ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಾಗಂತ, ವಿಕ್ರಂ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಬೆಳಿಗ್ಗೆಯೆ ತೀವ್ರ ಹೃದಯಾಘಾತದಿಂದ ಪುನಿತ್ ರಾಜಕುಮಾರ್, ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಕ್ರಂ ಆಸ್ಪತ್ರೆಯಲ್ಲಿ ಅಪ್ಪು ಕೊನೆಯುಸಿರು. ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪುನಿತ್ ವಿಧಿವಶರಾಗಿದ್ದಾರೆ. ಗಣ್ಯರ ದಂಡು ಆಸ್ಪತ್ರೆಯತ್ತ..! ಇನ್ನು ನಟ ಪುನಿತ್ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಅಂತಾ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ, ಚಿತ್ರರಂಗದ ಗಣ್ಯರು ಆಸ್ಪತ್ರೆ ಬಳಿ ಬೀಡು ಬಿಟ್ಟಿದ್ದಾರೆ. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗ ದಾವಿಸಿಸಯತ್ತಿದ್ದು, ಆಸ್ಪತ್ರೆ ಹಾಗೂ ಪುನಿತ್ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Top Stories
ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು..!
ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ; ಬಿಬಿಎಂಪಿ..!
ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ..!
ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಮೂಲಕ ರೂ. 1095 ಕೋಟಿ ನೆರವು..!
ಗೋಕರ್ಣದಲ್ಲಿ ಡಿಜಿಟಲ್ ಪೊಲೀಸ್ ವ್ಯವಸ್ಥೆ : ಎಸ್ಪಿ ನಾರಾಯಣ್
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಮುಂಗಾರಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಸೂಚನೆ ಪಾಲಿಸಿ : ಸಿಡಿಲಿನಿಂದ ರಕ್ಷಿಸಿಕೊಳ್ಳಿ..!
ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!
ಕೊಲ್ಕೊತ್ತಾದ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ತಿವಿ, ಆತ್ಮಹತ್ಯಾ ಬಾಂಬ್, ತಾಲಿಬಾನಿ ಶೈಲಿಯ ದಾಳಿ ಮಾಡ್ತಿವಿ ಅಂತ ಅಂದವನು ಯಾರೀತ..?
ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು ‘ಸಹಾಯ’ ಮಾಡಿದ್ದೇವೆ..! ಕದನ ವಿರಾಮಕ್ಕೆ ನಾವೇ ಕಾರಣ ಅಂದ “ದೊಡ್ಡಣ್ಣ”
ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ
ಭಾರತದ ವಾಯುದಾಳಿಗೆ ನಡುಗಿದ ನೂರ್ ಖಾನ್, ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್ ನಲ್ಲಿ ಅಡಗಿದ ಪಾಕ್ ಸೇನಾ ಮುಖ್ಯಸ್ಥ
ಬೆಳಗಾವಿಯ ಸಂತಿ ಬಸ್ತವಾಡದ ಮಸೀದಿಯಲ್ಲಿನ ಕುರಾನ್ ಸುಟ್ಟು ಹಾಕಿದ ಕಿಡಿಗೇಡಿಗಳು, ಪ್ರತಿಭಟನೆ..!
ನಟ ಪುನಿತ್ ರಾಜಕುಮಾರ್ ಇನ್ನು ನೆನಪು ಮಾತ್ರ..! ಬಾರದ ಲೋಕಕ್ಕೆ ತೆರಳಿದ “ಅಪ್ಪು”
ಕೆಲವೇ ಹೊತ್ತಲ್ಲಿ ಸಿಎಂ ಬೊಮ್ಮಾಯಿ ನಟ ಶಿವಣ್ಣನ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಲಿರೋ ಸಿಎಂ..!
