Yallapur Crime News:ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನಾಡಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಯನ್ನು ಬಂಧಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದ ಸೂರೆ ಮನೆ ಕ್ರಾಸ್ ಬಳಿ, ಅಕ್ರಮವಾಗಿ ನಾಡ ಬಂದೂಕನ್ನು ಇಟ್ಟುಕೊಂಡ ವ್ಯಕ್ತಿಯ ಬಗ್ಗೆ ಖಚಿತ ಬಾತ್ಮಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.
ಇನ್ನು ಆರೋಪಿ ತಮ್ಮು ತಂದೆ ಬೊಂಬಿಯಾ ಕುಣಬಿ,(50) ಎಂಬುವವನನ್ನು ವಶಕ್ಕೆ ಪಡೆದು, ಆತನ ಬಳಿ ಸಿಕ್ಕ ಅನಧೀಕೃತ ನಾಡಬಂದೂಕನ್ನು ಸೂಕ್ತ ಕಾನೂನು ಕ್ರಮದಂತೆ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ👉ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ, ದರೋಡೆಗೆ ಹೊಂಚು ಹಾಕಿದ್ದ ಖತರ್ನಾಕ್ “ಗರುಡಾ ಗ್ಯಾಂಗ್” ನ ಮೂವರ ಬಂಧನ..!
ಎಸ್ಪಿ ನಾರಾಯಣ ಎಮ್. ಎಎಸ್ಪಿ ಕೃಷ್ಣ ಮೂರ್ತಿ ಹಾಗೂ ಜಗದೀಶ ಎಮ್.ಎನ್. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ, ಹಾಗೂ ಯಲ್ಲಾಪುರ ಪಿಐ ರಮೇಶ ಹನಾಪುರ ಮಾರ್ಗದರ್ಶನದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿಯವರಾದ, ದೀಪಕ ನಾಯಕ, ಬಸವರಾಜ ಹಗರಿ, ಚನ್ನಕೇಶವ, ಪರಶುರಾಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.