ಮುಂಡಗೋಡ-ಪಟ್ಟಣದಲ್ಲಿರೋ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆಗೆ ಬೀಜ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನ ರೈತರು ಇಂದು ಬಿತ್ತನೆ ಬೀಜಗಳ ಖರೀದಿಗಾಗಿ ಮುಗಿ ಬಿದ್ದಿದ್ರು.. ಆದ್ರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ಬೀಜ ಖರೀಧಿಸುತ್ತಿದ್ದ ರೈತರಿಗೆ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸುವಂತೆ ಯಾವುದೇ ನಿರ್ದೇಶನ ನೀಡದೇ ಕಣ್ಮುಚ್ವಿ ಕುಳಿತಿದ್ರು.. ಕೃಷಿ ಇಲಾಖೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರು ಯಾವುದೇ ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಅದೇಷ್ಟೋ ರೈತರು ಮಾಸ್ಕ್ ಕೂಡ ಧರಿಸಿರಲಿಲ್ಲ. ಆದರೂ ಅಂತಹ ರೈತರಿಗೆ ತಿಳುವಳಿಕೆ ನೀಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು ಮಾತ್ರ ವಿಪರ್ಯಾಸ..
Top Stories
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಪುಟ್ಟ ಬಾಲಕಿಗೂ ಬಿಡಲಿಲ್ಲ ಹೆಮ್ಮಾರಿ; ಆಸ್ಪತ್ರೆಗೆ ಕರೆದೊಯ್ಯುವಾಗ ಕಣ್ಣೀರು ಹಾಕಿದ ಬಾಲಕಿ..!
ಮುಂಡಗೋಡ- ತಾಲೂಕಿನ ಅಗಡಿ ಗ್ರಾಮದಲ್ಲಿ ಪುಟ್ಟ ಕಂದಮ್ಮನಿಗೂ ಪಾಸಿಟಿವ್ ದೃಡಪಟ್ಟಿದ್ದು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನದ ಮೂಲಕ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು.. ಈ ವೇಳೆ ತನ್ನ ಕುಟುಂಬವನ್ನು ಬಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಹೋಗುವಾಗ ಪುಟ್ಟ ಮಗು ಕಣ್ಣೀರು ಹಾಕಿದೆ.. ಅಂದಹಾಗೆ ಅಗಡಿ ಗ್ರಾಮದಲ್ಲಿ ಪುಟ್ಟ ಬಾಲಕಿಯೂ ಸೇರಿ ಒಂದೇ ಕುಟುಂಬದ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರೆಲ್ಲರನ್ನೂ ಇಂದು ಕೋವಿಡ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳ ತಂಡ ಹಾಗೂ ಹುನಗುಂದ ಗ್ರಾಮ ಪಂಚಾಯತಿ ಸಮಿತಿಯವರು ಸೋಂಕಿತರ ಮನೆಗೆ ತೆರಳಿದ್ರು.. ಈ ವೇಳೆ ಅವ್ರ ಕುಟುಂಬದವರು ಸೋಂಕಿತರನ್ನು ಒಲ್ಲದ ಮನಸ್ಸಿನಿಂದಲೇ ಕಳಿಸಿ ಕೊಟ್ರು, ಈ ವೇಳೆ ಕುಟುಂಬದ ಸದಸ್ಯರೇಲ್ಲರೂ ಕಣ್ಣೀರು ಹಾಕಿದ್ರು.. ಇನ್ನು ಪುಟ್ಟ ಸೋಂಕಿತ ಬಾಲಕಿ ವಾಹನ ಹತ್ತುವಾಗ ತೀರ ಭಯಗೊಂಡಿದ್ಲು, ಜೊತೆಗೆ ಕಣ್ಣೀರು ಹಾಕುತ್ತ ವಾಹನ ಹತ್ತಿದ್ದು ನಿಜಕ್ಕೂ ಎಲ್ಲರಿಗೂ ಒಂದು ಕ್ಷಣ ಕಣ್ಣಾಲೆಗಳು ತುಂಬಿ ಬರುವಂತೆ ಮಾಡಿತ್ತು. ಅಧಿಕಾರಿಗಳು ಕುಟುಂಬಸ್ಥರಿಗೆ ದೈರ್ಯ...
