ನಟ ಪುನೀತ್ ರಾಜಕುಮಾರ್ ನಿಧನ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಪುನೀತ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಪುನೀತ್ ಇನ್ನಿಲ್ಲ ಎನ್ನುವುದನ್ನ ಅರಗಿಸಿಕೊಳ್ಳುವುದು ಕಷ್ಟ, ಪುನೀತ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಡಾ.ರಾಜಕುಮಾರ ಕುಟುಂಬ ರಾಯರ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ, ವಿಶೇಷ ಸಂದರ್ಭಗಳಲ್ಲಿ ಮಠಕ್ಕೆ ತಪ್ಪದೇ ಬಂದು ಹೋಗುತ್ತಾರೆ, ಮೂರು ಜನ ಅಣ್ಣತಮ್ಮಂದಿರು ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದಾಗಿ ಪುನೀತ್ ಹೇಳಿದ್ದರು, ರಾಯರ ಆರಾಧನ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತೇವೆ ಎಂದಿದ್ದರು ಅಂತಾ ಶ್ರೀಗಳು ನೆನಪು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಚಿಕ್ಕವರಿದ್ದಾಗಿನಿಂದಲೂ “ವಾರ ಬಂತಮ್ಮ ಗುರುವಾರ ಬಂತಮ್ಮ” ಹಾಡನ್ನ ಹೇಳುತ್ತಿದ್ದರು. ಪುನೀತ್ ಅಗಲಿಕೆಯ ನೋವು ಭರಿಸುವಂತ ಶಕ್ತಿಯನ್ನ ಅವರ ಕುಟುಂಬಕ್ಕೆ ಭಗವಂತ ನೀಡಲಿ ಅಂತಾ ಶ್ರೀಗಳು ಪ್ರಾರ್ಥಿಸಿದ್ದಾರೆ.
Top Stories
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಿರಲಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಆ ದಿನಾಂಕಕ್ಕೂ ಆ ಮೂವರೂ ಯುವ ನಟರ ಸಾವಿಗೂ ಏನಯ್ಯಾ ಲಿಂಕು..?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಸ್ತಂಗತರಾಗಿದ್ದಾರೆ. ಅದ್ರಂತೆ ಇತ್ತಿಚೇಗಷ್ಟೇ ಕನ್ನಡ ಚಿತ್ರರಂಗ ಇನ್ನಿಬ್ಬರು ನಟರನ್ನು ಕಳೆದುಕೊಂಡಿದೆ. ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ವಿಜಯ್ ಕೂಡ ವಯಸ್ಸಲ್ಲದ ವಯಸ್ಸಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾರದ ಸಂಗತಿ. ಅಂದಹಾಗೆ, ಇಲ್ಲಿ ಕಾಕತಾಳಿಯವೋ ಅಥವಾ ಕನ್ನಡ ಚಿತ್ರರಂಗದಲ್ಲಿ 17 ಅನ್ನೋ ಸಂಖ್ಯೆಯ ಅರಿಷ್ಟವೋ ಗೊತ್ತೇ ಆಗುತ್ತಿಲ್ಲ. ಯಾಕಂದ್ರೆ, ಇವತ್ತು ಅಸ್ತಂಗತರಾಗಿರೋ ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ವಿಜಯ್ ಇವ್ರೇಲ್ಲರ ಹುಟ್ಟಿದ ದಿನಾಂಕ 17… ಹೀಗಾಗಿ, ಈ ಮೂವರೂ ಅಕಾಲಿಕವಾಗಿ ನಿಧನರಾಗಿ, ನಮ್ಮನ್ನೇಲ್ಲ ಅಗಲಿರೋದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುವಂತೆ ಮಾಡಿದೆ. ಈ ಕಾರಣಕ್ಕಾಗಿ ಇವ್ರ ಹುಟ್ಟಿದ ದಿನಾಂಕಕ್ಕೂ ಹಾಗೂ ಈ ಅಕಾಲಿಕ ಸಾವುಗಳಿಗೂ ಏನಾದ್ರೂ ಲಿಂಕ್ ಇದೆಯಾ..? ಏನೋ ಒಂಥರಾ ವಿಚಿತ್ರವಾಗಿದೆ ಅಲ್ವಾ..?
ಮುಂಡಗೋಡ ಅಭಿಮಾನಿಗಳಿಂದ “ಅಪ್ಪು” ನಿಧನಕ್ಕೆ ಅಶ್ರುತರ್ಪಣ..! ಕ್ಯಾಂಡಲ್ ಹಚ್ಚಿ ಕಂಬನಿ ಮಿಡಿದ ಯುವಕರು..!!
