ಯಲ್ಲಾಪುರ: ಸಮೀಪದ ಅರೆಬೈಲ್ ಘಟ್ಟದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಪರಿಣಾಮ ಭಾರೀ ಆತಂಕ ಮನೆಮಾಡಿತ್ತು.

ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ, ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಇದಾಗಿದ್ದು, ಸ್ಥಳಕ್ಕೆ ತಕ್ಷಣದಲ್ಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದರಿಂದ ಗ್ಯಾಸ್ ಲೀಕ್ ಆಗದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದಿದ್ದಾರೆ. ಹೀಗಾಗಿ, ಕೆಲ ಹೊತ್ತು ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಬಂದ್ ಆಗಿತ್ತು.

error: Content is protected !!