ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಮೂಲಕ ರೂ. 1095 ಕೋಟಿ ನೆರವು..!

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.99.91 ರಷ್ಟು ಸಾಧನೆ ಮಾಡಿದ್ದು, ಇದುವರೆಗೆ 1095.03 ಕೋಟಿ ರೂ ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 3,61,481 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವ ಕಾರಣದಿಂದ 25,676 ಮಂದಿ ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿದ್ದು , ಬಾಕಿ ಉಳಿದ ಅರ್ಹ 3,35,805 ಪಡಿತರ ಚೀಟಿಗಳಲ್ಲಿ 3,35,498 ಮಂದಿಯನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.99.91 ಸಾಧನೆ ಮಾಡಲಾಗಿದೆ.

ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!

ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿರುವವರಲ್ಲಿ 10,377 ಮಂದಿ ಆದಾಯ ತೆರಗೆ ಮತ್ತು ಜಿ.ಎಸ್.ಟಿ ಪಾವತಿದಾರರು, 4875 ಮಂದಿ ಮರಣ ಹೊಂದಿರುವವರು, 7503 ಮಂದಿ ವಲಸೆ ಹೋಗಿರುವವರು, 1779 ನಿಷ್ಕ್ರಿ೫ಲಯೆಗೊಂಡ ಪಡಿತರ ಚೀಟಿಗಳು ಮತ್ತು ನಿರಾಕರಣೆ ಮಾಡಿರುವ 1140 ಮಂದಿ ಒಳಗೊಂಡಿದ್ದಾರೆ.

ಯೋಜನೆಯಡಿಯಲ್ಲಿ ಅಂಕೋಲಾ ತಾಲೂಕಿನಲ್ಲಿ 26,973 ಫಲಾನುಭವಿಗಳನ್ನು ನೋಂದಾಯಿಸಿದ್ದು, ಭಟ್ಕಳದಲ್ಲಿ 33,858, ದಾಂಡೇಲಿಯಲ್ಲಿ 13,931, ಹಳಿಯಾಳದಲ್ಲಿ 29,739, ಹೊನ್ನಾವರದಲ್ಲಿ 39,853, ಕಾರವಾರದಲ್ಲಿ 32,728, ಕುಮಟಾದಲ್ಲಿ 37,299, ಮುಂಡಗೋಡದಲ್ಲಿ 24,450, ಸಿದ್ದಾಪುರದಲ್ಲಿ 23,720, ಶಿರಸಿಯಲ್ಲಿ 41,326, ಸೂಪಾದಲ್ಲಿ 12,886, ಯಲ್ಲಾಪುರದಲ್ಲಿ 18,735 ಮಂದಿಯನ್ನು ನೋಂದಾಯಿಸಲಾಗಿದೆ.

ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ

ಅಂಕೋಲಾ ತಾಲೂಕಿನ ಫಲಾನುಭವಿಗಳಿಗೆ ಇದುವರೆಗೆ ರೂ. 88.02 ಕೋಟಿ, ಭಟ್ಕಳದಲ್ಲಿ 108.35 ಕೋಟಿ, ದಾಂಡೇಲಿಯಲ್ಲಿ 43.9 ಕೋಟಿ, ಹಳಿಯಾಳದಲ್ಲಿ 98.08 ಕೋಟಿ, ಹೊನ್ನಾವರದಲ್ಲಿ 131.67 ಕೋಟಿ, ಕಾರವಾರದಲ್ಲಿ 104.93 ಕೋಟಿ, ಕುಮಟಾದಲ್ಲಿ 124.15 ಕೋಟಿ, ಮುಂಡಗೋಡದಲ್ಲಿ 80.56 ಕೋಟಿ, ಸಿದ್ದಾಪುರದಲ್ಲಿ 77.83 ಕೋಟಿ, ಶಿರಸಿಯಲ್ಲಿ 135.72 ಕೋಟಿ, ಸೂಪಾದಲ್ಲಿ 40.27 ಕೋಟಿ, ಯಲ್ಲಾಪುರದಲ್ಲಿ 61.55 ಕೋಟಿ ರೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ರೂ.1095.03 ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಜೀವನೋಪಾಯಕ್ಕಾಗಿ ಕ್ಯಾಟರಿಂಗ್ ಮಾಡಿಕೊಂಡಿದ್ದ ನಾನು, ಕರೋನ ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರವಿಲ್ಲದೆ ಅನಿವಾರ್ಯವಾಗಿ ಕ್ಯಾಟರಿಂಗ್‌ನ್ನು ಮುಚ್ಚಿ, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದೆ. ಸರಕಾರದ ಪಂಚ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗಾಗಿ ಪ್ರತಿ ತಿಂಗಳು ರೂ. 2000 ವಿತರಣೆಯ ಪ್ರಯೋಜನವನ್ನು ಪಡೆದುಕೊಂಡು ಪುನಃ ತಮ್ಮ ಕ್ಯಾಟರಿಂಗ್‌ನ್ನು ಪ್ರಾರಂಭಿಸಿ ಸ್ಥಳೀಯವಾಗಿ ನಡೆಯುವ ಮದುವೆ, ಉಪನಯನ, ನಿಶ್ಚಿತಾರ್ಥ, ಹುಟ್ಟುಹಬ್ಬ ಆಚರಣೆ, ಪಂಚಾಯತ್ ಹಾಗೂ ಇತರೆ ಸರಕಾರಿ ಕಚೇರಿಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಹಾರದ ವ್ಯವಸ್ಥೆಗಳನ್ನು ಮಾಡುವುದರೊಂದಿಗೆ ಆರ್ಥಿಕ ಸಬಲೀಕರಣವನ್ನು ಸಾಧಿಸಿದ್ದೇನೆ. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಹನಿಯಾಗಿ ಬಂದ ರೂ.2,000 ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಂಡಿದೆ. ನನಗೆ ಮಾತ್ರವಲ್ಲ ಪ್ರತಿಯೊಬ್ಬ ಮಹಿಳೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಮತ್ತು ಅವರ ಅನೇಕ ಕಸನುಗಳನ್ನು ನನಸು ಮಾಡಿಕೊಳ್ಳಲು ಗೃಹಲಕ್ಷ್ಮೀ ಯೋಜನೆ ನೆರವಾಗಿದೆ:

ಸುರೇಖಾ ವಾಲೇಕರ್, ಕೊಡಕಣಿ ಗ್ರಾಮ, ಕುಮಟಾ ತಾಲೂಕು

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.99.91 ಗುರಿ ಸಾಧಿಸಿದ್ದು, ಸಂಪೂರ್ಣ ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರಸ್ತುತ ನೋಂದಣಿಗೆ ಬಾಕಿ ಇರುವವರಲ್ಲಿ ಹಾಸಿಗೆ ಹಿಡಿದಿರುವವರನ್ನು ಅವರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು ನೋಂದಾಯಿಸಲಾಗಿದ್ದು, ಪಡಿತರ ಚೀಟಿಗೆ ಕೆವೈಸಿ ಆಗದೇ ಇರುವವರು ಮತ್ತು ಇತರೇ ತಾಂತ್ರಿಕ ಸಮಸ್ಯೆ ಇರುವ ಪಡಿತರ ಚೀಟಿಗಳ ಸಮಸ್ಯೆಗಳನ್ನು ಬಗೆಹರಿಸಿ ಜಿಲ್ಲೆಯ ಅರ್ಹ ಎಲ್ಲಾ ಫಲಾನುಭವಿಗಳಿಗೂ ಯೋಜನೆಯ ನೆರವು ಒದಗಿಸಿ ಅತ್ಯಂತ ಶೀಘ್ರದಲ್ಲಿ ಶೇ.100 ರಷ್ಟು ಗುರಿ ಸಾಧನೆ ಮಾಡಲಾಗುವುದು :

ವಿರೂಪಾಕ್ಷ ಗೌಡ ಪಾಟೀಲ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ.

error: Content is protected !!