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ನಟ ಪುನಿತ್ ರಾಜಕುಮಾರ್ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ನಟ ಶಿವರಾಜ್ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಮಾಹಿತಿ ಲಭ್ಯವಾಗಿದೆ. ವಿಕ್ರಂ ಆಸ್ಪತ್ರೆಯ ವೈದ್ಯರಿಂದ ಅಪ್ಪುವಿನ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದುಕೊಂಡಿರೋ ಸಿಎಂ ಹಾಗೂ ಶಿವರಾಜ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಚಿತ್ರಣ ನೀಡೋ ಸಾಧ್ಯತೆ ಇದೆ ಎನ್ನಲಾಗಿದೆ.
ನಟ ಪುನಿತ್ ರಾಜಕುಮಾರ್ ಸ್ಥಿತಿ ಗಂಬೀರ ಹಿನ್ನೆಲೆ, ಭಜರಂಗಿ-2 ಚಿತ್ರ ಪ್ರದರ್ಶನ ರದ್ದು..!
ಬೆಂಗಳೂರು: ನಟ ಪುನಿತ್ ರಾಜಕುಮಾರ್ ತೀವ್ರ ಗಂಭೀರ ಹಿನ್ನೆಲೆಯಲ್ಲಿ ಇವತ್ತಷ್ಟೇ ರಾಜ್ಯಾಧ್ಯಂತ ತೆರೆಕಂಡಿದ್ದ ಶಿವರಾಜ್ ಕುಮಾರ್ ಅಭಿನಯದ, ಭಜರಂಗಿ- 2 ಚಿತ್ರ ಪ್ರದರ್ಶನ ರದ್ದು ಪಡಿಸಲಾಗಿದೆ, ಸಂಜೆ 4 ಗಂಟೆಯಿಂದ ರಾಜ್ಯಾಧ್ಯಂತ ಚಿತ್ರ ಪ್ರದರ್ಶನ ರದ್ದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇವತ್ತು ಬೆಳಿಗ್ಗೆಯಷ್ಟೇ ತೆರೆಕಂಡಿದ್ದ ಭಜರಂಗಿ-2 ಟೀಂ ಗೆ ಖುದ್ದು ಪುನಿತ್ ರಾಜಕುಮಾರ್ ಶುಭಕೋರಿದ್ದರು
ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತ, ಆರೋಗ್ಯ ಕ್ಷೀಣ,ಕ್ಷೀಣ..! ಅಭಿಮಾನಿಗಳ ಆಕ್ರಂಧನ..!
ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತ. ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಲೇ ಸಾಗಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಾವೂ ಎಲ್ಲಾ ರೀತಿಯ ಚಿಕಿತ್ಸೆ ಮಾಡುತ್ತಿದ್ದೇವೆ ಅಂತಾ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ರಂಗನಾಥ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕ್ಷಣ ಕ್ಷಣಕ್ಕೂ ಅಪ್ಪುವಿನ ಆರೋಗ್ಯ ಗಂಭೀರವಾಗುತ್ತಲೇ ಸಾಗಿದೆ ಅಂತಾ ಮಾಹಿತಿ ಲಭ್ಯವಾಗ್ತಿದೆ. ಗಣ್ಯರ ದಂಡು ಆಸ್ಪತ್ರೆಯತ್ತ..! ಇನ್ನು ನಟ ಪುನಿತ್ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಅಂತಾ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ, ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಹಾಗೂ ಪುನಿತ್ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದೇನಿದು ಮುಂಡಗೋಡ ಬಿಜೆಪಿಯಲ್ಲಿ ಒಳಗುದಿ..? ಯುವ ಮೊರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ ರಾಜೀನಾಮೆ..!
