ಛತ್ತೀಸಗಡದಲ್ಲಿ ಬಾಂಬ್ ಸ್ಪೋಟ, ಹಾನಗಲ್ಲಿನ CRPF ಯೋಧ ಹುತಾತ್ಮ, ಗರ್ಭಿಣಿ ಪತ್ನಿಗೆ, ತಂದೆ ತಾಯಿಗೆ ಮಗನ ಸಾವಿನ ಸುದ್ದಿಯೇ ತಿಳಿದಿಲ್ಲ ಕಣ್ರಿ..!

ಛತ್ತೀಸಗಡದಲ್ಲಿ ಬಾಂಬ್ ಸ್ಪೋಟ, ಹಾನಗಲ್ಲಿನ CRPF ಯೋಧ ಹುತಾತ್ಮ, ಗರ್ಭಿಣಿ ಪತ್ನಿಗೆ, ತಂದೆ ತಾಯಿಗೆ ಮಗನ ಸಾವಿನ ಸುದ್ದಿಯೇ ತಿಳಿದಿಲ್ಲ ಕಣ್ರಿ..!

ಛತ್ತೀಸಗಡದಲ್ಲಿ ಸಂಭವಿಸಿದ್ದ ಬಾಂಬ್ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಹಾನಗಲ್ ತಾಲೂಕಿನ CRPF ಯೋಧ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ದುರಂತ ಅಂದ್ರೆ, ತನ್ನ ಮದುವೆ ವಾರ್ಷಿಕೋತ್ಸವದ ದಿನವೇ ಇಹಲೋಕ ತ್ಯಜಿಸಿರೋ ವೀರಯೋಧನ ಪತ್ನಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾರೆ. ತಂದೆ ತಾಯಿಗೆ ಸುದ್ದಿ ತಿಳಿಸಿಲ್ಲ..! ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಸೈನಿಕ, 26 ವರ್ಷ ವಯಸ್ಸಿನ ರವಿ ಕೆಳಗಿನಮನಿ ಎಂಬುವ ಯೋಧ ಹುತಾತ್ಮರಾಗಿದ್ದಾರೆ. ಇನ್ನು ಮತ್ತೊಂದು ಮನಕಲಕುವ ಸಂಗತಿಯೆಂದ್ರೆ, ತನ್ನ ಮಗನ ಸಾವಿನ ಸುದ್ದಿ ಆತನ ಪತ್ನಿಗೆ, ತಂದೆ-ತಾಯಿಗೆ ಹೇಳದೆ ಮುಚ್ಚಿಡಲಾಗಿದೆ. ಯಾಕಂದ್ರೆ, ಕಾರಣ 2 ಮೃತ ಯೊಧನ ಹೆಂಡತಿ ಅಶ್ವಿನಿ ಈಗ ಎರಡು ತಿಂಗಳ ಗರ್ಭಿಣಿ. ಮಾರ್ಚ 30 ರಂದು ಛತ್ತಿಸಗಡದಲ್ಲಿ ಬಾಂಬ್ ದಾಳಿಯಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಯೋಧ ರವಿ‌ ಇಂದು ಬೆಳಿಗ್ಗೆ ಚಿಕಿತ್ಸೆ ಫಲಸದೆ ಛತ್ತೀಸಗಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌. ಇನ್ನು, ಮೃತ ಯೋಧನ ಪಾರ್ಥೀವ ಶರೀರ ದೆಹಲಿಯಲಿಂದ ಕರ್ನಾಟಕಕ್ಕೆ ಇಂದು ಬರಲಿದೆ. ಹಾಗೆನೇ,...

ನೀವು ಕೊಟ್ಟ ಮತ ಮಾರಿಕೊಂಡು ಶ್ರೀಮಂತರಾಗಿದ್ದು “ಬಾಂಬೆ ಬಾಯ್ಸ್” ಪರೋಕ್ಷವಾಗಿ ಹೆಬ್ಬಾರ್ ವಿರುದ್ಧ ಶ್ರೀನಿವಾಸ್ ಮಾನೆ ವಾಗ್ದಾಳಿ..!

ನೀವು ಕೊಟ್ಟ ಮತ ಮಾರಿಕೊಂಡು ಶ್ರೀಮಂತರಾಗಿದ್ದು “ಬಾಂಬೆ ಬಾಯ್ಸ್” ಪರೋಕ್ಷವಾಗಿ ಹೆಬ್ಬಾರ್ ವಿರುದ್ಧ ಶ್ರೀನಿವಾಸ್ ಮಾನೆ ವಾಗ್ದಾಳಿ..!

  ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಿತ್ಯವೂ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಅದ್ರ ಜೊತೆ ನಿತ್ಯವೂ ಪಕ್ಷಾಂತರದ ಪರ್ವ ಚಾಲ್ತಿಯಲ್ಲಿದೆ. ಇವತ್ತು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪರ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅಬ್ಬರದ ಪ್ರಚಾರ ಕೈಗೊಂಡ್ರು. ಶ್ರೀನಿವಾಸ್ ಮಾನೆ ಪ್ರಚಾರ..! ಬೆಳಿಗ್ಗೆ ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಪ್ರಚಾರ ನಡೆಸಿದ ಶ್ರೀನಿವಾಸ್ ಮಾನೆ, ಬಾಂಬೆ ಬಾಯ್ಸ್ ಬಗ್ಗೆ ಲೇವಡಿ ಮಾಡಿದ್ರು. ನಿಮ್ಮ ಹತ್ತಿತ ಮತ ಪಡೆದ ಬಾಂಬೆ ಬಾಯ್ಸ್ ಆ ಮತವನ್ನು ಕೋಟಿ ಕೋಟಿಗೆ ಮಾರಿಕೊಂಡು ಶ್ರೀಮಂತರಾಗಿದ್ದಾರೆ, ಆದ್ರೆ ಮತ ಕೊಟ್ಟ ನಿಮ್ಮನ್ನೇಲ್ಲ ಬಡವರನ್ನಾಗಿಸಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಇನ್ನು, ಕಳೆದ ಹಾನಗಲ್ ಉಪ ಚುನಾವಣೆ ವೇಳೆ ಇಡೀ ಆಡಳಿತವೇ ನನ್ನ ಸೋಲಿಸಲು ಠಿಕಾಣಿ ಹೂಡಿದ್ರು, ಆದ್ರೆ ಅವತ್ತು ಪ್ರಬುದ್ಧ ಮತದಾರರು ನನ್ನ ಗೆಲ್ಲಿಸುವ ಮೂಲಕ ಬಿಜೆಪಿ ಆಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು ಅಂತಾ ಹೇಳಿದ್ರು....

ಯಲ್ಲಾಪುರ ವಿಧಾನಸಭಾ ಕ್ಷೇತ್ರ ನಾಲ್ವರು ಪಕ್ಷೇತರರು ಸೇರಿ ಒಟ್ಟೂ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರ ನಾಲ್ವರು ಪಕ್ಷೇತರರು ಸೇರಿ ಒಟ್ಟೂ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳೂ ಸೇರಿ ಒಟ್ಟೂ 10 ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಸಿದವರ ವಿವರ ಹೀಗಿದೆ. 1. ಅಂದಲಗಿ ವೀರಭದ್ರಗೌಡ ಪಾಟೀಲ್, ಕಾಂಗ್ರೆಸ್ 2. ಲಕ್ಷ್ಮಣ ಭೀಮಣ್ಣ ಬನಸೋಡೆ, ಕಾಂಗ್ರೆಸ್ ಬಂಡಾಯ 3. ಆನಂದ ಗಣಪತಿ ಭಟ್ಟ, ಪಕ್ಷೇತರ 4.ಅರಬೈಲ ಹೆಬ್ಬಾರ ಶಿವರಾಮ, ಬಿಜೆಪಿ 5.ನಾಗೇಶ ಹೊನ್ನಯ್ಯ ನಾಯ್ಕ, ಜೆಡಿಎಸ್ 6. ಸಂತೋಷ ಮಂಜುನಾಥ ಶೇಟ್ ರಾಯ್ಕರ, ಕೆಆರ್ ಪಿಪಿ 7.ಮಂಜುನಾಥ ಲವಾ ಕುಲುಮಕರ, ಆಮ್ ಆದ್ಮಿ ಪಾರ್ಟಿ 8. ಮಂಜುನಾಥ ಶಿರಹಟ್ಟಿ, ಕರ್ನಾಟಕ ರಾಷ್ಟ್ರ ಸಮಿತಿ 9.ಚಿದಾನಂದ ಹನ್ಮಂತಪ್ಪ ಹರಿಜನ, ಪಕ್ಷೇತರ 10. ಶೆಟ್ಟಪ್ಪ ಯಲ್ಲಪ್ಪ ಭೋವಿವಡ್ಡರ, ಪಕ್ಷೇತರ ಇವ್ರೆಲ್ಲರೂ ಯಲ್ಲಾಪುರ ವಿಧಾನಸಭೆಗೆ ಆಯ್ಕೆ ಬಯಸಿ ಸಧ್ಯ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಅಂತಿಮವಾಗಿ ಕಣದಲ್ಲಿ ಉಳಿಯೋದು ಯಾರ್ಯಾರು ಅನ್ನೋದು ಇನ್ನೇನು ಎರಡು ದಿನದಲ್ಲಿ ತಿಳಿಯಲಿದೆ.

