ಉಡುಪಿ: ಕರಾವಳಿ ಭಾಗದಲ್ಲಿ NIA ಕೇಂದ್ರ ಸ್ಥಾಪಿಸಲು ಹಿಂದೂ ಸಂಘಟನೆಗಳ ಒತ್ತಾಯ ಸರಿಯಾಗಿದೆ, ನಾನೂ ಲೋಕಸಭಾ ಸದಸ್ಯರ ಜೊತೆ ಮಾತನಾಡುತ್ತೇನೆ, ಮಂಗಳೂರು ಭಾಗದಲ್ಲಿ ಶಾಶ್ವತ NIA ಕೇಂದ್ರ ಸ್ಥಾಪನೆಗ ಸೂಕ್ತ ಕ್ರಮ ಕೈಗೊಳ್ಳಲು ಕೋರುತ್ತೇನೆ ಅಂತಾ ಉಡುಪಿಯಲ್ಲಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ಕರಾವಳಿ ಭಾಗದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಈ ಹಿಂದಿನಿಂದಲೂ ಅಂತಹ ಅನೇಕ ಘಟನೆಗಳು ನಡೆದಿವೆ. ಸಿರಿಯಾ ಜೊತೆ ಕರಾವಳಿ ಸಂಪರ್ಕ ಅತ್ಯಂತ ಅಚ್ಚರಿ ತಂದಿದೆ ಇದು ಅತ್ಯಂತ ಖಂಡನೀಯ ವಾದ ಸಂಗತಿ ಭಯೋತ್ಪಾಧಕ ಕೃತ್ಯಕ್ಕೆ ಸಹಕಾರ ಕೊಟ್ಟವರ ಸಂಪೂರ್ಣ ವಿಚಾರಣೆ ಯಾಗಬೇಕು ಅಂತಾ ಸುನೀಲ್ ಕುಮಾರ್ ಒತ್ತಾಯಿಸಿದ್ರು. ಇನ್ನು ಈ ಕುರಿತು ರಾಜ್ಯ ಸರ್ಕಾರದಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸುತ್ತೇನೆ, ಕರ್ನಾಟಕದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸೋದಕ್ಕೆ ಬಿಡೋದಿಲ್ಲ ಅಂತಾ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ರು.
Top Stories
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಿರಲಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಇಂದೂರಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ..!
ಮುಂಡಗೋಡ: ತಾಲೂಕಿನ ಇಂದೂರು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದೆ. ಇಂದೂರು ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭಟ್ಕಳದಲ್ಲಿ ಮತ್ತೆ NIA ದಾಳಿ; ಶಂಕಿತ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ..!
ಭಟ್ಕಳ: ಪಟ್ಟಣದಲ್ಲಿ ಮತ್ತೆ ಎನ್ಐಎ ದಾಳಿ ನಡೆದಿದೆ. ಭಯೋತ್ಪಾದನೆ ನಂಟಿನ ಆರೋಪದಡಿ ಇಲ್ಲಿನ ಉಮರ್ ಸ್ಟ್ರೀಟ್, ತೆಂಗಿನಗುಂಡಿ, ಸಾಗರ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿರೋ NIA ತಂಡ ಮೂವರನ್ನು ವಶಕ್ಕೆ ಪಡೆದಿದೆ. ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಕೃತ್ಯದಲ್ಲಿ ತೋಡಗಿದ್ದವನ ಸಹೋದರನನ್ನು NIA ಟೀಂ ವಶಕ್ಕೆ ಪಡೆದ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ದಾಳಿ ನಡೆಸಿರುವ ಎನ್ಐಎ ವಶಕ್ಕೆ ಪಡೆದಿರುವ ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಇನ್ನು, ಇಂತಹದ್ದೊಂದು ದಾಳಿ ವೇಳೆ ಜಿಲ್ಲಾ ಪೊಲೀಸರು ಸಾಥ್ ನೀಡಿದ್ದು, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ ದೇವರಾಜು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ದಾಳಿ ಹಿನ್ನಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಂದಿಕಟ್ಟಾದ “ಗಟಾರು ಸಮಸ್ಯೆ” ಪರಿಶೀಲಿಸಿದ ಸದಸ್ಯರು..! ಪಿಡಿಓ ಸಾಹೇಬ್ರೇ ನಿಮ್ಮ ನಿರ್ಲಕ್ಷ ಸರಿನಾ..?
ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದ್ದ ಪುಟ್ಟ ಬಾಲಕಿ ಗಟಾರಿನಲ್ಲಿ ಬಿದ್ದು ಒದ್ದಾಡಿದ ಘಟನೆಗೆ ಸಂಬಂಧಿಸಿದಂತೆ ಇಂದು ನಂದಿಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ಪಂಚಾಯತಿಗೆ ಬಂದರೂ ಘಟನಾ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ ತೋರಿದ್ದಾರೆ ಅಂತಾ ಕೆಲವ್ರು ಅಸಮಾಧಾನ ಹೊರ ಹಾಕಿದ್ರು. ಅವೈಜ್ಞಾನಿಕ ಗಟಾರು ನಿರ್ಮಾಣ..! ಇನ್ನು ಗಟಾರಗಳ ಅವ್ಯವಸ್ಥೆ ಕಣ್ಣಾರೆ ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ತಕ್ಷಣವೇ ಗಟಾರದ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ. ಕಳೆದ ವರ್ಷವಷ್ಟೇ 4 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದ್ದ ಪಕ್ಕಾ ಗಟಾರ ಕಾಮಗಾರಿ ಬಹುತೇಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರೋದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಅಂತಾ ಸದಸ್ಯರು ತಿಳಿಸಿದ್ದಾರೆ. ಹೀಗಾಗಿ ನಾಳೆ ಸಂಬಂಧಪಟ್ಟ ಇಂಜಿನೀಯರ್ ರವರನ್ನು ಕರೆಯಿಸಲು ತೀರ್ಮಾನಿಸಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರೋ ಗಟಾರನ್ನು ಅವಶ್ಯವಿದ್ದಲ್ಲಿ ಅಗೆದು ತೆರವುಗೊಳಿಸಿ ಮತ್ತೊಮ್ಮೆ ನಿರ್ಮಿಸಲು ಮುಂದಾಗಿದ್ದಾರೆ. ಅಂದಹಾಗೆ ಇದು ಪಬ್ಲಿಕ್ ಫಸ್ಟ್...
ಬೈಕ್ ಅಪಘಾತ: ಕುಬಿಹಾಳ ಗ್ರಾಮ ಪಂಚಾಯತ ಪಿಡಿಓ ಸಾವು..!
ಹುಬ್ಬಳ್ಳಿ: ಬೈಕ್ – ಕಾರ್ ನಡುವೆ ಮುಖಾ-ಮುಖಿಯಾಗಿ ಪಿಡಿಓ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರೂರ ಬ್ರಿಡ್ಜ್ ಬಳಿ ನಡೆದಿದೆ. ಕುಂದಗೋಳ ತಾಲೂಕಿನ ಸಂಶಿ ನಿವಾಸಿಯಾದ ಪ್ರಭುಗೌಡ ಬಸನಗೌಡ ತೇಂಬದಮನಿ ಮೃತ ಪಿಡಿಓ ಆಗಿದ್ದಾರೆ. ಕುಬಿಹಾಳ ಗ್ರಾಮ ಪಂಚಾಯತಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇವತ್ತು ಸಂಜೆ ಕೆಲಸ ಮುಗಿಸಿ ಊರ ಕಡೆ ಹೋಗುವಾಗ ಎದುರಿಗೆ ಬಂದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಗಟಾರಿನ ಕೊಳಚೆಯಲ್ಲಿ ಬಿದ್ದ ಮಗು: ಆ ಅಜ್ಜಿಯ ಸಮಯಪ್ರಜ್ಞೆಯಿಂದ ಬಚಾವ್..