ಮುಂಡಗೋಡ-ತಾಲೂಕಿನ ಹುನಗುಂದ ಗ್ರಾಮದಲ್ಲಿ ತುಂಬು ಗರ್ಬಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೇನು ನಾಲ್ಕೈದು ದಿನದಲ್ಲಿ ಹೆರಿಗೆ ಆಗತ್ತೆ ಅಂತಾ ಈಗಾಗಲೇ ವೈದ್ಯರು ಡೇಟ್ ಕೂಡ ನೀಡಿದ್ದಾರೆ.. ಅಂತದ್ದರಲ್ಲಿ ಆ ಗರ್ಭಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಆತಂಕ ಸೃಷ್ಟಿಸಿದೆ.
ಹೀಗಾಗಿ ಸೋಂಕಿತ ಗರ್ಭಿಣಿಗೆ ಮುಂಡಗೋಡ ಕೋವಿಡ್ ಕೇರ್ ಸಂಟರ್ ಗೆ ದಾಖಲಿಸಲು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನ ಇಂದು ಹುನಗುಂದ ಗ್ರಾಮಕ್ಕೆ ಆಗಮಿಸಿತ್ತು.. ಆದ್ರೆ ಈ ವೇಳೆ ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತೆಯನ್ನು ದಾಖಲಿಸಲು ಕುಟುಂಬಸ್ಥರು ಒಪ್ಪಲೇ ಇಲ್ಲ..
ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಗ್ರಾಮಸ್ಥರು ಕುಟುಂಬದವರ ಮನವೊಲಿಸಲು ಹರಸಾಹಸ ಪಡಬೇಕಾಯಿತು..
ನಂತರ, ಮುಂಡಗೋಡ ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್ ಸ್ಥಳಕ್ಕೆ ಆಗಮಿಸಿ ಕುಟುಂಬದವರ ಮನವೊಲಿಸಿದ್ರು.. ಹೀಗಾಗಿ ಸೋಂಕಿತ ಗರ್ಭಿಣಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ನಂತರ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು