ಕುಮಟಾ- ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ವಸ್ತು ಬಾಂಬ್ ಅಲ್ಲ, ನಕಲಿ ಬಾಂಬ್ ಅಂತಾ ತನಿಖೆಯ ನಂತರ ಖಚಿತಗೊಂಡಿದೆ.

ಪತ್ತೆಯಾದ ವಸ್ತು ನಕಲಿ ಬಾಂಬ್ ಆಗಿದ್ದು, ವಸ್ತುವಿನಲ್ಲಿ ಯಾವುದೇ ರೀತಿಯ ಸ್ಪೋಟಕ‌ ಇರಲಿಲ್ಲ ಅಂತಾ, ವಸ್ತುವನ್ನ ಬಿಚ್ಚಿ ಪರಿಶೀಲನೆ ನಡೆಸಿದ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ತಿಳಿಸಿದ್ದಾರೆ.

ನಿನ್ನೆ ಸಂಜೆ ವೇಳೆ ಪತ್ತೆಯಾಗಿದ್ದ ಬಾಂಬ್ ಮಾದರಿ ವಸ್ತುವಿನಿಂದ ಕುಮಟಾ ಪಟ್ಟಣದಲ್ಲಿ ಭಾರೀ ಆತಂಕ ಎದುರಾಗಿತ್ತು. ನಿನ್ನೆಯಿಂದಲೂ ಸ್ಥಳದಲ್ಲೇ ಪೊಲೀಸ್ ತಂಡ ಬೀಡು ಬಿಟ್ಟಿದ್ದವು. ಎಸ್ಪಿ ಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.