ಸಿಎಂ ಬೊಮ್ಮಾಯಿ ವಿರುದ್ಧ ಸಿಟ್ಟಾದ ಈಶ್ವರಪ್ಪ: ಬೆಳಗಾವಿಗೆ ಹೋಗ್ತಿನಿ, ಆದ್ರೆ ಅಧಿವೇಶನದಲ್ಲಿ ಭಾಗಿಯಾಗದೇ ಬಹಿಷ್ಕಾರ..!

ಸಿಎಂ ಬೊಮ್ಮಾಯಿ ವಿರುದ್ಧ ಸಿಟ್ಟಾದ ಈಶ್ವರಪ್ಪ: ಬೆಳಗಾವಿಗೆ ಹೋಗ್ತಿನಿ, ಆದ್ರೆ ಅಧಿವೇಶನದಲ್ಲಿ ಭಾಗಿಯಾಗದೇ ಬಹಿಷ್ಕಾರ..!

 ಬಾಗಲಕೋಟೆ: ಸಚಿವ ಸ್ಥಾನ ಸಿಗದ ಹಿನ್ನೆಲೆ ಬಹಿರಂಗವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ‌ ಮಾತನಾಡಿರೋ ಈಶ್ವರಪ್ಪ, ಹೈಕಮಾಂಡ್ ಹಾಗೂ ಸಿಎಂ ನಡೆಗೆ ಬೇಸರವಾಗಿದೆ, ಅವರ ನಡೆ ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ.. ಅದಕ್ಕೆ ಈಗ ನಾನು ಅಧಿವೇಶನದಲ್ಲಿ ಭಾಗಿಯಾಗದೇ ಸೌಜನ್ಯದ ಪ್ರತಿಭಟನೆ ನಡೆಸುತ್ತಿದ್ದೆನೆ ಅಂದ್ರು. ನಾನು ಬೆಳಗಾವಿಗೆ ಹೋಗ್ತೇನೆ ಆದ್ರೆ ಅಧಿವೇಶನಕ್ಕೆ ಹೋಗಲ್ಲ. ಅಧಿವೇಶನದಲ್ಲಿ ನಾನು ಇರಲ್ಲ ಅಂತ ಅಧ್ಯಕ್ಷರಿಗೆ ಪತ್ರ ಕೊಟ್ಟು, ಪರಮಿಷನ್ ತೆಗೆದುಕೊಳ್ಳೋಕೆ ಹೋಗ್ತೀನಿ ಯಾಕೆ ಅಂದ್ರೆ ನನ್ನ ಸ್ನೇಹಿತರು ಒಬ್ಬರು ಹೇಳಿದ್ರು, ಅಪರಾಧದಿಂದ ಮುಕ್ತವಾದ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಲ್ಲ ಅಂತ, ಆದ್ರೆ ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲಿನ್ ಚಿಟ್ ಸಿಕ್ಕಾಗಿದೆ.. ನಿಮ್ಮನ್ನ ಮಂತ್ರಿ ಮಾಡ್ತಿವಿ ಮಂತ್ರಿ ಮಾಡ್ತೀವಿ ಅಂತ, ಇವತ್ತು ನಾಳೆ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸ್ತಿದ್ದಾರೆ. “ನಿಮ್ಮಂತವರು ಮಂತ್ರಿ ಮಂಡಲದಲ್ಲಿ ಇರಬೇಕು ಅಂತ ಹೇಳ್ತಾರೆ, ಆದ್ರೆ ಯಾತಕ್ಕೆ ತಗೊಳ್ತಿಲ್ಲ ಅಂತ ಗೊತ್ತಿಲ್ಲ.. ಇಡೀ ರಾಜ್ಯದಲ್ಲಿ ನಮ್ಮ...

ಸಿಎಂ ತವರು ನೆಲದಲ್ಲಿ ಕಂದಾಯ ಮಂತ್ರಿ, ಆರ್.ಅಶೋಕ್ ಗ್ರಾಮ ವಾಸ್ತವ್ಯ..!

