ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸಿ ಇದೀಗ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಆಗ್ತಿರೊ ಪ್ರಭುಗೌಡ ಕಿರೆದಳ್ಳಿಯವರಿಗೆ ಕುಂದರ್ಗಿಯ ಯುವಕರು ಸನ್ಮಾನಿಸಿದ್ರು. ಕುಂದರ್ಗಿ ಗ್ರಾಮದ ಓಂಕಾರ ಯುವಕ ಮಂಡಳದ ಯುವಕರು ಹಾಗೂ ಗ್ರಾಮಸ್ಥರು ಪ್ರಭುಗೌಡರವರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಕುಂದರ್ಗಿ ಗ್ರಾಮದ ಹಲವರು ಭಾಗಿಯಾಗಿದ್ರು.
Top Stories
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಮುಂಡಗೋಡಿನಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು; ಪಪಂ ಬೇಜವಾಬ್ದಾರಿ ಕೇಳೋರ್ಯಾರು..?
ಮುಂಡಗೋಡ: ಪಟ್ಟಣದಲ್ಲಿ ಈಗ ಎಲ್ಲೆಂದರಲ್ಲಿ ಬಿಡಾಡಿ ದನಗಳ ಕಾರುಬಾರು ಜೋರಾಗಿದೆ. ಪಟ್ಟಣ ಪಂಚಾಯತಿಯವರ ನಿರ್ಲಕ್ಷದಿಂದ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಹಾಗೂ ಪಟ್ಟಣದ ಹಲವು ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ರಸ್ತೆಯಲ್ಲೇ ಗುಂಪು ಗುಂಪಾಗಿ ಠಿಕಾಣಿ ಹೂಡುತ್ತವೆ. ರಸ್ತೆಯ ನಡುವೆಯೇ ಹಿಂಡು ಹಿಂಡಾಗಿ ಮಲಗಿರುತ್ತವೆ. ಹೀಗಾಗಿ, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಾರಿ ಅದೇಷ್ಟೋ ಜನ ಸವಾರರು ಬಿಡಾಡಿ ದನಗಳ ಕಾಟದಿಂದ ಬಿದ್ದು ಗಾಯಗೊಂಡಿದ್ದಾರೆ. ಹಾಗೆನೇ, ದನಗಳಿಗೂ ಗಾಯಗಳಾಗಿವೆ. ರಾತ್ರಿ ವೇಳೆ ಅಪಘಾತ..! ಇನ್ನು, ಹಗಲು ಅದೇಷ್ಟು ಸಮಸ್ಯೆಯೋ ಅದಕ್ಕಿಂತ ಹೆಚ್ಚು ಸಮಸ್ಯೆಯಾಗ್ತಿರೋದು ರಾತ್ರಿ ಹೊತ್ತಲ್ಲಿ. ಯಾಕಂದ್ರೆ, ಎಲ್ಲೆಂದರಲ್ಲಿ ರಸ್ತೆಯ ನಡುವೆಯೇ ಮಲಗುವ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ರಾತ್ರಿ ವೇಳೆ ಹಾಗೆ ಮಲಗುವ ದನಗಳು ಕಾಣದೇ ಅದೇಷ್ಟೋ ಅಪಘಾತಗಳು ಸಂಭವಿಸಿವೆ. ಅದ್ರಲ್ಲಿ, ಸವಾರರಿಗೂ ಗಾಯವಾದ್ರೆ, ಕೆಲವು ಸಾರಿ ಇಂತಹ ಅಪಘಾತಗಳಲ್ಲಿ ದನಗಳೂ...
ಶಿರಸಿ ಜಿಪಂ ಕಚೇರಿಯಲ್ಲಿ ಎಸಿಬಿ ದಾಳಿ: ಇಬ್ಬರು ಬ್ರಷ್ಟರು ಬಲೆಗೆ..!
ಶಿರಸಿ: ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರಸಿ ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದಿದೆ. ಶಿರಸಿ ಜಿಲ್ಲಾ ಪಂಚಾಯತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ್ಯ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಗುತ್ತಿಗೆದಾರನಿಗೆ 4 ಲಕ್ಷ ರೂ.ಗಳ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆದಿದೆ. ಘಟನೆಯಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರ ಕೈವಾಡ ಇರಬಹುದು ಎಂಬ ಶಂಕೆಯನ್ನು ಎಸಿಬಿ ವ್ಯಕ್ತಪಡಿಸಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಡಿಎಸ್ಪಿ ವಿರೇಶ ನೇತೃತ್ವದಲ್ಲಿ ದಾಳಿ ನಡೆದಿದೆ.
