ಮುಂಡಗೋಡ ತಾಲೂಕಿನ ನಂದಿಕಟ್ಟಾದಲ್ಲಿ ಬಿಜೆಪಿಗೆ ಭಾರೀ ಆಘಾತವಾಗಿದೆ. ತಾಲೂಕಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ನಂದಿಕಟ್ಟಾ ಭಾಗದ ಹಿರಿಯ ಬಿಜೆಪಿ ಮುಖಂಡ ಕಲ್ಲನಗೌಡ ಬಿ. ಬಸನಗೌಡ್ರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಂದಿಕಟ್ಟಾ ಭಾಗದಲ್ಲಿ ಹಲವು ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನೇ ತೊರೆದಿದ್ದಾರೆ.
ಮೂಲ ಬಿಜೆಪಿಗರಿಗೆ ಬೆಲೆಯಿಲ್ವಂತೆ..!
ಅಸಲು, ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಕಲ್ಲನಗೌಡ ಬಸನಗೌಡ್ರು ಬಿಜೆಪಿಯಲ್ಲಿ ಈಗ ಎಲ್ಲ ಸರಿಯಾಗಿಲ್ಲ.. ಮೂಲ ಬಿಜೆಪಿಗರನ್ನು ಕಸದಂತೆ ನೋಡಿಕೊಳ್ಳಲಾಗ್ತಿದೆ. ಇಲ್ಲಿ ನಮ್ಮನ್ನ ಯಾವುದಕ್ಕೂ ಗಣನೆಗೆ ಪಡೆಯೋದೇ ಇಲ್ಲ. ಹೀಗಾಗಿ ಇಲ್ಲಿನ ಪರಿಸ್ಥಿತಿ ನಮಗೆ ಅಸಮಾಧಾನ ತಂದಿದ್ದು ನಾವು ಪಕ್ಷ ತೊರೆಯುವಂತೆ ಮಾಡಿದೆ ಅಂತಾ ಅಸಮಾಧಾನ ತೋಡಿಕೊಂಡ್ರು.
ನಾಮಕೆವಾಸ್ತೆ ಇವೆ ಸಮಿತಿಗಳು..!
ಇನ್ನು, ಬಿಜೆಪಿಗೆ ಗುಡ್ ಬೈ ಹೇಳಿರೋ ಕಲ್ಲನಗೌಡ್ರು ಹೇಳೋ ಪ್ರಕಾರ ಮುಂಡಗೋಡ ಬಿಜೆಪಿಯಲ್ಲಿ ಸಮಿತಿಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತೇ ಇಲ್ಲವಂತೆ. ತಾಲೂಕಾ ರೈತ ಮೋರ್ಚಾ ಅಧ್ಯಕ್ಷನಾಗಿದ್ದ ನನಗೆ ಯಾವತ್ತೂ ಇಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಂತಾ ನೋವು ತೋಡಿಕೊಂಡಿದ್ದಾರೆ. ಅದೇನೆ ಇದ್ರೂ ಕೆಲವೇ ಕೆಲವು ತಾಲೂಕಾ ನಾಯಕರು ತೀರ್ಮಾನ ಮಾಡಿ ನಮ್ಮನ್ನೇಲ್ಲ ಮೂಲೆಗೆ ಸೇರಿಸಿದ್ದಾರೆ ಅಂತಾ ಅಳಲು ತೋಡಿಕೊಂಡಿದ್ದಾರೆ.
ಮುಂದಿನ ನಡೆಯೇನು..?
ಇಗಷ್ಟೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರೋ ಕಲ್ಲನಗೌಡ್ರು ಇವತ್ತು ಅಥವಾ ನಾಳೆ ತಮ್ಮ ಬೆಂಬಲೊಗರೊಂದಿಗೆ, ತಮ್ಮ ಜೊತೆ ಇರುವ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಅಂತಾ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರ್ತಾರಾ..?
ಬಿಜೆಪಿ ತೊರೆದು ಈಗಷ್ಟೇ ಪಕ್ಷದ ನಂಟು ಕಳಚಿಕೊಂಡಿರೋ ಕಲ್ಲನಗೌಡ್ರು ತಮ್ಮ ಬೆಂಬಲೊಗರೊಂದಿಗೆ ಚರ್ಚಿಸಿ ಕಾಂಗ್ರೆಸ್ ಸೇರುಚ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದ್ದು ಮುಂದಿನ ನಡೆ ಇನ್ನೆರಡು ದಿನದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಒಂದರ್ಥದಲ್ಲಿ, ನಂದಿಕಟ್ಟಾ ಭಾಗದಲ್ಲಿ ಬಿಜೆಪಿಯನ್ನು ತಳಮಟ್ಟದಲ್ಲಿ ಸಂಘಟಿಸಿ ಗಟ್ಟಿಗೊಳಿಸಿದ್ದ ಕೆಲವೇ ಕೆಲವು ನಾಯಕರ ಪೈಕಿ ಕಲ್ಲಬಗೌಡರೂ ಒಬ್ಬರು. ಹೀಗಾಗಿ, ಈಗ ಕಲ್ಲನಗೌಡ್ರು ಪಕ್ಷ ತೊರೆದಿರೋದು ಈ ಭಾಗದಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗೊದಂತೂ ಸತ್ಯ.