ಸಿಎಂ ತವರು ನೆಲದಲ್ಲಿ ಕಂದಾಯ ಮಂತ್ರಿ, ಆರ್.ಅಶೋಕ್ ಗ್ರಾಮ ವಾಸ್ತವ್ಯ..!

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರುಗಳ ಬಗೆ ಬಗೆಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಇಂದು ಗ್ರಾಮ ವಾಸ್ತವ್ಯಕ್ಕಾಗಿ ಬಂದಿಳಿದಿದ್ದಾರೆ. ಹೌದು, ಹಾವೇರಿ ಜಿಲ್ಲಿಯ ಶಿಗ್ಗಾವಿ ತಾಲುಕಿನ ಬಾಡ ಗ್ರಾಮದಲ್ಲಿ ಇಂದು ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ. ಕನಕದಾಸರ ಕರ್ಮಭೂಮಿ ಬಾಡದಲ್ಲಿ ನಡೆಯುಲಿರೋ ಕಾರ್ಯಕ್ರಮಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ‌. ಅಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಕಾರ್ಯಕ್ರಮ ರಂಗು ಪಡೆದುಕೊಂಡಿದೆ. ಈ ಕಾರಣಕ್ಕಾಗಿಯೇ ಶಿಗ್ಗಾವಿಯ ಬಾಡ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಬಂದಿಳಿದಿದ್ರು. ಬಾಡ ಗ್ರಾಮಸ್ಥರು ಸಚಿವರನ್ನು ಪೂರ್ಣ ಕುಂಬದೊಂದಿಗೆ ಸ್ವಾಗತ ಕೋರಿದ್ರು. ನಂತರ ಕನಕದಾಸರ ಮೂರ್ತಿಗೆ ಹಾರ ಹಾಕಿ ಮಾಲಾರ್ಪಣೆ ಮಾಡಿದ ಆರ್ ಅಶೋಕ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ್ರು. ಇನ್ನು ಬಾಡ ಗ್ರಾಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ, ಇದು 12 ನೇ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ....

ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

 ಮುಂಡಗೋಡ: ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮುಂಡಗೋಡಿನಲ್ಲಿ ‌ಮೊದಲ ಮಾತು ಆಡಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರು ಬಂದ ನಂತ್ರ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದ್ದೇವೆ ಅಂತಾ ಆರೋಪಿಸಿದ್ದಾರೆ. ತಮ್ಮ‌ಮಾತಿನುದ್ದಕ್ಕೂ ಸಚಿವರ ವಿರುದ್ಧ ಪರೋಕ್ಷವಾಗೇ ವಾಗ್ದಾಳಿ ನಡೆಸಿದ್ದಾರೆ. ಮನೆ ಹಂಚಲೂ ಸಚಿವರೇ ಬೇಕು..! ಕ್ಷೇತ್ರದಲ್ಲಿ ಈ ಮೊದಲು ಕಾರ್ಯಕರ್ತರೇ ನಾಯಕರಾಗಿರುತ್ತಿದ್ದರು. ಆದ್ರೆ ಈಗ ಗ್ರಾಮ ಪಂಚಾಯತಿ ಸದಸ್ಯರ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ತಮ್ಮ ವಾರ್ಡಿನಲ್ಲಿನ ಅರ್ಹ ಫಲಾನುಭವಿಗಳನ್ನು ಹುಡುಕಿ ಮನೆ ಹಂಚುವ ಹಕ್ಕೂ ಗ್ರಾಪಂ ಸದಸ್ಯರಿಗೆ ಉಳಿದಿಲ್ಲ. ಸಚಿವರೇ ಖುದ್ದಾಗಿ ಬಂದು ತಮಗೆ ಇಷ್ಟವಾದವರಿಗೆ ಮನೆ ಹಂಚುವ ಕಾರ್ಯ ಮಾಡುತ್ತಾರೆ. ಮನೆ ಇರಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ತಾಡಪತ್ರಿಗಳನ್ನೂ ಕೂಡ ಸಚಿವರೇ ತಮಗಿಷ್ಟ ಬಂದವರಿಗೆ ಹಂಚುತ್ತಾರೆ ಅಂತಾ ಆರೋಪಿಸಿದ್ರು. ಹೀಗಾಗಿ, ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಅಂತಾ ಪಾಟೀಲ್ ಆರೋಪಿಸಿದ್ರು. ತಾವು ಉದ್ದಾರ ಆದ್ರೆ ಸಾಕು..! ಊರ ಉದ್ದಾರ ಮಾಡಲಿ ಅಂತಾ ಆರಿಸಿ ಕಳಿಸಿ ಕೊಟ್ಟಿರ್ತಿರಾ. ಆದ್ರೆ ಅವಾಗೇಲ್ಲ ಊರ ಉದ್ಧಾರಕ್ಕಾಗಿ...

ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

 ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಮತ್ತೆ ಜೀವ ಬಂದಂತಾಗಿದೆ. ಬಿಜೆಪಿಯ ಎರಡೇರಡು ಪ್ರಭಾವಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕೈ ಹಿಡಿದಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಗೊಂಡು ಇವತ್ತು ಮೊದಲ ಬಾರಿಗೆ ಮುಂಡಗೋಡಿಗೆ ಬಂದಿಳಿದಿದ್ದಾರೆ. ಹೀಗಾಗಿ, ಮುಂಡಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಕೇಸರಿ ಧ್ವಜ, ಕೇಸರಿ ಶಾಲು..! ಅಂದಹಾಗೆ, ಪಟ್ಟಣದ ಶಿವಾಜಿ ಸರ್ಕಲ್ ಗೆ ವಿ.ಎಸ್.ಪಾಟೀಲ್ ಬಂದಿಳಿದರು. ಈ ವೇಳೆ ಅವ್ರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಜಯಘೋಷ ಕೂಗಿ ಕೇಕೆ ಹಾಕಿದ್ರು. ಹೂವಿನ ಹಾರಗಳೊಂದಿಗೆ ವಿ.ಎಸ್.ಪಾಟೀಲರಿಗೆ ಭರ್ಜರಿ ಸ್ವಾಗತ ಕೋರಿದ್ರು. ಇನ್ನು ವಿಶೇಷ ಅಂದ್ರೆ ಕೇಸರಿ ಶಾಲು, ಕೇಸರಿ ಪೇಟ ತೊಡಿಸಿ ಜಯಘೋಷ ಮೊಳಗಿಸಿದ್ರು. ಮೆರವಣಿಗೆ ಮೂಲಕ ಪಾಟೀಲರಿಗೆ ಸ್ವಾಗತ ಕೋರಿದ್ರು.  

ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

  ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ರು. ಹೀಗಾಗಿ, ಬಸ್ ನಿಲ್ದಾಣದಲ್ಲೇ ಬಸ್ ಗಳು ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್ಸೇ ಇಲ್ಲ..! ಅಂದಹಾಗೆ, ಇದು ಇವತ್ತಿನ ಸಮಸ್ಯೆ ಅಷ್ಟೇ ಅಲ್ಲ‌. ಮುಂಡಗೋಡ ಬಸ್ ನಿಲ್ದಾಣದಲ್ಲಿ ನಿತ್ಯವೂ ಇದೇ ಗೋಳು. ಶಾಲಾ,ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಪರಿಪಾಟಲು ಅಂತೂ ಹೇಳತೀರದ್ದು. ಹೀಗಾಗಿ, ಅದೇಷ್ಟೇ ಬಾರಿ ಮನವಿ ಮಾಡಿದ್ರೂ, ಕೇಳಿಕೊಂಡ್ರೂ ಈ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನಲ್ಲ. ಕಾಲ್ ಮಾಡಿದ್ರೆ ಪಿಕ್ ಮಾಡಲ್ಲ. ಹೀಗಾಗಿ, ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಆಗ್ತಿದೆ. ಹೀಗಾಗಿ, ಅವ್ರೇಲ್ಲ ಇವತ್ತು ಉಗ್ರಗೊಂಡಿದ್ದಾರೆ. ನಿಂತಲ್ಲೇ ನಿಂತ ಬಸ್ ಗಳು..! ನಿತ್ಯವೂ ಇದೇ ಪರಿಸ್ಥಿತಿ ಎದುರಿಸ್ತಿರೋ ಪ್ರಯಾಣಿಕರು, ವಿದ್ಯಾರ್ಥಿಗಳು ಅಧಿಕಾರಿಗಳು ಕ್ಯಾರೇ ಅನ್ನದಿದ್ದಾಗೆ ಅನಿವಾರ್ಯವಾಗಿ ಇವತ್ತು ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟಿಸಿದ್ರು....

ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ನ್ಯಾಸರ್ಗಿಯಲ್ಲಿ ಅನಾಮಿಕ ಅಭಿಮಾನಿಯಿಂದ ಅಯ್ಯಪ್ಪನಿಗೆ ಚೀಟಿ..!

ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ನ್ಯಾಸರ್ಗಿಯಲ್ಲಿ ಅನಾಮಿಕ ಅಭಿಮಾನಿಯಿಂದ ಅಯ್ಯಪ್ಪನಿಗೆ ಚೀಟಿ..!

ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದ್ರೊಂದಿಗೆ, ಬರುವ ವಿದಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಭರ್ಜರಿ ಕಾದಾಟ ಪಕ್ಕಾ ಎನ್ನುವಂತಾಗಿದೆ. ಅದ್ರ ಜೊತೆ ಇಂದು ತಾಲೂಕಿನ ನ್ಯಾಸರ್ಗಿಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅನಾಮಿಕ ಅಭಿಮಾನಿಯೊಬ್ಬರು, ಪಾಟೀಲರ ಹೆಸರಲ್ಲಿ ಅರ್ಚನೆ ಮಾಡಿಸುವಂತೆ ಚೀಟಿ ಬರೆದಿಟ್ಟು ಹೋಗಿದ್ದಾರೆ‌. ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ನ್ಯಾಸರ್ಗಿಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಅಯ್ಯಪ್ಪ ಸ್ವಾಮಿಯ ಎದುರು ಹಣ್ಣು, ತೆಂಗಿನಕಾಯಿ, ಕರ್ಪೂರ, ಊದಬತ್ತಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿದ್ದಾರೆ. ಜೊತೆಗೆ ಚೀಟಿಯೊಂದನ್ನು ಬರೆದಿಟ್ಟು ವಿ.ಎಸ್.ಪಾಟೀಲರ ಹೆಸರಲ್ಲಿ ಅಯ್ಯಪ್ಪ ಸ್ವಾಮಿಗೆ ಅರ್ಚನೆ ಮಾಡುವಂತೆ ಮನವಿ ಮಾಡಲಾಗಿದೆ. ಆದ್ರೆ, ಹಾಗೆ ಅರ್ಚನೆಗಾಗಿ ಹಣ್ಣು ಕಾಯಿ ಇಟ್ಟು ಹೋಗಿರೋರು ಯಾರು ಅಂತಾ ಗೊತ್ತಾಗಿಲ್ಲ. ಹೀಗಾಗಿ, ವಿ.ಎಸ್.ಪಾಟೀಲರ ಅನಾಮಿಕ ಅಭಿಮಾನಿಯ ಹಣ್ಣು ಕಾಯಿಗಳನ್ನು ಸ್ವಾಮಿಗೆ ಅರ್ಪಿಸಲಾಗಿದೆ ಅಂತಾ ತಿಳಿದು ಬಂದಿದೆ.

ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬೆಂಗಳೂರು; ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ‌. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದಹಾಗೆ ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದ ವಿ.ಎಸ್.ಪಾಟೀಲರು, ಬಿಜೆಪಿ ತೊರದಿದ್ದರು. ಆದ್ರೆ, ಕಾಂಗ್ರೆಸ್ ಸೇರುವ ದಿನಾಂಕ‌ ಮಾತ್ರ ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಡೊಲಾಯಮಾನ ಅನ್ನುವಂತಾಗಿತ್ತು. ಸದ್ಯ ಕಾಂಗ್ರೆಸ್ ಗೆ ಅಧಿಕೃತವಾಗಿಬಸೇರ್ಪಡೆಗೊಂಡಿರೋ ವಿ.ಎಸ್.ಪಾಟೀಲರು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಬಲ ತುಂಬಿದ್ದಾರೆ.

ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

  ಇದು ಮುಂಡಗೋಡ ತಾಲೂಕಿನ ಮಟ್ಟಿಗೆ ವಿಚಿತ್ರ, ಭಯ ಹುಟ್ಟಿಸುವ, ಆತಂಕಕಾರಿ ಘಟನೆ. ಸಿಸಿಟಿವಿ ದೃಷ್ಯಗಳನ್ನು ನೋಡಿದ್ರೆ ಎಂಥವರೂ ಒಂದು ಕ್ಷಣ ನಿಬ್ಬೆರಗಾಗೋ ವಿಚಿತ್ರ ಘಟನೆ. ಅಲ್ಲಿ ಗ್ಯಾರೇಜ್ ಎದುರು ನಿಲ್ಲಿಸಿದ್ದ ಬೈಕ್ ಕ್ಷಣಾರ್ಧದಲ್ಲಿ ಮಂಗಮಾಯವಾಗತ್ತೆ. ಅದಕ್ಕೂ ಮುಂಚೆ ಅದೇಂತದ್ದೋ ವಿಚಿತ್ರ ಚಲನ ವಲನ, ಅಷ್ಟಕ್ಕೂ ಇದೇಲ್ಲ ಕಳ್ಳರ ಕರಾಮತ್ತಿನ ಕಣ್ಣಾಮುಚ್ಚಾಲೆಯಾ..? ಅಥವಾ ಆತ್ಮಗಳ ಅಸಲೀ ಚೇಷ್ಟೆಯಾ..? ಅರ್ಥವೇ ಆಗುತ್ತಿಲ್ಲ. CCTV ದೃಷ್ಯ..! ಅಸಲು, ಇದು ನಡೆದದ್ದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಬಳಿಯ, ಯಲ್ಲಾಪುರ ರಸ್ತೆಯಲ್ಲಿ. ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಕ್ರಾಸ್ ಬಳಿ ಅಜಾದ್ ಹೊಟೇಲ್ ಇದೇಯಲ್ವಾ ಅದೇ ಹೊಟೇಲ್ ನ ಸಿಸಿಟಿವಿ ದೃಷ್ಯದಲ್ಲಿ ಕಂಡುಬಂದಿರೋ ಅಪರೂಪದ ವಿಚಿತ್ರ ಘಟನೆ ಇದು. ಮದ್ಯರಾತ್ರಿ..! ಇದು ನಡೆದದ್ದು ನಿನ್ನೆ ರಾತ್ರಿ ಅಂದ್ರೆ ದಿನಾಂಕ 6.12.2022 ರ ಮದ್ಯ ರಾತ್ರಿ 11.57 ರಿಂದ 12 ಗಂಟೆಯವರೆಗೆ ನಡೆದಿರೋ ಅಚ್ಚರಿ. ತಾಲೂಕಿನ ಇಂದೂರು ಗ್ರಾಮದ ಲಕ್ಷ್ಮಣ ಎಂಬುವವರ ಯಮಹಾ...

ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಪ್ರೇಮಿಗಳು, ಒಂದೇ ಕುಣಿಕೆಗೆ ಕೊರಳೊಡ್ಡಿದ ಯುವಕ, ಯುವತಿ

ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಪ್ರೇಮಿಗಳು, ಒಂದೇ ಕುಣಿಕೆಗೆ ಕೊರಳೊಡ್ಡಿದ ಯುವಕ, ಯುವತಿ

ಧಾರವಾಡ: ಲಾಡ್ಜ್ ನಲ್ಲಿ ಪ್ರೇಮಿಗಳು ನೇಣಿಗೆ ಶರಣಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ಸ್ಟಾಂಡ್ ಪಕ್ಕದ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಯುವಕ ಯುವತಿ ಲಾಡ್ಜ್ ಗೆ ತೆರಳಿದ್ದರು ಎನ್ನಲಾಗಿದೆ. ಸಂಜೆ ಲಾಡ್ಜ್ ರೂಮಿನಿಂದ ಹೊರ ಬರದೇ ಇದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದ್ದಾರೆ‌. ಈ ವೇಳೆ ಪ್ರೇಮಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರೋ ಪ್ರೇಮಿಗಳ ಹೆಸರು, ವಿಳಾಸದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ರೆ, ತಮ್ಮ ಪ್ರೀತಿಗೆ ಮನೆಯವರು ಅಡ್ಡಿ ಆಗಿರೋ ಕಾರಣಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ‌. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಮುಂಡಗೋಡ ಪೊಲೀಸರಿಗೆ ಮಹಿಳೆಯ ಡೀಟೇಲ್ಸ್ ಲಭ್ಯವಾಗಿದೆ. ಅಂದಹಾಗೆ, ಮೃತ ಮಹಿಳೆಯ ಹೆಸ್ರು ಸುರೇಖಾ ದೇವೇಂದ್ರ ಕಲಾಲ್, ವಯಸ್ಸು ಅಜಮಾಸು 50 ವರ್ಷವಂತೆ, ಹುಬ್ಬಳ್ಳಿಯ ಆನಂದ ನಗರ ನಿವಾಸಿಯಂತೆ. ಇದು ಫಸ್ಟ್ ಇನ್ಫರ್ಮೇಶನ್ ರಿಪೋರ್ಟ್..! ಐದು ದಿನದ ಹಿಂದೆ..! ಅಸಲು, ಡಿಸೆಂಬರ್ 2 ನೇ ತಾರೀಖಿನ ದಿನವೇ ಈ ಮಹಿಳೆ ನಾಪತ್ತೆಯಾಗಿದ್ದಾಳೆ. ಹೀಗಾಗಿ, ಹುಬ್ಬಳ್ಳಿಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತಂತೆ. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ರೂ ಪತ್ತೆಯಾಗಿರಲಿಲ್ಲವಂತೆ‌. ಹೀಗಾಗಿ, ಇವತ್ತು ಪಬ್ಲಿಕ್ ಫಸ್ಟ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ವಿಷಯ ತಿಳಿದ ಮೃತ ಸುರೇಖಾ ಪತಿ ದೇವೇಂದ್ರ ಕಲಾಲ್ ಸ್ಥಳಕ್ಕೆ ಆಗಮಿಸಿದ್ದಾರೆ. ಅನಾರೋಗ್ಯವಾ..? ಅಥವಾ..? ಇನ್ನು, ಮೃತ ಮಹಿಳೆ ಸುರೇಖಾಗೆ ಮೈತುಂಬ ಸಕ್ಕರೆ ಕಾಯಿಲೆ, ಬಿಪಿ, ಥೈರಾಯಿಡ್ ಸೇರಿ ಹಲವು ರೋಗಗಳಿಂದ ಬಳಲುತ್ತಿದ್ದಳಂತೆ. ಹೀಗಾಗಿ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ...

error: Content is protected !!