ಚೀಪ್ ರೇಟ್ ಚಿನ್ನದ ಗ್ಯಾಂಗ್, ಬಲೆಗೆ ಬಿದ್ದಿದ್ದೇ ರೋಚಕ..! “ಧರ್ಮೆ”ಯ ಅಂಗಳದ ದರೋಡೆ ಕೇಸ್ ನ ಇಂಚಿಂಚೂ ಕತೆಯಿದು..!
ಚೀಪ್ ರೇಟ್ ಚಿನ್ನದ ಹೆಸ್ರಲ್ಲಿ ದರೋಡೆಗಿಳಿದು ಲಕ್ಷ ಲಕ್ಷ ವಂಚಿಸುತ್ತಿದ್ದ ಖತರ್ನಾಕ ಗ್ಯಾಂಗ್ ನ ಹೆಡೆಮುರಿ ಕಟ್ಟುವಲ್ಲಿ ಮುಂಡಗೋಡ ಪೊಲೀಸ್ರು ಬಹುತೇಕ ಯಶಸ್ವಿಯಾಗಿದ್ದಾರೆ. ಪರಿಣಾಮ, ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆದು ಹೋಗಿದ್ದ ರಾಬರಿ ಕೇಸ್ ಒಂದು ಹಂತದಲ್ಲಿ ತಾರ್ಕಿಕ ಅಂತ್ಯದತ್ತ ಬಂದು ನಿಂತಿದೆ. ಕೇಸ್ ನಲ್ಲಿ ಕಂತೆಗಟ್ಟಲೇ ಹಣವನ್ನು ಎಗರಿಸಿ ಪರಾರಿಯಾಗಿದ್ದ ಖದೀಮರನ್ನು ನಮ್ಮ ಹೆಮ್ಮೆಯ ಮುಂಡಗೋಡ ಪೊಲೀಸ್ರು ಎಳೆದು ತಂದಿದ್ದಾರೆ. ಹೀಗಾಗಿ, ಮುಂಡಗೋಡ ಪೋಲಿಸರಿಗೊಂದು ಬಿಗ್ ಸೆಲ್ಯೂಟ್..! 9-ಮೈನೆಸ್-6…! ಅಂದಹಾಗೆ, ಸಧ್ಯ ಪ್ರಕರಣದಲ್ಲಿ ಬರೋಬ್ಬರಿ 22.50 ಲಕ್ಷ ಹಣವನ್ನು ಅನಾಮತ್ತಾಗಿ ಎಗರಿಸಿ ಪರಾರಿಯಾಗಿದ್ದ 9 ಜನ ದರೋಡೆಕೋರರ ಪೈಕಿ, ಸದ್ಯ 5 ಖದೀಮರನ್ನು ಎಳೆದು ತರಲಾಗಿದೆ. ಜೊತೆಗೆ 6 ನೇ ಆರೋಪಿ ಪೊಲೀಸರ ವಶದಲ್ಲಿದ್ದಾನೆ ಅನ್ನೋ ಮಾಹಿತಿ ಇದೆ. ಅದ್ರೊಂದಿಗೆ 19 ಲಕ್ಷ ಹಣ, ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಅಂದಹಾಗೆ, ಈ ಕೇಸ್ ನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಇನ್ನೂ ಸಿಕ್ಕಿಲ್ಲ. ಅವ್ರು ದಾವಣಗೇರೆಯಲ್ಲೇ...
ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!
