ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಅವಿರೋಧ ಆಯ್ಕೆ..!

Gram Panchayat by Election: ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಗೆ ಅಗಡಿ ವಾರ್ಡ್ ನಂಬರ್ 2 ನೂತನ ಸದಸ್ಯೆಯಾಗಿ ಲಕ್ಷ್ಮೀ ಹನಮಂತ್ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಗಡಿಯ ಸದಸ್ಯೆ ಮಹಾಬುಬ್ಬಿ ಮಹ್ಮದ್ ಸಾಬ್ ವಾಲೀಕಾರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು, ಆದ್ರೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಮಾಡಲು ತೀರ್ಮಾನವಾದ ಹಿನ್ನೆಲೆಯಲ್ಲಿ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು, ಹೀಗಾಗಿ,ಲಕ್ಷ್ಮೀ ಹನುಮಂತ್ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಾಕಸ ಶಿವರಾಮ್ ಹೆಬ್ಬಾರರ ಮಾರ್ಗದರ್ಶನದಲ್ಲಿ ಸ್ಥಳೀಯ ಮುಖಂಡರಾದ ಎಚ್. ಎಂ‌.ನಾಯ್ಕ್, ಯುವ ಮುಖಂಡರಾದ ಬಸವರಾಜ್ ಆಸ್ತಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಷರೀಪಸಿಂಗ್ ಸಿಗ್ಗಟ್ಟಿ, ಸದಸ್ಯರಾದ ಸಿದ್ದನಗೌಡ ಪಾಟೀಲ, ತುಕಾರಾಮ್ ಹೊನ್ನಳ್ಳಿ, ಈಶ್ವರಗೌಡ ಅರಳಿಹೊಂಡ, ಶೇಜಾದಬಿ ಅಗಸರ್, ಮುಖಂಡರಾದ ರಾಮಣ್ಣ ಲಮಾಣಿ, ಭಾಸ್ಕರ್ ನಾಯ್ಕ್, ಸಿದ್ದಪ್ಪ ಹಡಪದ, ಮುತ್ತುರಾಜ್ ಕುಮ್ಮಣ್ಣಿ, ದಾದಪೀರ ಬಗಡಗೇರಿ, ದಾನಪ್ಪ ಲಮಾಣಿ ಸೇರಿದಂತೆ ಹಲವರ ನೇತೃತ್ವದಲ್ಲಿ ಅವಿರೋಧ ಆಯ್ಕೆಯಾಗಿದೆ.

error: Content is protected !!