ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಂತೆ, ಭಟ್ಕಳ ತಾಲೂಕಿನಲ್ಲಿ ಮಹಾಮಳೆ ಆತಂಕದ ಛಾಯೆ ಮೂಡಿಸಿದೆ. ಮಳೆಯಿಂದಾಗಿ ಹಲವು ಭಾಗಗಳಲ್ಲಿ ಅವಘಡಗಳು ಉಂಟಾಗಿದೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಹೀಗೆ ಕುಸಿದ ಗುಡ್ಡದ ಅಡಿಯಲ್ಲಿ ಇರುವ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ. ಲಕ್ಷ್ಮೀ ನಾಯ್ಕ, ಅವರ ಮಗಳು ಲಕ್ಷ್ಮೀ, ಮಗ ಅನಂತ್ ನಾಯ್ಕ್ (32),...