ಶಿರಸಿ: ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಹವಣಿಸುತ್ತಿದ್ದ ಆರೋಪಿಗಳನ್ನ ಬಂಧಿಸಿದ ಘಟನೆ ನಡೆದಿದೆ. ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಕಾಲೋನಿಯಲ್ಲಿ 1 ಕೆಜಿ 910 ಗ್ರಾಂ ತೂಕದ ಅಂದಾಜು 25ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಅಕ್ರಮವಾಗಿ ಸೊರಬದಿಂದ ಸಾಗಾಟ ಮಾಡಿಕೊಂಡು ಶಿರಸಿಯಲ್ಲಿ ಮಾರಾಟ ಮಾಡುವುದಕ್ಕಾಗಿ, ಬಂದವರನ್ನು ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ಮಂಜುನಾಥ ನಾಯ್ಕ(31) ಹಾಗೂ ವೀರಭದ್ರಪ್ಪ ತಂದೆ ಕರಿಯಪ್ಪ ಈಡಿಗ(42) ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊಳಗ ದೇವನಹಳ್ಳಿಯವರು. 1 ನೇ ಆರೋಪಿ ಮಂಜುನಾಥನ ವಿರುದ್ಧ ಈ ಹಿಂದೆ ಸುಲಿಗೆ ಪ್ರಕರಣವು ಬನವಾಸಿ ಠಾಣೆಯಲ್ಲಿ ದಾಖಲಾಗಿದೆ. ಆರೋಪಿತರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಶಾಸಕನಿಗೆ ಹೂಮಳೆಗೈದ “MLA ಭಕ್ತ” ಪೊಲೀಸರಿಗೆ ಎಸ್ಪಿ ನೋಟಿಸ್..!
ಬೆಳಗಾವಿ: ಕಿತ್ತೂರು ಶಾಸಕರಿಗೆ ಬಹುಪರಾಕ್ ಅಂತಾ ಹೂಮಳೆಗರೆದು, ಮಹಾರಾಜನಂತೆ ಮೆರೆಸಿದ ಪೋಲಿಸ್ ಅಧಿಕಾರಿಗಳಿಗೆ ಎಸ್ಪಿ ನೋಟಿಸ್ ನೀಡಿದ್ದಾರೆ. ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ್ ಹಾಗೂ ಪತ್ನಿಗೆ ಹೂಮಳೆಗೈದ ಪೋಲಿಸ್ ಅಧಿಕಾರಿಗಳಿಗೆ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಹುಟ್ಟುಹಬ್ಬದ ನಿಮಿತ್ತ ಬೈಲಹೊಂಗಲದ ಶಾಸಕ ಮಹಾಂತೇಶ ದೊಡಗೌಡರ ಹುಟ್ಟು ಹಬ್ಬದ ಹಿನ್ನೆಲೆ ಅವ್ರ ಮನೆಗೆ ತೆರಳಿ ಪುಷ್ಪವೃಷ್ಠಿ ಮಾಡಿದ್ದ ಪೋಲಿಸರಿಗೆ ಬಿಸಿ ಮುಟ್ಟಿಸಲಾಗಿದೆ. ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ಬೈಲಹೊಂಗಲ ಠಾಣೆ ಸಿಪಿಐ ಯು.ಬಿ. ಸಾತೇನಹಳ್ಳಿ, ನೇಸರ್ಗಿ ಠಾಣೆ ಪಿಎಸ್ಐ ಯಲ್ಲಪ್ಪ ಶೀಗಿಹಳ್ಳಿ, ಗುಪ್ತಚರ ಇಲಾಖೆಯ ವಿಶ್ವನಾಥ ಮಲ್ಲನ್ನವರ, ಪೇದೆ ಮಂಜುನಾಥಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಹುನಗುಂದದಲ್ಲಿ ಮನೆಯಲ್ಲೇ ಯುವಕ ನೇಣಿಗೆ ಶರಣು..!
ಮುಂಡಗೋಡ: ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ನಡೆದಿದೆ. ಸಂಜೀವ್ ಫಕ್ಕೀರಪ್ಪ ಹೊನ್ನಳ್ಳಿ(30) ನೇಣಿಗೆ ಶರಣಾದ ಯುವಕನಾಗಿದ್ದಾನೆ. ರಾತ್ರಿ 8 ಗಂಟೆಯ ಹೊತ್ತಿಗೆ ಮನೆಯಲ್ಲೇ ಎಲ್ಲರೊಂದಿಗೆ ಇದ್ದ ಮೃತ ಯುವಕ, ಮನೆಯವರೇಲ್ಲರೂ ಹೊರಗಡೆ ಕುಳಿತಿದ್ದಾಗ, ಒಳಗೆ ಹೋಗಿ ಮನೆಯ ಜಂತಿಗೆ ನೇಣು ಬಿಗಿದುಕೊಂಡಿದ್ದಾನೆ. ಪೋಷಕರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಅಷ್ಟೊತ್ತಿಗಾಗಲೇ ಯುವಕ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಪೊಲೀಸರದು ಇದೇಂಥಾ ದೈನೇಸಿ ಸ್ಥಿತಿ..? ಪವಿತ್ರ ಯೂನಿಫಾರ್ಮಗೂ ಬೆಲೆಯಿಲ್ವಾ..?
