ಇಂದೂರಿನ 8 ನಂ. ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ಬೈಕ್ ಡಿಕ್ಕಿ, ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಇಂದೂರ ಬಳಿಯ 8 ನಂಬರ್ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಪಾದಾಚಾರಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ‌.

ಸಂಜು ಸುರಕೋಡ (35) ಗಂಭೀರ ಗಾಯಗೊಂಡಿರೋ ವ್ಯಕ್ತಿಯಾಗಿದ್ದಾನೆ. ರಾತ್ರಿ ವೇಳೆ ವೇಗವಾಗಿ ಬಂದಿರೋ ಅಪರಿಚಿತ ಬೈಕ್ ಪಾದಾಚಾರಿ ವ್ಯಕ್ತಿಗೆ ಡಿಕ್ಕಿಯಾಗಿದೆ ಅನ್ನೊ ಮಾಹಿತಿ ಬಂದಿದೆ. ಅಫಘಾತವಾದ ತಕ್ಷಣವೇ ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!