ಪುಟ್ಟ ಬಾಲಕಿಗೂ ಬಿಡಲಿಲ್ಲ ಹೆಮ್ಮಾರಿ; ಆಸ್ಪತ್ರೆಗೆ ಕರೆದೊಯ್ಯುವಾಗ ಕಣ್ಣೀರು ಹಾಕಿದ ಬಾಲಕಿ..!

ಮುಂಡಗೋಡ- ತಾಲೂಕಿನ ಅಗಡಿ ಗ್ರಾಮದಲ್ಲಿ ಪುಟ್ಟ ಕಂದಮ್ಮನಿಗೂ ಪಾಸಿಟಿವ್ ದೃಡಪಟ್ಟಿದ್ದು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನದ ಮೂಲಕ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು..

ಈ ವೇಳೆ ತನ್ನ ಕುಟುಂಬವನ್ನು ಬಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಹೋಗುವಾಗ ಪುಟ್ಟ ಮಗು ಕಣ್ಣೀರು ಹಾಕಿದೆ.. ಅಂದಹಾಗೆ ಅಗಡಿ ಗ್ರಾಮದಲ್ಲಿ ಪುಟ್ಟ ಬಾಲಕಿಯೂ ಸೇರಿ ಒಂದೇ ಕುಟುಂಬದ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರೆಲ್ಲರನ್ನೂ ಇಂದು ಕೋವಿಡ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳ ತಂಡ ಹಾಗೂ ಹುನಗುಂದ ಗ್ರಾಮ ಪಂಚಾಯತಿ ಸಮಿತಿಯವರು ಸೋಂಕಿತರ ಮನೆಗೆ ತೆರಳಿದ್ರು..

ಈ ವೇಳೆ ಅವ್ರ ಕುಟುಂಬದವರು ಸೋಂಕಿತರನ್ನು ಒಲ್ಲದ ಮನಸ್ಸಿನಿಂದಲೇ ಕಳಿಸಿ ಕೊಟ್ರು, ಈ ವೇಳೆ ಕುಟುಂಬದ ಸದಸ್ಯರೇಲ್ಲರೂ ಕಣ್ಣೀರು ಹಾಕಿದ್ರು..
ಇನ್ನು ಪುಟ್ಟ ಸೋಂಕಿತ ಬಾಲಕಿ ವಾಹನ ಹತ್ತುವಾಗ ತೀರ ಭಯಗೊಂಡಿದ್ಲು, ಜೊತೆಗೆ ಕಣ್ಣೀರು ಹಾಕುತ್ತ ವಾಹನ ಹತ್ತಿದ್ದು ನಿಜಕ್ಕೂ ಎಲ್ಲರಿಗೂ ಒಂದು ಕ್ಷಣ ಕಣ್ಣಾಲೆಗಳು ತುಂಬಿ ಬರುವಂತೆ ಮಾಡಿತ್ತು.
ಅಧಿಕಾರಿಗಳು ಕುಟುಂಬಸ್ಥರಿಗೆ ದೈರ್ಯ ತುಂಬುವ ಕೆಲಸ ಮಾಡಿದ್ರು..

error: Content is protected !!