ಬೆಳಗಾವಿ: ಪೊಲೀಸರಿಗೆ ಇಂಥಾ ದೈನೇಸಿ ಸ್ಥಿತಿ ಬಂತಾ ರಾಜ್ಯದಲ್ಲಿ..? ಬೆಳಗಾವಿ ಜಿಲ್ಲೆಯ ಕಿತ್ತೂರಿನ ಈ ಖಾಕಿಗಳ ವರ್ತನೆ ನೋಡಿದ್ರೆ ಈ ಪ್ರಶ್ನೆ ಸಹಜವಾಗೇ ಹುಟ್ಟತ್ತೆ. ಈ ಖಾಕಿಗಳಿಗೆ ಕನಿಷ್ಟ ಪಕ್ಷ ತಮ್ಮ ಮೈಮೇಲಿನ ಪವಿತ್ರ ಯೂನಿಫಾರ್ಮ ಬಗ್ಗೆನೂ ಖಬರು ಇಲ್ವಾ..? ಥೂ ಇವ್ರ ಜನ್ಮಕ್ಕಿಷ್ಟು.. ಹೀಗೇಲ್ಲ ಛೀ.. ಥೂ ಅಂತಿದ್ದಾರೆ ಜನ. ಯಾಕಂದ್ರೆ, ಅದ್ಯಾವನೋ ರಾಜಕಾರಣಿಯ ಹುಟ್ಟು ಹಬ್ಬ ಅಂದ್ರೆ ಈ ಪೊಲೀಸರೇಲ್ಲ ಹೂ ಮಳೆ ಸುರಿಸ್ತಿದಾರೆ. ಹೌದು, ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಹಾಗೂ ಅವರ ಪತ್ನಿಯನ್ನು ರಾಜ-ರಾಣಿಯಂತೆ ಕೂರಿಸಿ ಅವರ ಮೇಲೆ ಹೂಮಳೆಗರೆದ ಘಟನೆ ಇನ್ನಿಲ್ಲದ ವಿವಾದಕ್ಕೆ ಕಾರಣವಾಗಿದೆ. ಆಗಿದ್ದಿಷ್ಟು..! ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿದ್ದ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ ಐ ಶೀಗಿಹಳ್ಳಿ, ಎಸ್ಐ ವಿಶ್ವನಾಥ್ ಮಲ್ಲಣ್ಣವರ್ ಸೇರಿದಂತೆ ಪೊಲೀಸ್...
ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!
ಮುಂಡಗೋಡ: ಪಟ್ಟಣದಲ್ಲಿ ಇಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ಹಾಗೂ ಶ್ರೀ ಶಕ್ತಿ ಪೋಟೋ ಸ್ಟುಡಿಯೋದಲ್ಲಿ ಕಳ್ಳತನವಾದ ಹಿನ್ನೆಲೆ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ರು.
ಚಲಿಸುತ್ತಿದ್ದ ಟ್ಯಾಂಕರ್ ನಿಂದ ಉರುಳಿಬಿದ್ದ ಗ್ಯಾಸ್ ಟ್ಯಾಂಕ್..! ತಪ್ಪಿದ ಭಾರಿ ಅನಾಹುತ..!!
ಯಲ್ಲಾಪುರ: ಸಮೀಪದ ಅರೆಬೈಲ್ ಘಟ್ಟದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಪರಿಣಾಮ ಭಾರೀ ಆತಂಕ ಮನೆಮಾಡಿತ್ತು. ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ, ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಇದಾಗಿದ್ದು, ಸ್ಥಳಕ್ಕೆ ತಕ್ಷಣದಲ್ಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದರಿಂದ ಗ್ಯಾಸ್ ಲೀಕ್ ಆಗದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದಿದ್ದಾರೆ. ಹೀಗಾಗಿ, ಕೆಲ ಹೊತ್ತು ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಬಂದ್ ಆಗಿತ್ತು.