ಬೆಳಗಾವಿ: ಕಿತ್ತೂರು ಶಾಸಕರಿಗೆ ಬಹುಪರಾಕ್ ಅಂತಾ ಹೂಮಳೆಗರೆದು, ಮಹಾರಾಜನಂತೆ ಮೆರೆಸಿದ ಪೋಲಿಸ್ ಅಧಿಕಾರಿಗಳಿಗೆ ಎಸ್ಪಿ ನೋಟಿಸ್ ನೀಡಿದ್ದಾರೆ.
ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ್ ಹಾಗೂ ಪತ್ನಿಗೆ ಹೂಮಳೆಗೈದ ಪೋಲಿಸ್ ಅಧಿಕಾರಿಗಳಿಗೆ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಹುಟ್ಟುಹಬ್ಬದ ನಿಮಿತ್ತ ಬೈಲಹೊಂಗಲದ ಶಾಸಕ ಮಹಾಂತೇಶ ದೊಡಗೌಡರ ಹುಟ್ಟು ಹಬ್ಬದ ಹಿನ್ನೆಲೆ ಅವ್ರ ಮನೆಗೆ ತೆರಳಿ ಪುಷ್ಪವೃಷ್ಠಿ ಮಾಡಿದ್ದ ಪೋಲಿಸರಿಗೆ ಬಿಸಿ ಮುಟ್ಟಿಸಲಾಗಿದೆ.
ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ಬೈಲಹೊಂಗಲ ಠಾಣೆ ಸಿಪಿಐ ಯು.ಬಿ. ಸಾತೇನಹಳ್ಳಿ, ನೇಸರ್ಗಿ ಠಾಣೆ ಪಿಎಸ್ಐ ಯಲ್ಲಪ್ಪ ಶೀಗಿಹಳ್ಳಿ, ಗುಪ್ತಚರ ಇಲಾಖೆಯ ವಿಶ್ವನಾಥ ಮಲ್ಲನ್ನವರ, ಪೇದೆ ಮಂಜುನಾಥಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.