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಇವತ್ತು ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೇ ವರ್ಷದ ಪುಟ್ಟ ಕಂದಮ್ಮ ಕೊಳಚೆ ತುಂಬಿದ್ದ ಗಟಾರಿನಲ್ಲಿ ಬಿದ್ದು ಒದ್ದಾಡಿದೆ. ಅದೃಷ್ಟವಶಾತ್ ಹಾಗೆ ಬಿದ್ದ ಪುಟ್ಟ ಮಗುವನ್ನು ತಕ್ಷಣವೇ ಅಜ್ಜಿ ಮೇಲಕ್ಕೆತ್ತಿದ್ದಾರೆ. ಇಲ್ಲವಾಗಿದ್ದರೆ, ಪುಟ್ಟ ಮಗು ಈಗ ನೆನಪಾಗಿ ಉಳಿಯುತ್ತಿತ್ತು ಅಷ್ಟೆ. ಮಗು ಬದುಕಿದ್ದೇ ಪುಣ್ಯ..! ಹೌದು, ನಂದಿಕಟ್ಟಾ ಗ್ರಾಮದ ಮಕ್ಬುಲ್ ಖಾನ್ ಶಾಹಪುರ್ ಎಂಬುವರ, ಒಂದೂವರೇ ವರ್ಷದ ಪುಟ್ಟ ಬಾಲಕಿ ಇವತ್ತು ಮದ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮನೆಯ ಮುಂದೆ ಇರೋ ಗಟಾರಿನಲ್ಲಿ ಬಿದ್ದು ಬಿಟ್ಟಿದೆ ಕಂದಮ್ಮ. ಸಂಪೂರ್ಣ ಕೊಳಚೆ ನೀರು ತುಂಬಿಕೊಂಡಿರೋ ಗಟಾರದಲ್ಲಿ ಇನ್ನೇನು ಮುಳುಗುವ ಹಂತದಲ್ಲಿದ್ದ ಪುಟ್ಟ ಮಗುವಿನ ಚೀರಾಟ ಮನೆಯೊಳಗೆ ಇದ್ದ ಅಜ್ಜಿಗೆ ಕೇಳಿಸಿದೆ. ತಕ್ಷಣವೇ ಧಾವಿಸಿ ಬಂದ ಅಜ್ಜಿ ತನ್ನ ಮೊಮ್ಮಗುವನ್ನು ಎತ್ತಿಕೊಂಡಿದ್ದಾರೆ. ಹೀಗಾಗಿ, ಕೊಳಚೆ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದ ಬಾಲಕಿ, ಇನ್ನೇನು ನಿಸ್ತೇಜ ಸ್ಥಿತಿಗೆ ಬರುವ ಹಂತದಲ್ಲಿತ್ತು. ತಕ್ಷಣವೇ ಮಗುವನ್ನು ನೀರಿನಿಂದ...
ಆ ಯುವಕನನ್ನು ಬರ್ಬರವಾಗಿ ಕೊಂದು ಬೀಸಾಕಿ ಹೋದ್ರಾ ಹಂತಕರು..?
ಶಿಗ್ಗಾವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವನ ಕೊಲೆ ಮಾಡಿ ಶವ ಬೀಸಾಕಿರೋ ಘಟನೆ ನಡೆದಿದೆ. ಉಮೇಶ್ ನಂದೇಣ್ಣವರ್(32) ಎಂಬುವವನೇ ಕೊಲೆಯಾಗಿದ್ದ ವ್ಯಕ್ತಿಯಾಗಿದ್ದು. ಹಿರೇಬೆಂಡಿಗೇರಿ ಗ್ರಾಮದ ಹೊರವಲಯದ ಬೆಳಗಲಿ ರಸ್ತೆಯ ಜಮೀನಿನಲ್ಲಿ ಕೊಲೆ ಮಾಡಿರೋ ದುಷ್ಕರ್ಮಿಗಳು, ಶವ ಎಸೆದು ಹೋಗಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದಾದ ಸಾಧ್ಯತೆಯಿದ್ದು, ತಡಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇಂದೂರಿನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದು ಚಿರತೆ ಮರಿನಾ..?
