ಹಳಿಯಾಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಾಕಿ ಚಾಲಕನೊಬ್ಬ ಬರೋಬ್ಬರಿ ಎಂಟು ವರ್ಷಗಳ ನಂತ್ರ ಅರೆಸ್ಟ್ ಆಗಿದ್ದಾನೆ. ಭರ್ಜರಿ ಕಾರ್ಯಾಚರಣೆ ನಡೆಸಿರೊ ಹಳಿಯಾಳ ಪೊಲೀಸರು ಆರೋಪಿಯನ್ನು ಬೆಳಗಾವಿಯ ಸವದತ್ತಿಯಲ್ಲಿ ಪತ್ತೆ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಹೀಗಾಗಿ, ಹಳಿಯಾಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ. ಪಂಚಪ್ಪ ಅಯ್ಯಪ್ಪ ಪವಾಡಿ ಎಂಬುವವನನ್ನ ಎಳೆದು ತರಲಾಗಿದೆ.

2014 ರಲ್ಲಿ..!
ಅಂದಹಾಗೆ, 31.10.2014 ರಲ್ಲಿ, ಅಂದ್ರೆ ಎಂಟು ವರ್ಷಗಳ ಹಿಂದೆ, ಹಳಿಯಾಳದ ಯಲ್ಲಾಪುರ ರಸ್ತೆಯ ನೀಲವಾಣಿ ಕ್ರಾಸ್ ಸಮೀಪ ಅಪಘಾತವಾಗಿತ್ತು. ರಸ್ತೆ ಬದಿ ನಿಂತಿದ್ದ ಮೌಲಾಸಾಬ್ ಎಂಬುವವರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೌಲಾಸಾಬ್ ಮೃತಪಟ್ಟಿದ್ದರು. ಹೀಗಾಗಿ, ಅಪಘಾತ ಪಡಿಸಿ ಸಾವಿಗೆ ಕಾರಣವಾಗಿದ್ದ ಆರೋಪಿ ಟ್ಯಾಂಕರ್ ಚಾಲಕನ ಮೇಲೆ ಐಪಿಸಿ ಕಲಂ, 304(a) 279, 338 ಅಡಿಯಲ್ಲಿ ಕೇಸು ದಾಖಲಾಗಿತ್ತು.
ಹಳಿಯಾಳ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆಯೂ ನಡೆದಿತ್ತು. ಆದ್ರೆ, ಅವತ್ತಿನಿಂದ ಇವತ್ತಿನವರೆಗೂ ಆರೋಪಿ ಚಾಲಕ ಮಾತ್ರ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಕಾರಣಕ್ಕಾಗಿ ಕೋರ್ಟ್ ಬರೋಬ್ಬರಿ 13 ಬಾರಿ ಬಾಡಿ ವಾರೆಂಟ್ ಜಾರಿ ಮಾಡಿತ್ತು. ಆದ್ರೂ ಕೂಡ ಆರೋಪಿ ಮಾತ್ರ ಕೋರ್ಟಿಗೆ ಹಾಜರಾಗಿರಲಿಲ್ಲ. ಹೀಗಾಗಿ, ಇದೊಂದು ಹಳೆಯ ಪ್ರಕರಣವಾಗಿ ಪೊಲೀಸರಿಗೆ ನಿದ್ದೆಗೆಡಿಸಿತ್ತು. ಅದೇಷ್ಟೆ ಪ್ರಯತ್ನ ಪಟ್ಟರೂ ಆರೋಪಿಯ ಸಣ್ಣದೊಂದು ಸುಳಿವೂ ಸಿಕ್ಕಿರಲಿಲ್ಲ‌.

ಕಳೆದ ಎರಡು ದಿನದ ಹಿಂದೆ..!
ಅದೇಷ್ಟೆ ತಿಪ್ಪರಲಾಗ ಹಾಕಿದ್ರೂ ಸಿಗದೇ, ತಲೆಮರೆಸಿಕೊಂಡಿದ್ದ ಆರೋಪಿ ಟ್ಯಾಂಕರ್ ಚಾಲಕ ಪಂಚಪ್ಪ ಪವಾಡಿ ಸವದತ್ತಿ ತಾಲೂಕಿನಲ್ಲಿದ್ದಾನೆ ಅಂತಾ ಸಣ್ಣದೊಂದು ಸುಳಿವು ಸಿಕ್ಕಿತ್ತು. ಹೀಗಾಗಿ, ಪ್ಲ್ಯಾನ್ ಮಾಡಿ ದಾಳಿ‌ಮಾಡಿರೋ ಹಳಿಯಾಳ ಪೊಲೀಸರಿಗೆ ಆರೋಪಿ ತಗಲಾಕ್ಕೊಂಡಿದ್ದಾನೆ.

ಹಳಿಯಾಳ ಪಿಐ ಮಾರ್ಗದರ್ಶನದಲ್ಲಿ, ಪಿಎಸ್ಐ ವಿನೋದ ರೆಡ್ಡಿ,ತನಿಖಾ ಪಿಎಸ್ಐ ಅಮೀನ್ ಅತ್ತಾರ ನೇತೃತ್ವದಲ್ಲಿ,
ಸಿಬ್ಬಂದಿಗಳಾದ, ಶಂಕರ ಗುಡ್ಡೆನ್ನವರ, ನಬಿಸಾಬ ಖೈರವಾಡಗಿ ರವರು ಕಾರ್ಯಾಚರಣೆಯಲ್ಲಿದ್ದರು.

******

error: Content is protected !!