ಮುಂಡಗೋಡ ಬಿಜೆಪಿಯಲ್ಲಿನ ಒಳಬೇಗುದಿ ಸಧ್ಯಕ್ಕೆ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣ್ತಿಲ್ಲ. ಇಲ್ಲಿನ ಸ್ಥಳೀಯ ಮುಖಂಡರ ಒಳಗೊಳಗಿನ ತಿಕ್ಕಾಟಕ್ಕೆ ಬಿಜೆಪಿ ಬಸವಳಿದು ಹೋಗ್ತಿದೆ. ಅಷ್ಟಕ್ಕೂ ಇದನ್ನೇಲ್ಲ ಇಲ್ಲಿ ಯಾಕೆ ಹೇಳ್ತಿದಿವಿ ಅಂದ್ರೆ, ಮುಂಡಗೋಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಗಣೇಶ ಶಿರಾಲಿ ರಾಜೀನಾಮೆ ನೀಡಿ ಎದ್ದು ಹೋಗೋ ಮಾತಾಡಿದ್ದಾರೆ. ಎಲ್ರಿಗೂ ಥ್ಯಾಂಕ್ಸ್..! ಅಂದಹಾಗೆ, ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ್ತಿನಿ ಅಂತಾ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ. ಇದಷ್ಟೇ ಆಗಿದ್ದಿದ್ರೆ ಅದೇನೋ ಬಿಡಿ ಅಂತಾ ಸುಮ್ಮನಿರಬಹುದಿತ್ತು. ಆದ್ರೆ ಗಣೇಶ್ ಶಿರಾಲಿ ತಮ್ಮ ಸ್ಟೇಟಸ್ ನಲ್ಲಿ ಬರೆದುಕೊಂಡಿರೋ ಮಾತುಗಳು ನಿಜಕ್ಕೂ ಬೆರಗು ಹುಟ್ಟಿಸತ್ತೆ. ಗಣೇಶ್ ಬರೆದುಕೊಂಡಿದ್ದಿಷ್ಟು..! ಕಳೆದ ಎರಡು ವರ್ಷಗಳಿಂದ ಯುವ ಮೋರ್ಚಾದ ಅಧ್ಯಕ್ಷನಾಗಿ ಪಕ್ಷದ ನಿಷ್ಠಾವಂತನಾಗಿ ಕಾರ್ಯಕರ್ತನಾಗಿ ಪಕ್ಷ ನೀಡಿದ ಕೆಲಸವನ್ನು ಮಾಡಿದ್ದೇನೆ.ಕೆಲವು ನಾಯಕರ ನಮ್ಮ ಏಳಿಗೆಯನ್ನು ಸಹಿಸದೆ ಕಾರ್ಯಕರ್ತರು ಪಕ್ಷದ ಹಿರಿಯರಲ್ಲಿ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕಾರಣದಿಂದ...
ಇಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವ ಪೂರ್ವ ತಯಾರಿ ಮೆರವಣಿಗೆ..!
ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮರವಣಿಗೆ ನಡೆಸಿದ್ರು.. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮೆರವಣಿಗೆ ನಡೆಸಲಾಗ್ತಿದೆ.. ಕನ್ನಡ ನಾಡು ನುಡಿಗಾಗಿ ದುಡಿದ ಮಹನೀಯರ ವೇಷ ಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.. ಕನ್ನಡಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕನ್ನಡಾಂಬೆಯ ನಾಡು ನುಡಿಯ ಬಗ್ಗೆ ಜಯಘೋಷ ಮೊಳಗಿಸಿದ್ರು..
ಹುನಗುಂದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವ ಪೂರ್ವ ತಯಾರಿ ಮೆರವಣಿಗೆ..!
ಮುಂಡಗೋಡ: ತಾಲೂಕಿನ ಹುನಗುಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮರವಣಿಗೆ ನಡೆಸಿದ್ರು. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮೆರವಣಿಗೆ ನಡೆಸಲಾಗ್ತಿದೆ.. ಕನ್ನಡ ನಾಡು ನುಡಿಗಾಗಿ ದುಡಿದ ಕಿತ್ತೂರು ಚೆಮ್ಮಮ್ಮ, ಸಿದ್ಧಗಂಗಾ ಶಿವಕುಮಾರ ಶ್ರೀಗಳು ಸೇರಿದಂತೆ ಮಹನೀಯರ ವೇಷ ಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.. ಕನ್ನಡಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕನ್ನಡಾಂಬೆಯ ನಾಡು ನುಡಿಯ ಬಗ್ಗೆ ಜಯಘೋಷ ಮೊಳಗಿಸಿದ್ರು. ಈ ವೇಳೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.
