Bhatkal crime news:
ಭಟ್ಕಳ ಗ್ರಾಮೀಣ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಿಲಾಲಖಂಡ ಗ್ರಾಮದ ಸಾಗರ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದ ಐವರು “ಗರುಡಾ ಗ್ಯಾಂಗ್” ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
ಗ್ರೇ ಕಲರ್ ಟೋಯೋಟಾ ಇನ್ನೊವಾ ಕಾರಲ್ಲಿ ಬಂದಿದ್ದ ಖತರ್ನಾಕ ದರೋಡೆಕೋರರು, ಕೃತ್ಯಕ್ಕೆ ಬೇಕಾದ ಚಾಕು, ಕಾರಾಪುಡಿ. ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಮೊದಲಾದ ವಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕಿ, ಗುಳ್ಳೆ ರಸ್ತೆ ಕ್ರಾಸ್ ಹತ್ತಿರ ಕತ್ತಲೆಯಲ್ಲಿ ಕಾರಿನಲ್ಲಿ ಕುಳಿತಿದ್ದಾಗ. ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ್ ಪಾಟೀಲ್ ಆರೋಪಿತರನ್ನು ನೋಡಿ ವಿಚಾರಿಸಲು ಹೋದಾಗ ಆರೋಪಿತರು ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದಿದ್ದರು.
ಈ ವೇಳೆ ಮೂವರು “ಗರುಡಾ ಗ್ಯಾಂಗ್‌ನ” ಆರೋಪಿತರು ಸಿಕ್ಕಿದ್ದು ಇನ್ನುಳಿದ ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ. ಸದರಿಯವರ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾ ನಂ: 56/2025 ಕಲಂ: 310(4), 310(5), ಬಿ.ಎನ್.ಎಸ್-2023 ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಂಧಿತರಾದ “ಗರುಡಾ ಗ್ಯಾಂಗ್‌ನ” ಆರೋಪಿತರು,
ಆರೋಪಿ ನಂ.1
ಮಂಗಳೂರಿನ ಜಲೀಲ್ ಹುಸೈನ್ ಪಿ.ಕೆ ಮೈಯದ್ (39) ಈತನ ಮೇಲೆ ಈಗಾಗಲೇ 11 ಪ್ರಕರಣಗಳು ದಾಖಲಾಗಿದ್ದು, ಈತನು ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಿದ್ದು, ಈತನು ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದು, ಈತನನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು.
2) ಭಟ್ಕಳದ ಗಾಂಧಿ ನಗರ ಹೆಬಳೆಯ ನಾಶೀರ್ ಹಕೀಮ್ ಮೊಹಿದ್ದೀನ್ ಅಬುಲ್ ಖಾದರ್ (26), ಈತನ ಮೇಲೆ ಈಗಾಗಲೇ 02 ಪ್ರಕರಣಗಳು ದಾಖಲಾಗಿದ್ದು, ಈತನು ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಿದ್ದು, ಈತನು ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದು. ಈತನನ್ನು ಪೊಲೀಸ್ ವಶಕ್ಕೆ ಪಡೆದು. ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು.
3) ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಈತನ ಮೇಲೆ ಈ ಹಿಂದೆ ಈಗಾಗಲೇ 01 ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.
ಪರಾರಿಯಾದ ಆರೋಪಿಗಳು,
4) ಜಿಶಾನ್ ಸಾ।। ಮುಗ್ಗುಂ ಕಾಲೋನಿ, ಭಟ್ಕಳ
5) ನಬೀಲ್ ಸಾ|| ಬಟ್ಟಾಗಾಂವ್, ಭಟ್ಕಳ
ಪರಾರಿಯಿದ್ದ ಆರೋಪಿತರ ಪತ್ತೆಯ ಕುರಿತು ವಿಶೇಷ ತಂಡವನ್ನು ರಚಿಸಲಾಗಿದೆ.
ಇನ್ನು, ಆರೋಪಿತರಿಂದ ವಶಕ್ಕೆ ಪಡೆದ ಸ್ವತ್ತುಗಳು
1) ನೋಕಿಯಾ ಕೀಪೇಡ್ ಮೊಬೈಲ್ ಪೋನ್-01,ನಥಿಂಗ್ 2 ಎ ಮೊಬೈಲ್ ಪೋನ್-01, ನಗದು ಹಣ 1500/- ರೂ. ಚಾಕುಗಳು -2, ಖಾರಾಪುಡಿ, ಮಂಕಿಕ್ಯಾಪ್, ಸೊಂಟದ ಬೆಲ್ಲ, ನೀಲಿಬಣ್ಣದ ತಾಡಪತ್ರೆ -1, ಬಿಳಿ ಬಣ್ಣದ ಪೊಲಿತೀನ್ ಚೀಲ -01, ಟೋಯೋಟೊ ಇನ್ನೊವಾ ಕಾರ ನಂ: KA-25/Z-3724