ನಟ ಪುನಿತ್ ರಾಜಕುಮಾರ್ ಇನ್ನು ನೆನಪು ಮಾತ್ರ..! ಬಾರದ ಲೋಕಕ್ಕೆ ತೆರಳಿದ “ಅಪ್ಪು”

ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಾಗಂತ, ವಿಕ್ರಂ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಬೆಳಿಗ್ಗೆಯೆ ತೀವ್ರ ಹೃದಯಾಘಾತದಿಂದ ಪುನಿತ್ ರಾಜಕುಮಾರ್, ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು‌. ಚಿಕಿತ್ಸೆ ಫಲಕಾರಿಯಾಗದೆ ವಿಕ್ರಂ ಆಸ್ಪತ್ರೆಯಲ್ಲಿ ಅಪ್ಪು ಕೊನೆಯುಸಿರು.

ಆಸ್ಪತ್ರೆಯಲ್ಲಿ ಪುನಿತ್ ಪಾರ್ಥೀವ ಶರೀರ

ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪುನಿತ್ ವಿಧಿವಶರಾಗಿದ್ದಾರೆ.

ಗಣ್ಯರ ದಂಡು ಆಸ್ಪತ್ರೆಯತ್ತ..!
ಇನ್ನು ನಟ ಪುನಿತ್ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಅಂತಾ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ, ಚಿತ್ರರಂಗದ ಗಣ್ಯರು ಆಸ್ಪತ್ರೆ ಬಳಿ ಬೀಡು ಬಿಟ್ಟಿದ್ದಾರೆ. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗ ದಾವಿಸಿಸಯತ್ತಿದ್ದು, ಆಸ್ಪತ್ರೆ ಹಾಗೂ ಪುನಿತ್ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

error: Content is protected !!