ಕರುಳ ಕುಡಿಗಳನ್ನು ಕಳೆದುಕೊಂಡಿದ್ದ ಸಿರಿಗೆರಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಬ್ಬಾರ್..!

ಕರುಳ ಕುಡಿಗಳನ್ನು ಕಳೆದುಕೊಂಡಿದ್ದ ಸಿರಿಗೆರಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಬ್ಬಾರ್..!

ಮುಂಡಗೋಡ ತಾಲೂಕಿನ ಸಿರಿಗೇರಿಯಲ್ಲಿ ತಮ್ಮ ಕರುಳ ಕುಡಿಗಳನ್ನು ಕಳೆದುಕೊಂಡು ನೊಂದಿದ್ದ ಕುಟುಂಬಗಳಿಗೆ ಶಿವರಾಮ್ ಹೆಬ್ಬಾರ್ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಐವರು ಯುವಕರು ದುರಂತ ಸಾವು ಕಂಡಿದ್ದರು. ಹೀಗಾಗಿ, ಆ ಯುವಕರ ಕುಟುಂಬಗಳು ಅಕ್ಷರಶಃ ದಿಕ್ಕೆ ತೋಚದಂತಾಗಿದ್ದವು. ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ, ಅಜಯ ಬಾಬು ಜೋರೆ, ಕೃಷ್ಣ ಬಾಬು ಜೋರೆ ಹಾಗೂ ಆನಂದ್‌ ವಿಷ್ಣು ಕೋಕರೆ ಅವರ ಮನೆಗೆ ಭೇಟಿ ನೀಡಿದ ಶಿವರಾಮ್ ಹೆಬ್ಬಾರ್ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾನಿದ್ದಿನಿ ದೈರ್ಯ ಕಳೆದುಕೊಳ್ಳಬೇಡಿ ಅಂತಾ ಅಭಯ ನೀಡಿದ್ರು. ಘಟನೆ ತಿಳಿದು ಅತೀವ ದುಃಖವಾಗಿದೆ. ಕುಟುಂಬಕ್ಕೆ ಆಧಾರವಾಗಬೇಕಿದ್ದವರನ್ನು ಕಳೆದುಕೊಂಡಿರುವ ನಿಮಗೆ ದೇವರು ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ನಿಮ್ಮ ಕಷ್ಟದಲ್ಲಿ ನಾನೂ ಭಾಗಿ ಅಂತಾ ಹಬ್ಬಾರ್ ತಿಳಿಸಿದರು.

ಧಾರವಾಡದ ಕೋಟೂರಿನಲ್ಲಿ ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ, ಯುವಕರ ನಡುವಿನ ಸಣ್ಣ ಜಗಳ, ಕೊಲೆಯಲ್ಲಿ ಅಂತ್ಯ..!

ಧಾರವಾಡದ ಕೋಟೂರಿನಲ್ಲಿ ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ, ಯುವಕರ ನಡುವಿನ ಸಣ್ಣ ಜಗಳ, ಕೊಲೆಯಲ್ಲಿ ಅಂತ್ಯ..!

ಧಾರವಾಡ: ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ ಕಮ್ಮಾರ ಎಂಬುವವರೇ ಹತ್ಯೆಗೀಡಾದವರು. ನಿನ್ನೆ ರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಿಕಿತ್ಸೆಗಾಗಿ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ ಅಸುನೀಗಿದ್ದಾರೆ. ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಆಸ್ಪತ್ರೆಗೆ ಪ್ರಲ್ಹಾದ್ ಜೋಶಿ , ಎಸ್ ಪಿ ಭೇಟಿ.! ಇನ್ನು ಕೋಟೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಹತ್ಯೆ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮಕ್ಕೆ ಪೊಲೀಸ್ ವರಿಷ್ಣಾಧಿಕಾರಿ ಲೋಕೇಶ ಜಗಲಾಸರ್ ಭೇಟಿ ನೀಡಿದರು. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಿಜೆಪಿ ಯುವ ಮೋರ್ಚಾ ಮುಖಂಡನೂ ಆಗಿದ್ದ ಪ್ರವೀಣ ಕೊಲೆ ಹಿನ್ನಲೆ ಗ್ರಾಮದಲ್ಲಿ ಹೆಚ್ಚಿನ...

ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ, ಜನಸಾಗರದ ಮದ್ಯೆ ಬೃಹತ್ “ರೋಡ್ ಶೋ”

ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ, ಜನಸಾಗರದ ಮದ್ಯೆ ಬೃಹತ್ “ರೋಡ್ ಶೋ”

ಯಲ್ಲಾಪುರದಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ‌. ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್ ರೋಡ್ ಶೋ..! ಬೆಳಿಗ್ಗೆ ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದಲ್ಲಿ ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅಲ್ಲಿಂದಲೇ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಕೇಸರಿಮಯ..! ಇನ್ನು, ಕ್ಷೇತ್ರದಾದ್ಯಂತದಿಂದ ನೂರಾರು ವಾಹನಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಆಗಮಿಸಿದ್ರು. ಕೇಸರಿ ಶಾಲು, ಟೋಪಿ, ಹಾಗೂ ಬಿಜೆಪಿ ಧ್ವಜ ಹಿಡಿದು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ್ರು. ಜಯಘೋಷ ಕೂಗಿ ಸಂಭ್ರಮಿಸಿದ್ರು.

ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ, ಯಲ್ಲಾಪುರಕ್ಕೆ ಕಾರ್ಯಕರ್ತರ ದಂಡು..!

ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ, ಯಲ್ಲಾಪುರಕ್ಕೆ ಕಾರ್ಯಕರ್ತರ ದಂಡು..!

ಯಲ್ಲಾಪುರದಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ‌. ಸಾವಿರ ಸಾವಿರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಲಿರೋ ಹೆಬ್ಬಾರ್ ಯಲ್ಲಾಪುರದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ.. ಅಂದಹಾಗೆ, ಇಂದು‌ ಮಂಗಳವಾರ ಬಳಿಗ್ಗೆ 10 ಗಂಟೆಗೆ ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದಲೇ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ನೂರಾರು ವಾಹನಗಳು..! ಕ್ಷೇತ್ರದಾದ್ಯಂತ ನೂರಾರು ವಾಹನಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸೊ ಸಾಧ್ಯತೆ ಇದೆ. ಹೀಗಾಗಿ, ಇವತ್ತು ಯಲ್ಲಾಪುರದಲ್ಲಿ ಬಹುತೇಕ ಕೇಸರಿಮಯವಾಗುವ ಎಲ್ಲಾ ಸಾಧ್ಯತೆ ಇದೆ.

ಯಲ್ಲಾಪುರದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ  ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್..!

ಯಲ್ಲಾಪುರದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್..!

  ಯಲ್ಲಾಪುರ: ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಇಂದು ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಸೇರಿ ನಾಮಪತ್ರ ಸಲ್ಲಿಸಿದ್ರು. ಪತ್ನಿ ಸಮೇತ ಆಗಮಿಸಿದ್ದ ವಿ.ಎಸ್.ಪಾಟೀಲ್ ಯಲ್ಲಾಪುರದ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ರು. ಯಲ್ಲಾಪುರದ ಗ್ರಾಮದೇವತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಮಿನಿವಿಧಾನಸೌಧಕ್ಕೆ ಬಂದ ಪಾಟೀಲರು, ಅಲ್ಲಿ 12 ಗಂಟೆಯ ನಂತರ ನಾಮಪತ್ರ ಸಲ್ಲಿಸಿದ್ರು‌. ನಾಮಪತ್ರ ಸಲ್ಲಿಸಿದ ನಂತರ ಮತ್ತೆ ಮೆರವಣಿಗ ಮೂಲಕ ಕಾಂಗ್ರೆಸ್ ಕಾರ್ಯಾಲಯಕ್ಕೆ ಆಗಮಿಸಿದ ವಿ.ಎಸ್.ಪಾಟೀಲ್, ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ರು. ಈ ವೇಳೆ ಯಲ್ಲಾಪುರ, ಮುಂಡಗೋಡ, ಬನವಾಸಿ ಭಾಗದ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ರು.

ಕೊಪ್ಪ ಕಾಂಗ್ರೆಸ್ ನ ಹಿರಿಯ ಮುಖಂಡ ಪಿ.ಜಿ.ತಂಗಚ್ಚನ್ ಬಿಜೆಪಿ ಸೇರ್ಪಡೆ..!