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಇಬ್ಬರು ಮಹಿಳೆಯರ ಮೇಲೆ ಚಿರತೆ ಮರಿ ದಾಳಿ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಗದ್ದೆಯ ಕೆಲಸಕ್ಕಾಗಿ ಹೋಗುತ್ತಿದ್ದ ವೇಳೆ ಎರಡು ಮರಿಗಳೊಂದಿಗೆ ಚಿರತೆ ಅಲ್ಲಿ ಕಂಡುಬಂದಿತ್ತು ಎನ್ನಲಾಗಿದೆ. ಆ ವೇಳೆ ತಾಯಿ ಚಿರತೆ ಮುಂದೆ ಹೋಗಿದೆ. ಆದ್ರೆ ಚಿರತೆ ಮರಿಗಳು ಮಾತ್ರ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿವೆ ಎನ್ನಲಾಗಿದೆ. ಇಬ್ಬರು ಮಹಿಳೆಯರ ಮೇಲೆ ಮರಿ ದಾಳಿ ಮಾಡಿದೆ ಆದ್ರೆ, ಅದ್ರಲ್ಲಿ ಓರ್ವ ಮಹಿಳೆ ಗೀತಾ ನಾಗಪ್ಪ ದೊಡ್ಮನಿ ಎಂಬುವವರಿಗೆ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ದಾಳಿ ಮಾಡಿದ ವೇಳೆ ಮಹಿಳೆಯರು ಕಿರುಚಾಡಿದ್ದಾರೆ. ಹೀಗಾಗಿ ಅಲ್ಲೇ ಇದ್ದ ಸಾರ್ವಜನಿಕರು ಬಂದು ಮರಿ ಯನ್ನೂ ಅಲ್ಲಿಂದ ಓಡಿಸಿದ್ದಾರೆ ಎನ್ನಾಲಾಗಿದೆ. ಘಟನೆಯಲ್ಲಿ ಓರ್ವ ಮಹಿಳೆಯ ಮುಖಕ್ಕೆ ಹಾಗೂ ಮೂಗಿಗೆ ಗಾಯವಾಗಿದ್ದು. ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಕೊರೋನಾ ಕಂಟಕ; ಹೊಸ ಮಾರ್ಗಸೂಚಿ ಹೊರಡಿಸಿದ ಡಿಸಿ..!
ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಹೀಗಾಗಿ, ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಿಲ್ಲಾಧ್ಯಂತ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಏನದು ಮಾರ್ಗಸೂಚಿ..? ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಇನ್ನು ಮುಂದೆ ದೇವಾಲಯಗಳಲ್ಲಿ ಸೇವೆಗೆ ಅವಕಾಶವಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮದುವೆಗೆ 50 ಜನರಷ್ಟೇ..! ಇನ್ನು, ಮದುವೆಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮದುವೆಗಳಿಗೆ ಆಯಾ ತಾಲೂಕಿನ ತಹಸೀಲ್ದಾರರ ಪೂರ್ವ ಅನುಮತಿ ಕಡ್ಡಾಯವಾಗಿರುತ್ತದೆ. ಅಲ್ದೆ, ಮದುವೆಗೆ ಸೇರಿದವರ ಫೋನ್ ನಂಬರ್ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಮದುವೆಗೆ ಬಂದವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಲ್ಲಿ 2 ದಿನಗಳೊಳಗಾಗಿ ಕೋವಿಡ್ ಟೆಸ್ಟ್ ಕಡ್ಡಾಯ. ಪ್ರವಾಸಿ ತಾಣಗಳ ಮೇಲೆ ಕಣ್ಣು..! ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಬೀಚ್ ಗಳಲ್ಲಿ 2 ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಪ್ರವಾಸಿಗರು...
ಸಚಿವರಾಗಿ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು..!
ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಶಿವರಾಮ್ ಹೆಬ್ಬಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ಅಂದಹಾಗೆ, ಸಚಿವರಾಗಿ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು ಇವು..!