Home Public First Newz

Author: Public First Newz (Public First Newz)

Post
ಸಿಎಂ ತವರಿನಲ್ಲಿ ಬಂಜಾರಾ ಸಮುದಾಯದ ಪ್ರತಿಭಟನೆ, ಆಕ್ರೋಶ..! ಆತ್ಮಹತ್ಯೆಗೆ ಯತ್ನಿಸಿದ್ರಾ ಬಂಜಾರಾ ಪೀಠದ ಶ್ರೀಗಳು..?

ಸಿಎಂ ತವರಿನಲ್ಲಿ ಬಂಜಾರಾ ಸಮುದಾಯದ ಪ್ರತಿಭಟನೆ, ಆಕ್ರೋಶ..! ಆತ್ಮಹತ್ಯೆಗೆ ಯತ್ನಿಸಿದ್ರಾ ಬಂಜಾರಾ ಪೀಠದ ಶ್ರೀಗಳು..?

 ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಬಂಜಾರಾ ಸಮುದಾಯದ ಆಕ್ರೋಶ ಮುಗಿಲು‌ ಮುಟ್ಟಿದೆ‌. ಒಳ‌ಮೀಸಲಾತಿಯ ವರ್ಗೀಕರಣದ ವಿರುದ್ಧ ಸಿಡಿದೆದ್ದಿರುವ ಬಂಜಾರಾ ಸಮುದಾಯ ಶಿಗ್ಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕೂಡಲೇ ಮೀಸಲಾತಿ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ರು. ಶಿಗ್ಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾಗಿ ಬಂದು ಹೊಸ ಬಸ್ ನಿಲ್ದಾಣದವರೆಗೂ ಸಾಗಿತ್ತು. ಆತ್ಮಹತ್ಯೆಗೆ ಯತ್ನಿಸಿದ್ರಾ ಶ್ರೀಗಳು..? ಇನ್ನು, ಬಂಜಾರಾ ಸಮುದಾಯದ ಪ್ರತಿಭಟನೆ ವೇಳೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ...

Post
ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ‌. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದಿದ್ದಾರೆ‌. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರೋ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮುಂಡಗೋಡ ನೆಹರು ನಗರದ ನಿವಾಸಿ ಹಸನ ಸಾಬ್ ಮೋದಿನ್ ಸಾಬ್ ಫರೀದ್ ಎಂಬುವವರು ತಮ್ಮ ಸ್ಕೂಟಿಯಲ್ಲಿ ಹಣವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ,...

Post
ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ಮುಂಡಗೋಡ: ತಾಲೂಕಿನ ಬಹುತೇಕ 82 ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಿ ಈಗಾಗಲೇ ಪಹಣಿ ಪತ್ರಿಕೆಗಳಲ್ಲಿ ದಾಖಲಿಸಲಾಗಿದೆ. ಅಲ್ಲದೇ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದ್ದು, ಹೀಗಾಗಿ, ಸದ್ಯ ಸ್ಮಶಾನ ಭೂಮಿಗಾಗಿ ಕಾಯ್ದಿರಿಸಿದ ಭೂಮಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ಕೂಡಲೇ ತಹಶೀಲ್ದಾರ ಕಚೇರಿಗೆ ದೂರು ನೀಡುವಂತೆ ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ಮನವಿ ಮಾಡಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟು 94 ಗ್ರಾಮಗಳಿದ್ದು ಈ ಪೈಕಿ 12 ಜನವಸತಿ ಇಲ್ಲದ ಬೇಚರಾಕ ಗ್ರಾಮಗಳಿವೆ. ಬಾಕಿ ಉಳಿದ 82 ಗ್ರಾಮಗಳಲ್ಲಿ...

Post
ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್:  ಮೇ10 ರಂದು ಮತದಾನ, ಮೇ 13ರಂದು ಫಲಿತಾಂಶ..! ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ.!

ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ10 ರಂದು ಮತದಾನ, ಮೇ 13ರಂದು ಫಲಿತಾಂಶ..! ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ.!

ಅಂತೂ ಇಂತೂವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಿದೆ. ಮೇ 10 ರಂದು ಮತದಾನ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿದೆ. ಮೇ.13 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ.

Post
ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ಇಂದೇ ವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಲಿದೆ. ಇಂದು ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ‌ ಮಾಡುವ ಸಾಧ್ಯತೆ ಇದೆ. ಬೆಳಿಗ್ಗೆ 11.30 ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ ಮಾಡಲಿದ್ದಾರೆ. ಹೀಗಾಗಿ, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ.

