Home publicfirstnewz

Author: publicfirstnewz (Santosh Shetteppanavar)

Post
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!

ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!

ಸಿದ್ದಾಪುರ : ಮಾಧ್ಯಮ ಕ್ಷೇತ್ರದಲ್ಲಿ ಕಳೆದ‌ ಎರಡು ದಶಕದಿಂದ‌ ಕಾರ್ಯ‌ ನಿರ್ವಹಿಸುತ್ತಿದ್ದ ಶಿವಶಂಕರ್ ಕೋಲಸಿರ್ಸಿ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ 44 ವರ್ಷ ವಯಸ್ಸಾಗಿದ್ದು, ಅವರು Tv-9, ನ್ಯೂಸ್ ನಲ್ಲಿ ಕೆಲ‌ ವರ್ಷಗಳ‌ ಕಾಲ ಉತ್ತರಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕನ್ನಡ ಜನಾಂತರಂಗ, ಕನ್ನಡ ಪ್ರಭ, ಕರಾವಳಿ ಮುಂಜಾವು ಸೇರಿದಂತೆ ಅನೇಕ ಮಾಧ್ಯಮದಲ್ಲಿ ಕಾರ್ಯ‌ ನಿರ್ವಹಿಸಿದ್ದರು, ಸದ್ಯ ರಾಜ್ ನ್ಯೂಸ್ ‌ನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಸಹ ವರದಿಗಾರಿಕೆಗೆ ತೆರಳಿದ್ದರು.‌ ಆರೋಗ್ಯದಲ್ಲಿ ಯಾವುದೇ ಏರುಪೇರು...

Post
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ

ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ದಿನಾಂಕ:02.03 2025 ರ ವರದಿಯನ್ವಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ನಾಗರಿಕರಿಗೆ ಈ ಕೆಳಗೆ ಸೂಚಿಸಲಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಮುನ್ನಚ್ಚರಿಕೆ ಪಾಲಿಸಿ..! ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದಷ್ಟು ಹಗುರವಾದ,...

Post
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..!  ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!

ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!

*ವರದಿ: ಶಂಕರ್ ಕ್ಷತ್ರೀಯ, ಆರಕ್ಷಕ ಬರಗುಡಿ: ವಿಜಯಪುರ ಜಿಲ್ಲೆಯ ಭೀಮಾತೀರದ ಪ್ರಸಿದ್ಧ ಬರಗುಡಿ ಗ್ರಾಮದ ಅಧಿ ದೇವತೆಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 21ರಂದು ಭೀಮಾ ನದಿ ತಪ್ಪಲಿನ ಬರಗುಡಿಯಲ್ಲಿ ಲಕ್ಷ್ಮಿ ದೇವಿಯ ಸಂಭ್ರಮ, ಸಡಗರ, ಮದ್ದು ಸಿಡಿಲು ಪಟಾಕೆ ಅಗೋಚರ ನೀಲ ಪರದೆ,ತಮಟೆ ಸದ್ದು, ಪೋತ -ರಾಜರ ನರ್ತನ, ಮೈ ಜುಮ್ಮು ಎನಿಸುವ ಬಾರಕೊಲಿನ ಹೊಡೆತ. ಹೀಗೆ ಖುಷಿ ಕೊಡುವ ಗೆಳೆಯ, ಸಹದ್ಯೋಗಿಗಳು, ನೆಂಟರು ಈ ಜಾತ್ರೆಯ ಸೊಬಗು. ಲಕ್ಷ್ಮಿದೇವಿ ಜಾತ್ರೆ, ಗ್ರಾಮದಲ್ಲಿ ಒಂದು ಪ್ರಮುಖ...

Post
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?

ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ್ ಇಡೀ ಪ್ರಕರಣದ ಬಗ್ಗೆ ವಿಸ್ತೃತ ದೂರು ನೀಡಿದ್ದಾರೆ. ಘಟನೆ ನಡೆದದ್ದೇ ಬೇರೆ, ಕೇಸು ದಾಖಲಾಗಿದ್ದೇ ಬೇರೆ, ಇನ್ಶ್ಯೂರನ್ಸ್ ಹಣಕ್ಕಾಗಿ ಇಲ್ಲಿ ಇಡೀ ಕೇಸನ್ನೇ ಉಲ್ಟಾ ಪಲ್ಟಾ ಮಾಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ದೇ ಈ‌ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ, ಈ ಕೇಸು ಮುಂಡಗೋಡ ಪೊಲೀಸರಿಗೆ ಬಹುತೇಕ...

Post
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!

ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!

ಮುಂಡಗೋಡ ತಾಲೂಕಿನ ಇಂದೂರ ಸಮೀಪದ, ಮಲಬಾರ್ ಕಾಲೋನಿಯ ಅರಣ್ಯದಲ್ಲಿ ಅಕ್ರಮ ಮಣ್ಣು ಸಾಗಾಟ ನಿರಂತರವಾಗಿದೆ ಅನ್ನೋ ಆರೋಪವಿದೆ. ಹೀಗಾಗಿ, ನಿನ್ನೆ ಶನಿವಾರ ತಡ ರಾತ್ರಿ ಮಲಬಾರ್ ಕಾಲೋನಿಯ ಹಾರನಕೇರಿಯ ಹತ್ತಿರ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿದ್ದಾರೆ. ಪರಿಣಾಮ ಅಕ್ರಮವಾಗಿ ಮಣ್ಣು ಸಾಗಾಟದಲ್ಲಿ ತೊಡಗಿದ್ದ ಒಂದು JCB ಹಾಗೂ ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಇಂದೂರು ಸೆಕ್ಷೆನ್ ನ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆರೆಯ ಪಕ್ಕದಲ್ಲಿನ ಅರಣ್ಯದಲ್ಲಿ ಅಕ್ರಮವಾಗಿ ರಾತ್ರೋ ರಾತ್ರಿ...

