ಶಿಗ್ಗಾವಿ: ತಾಲೂಕಿನ ಹೊನ್ನಾಪುರ ಬಳಿ ಭೀಕರ ಅಪಘಾತವಾಗಿದೆ. ಶ್ರೀ ಕ್ಷೇತ್ರ ಮೈಲಾರ ದೇವರ ದರ್ಶನಕ್ಕೆಂದು ಹೊರಟ್ಟಿದ್ದವರು ಮಸಣಕ್ಕೆ ಸೇರಿದ್ದಾರೆ.
ವೇಗವಾಗಿ ಬಂದ್ ಸ್ವಿಪ್ಟ್ ಕಾರು ಟ್ಯಾಕ್ಟರ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ,
ಸ್ಥಳದಲ್ಲೆ ಇಬ್ಬರ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹನುಮಂತಪ್ಪ ಮುಲಗಿ (55), ಚಂದ್ರು ಸಿರಕೋಳ (40) ಮೃತ ದುರ್ದೈವಿಗಳಾಗಿದ್ದಾರೆ.
ಮೃತರು ಹುಬ್ಬಳ್ಳಿ ಸಮೀಪದ ಸೆರೆವಾಡ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ನೂಲ್ವಿ ಗ್ರಾಮದಿಂದ ಮೈಲಾರಕ್ಕೆ ಮೈಲಾರದೇವರ ಜಾತ್ರೆಗೆ ಟ್ರಾಕ್ಟರ್ ಮೂಲಕ ಹೊರಟಿದ್ದರು. ಈ ವೇಳೆ ಟ್ರಾಕ್ಟರ್ ಹಿಂಭಾಗ ಕಾಲುಜೋತು ಬಿಟ್ಟುಕೊಂಡು ಕುಳಿತಿದ್ದ ಭಕ್ತರಿಗೆ, ಹುಬ್ಬಳ್ಳಿಯಿಂದ ಹಾವೇರಿ ಕಡೆ ಬರುತ್ತಿದ್ದ ಕಾರು ಹಿಂಬದಿಯಿಂದ ಏಕಾಏಕಿ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಶಿಗ್ಗಾವಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಕಂಡು ಸ್ಥಳದಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿದ್ದಾರೆ. ತಡಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.