ನಂದಿಕಟ್ಟಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ರೌಡಿ ಮಂಗನ ಹಾವಳಿ..!

ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೌಡಿ ಮಂಗವೊಂದು ಹಾವಳಿ ಮಾಡುತ್ತಿದೆ.. ಕಳೆದ ಎರಡು ದಿನದ ಹಿಂದೆಯಷ್ಟೇ ಈ ರೌಡಿ ಮಂಗ ತನ್ನ ಜೊತೆಗಿದ್ದ ಎರಡು ಮಂಗಗಳನ್ನೇ ಬಲಿ ಪಡದಿತ್ತು.. ಅಲ್ಲದೇ ಮತ್ತೆ ಈಗಲೂ ತನ್ನ ಜೊತೆಗಿರೋ ಮಂಗಗಳನ್ನೇ ಅಟ್ಟಾಡಿಸಿ ಕಡಿಯುತ್ತಿದೆ..

ಹೀಗಾಗಿ, ನಿತ್ಯವೂ ಒಂದಿಲ್ಲೊಂದು ಕಿರಿಕ್ ಮಾಡುತ್ತ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.. ಇನ್ನು ಎಲ್ಲೆಂದರಲ್ಲಿ ಜಿಗಿದು ಬರುವ ರೌಡಿ ಮಂಗ, ಮನೆಯ ಒಳಗೂ ಬಂದು ದಾಂಧಲೆ ಮಾಡುತ್ತಿದೆ..

ಇನ್ನು, ಯಾರಾದ್ರೂ ಇದರ ತಂಟೆಗೆ ಹೋದ್ರೆ ಮುಗೀತು, ಒಮ್ಮೆಲೆ ಅಟ್ಯಾಕ್ ಮಾಡುತ್ತಿದೆ..
ಈ ಕಾರಣಕ್ಕಾಗಿ ಇಲ್ಲಿನ ಗ್ರಾಮಗಳಲ್ಲಿ ಪುಟ್ಟ ಮಕ್ಕಳು ಮನೆಯಿಂದ ಹೊರಗೆ ಬರುವುದೇ ಅಪಾಯ ಎನ್ನುವಂತಾಗಿದ್ದು ಎಲ್ಲರನ್ನೂ ಭಯಭೀತಗೊಳಿಸಿದೆ.. ಹೀಗಾಗಿ ಅರಣ್ಯ ಇಲಾಖೆಯವರು ಈ ರೌಡಿ ಮಂಗನಿಂದ ಗ್ರಾಮಸ್ಥರನ್ನು ರಕ್ಷಿಸಬೇಕಿದೆ..

error: Content is protected !!