ಕುಮಟಾದಲ್ಲಿ ಪತ್ತೆಯಾಗಿದ್ದು ಬಾಂಬ್ ಅಲ್ಲವಾ..?
ಕುಮಟಾ- ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ವಸ್ತು ಬಾಂಬ್ ಅಲ್ಲ, ನಕಲಿ ಬಾಂಬ್ ಅಂತಾ ತನಿಖೆಯ ನಂತರ ಖಚಿತಗೊಂಡಿದೆ. ಪತ್ತೆಯಾದ ವಸ್ತು ನಕಲಿ ಬಾಂಬ್ ಆಗಿದ್ದು, ವಸ್ತುವಿನಲ್ಲಿ ಯಾವುದೇ ರೀತಿಯ ಸ್ಪೋಟಕ ಇರಲಿಲ್ಲ ಅಂತಾ, ವಸ್ತುವನ್ನ ಬಿಚ್ಚಿ ಪರಿಶೀಲನೆ ನಡೆಸಿದ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ತಿಳಿಸಿದ್ದಾರೆ. ನಿನ್ನೆ ಸಂಜೆ ವೇಳೆ ಪತ್ತೆಯಾಗಿದ್ದ ಬಾಂಬ್ ಮಾದರಿ ವಸ್ತುವಿನಿಂದ ಕುಮಟಾ ಪಟ್ಟಣದಲ್ಲಿ ಭಾರೀ ಆತಂಕ ಎದುರಾಗಿತ್ತು. ನಿನ್ನೆಯಿಂದಲೂ ಸ್ಥಳದಲ್ಲೇ ಪೊಲೀಸ್ ತಂಡ ಬೀಡು ಬಿಟ್ಟಿದ್ದವು. ಎಸ್ಪಿ ಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಮನವಿ..!
ಮುಂಡಗೋಡ: ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರು, ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿ ನೀಡಬೇಕೆಂದು, ಮುಂಡಗೋಡ ತಹಶೀಲ್ದಾರ್ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆಯಲ್ಲಿ ಅಯ್ಯಪ್ಪ ಬಜಂತ್ರಿ. ಶಿವಣ್ಣ ಕುಂದರಗಿ. ಪಿರಜ್ಜಾ ಸಾಗರ್. ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ. ನಿಗಪ್ಪ ಕುರಬರ, ಪ್ರಕಾಶ್ ಕೊರವರ್, ಕೈಲಾಶ್ ಗಜಕೋಷ್, ಸಂಕೇತ್ ಗೌಡರ್, ಶ್ರೀನಿವಾಸ್ ಹುಲಗೂರ್ ಸೇರಿ ಹಲವರು ಹಾಜರಿದ್ದರು.
ಕಾಲೇಜು ಆವರಣದಲ್ಲೇ ಬಾಂಬ್ ಮಾದರಿಯ ವಸ್ತು ಪತ್ತೆ, ಆತಂಕದಲ್ಲಿದೆ ತಾಲೂಕಿನ ಜನತೆ..!
ಕುಮಟಾ- ಕಾಲೇಜು ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಂಜೆ ವಾಯುವಿಹಾರಕ್ಕೆ ತೆರಳಿದ್ದವರ ಕಣ್ಣಿಗೆ ಬಿದ್ದಿದ್ದ ಬಾಂಬ್ ಮಾದರಿ ವಸ್ತು ಗಮನಿಸಿದ ಸ್ತಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸ್ ದೌಡಾಯಿಸಿ, ಪರಿಶೀಲನೆ ಕೈಗೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ಬೀಡು ಬಿಟ್ಟಿದೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಆಗಮಿಸೋ ಸಾಧ್ಯತೆಯಿದೆ. ಬಾಂಬ್ ಮಾದರಿಯ ವಸ್ತು ಸಿಕ್ಕಿದ್ದು ಕುಮಟಾ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.