Post
ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಡ್ಯಾಂ ನಲ್ಲಿ ಈಜಲು ನೀರಿಗೆ ಇಳಿದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟ ಮಗನ ಕಣ್ಣೇದುರೇ ತಂದೆ ನೀರಲ್ಲಿ ಮುಳುಗಿ ಸಾವು ಕಂಡಿದ್ದು ಧಾರುಣವಾಗಿದೆ. ಲಕ್ಷ್ಮಣ ಭೀಮಣ್ಣ ಬೋವಿ (42) ಈಜಲು ಹೋಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇವನು ಮದ್ಯಾನ ನ್ಯಾಸರ್ಗಿ ಡ್ಯಾಂ ನಲ್ಲಿ ಸ್ನಾನ ಮಾಡಲೆಂದು, ಮಗನ ಬಳಿ ಬಟ್ಟೆ ಕೊಟ್ಟು ನೀರಿಗೆ ಇಳಿದಿದ್ದ ಎನ್ನಲಾಗಿದೆ. ಈ ವೇಳೆ ನೀರಲ್ಲಿ ಈಜಾಡುತ್ತಿರುವಾಗಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ ತಂದೆ ನೀರಲ್ಲಿ ಕಣ್ಮರೆಯಾಗುತ್ತಲೇ ಆತಂಕಗೊಂಡ ಮಗ ಸ್ಥಳೀಯರಿಗೆ...

Post
ವಿಧಾನಸಭಾ ಚುನಾವಣೆ-2023, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭಾ ಚುನಾವಣೆ-2023, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಜ್ ಆಗಿದೆ‌. ಒಟ್ಟೂ 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ ಮೊದಲ ಪಟ್ಟಿಯಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಗಿದ್ರೆ ಯಾವ ಯಾವ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ ಇಲ್ಲಿದೆ ನೋಡಿ ಫುಲ್ ಲಿಸ್ಟ್..!

Post
ಶ್ರವಣಬೆಳಗೊಳ ಜೈನ ಮಠದ ಸ್ಚಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ವಿಧಿವಶ..!

ಶ್ರವಣಬೆಳಗೊಳ ಜೈನ ಮಠದ ಸ್ಚಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ವಿಧಿವಶ..!

ಐತಿಹಾಸಿಕ ಶ್ರವಣಬೆಳಗೊಳದ ಜೈನ ಮಠದ ಭಟ್ಟಾರಕರು ವಿಧಿವಶರಾಗಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು ಹಿನ್ನಲೆಯಲ್ಲಿ, ಬೆಳ್ಳೂರಿನ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭಟ್ಟಾರಕ ಶ್ರೀಗಳು ವಿಧಿವಶರಾಗಿದ್ದಾರೆ. ಮೇ 3, 1949ರಲ್ಲಿ ಶ್ರೀಗಳು ಜನಿಸಿದ್ದರು. 1970ರಲ್ಲಿ ಶ್ರವಣಬೆಳಗೊಳ ಜೈನ ಮಠದ ಪೀಠಾಧಿಪತಿಯಾಗಿ ನೇಮಕವಾಗಿದ್ದರು. ಕರ್ಮ ಯೋಗಿ...

Post
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ..? ನಿಜವಾಗತ್ತಾ ಮಣ್ಣಿನ ಗೊಂಬೆ ಭವಿಷ್ಯ..?

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ..? ನಿಜವಾಗತ್ತಾ ಮಣ್ಣಿನ ಗೊಂಬೆ ಭವಿಷ್ಯ..?

 ಧಾರವಾಡ; ಎಲೆಕ್ಷನ್ ಹೊತ್ತಲ್ಲಿ ಇದೇನಪ್ಪ ಇಂತಹ ಭವಿಷ್ಯ ಅಂತೀರಾ..? ನಂಬೊಕೆ ಆಗದೇ ಇದ್ರೂ ಈ ಭವಿಷ್ಯ ಮಾತ್ರ ಸುಳ್ಳಾಗೇ ಇಲ್ವಂತೆ, ಹೀಗಾಗಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಣ್ಣಿನ ಗೊಂಬೆಗಳ ಭವಿಷ್ಯ ಅಚ್ಚರಿ ಮೂಡಿಸುತ್ತಿದೆ. ಬಹುಶಃ ಪ್ರಸಕ್ತ ಯುಗಾದಿಗೆ ನುಡಿದಿರೋ ಭವಿಷ್ಯ ಬರುವ ಚುನಾವಣೆಯ ಮುನ್ಸೂಚನೆಯಾ..? ನಾಯಕತ್ವ ಬದಲಾವಣೆ ಅಂತೆ‌..! ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ. ಈ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳು ಇಂತಹದ್ದೊಂದು ಭವಿಷ್ಯ ನುಡಿದಿವೆ. ಧಾರವಾಡ ತಾಲೂಕಿನ...

error: Content is protected !!