ಮುಂಡಗೋಡ: ನಟ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಪುನೀತ್ ಅಭಿಮಾನಿಗಳು ಶೃದ್ಧಾಂಜಲಿ ಅರ್ಪಿಸಿದ್ರು. ಪುನೀತ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಅಭಿಮಾನಿಗಳು, ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಿದ್ರು. ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ನಿಧನ ತುಂಬಲಾರದ ನಷ್ಟ ಅಂತಾ ಕಂಬನಿ ಮಿಡಿದ ಯುವ ಅಭಿಮಾನಿಗಳು “We miss you ಅಪ್ಪು” ಅಂತಾ ಅಭಿಮಾನ ತೋರಿಸಿದ್ರು. ಈ ವೇಳೆ ಮುಂಡಗೋಡಿನ ಸಮಸ್ತ ಅಪ್ಪು ಅಭಿಮಾನಿಗಳು ಹಾಜರಿದ್ರು.
ನಟ ಪುನೀತ್ ಸಾವಿನ ಸುದ್ದಿಗೆ ಹೃದಯಾಘಾತ: ಮೃತಪಟ್ಟ ಅಪ್ಪು ಅಭಿಮಾನಿ..!!
ಚಾಮರಾಜನಗರ: ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಹೃದಯಾಘಾತವಾಗಿ ಪುನೀತ್ ಅಭಿಮಾನಿ ಸಾವಿಗೀಡಾಗಿದ್ದಾನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ, ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ, ಪುನೀತ್ ಸಾವಿನ ವಿಷಯ ಕೇಳುತ್ತಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಕೊನೆಯುಸಿರು ಎಳೆದಿದ್ದಾನೆ ಪುನೀತ್ ಅಭಿಮಾನಿ. ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದ, ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ ಮುನಿಯಪ್ಪ. ನಾಳೆ ಮರೂರು ಗ್ರಾಮದಲ್ಲಿ ಪುನೀತ್ ಅಭಿಮಾನಿಯ ಅಂತ್ಯಕ್ರಿಯೆ ನಡೆಯಲಿದೆ.
ಪುನೀತ್ ನಿವಾಸಕ್ಕೆ ಪಾರ್ಥೀವ ಶರೀರ, ಕುಟುಂಬಸ್ಥರಿಂದ ಪೂಜೆ, ಪತಿಯ ಶವ ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತ್ನಿ..!
ನಟ ಪುನೀತ್ ರಾಜಕುಮಾರ ವಿಧಿವಶರಾದ ಹಿನ್ನೆಲೆಯಲ್ಲಿ ಅವ್ರ ಪಾರ್ಥೀವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಪುನೀತ್ ರಾಜಕುಮಾರ್ ನಿವಾಸಕ್ಕೆ ರವಾನಿಸಲಾಯಿತು. ಪುನೀತ್ ನಿವಾಸದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ರು. ನಂತರ ಸಾರ್ವಜನಿಕ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕಂಠೀರವ ಸ್ಟೇಡಿಯಂ ಗೆ ಕೆಲವೇ ಕ್ಷಣಗಳಲ್ಲಿ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆ ಇದೆ.
ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗಬೇಕಿತ್ತು, ಆದ್ರೆ ಅವನು ಮೊದಲು ಹೋದ” ರಾಘವೇಂದ್ರ ರಾಜಕುಮಾರ್ ಭಾವುಕ ನುಡಿ..!
ಬೆಂಗಳೂರು: ನಟ ಪವರ್ ಸ್ಟಾರ್, ಪುನೀತ್ ರಾಜಕುಮಾರ್ ಹೃದಯಾಘಾತದಿಂದ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದಾರೆ. “ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗ್ಬೇಕಿತ್ತು, ಆದ್ರೆ ಅವನು ಮೊದಲು ಹೋಗಿದ್ದಾನೆ, ಅಪ್ಪ ಅಮ್ಮನ ಹತ್ರ ನನಗಿಂತ ಮುಂಚೆನೇ ಹೋಗಿಬಿಟ್ಟ” ಅಂತಾ ಪುನೀತ್ ರಾಜಕುಮಾರ್ ಹಿರಿಯ ಸಹೋದರ ನಟ ರಾಘವೇಂದ್ರ ರಾಜಕುಮಾರ್ ಬಾವುಕ ನುಡಿ ನುಡಿದಿದ್ದಾರೆ. ಅಭಿಮಾನಿಗಳೇ ಅಪ್ಪುವನ್ನು ಯಾವುದೇ ತೊಂದರೆ ಆಗದಂತೆ ಕಳಿಸಿಕೊಡೋಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಜೊತೆಗೆ ನಿಂತು, ನನ್ನ ತಮ್ಮನನ್ನು ಚೆನ್ನಾಗಿ ಕಳಿಸಿಕೊಡಿ. ಕಲಾವಿದರಿಗೆ ಸಾವಿಲ್ಲ, ಕಲಾವಿದರು ಸಿನಿಮಾಗಳ ಮೂಲಕ ಯಾವತ್ತಿಗೂ ಜೀವಂತವಾಗಿರ್ತಾರೆ. ಅಂತಾ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ನಟ ಪುನಿತ್ ರಾಜಕುಮಾರ್ ಇನ್ನು ನೆನಪು ಮಾತ್ರ..! ಬಾರದ ಲೋಕಕ್ಕೆ ತೆರಳಿದ “ಅಪ್ಪು”
ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಾಗಂತ, ವಿಕ್ರಂ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಬೆಳಿಗ್ಗೆಯೆ ತೀವ್ರ ಹೃದಯಾಘಾತದಿಂದ ಪುನಿತ್ ರಾಜಕುಮಾರ್, ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಕ್ರಂ ಆಸ್ಪತ್ರೆಯಲ್ಲಿ ಅಪ್ಪು ಕೊನೆಯುಸಿರು. ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪುನಿತ್ ವಿಧಿವಶರಾಗಿದ್ದಾರೆ. ಗಣ್ಯರ ದಂಡು ಆಸ್ಪತ್ರೆಯತ್ತ..! ಇನ್ನು ನಟ ಪುನಿತ್ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಅಂತಾ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ, ಚಿತ್ರರಂಗದ ಗಣ್ಯರು ಆಸ್ಪತ್ರೆ ಬಳಿ ಬೀಡು ಬಿಟ್ಟಿದ್ದಾರೆ. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗ ದಾವಿಸಿಸಯತ್ತಿದ್ದು, ಆಸ್ಪತ್ರೆ ಹಾಗೂ ಪುನಿತ್ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೆಲವೇ ಹೊತ್ತಲ್ಲಿ ಸಿಎಂ ಬೊಮ್ಮಾಯಿ ನಟ ಶಿವಣ್ಣನ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಲಿರೋ ಸಿಎಂ..!
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ನಟ ಪುನಿತ್ ರಾಜಕುಮಾರ್ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ನಟ ಶಿವರಾಜ್ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಮಾಹಿತಿ ಲಭ್ಯವಾಗಿದೆ. ವಿಕ್ರಂ ಆಸ್ಪತ್ರೆಯ ವೈದ್ಯರಿಂದ ಅಪ್ಪುವಿನ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದುಕೊಂಡಿರೋ ಸಿಎಂ ಹಾಗೂ ಶಿವರಾಜ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಚಿತ್ರಣ ನೀಡೋ ಸಾಧ್ಯತೆ ಇದೆ ಎನ್ನಲಾಗಿದೆ.
ನಟ ಪುನಿತ್ ರಾಜಕುಮಾರ್ ಸ್ಥಿತಿ ಗಂಬೀರ ಹಿನ್ನೆಲೆ, ಭಜರಂಗಿ-2 ಚಿತ್ರ ಪ್ರದರ್ಶನ ರದ್ದು..!
ಬೆಂಗಳೂರು: ನಟ ಪುನಿತ್ ರಾಜಕುಮಾರ್ ತೀವ್ರ ಗಂಭೀರ ಹಿನ್ನೆಲೆಯಲ್ಲಿ ಇವತ್ತಷ್ಟೇ ರಾಜ್ಯಾಧ್ಯಂತ ತೆರೆಕಂಡಿದ್ದ ಶಿವರಾಜ್ ಕುಮಾರ್ ಅಭಿನಯದ, ಭಜರಂಗಿ- 2 ಚಿತ್ರ ಪ್ರದರ್ಶನ ರದ್ದು ಪಡಿಸಲಾಗಿದೆ, ಸಂಜೆ 4 ಗಂಟೆಯಿಂದ ರಾಜ್ಯಾಧ್ಯಂತ ಚಿತ್ರ ಪ್ರದರ್ಶನ ರದ್ದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇವತ್ತು ಬೆಳಿಗ್ಗೆಯಷ್ಟೇ ತೆರೆಕಂಡಿದ್ದ ಭಜರಂಗಿ-2 ಟೀಂ ಗೆ ಖುದ್ದು ಪುನಿತ್ ರಾಜಕುಮಾರ್ ಶುಭಕೋರಿದ್ದರು
ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತ, ಆರೋಗ್ಯ ಕ್ಷೀಣ,ಕ್ಷೀಣ..! ಅಭಿಮಾನಿಗಳ ಆಕ್ರಂಧನ..!
ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತ. ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಲೇ ಸಾಗಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಾವೂ ಎಲ್ಲಾ ರೀತಿಯ ಚಿಕಿತ್ಸೆ ಮಾಡುತ್ತಿದ್ದೇವೆ ಅಂತಾ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ರಂಗನಾಥ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕ್ಷಣ ಕ್ಷಣಕ್ಕೂ ಅಪ್ಪುವಿನ ಆರೋಗ್ಯ ಗಂಭೀರವಾಗುತ್ತಲೇ ಸಾಗಿದೆ ಅಂತಾ ಮಾಹಿತಿ ಲಭ್ಯವಾಗ್ತಿದೆ. ಗಣ್ಯರ ದಂಡು ಆಸ್ಪತ್ರೆಯತ್ತ..! ಇನ್ನು ನಟ ಪುನಿತ್ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಅಂತಾ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ, ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಹಾಗೂ ಪುನಿತ್ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.