Post
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!

“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!

ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ಕಾರ್ಣಿಕದ ಭವಿಷ್ಯವಾಣಿ ಶುಕ್ರವಾರ ಸಂಜೆ ಹೊರಬಿದ್ದಿದೆ, “ತುಂಬಿದಕೊಡ ತುಳುಕಿತಲೇ ಪರಾಕ್” ಎಂಬ ಕಾರ್ಣಿಕವನ್ನು ಗೊರವಪ್ಪ ರಾಮಪ್ಪ ನುಡಿದಿದ್ದು, ಈ ವರ್ಷ ರಾಜ್ಯದಲ್ಲಿ ಮಳೆ – ಬೆಳೆ ಸಮೃದ್ಧವಾಗಿರಲಿದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. 15ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ರಾಮಪ್ಪ, ಸದ್ದಲೇ ಎಂದು ಅಲ್ಲಿ ನೆರೆದಿದ್ದ ಜನರನ್ನು ಸುಮ್ಮನಾಗಿಸಿ ಕಾರ್ಣಿಕ ನುಡಿದಿದ್ದಾನೆ. ಮೈಲಾರ ಲಿಂಗೇಶ್ವರನ ಕಾರ್ಣಿಕ...

Post
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!

 ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಕಂಡೂ ಕೇಳರಿಯದ ಭಯಾನಕ ಘಟನೆ ನಡೆದು ಹೋಗಿದೆ. ಟಿಪ್ಪರ್ ಹಿಂಬದಿಯ ಗಾಲಿಗೆ ಸಿಲುಕಿದ ಪಾದಾಚಾರಿ ವ್ಯಕ್ತಿಯೋರ್ವನ ದೇಹ ಛಿದ್ರ ಛಿದ್ರಗೊಂಡಿದೆ. ಘಟನೆಯ ಭಯಾನಕತೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಆದ್ರೆ, ಹೀಗೆ ದಾರುಣ ಸಾವು ಕಂಡಿರೋ ವ್ಯಕ್ತಿ ಯಾರು..? ಎಲ್ಲಿಯವನು ಅನ್ನೋದು ಇನ್ನು ತಿಳಿದು ಬಂದಿಲ್ಲ.. ಅಂದಹಾಗೆ, ಸಂಜೆ ಶಿವಾಜಿ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಟಿಪ್ಪರ್ ಹಿಂಬದಿಯ ಚಕ್ರಕ್ಕೆ ಸಿಲುಕಿರೋ ಪಾದಾಚಾರಿ ಸ್ಥಳದಲ್ಲೇ ಚಿದ್ರ ಚಿದ್ರಗೊಂಡಿದ್ದಾನೆ. ದೇಹದ ಬಹುತೇಕ ಭಾಗ...

Post
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!

ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!

ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣದ ಆರೋಪಿತರು ಅಂದರ್ ಆಗಿದ್ದಾರೆ. ಪೆಬ್ರುವರಿ 11ರಂದು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ರಾತ್ರಿ 09.30 ಗಂಟೆಯ ಸುಮಾರಿಗೆ ಪಿಂಟು ಹಾಗೂ ಇನ್ನೂ 4-5 ಜನ ದುಷ್ಕರ್ಮಿಗಳು ಸೇರಿಕೊಂಡು ಭಾಗಪ್ಪ ಹುಚ್ಚಪ್ಪ ಹರಿಜನ ಈತನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ ಹಾಗೂ ಮಚ್ಚಿನಿಂದ ಕುತ್ತಿಗೆಗೆ, ಎದೆಗೆ ಮತ್ತು ಕೈಗಳಿಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ. ಭಾಗಪ್ಪ ಹರಿಜನ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಬಗ್ಗೆ...

Post
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ,   ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!

ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು ಹೀಗಿವೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು....

Post
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!

ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!

ಅಂಕೋಲಾ: ಅನಾರೋಗ್ಯಕ್ಕೆ ಒಳಗಾಗಿದ್ದ ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರು ಇಂದು ನಿಧನರಾಗಿದ್ದಾರೆ. ಅಂಕೋಲಾ ತಾಲೂಕಿನ ಬಡಿಗೇರಿ ಗ್ರಾಮದ ತಮ್ಮ ಮನೆಯಲ್ಲಿ ನಿಧನ ಹೊಂದಿದ ಹಾಡುಹಕ್ಕಿ ಸುಕ್ರಿ ಬೊಮ್ಮ ಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ಇವರಿಗೆ ಪದ್ಮಶ್ರೀ, ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿ ಪಡೆದಿದ್ದು, 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು ಜಾನಪದ‌ ಹಾಡುಗಳ ಮೂಲಕ ಸಮುದಾಯದ ಮಹಿಳೆಯರ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದರು. ಅನೇಕ ಹೋರಾಟಗಳಲ್ಲಿ ಸಹ ಇವರು ಮುಂಚೂಣಿ ಯಲ್ಲಿ...

error: Content is protected !!