ಕೊಪ್ಪ ಕಾಂಗ್ರೆಸ್ ನ ಹಿರಿಯ ಮುಖಂಡ ಪಿ.ಜಿ.ತಂಗಚ್ಚನ್ ಬಿಜೆಪಿ ಸೇರ್ಪಡೆ..!

ಮುಂಡಗೋಡ ತಾಲೂಕಿನ ಹಿರಿಯ ಕಾಂಗ್ರೆಸ್‌ ಮುಖಂಡ ಪಿ.ಜಿ. ತಂಗಚ್ಚನ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್‌ ಕಾರ್ಯಕರ್ತರು ಇಂದು ಬಿಜೆಪಿ ಸೇರ್ಪಡೆಯಾದರು. ಸಚಿವ ಶಿವರಾಮ ಹೆಬ್ಬಾರ್‌, ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಂಗಚ್ಚನ್ ಅವರು, ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಹಾಗೂ ಹಿರಿಯರನ್ನು ಕಡೆಗಣಿಸಿ ಅಗೌರವದಿಂದ ಕಾಣಲಾಗುತ್ತಿದೆ. ಆದ್ದರಿಂದ ಇಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಶಿವರಾಮ ಹೆಬ್ಬಾರ್‌ ಅವರ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್‌ ಟಿ ಪಾಟೀಲ್‌, ಯುವ ನಾಯಕ ವಿವೇಕ್‌ ಹೆಬ್ಬಾರ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಲಿಸಾ ಥಾಮಸ್‌, ಪ್ರಮುಖರಾದ ರಾಮು ಲಮಾಣಿ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಚವಡಳ್ಳಿಯಲ್ಲಿ ಬಿಜೆಪಿಗೆ ಮರ್ಮಾಘಾತ, ಬಿಜೆಪಿ ಘಟಕದ ಅಧ್ಯಕ್ಷ ನಿಂಗಜ್ಜ ಕೋಣನಕೇರಿ ಸೇರಿದಂತೆ ನೂರಾರು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

ಚವಡಳ್ಳಿಯಲ್ಲಿ ಬಿಜೆಪಿಗೆ ಮರ್ಮಾಘಾತ, ಬಿಜೆಪಿ ಘಟಕದ ಅಧ್ಯಕ್ಷ ನಿಂಗಜ್ಜ ಕೋಣನಕೇರಿ ಸೇರಿದಂತೆ ನೂರಾರು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

  ಮುಂಡಗೋಡ ತಾಲೂಕಿನ ಚವಡಳ್ಳಿಯಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸಿದೆ. ಇದುವರೆಗೂ ಬಿಜೆಪಿಯ ನೆರಳಲ್ಲಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಸಲು, ಬಿಜೆಪಿ ಚವಡಳ್ಳಿ ಘಟಕದ ಅಧ್ಯಕ್ಷರೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದ್ರೊಂದಿಗೆ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅಂದಹಾಗೆ, ನಿಂಗಜ್ಜ ಕೋಣನಕೇರಿ ಚವಡಳ್ಳಿ ಭಾಗದ ಸಂಭಾವಿತ, ಪ್ರಭಾವಿ ಮುಖಂಡ. ಇವ್ರು ಬಿಜೆಪಿಯ ಚವಡಳ್ಳಿ ಘಟಕದ ಅಧ್ಯಕ್ಷರೂ ಆಗಿದ್ದವರು. ಆದ್ರೆ, ರವಿವಾರ ರಾತ್ರಿ ಬಿಜೆಪಿ ತೊರೆದಿದ್ದಾರೆ‌. ಇವ್ರೊಂದಿಗೆ ಇಬ್ಬರು ಗ್ರಾಪಂ ಸದಸ್ಯೆಯರು, ಸೊಸೈಟಿ ಸದಸ್ಯರುಗಳು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಇದ್ರಿಂದ ಈ ಭಾಗದಲ್ಲಿ ಬಿಜೆಪಿಗೆ ಭಾರಿ‌ ಮರ್ಮಾಘಾತ ನೀಡಿದ್ದಾರೆ. ಅಸಲು, ಮುಂಡಗೋಡ ತಾಲೂಕಿನಲ್ಲಿ ಈಗ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವವರು ಸಂಖ್ಯೆಗಿಂತ, ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರ ಸಂಖ್ಯೆಯೇ ಹೆಚ್ಚಾಗಿದೆ. ಇತ್ತಿಚೆಗಷ್ಟೇ ಬೆಡಸಗಾಂವ್ ನಲ್ಲಿ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್...

error: Content is protected !!