ನಂದಿಕಟ್ಟಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ರೌಡಿ ಮಂಗನ ಹಾವಳಿ..!
ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೌಡಿ ಮಂಗವೊಂದು ಹಾವಳಿ ಮಾಡುತ್ತಿದೆ.. ಕಳೆದ ಎರಡು ದಿನದ ಹಿಂದೆಯಷ್ಟೇ ಈ ರೌಡಿ ಮಂಗ ತನ್ನ ಜೊತೆಗಿದ್ದ ಎರಡು ಮಂಗಗಳನ್ನೇ ಬಲಿ ಪಡದಿತ್ತು.. ಅಲ್ಲದೇ ಮತ್ತೆ ಈಗಲೂ ತನ್ನ ಜೊತೆಗಿರೋ ಮಂಗಗಳನ್ನೇ ಅಟ್ಟಾಡಿಸಿ ಕಡಿಯುತ್ತಿದೆ.. ಹೀಗಾಗಿ, ನಿತ್ಯವೂ ಒಂದಿಲ್ಲೊಂದು ಕಿರಿಕ್ ಮಾಡುತ್ತ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.. ಇನ್ನು ಎಲ್ಲೆಂದರಲ್ಲಿ ಜಿಗಿದು ಬರುವ ರೌಡಿ ಮಂಗ, ಮನೆಯ ಒಳಗೂ ಬಂದು ದಾಂಧಲೆ ಮಾಡುತ್ತಿದೆ.. ಇನ್ನು, ಯಾರಾದ್ರೂ ಇದರ ತಂಟೆಗೆ ಹೋದ್ರೆ ಮುಗೀತು, ಒಮ್ಮೆಲೆ ಅಟ್ಯಾಕ್ ಮಾಡುತ್ತಿದೆ.. ಈ ಕಾರಣಕ್ಕಾಗಿ ಇಲ್ಲಿನ ಗ್ರಾಮಗಳಲ್ಲಿ ಪುಟ್ಟ ಮಕ್ಕಳು ಮನೆಯಿಂದ ಹೊರಗೆ ಬರುವುದೇ ಅಪಾಯ ಎನ್ನುವಂತಾಗಿದ್ದು ಎಲ್ಲರನ್ನೂ ಭಯಭೀತಗೊಳಿಸಿದೆ.. ಹೀಗಾಗಿ ಅರಣ್ಯ ಇಲಾಖೆಯವರು ಈ ರೌಡಿ ಮಂಗನಿಂದ ಗ್ರಾಮಸ್ಥರನ್ನು ರಕ್ಷಿಸಬೇಕಿದೆ..
ಹುನಗುಂದದಲ್ಲಿ ತುಂಬು ಗರ್ಭಿಣಿಗೆ ಪಾಸಿಟಿವ್..!
ಮುಂಡಗೋಡ-ತಾಲೂಕಿನ ಹುನಗುಂದ ಗ್ರಾಮದಲ್ಲಿ ತುಂಬು ಗರ್ಬಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೇನು ನಾಲ್ಕೈದು ದಿನದಲ್ಲಿ ಹೆರಿಗೆ ಆಗತ್ತೆ ಅಂತಾ ಈಗಾಗಲೇ ವೈದ್ಯರು ಡೇಟ್ ಕೂಡ ನೀಡಿದ್ದಾರೆ.. ಅಂತದ್ದರಲ್ಲಿ ಆ ಗರ್ಭಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಆತಂಕ ಸೃಷ್ಟಿಸಿದೆ. ಹೀಗಾಗಿ ಸೋಂಕಿತ ಗರ್ಭಿಣಿಗೆ ಮುಂಡಗೋಡ ಕೋವಿಡ್ ಕೇರ್ ಸಂಟರ್ ಗೆ ದಾಖಲಿಸಲು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನ ಇಂದು ಹುನಗುಂದ ಗ್ರಾಮಕ್ಕೆ ಆಗಮಿಸಿತ್ತು.. ಆದ್ರೆ ಈ ವೇಳೆ ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತೆಯನ್ನು ದಾಖಲಿಸಲು ಕುಟುಂಬಸ್ಥರು ಒಪ್ಪಲೇ ಇಲ್ಲ.. ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಗ್ರಾಮಸ್ಥರು ಕುಟುಂಬದವರ ಮನವೊಲಿಸಲು ಹರಸಾಹಸ ಪಡಬೇಕಾಯಿತು.. ನಂತರ, ಮುಂಡಗೋಡ ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್ ಸ್ಥಳಕ್ಕೆ ಆಗಮಿಸಿ ಕುಟುಂಬದವರ ಮನವೊಲಿಸಿದ್ರು.. ಹೀಗಾಗಿ ಸೋಂಕಿತ ಗರ್ಭಿಣಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ನಂತರ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು
ಕೊರೋನಾ ಎರಡನೇ ಅಲೆ ಭೀತಿ, ಮತ್ತೆ ಟಫ್ ರೂಲ್ಸ್… 6 ರಿಂದ 9 ನೇ ತರಗತಿಗಳು ಬಂದ್.
ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕೊರೋನಾ ಹೆಚ್ಚಳದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯು, ವಿವಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳ್ನು ಹೊರತು ಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಸತಿ ಶಾಲೆಗಳು, ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರತಾಗಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದ್ರೇ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಅಪಾರ್ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ, ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್...
ನಂದಿಕಟ್ಟಾ ಗ್ರಾಮದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ
ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋರೊನಾ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಹೊಂಡ, ಬಸಾಪುರ, ರಾಮಾಪುರ, ಕೆಂದಲಗೇರಿ ಯರೇಬೈಲ್ ಗ್ರಾಮಗಳಲ್ಲಿರೋ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಯಿತು.. ಈ ಲಸಿಕೆ ಹಾಕುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಮಾರೆಕ್ಕ ದುರ್ಗ ಮುರ್ಗಿ, ಉಪಾಧ್ಯಕ್ಷ ಬಸವರಾಜ್ ನಡುವಿನಮನಿ, ಸದಸ್ಯರಾದ ಸಂತೋಷ ಬೋಸ್ಲೆ, ಬರಮು ಅಲೂರು, ರಮೇಶ್ ನೇಮಣ್ಣವರ್, ರೇಷ್ಮಾ ಕಲಘಟಗಿ, ವಿದ್ಯಾ ಕವಟೆ, ಮಹ್ಮದ್ ಕವಲವಾಡ್ ಪರಶು ಕಬ್ಬೇರ್ ಸೇರಿದಂತೆ ಹಲವರು ಭಾಗವಹಿಸಿದ್ದರು..
ಇಂದೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಹೆಬ್ಬಾರ್ ಚಾಲನೆ
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಗಾಟಿಸಿದ್ರು.. ಇಂದೂರು ಗ್ರಾಮದ ಶ್ರೀ ಗುರು ಗೋವಿಂದ ಸಂತ ಶಿಶುನಾಳ ಶರೀಫರ ಮಠದ ಆವರಣದಲ್ಲಿ ಆಯೋಜನೆಗೊಂಡಿರೋ ಸಮ್ಮೇಳನದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಸಹದೇವಪ್ಪ ನಡಗೇರ್ ಅವರನ್ನು ಸಚಿವರು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸಮ್ಮೇಳನಾಧ್ಯಕ್ಷರ ಹಿತ ನುಡಿಯನ್ನು ಲೋಕಾರ್ಪಣೆಗೊಳಿಸಿದರು. ಸಮ್ಮೇಳನದಲ್ಲಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜಿಲ್ಲಾಪಂಚಾಯತ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಚುಸಾಪ ಜಿಲ್ಲಾಧ್ಯಕ್ಷ ಜೆ.ಯು.ನಾಯಕ, ತಾಲೂಕಾ ಘಟಕದ ಅಧ್ಯಕ್ಷ ಶ್ರೀ ರಮೇಶ ಅಂಬಿಗೇರ ಹಾಗೂ ಪ್ರಮುಖರು, ಸಾಹಿತಿಗಳು ಹಾಜರಿದ್ದರು..
ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹಾವಳಿ: ಸವದತ್ತಿ ಎಲ್ಲಮ್ಮನ ದೇಗುಲ ಬಂದ್, ಇನ್ಮುಂದೆ ಭಕ್ತರಿಗಿಲ್ಲ ದರ್ಶನ ಭಾಗ್ಯ
ಬೆಳಗಾವಿ- ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.. ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.. ಬರೋಬ್ಬರಿ 11ತಿಂಗಳ ನಂತರ, ಕಳೆದ ಫೆ.1 ರಂದು ಮತ್ತೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.. ಸದ್ಯ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ..
ಫೆ. 1 ರಿಂದ ಸವದತ್ತಿ ಯಲ್ಲಮ್ಮದೇವಸ್ಥಾನ ಓಪನ್- 11ತಿಂಗಳ ನಂತ್ರ ಮತ್ತೆ ಏಳುಕೊಳ್ಳದಲ್ಲಿ ಮೊಳಗಲಿದೆ ಉದೋ..ಉದೋ..
ನಿತ್ಯವೂ ಪ್ರತಿಧ್ವನಿಸುತ್ತಿದ್ದ ಉದೋ.. ಉದೋ..ಯಲ್ಲಮ್ಮ.. ನಾಮಸ್ಮರಣೆ ಕೇಳಿ ಬರೋಬ್ಬರಿ 11ತಿಂಗಳೇ ಗತಿಸಿದೆ..ರಾಜ್ಯ ಹೊರ ರಾಜ್ಯಗಳ ಲಕ್ಷಾಂತರ ಭಕ್ತರಿಗೆ ಸವದತ್ತಿಯ ಯಲ್ಲಮ್ಮದೇವಿಯ ದರ್ಶನವೇ ಸಿಗದೇ ನಿತ್ಯವೂ ಚಡಪಡಿಸುತ್ತಿದ್ದಾರೆ..ಯಾವಾಗ ದೇವಿ ದರ್ಶನ ಸಿಗುತ್ತೆ ಅಂತ ಭಕ್ತರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದರು.. ಕೊನೆಗೂ ಭಕ್ತರ ನಿರೀಕ್ಷೆ ಕೈಗೂಡಿದೆ. ಇದೇ ಫೆಬ್ರವರಿ 1ರಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಭಕ್ತರಿಗೆ ತೆರೆದುಕೊಳ್ಳುತ್ತಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸವದತ್ತಿ ಯಲ್ಲಮ್ಮ..ಕರ್ನಾಟಕ- ಮಹಾರಾಷ್ಟ್ರ, ತಮಿಳುನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೇವತೆ..ವರ್ಷದ 9ತಿಂಗಳು ಇಲ್ಲಿ ಜಾತ್ರೆ ನಡೆಯುತ್ತೆ… ಜಾತ್ರೆ ಸಂದರ್ಭದಲ್ಲಿ ಭಂಡಾರದ ಜೊತೆಗೆ ಉದೋ.. ಉದೋ.. ಯಲ್ಲಮ್ಮ ಎಂಬ ನಾಮ ಸ್ಮರಣೆ ಗುಡ್ಡದ ತುಂಬ ಪ್ರತಿಧ್ವನಿಸುತ್ತದೆ… ಇಂತಹ ವೈಭವದ ಜಾತ್ರೆ ಸಂಭ್ರಮಕ್ಕೆ ಕೊರೊನಾ ಮಹಾಮಾರಿ ಕಡಿವಾಣ ಹಾಕಿತ್ತು… ಕಳೆದ 11ತಿಂಗಳಿಂದ ಬಂದ್ ಆಗಿದ್ದ ದೇವಸ್ಥಾನವನ್ನು ನಾಳೆ ಅಂದರೆ ಫೆಬ್ರುವರಿ 1ರಂದು ರೀ ಓಪನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆಡಳಿತ...
ಹುನಗುಂದದಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
ಮುಂಡಗೋಡ- ತಾಲೂಕಿನ ಹುನಗುಂದದಲ್ಲಿ ಇಂದು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಿತು.. ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ, ಹತ್ತಾರು ಯುವಕರು ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು.. ಈ ವೇಳೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..