವಿಯಾಗಿದ್ದಾನೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಒಳನೀರಿನ ಹರಿವಿನಿಂದ ದೋಣಿ ಮುಳುಗಿದೆ. ಹೀಗಾಗಿ, ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥನಾಗಿದ್ದ ವಿಘ್ನೇಶ್ವರ ಆಸ್ಪತ್ರೆಗೆ ಸಾಗಿಸುವ ಸಾವು ಕಂಡಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post
ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

 ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ‌. ಪರಿಣಾಮ ಟ್ರಾಕ್ಟರಿನಲ್ಲಿದ್ದ ಸುಮಾರು 40-45 ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಅದ್ರಲ್ಲಿ, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪಿಕ್ ನಿಕ್ ಗೆ ಹೊರಟಿದ್ದರು..! ಇಂದು ಮಳಗಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರಾಕ್ಟರ್ ಮೂಲಕ ಪಿಕ್ ನಿಕ್ ಗೆ ಅಂತಾ ಮಳಗಿಯಿಂದ ಕೊಳಗಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಿಕ್ ನಿಕ್ ಮುಗಿಸಿಕೊಂಡು ವಾಪಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ ಎನ್ನಲಾಗಿದೆ....

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಮುಂಡಗೋಡ ಸಮೀಪದ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಬಳಿ ಬೈಕ್ ಅಪಘಾತವಾಗಿದೆ. ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಡಗೋಡ ಪಟ್ಟಣದ ಸಂಜು ನರಸಪ್ಪ ಕಳಲಕೊಂಡ(32) ಮೃತ ಬೈಕ್ ಸವಾರ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಿಯಂತ್ರಣ ತಪ್ಪಿದ ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಕೂಡ ನುಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು...

error: Content is protected !!