ಹೊರಗಡೆ ಇಸ್ಪೀಟ್ ಆಡೋರನ್ನ ಹಿಡಿಯೋ ಪೋಲೀಸರು ಖುದ್ದು ತಾವೇ, ಅದೂ ಪೊಲೀಸ್ ಠಾಣೆಯಲ್ಲೇ ಜೂಜಾಟ ಆಡಿರೋ ವಿಡಿಯೋ ಇದೀಗ ಕಲಬುರಗಿಯಲ್ಲಿ ಸಕತ್ ವೈರಲ್ ಆಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪೋಲೀಸ್ ಠಾಣೆಯಲ್ಲಿ ಈ ಪ್ರಸಂಗ ನಡೆದಿದ್ದು ಬೆಳಕಿಗೆ ಬಂದಿದೆ. ವಿಷ್ಯ ಬಟಾ ಬಯಲಾಗ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಜೂಜಾಟ ನಡೆಸಿದ್ದ ASI ಮೆಹಮೂದ್ ಮಿಯಾ, ಮುಖ್ಯ ಪೇದೆಗಳಾದ ನಾಗರಾಜ್ ಸಾಯಿಬಣ್ಣಾ ಇಮಾಮ್, ಮತ್ತು ಪೇದೆ ನಾಗಭೂಷಣ್ ಸೇರಿ ಒಟ್ಟು ಐವರನ್ನ ಸಸ್ಪೆಂಡ್ ಮಾಡಿದ್ದಾರೆ. ಅಷ್ಟೇಅಲ್ಲ PSI ತಿರುಮಲೇಶಗೂ ಕಾರಣ ಕೇಳಿ ನೋಟಿಸ್ ಜಾರಿಮಾಡಿದ್ದಾರೆ.
Top Stories
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಪ್ರಶಸ್ತಿ
ಉತ್ತರ ಕನ್ನಡದಲ್ಲಿ ಮೇ.5 ರಿಂದ ಪ.ಜಾತಿ ಸಮುದಾಯದ ಸಮೀಕ್ಷೆ : ಜಿಲ್ಲಾಧಿಕಾರಿ
ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಅರಿವು ಮೂಡಿಸಿ : ಈಶ್ವರ ಕಾಂದೂ
ಕಾರವಾರ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ (ಪಿಎಂಎಫ್ಎಂಇ) ಯೋಜನೆಯು ಉತ್ತಮ ಯೋಜನೆಯಾಗಿದ್ದು, ಈ ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆಯಲು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಲು ಜನರಿಗೆ ಅರಿವು ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ನಿರ್ದೇಶನ ನೀಡಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಬ್ಯಾಂಕ್ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪಿಎಂಎಫ್ಎಂಇ ಯೋಜನೆಯಡಿ ಸೌಲಭ್ಯ ಪಡೆಯಲು ಕಡಿಮೆ ಪ್ರಮಾಣ ಅರ್ಜಿಗಳು ಬ್ಯಾಂಕ್ಗಳಿಗೆ ಸಲ್ಲಿಕೆಯಾಗಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ಜನರಿಗೆ ಜಾಗೃತಿ ಮೂಡಿಸಬೇಕು. ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 35 ಮತ್ತು ರಾಜ್ಯ ಸರ್ಕಾರದಿಂದ ಶೇ.15 ಸೇರಿದಂತೆ ಶೇ.50 ರಷ್ಟು ಸಬ್ಸಿಡಿ ಸೌಲಭ್ಯವಿದ್ದು, ಇದರ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸುವಂತೆ ತಿಳಿಸಿದರು....
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಕಾರವಾರ: ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದ ಯಶಸ್ವಿಗಾಗಿ ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕೂಡಲೇ ಸಭೆಗಳನ್ನು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ , ವಿಡೀಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕದಂಬೋತ್ಸವ ಆಚರಣೆಗಾಗಿ ರಚಿಸಲಾಗಿರುವ ಎಲ್ಲಾ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸಮಿತಿಯ ಸಭೆಗಳನ್ನು ನಡೆಸಿ, ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಯಾವುದೇ ಸಮಿತಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಈ ಬಗ್ಗೆ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ಕೂಡಲೇ ಸಲ್ಲಿಸುವಂತೆ ಸೂಚಿಸಿದರು. ಕದಂಬ ಜ್ಯೋತಿ ಹೊರಡುವ ದಿನದಂದು ವಿವಿಧ ಕಲಾತಂಡಗಳಿಂದ ಆಕರ್ಷಕ ಮೆರವಣಿಗೆಯನ್ನು ಆಯೋಜಿಸಬೇಕು ಅಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದರು. ಕದಂಬೋತ್ಸವದ ಅಂಗವಾಗಿ ನಡೆಯುವ ಕ್ರೀಡಾ ಸ್ಪರ್ಧೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವಂತೆ ಸೂಚಿಸಿದ ಅವರು ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾವಿದರಿಂದ ಅರ್ಜಿ ಸ್ವೀಕಾರ ಮಾಡುವ ಕೊನೆಯ ದಿನಾಂಕವನ್ನು ಪ್ರಕಟಿಸಿ,...
ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಿರಲಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ
ಕಾರವಾರ: ಮಾರ್ಚ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಲಾಗುವ ಪಡಿತರ ಅಕ್ಕಿಯ ದುರುಪಯೋಗವಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಡಿತರ ಚೀಟಿದಾರರಿಗೆ ವಿತರಿಸಿದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಅನಧಿಕೃತವಾಗಿ ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅಕ್ಕಿ ವಿತರಣೆ ಕುರಿತಂತೆ ಪಡಿತರ ಅಂಗಡಿಗಳಲ್ಲಿ ಪ್ರತಿದಿನದ ವಿತರಣೆಯ ವಿವರ ಮತ್ತು ದಾಸ್ತಾನು ವಿವರಗಳನ್ನು ಪರಿಶೀಲಿಸಬೇಕು, ಪಡಿತರ ವಿತರಣೆಯ ತಂತ್ರಾಂಶ ಕಾರ್ಯನಿರ್ವಹಣೆಗೆ ಇಂರ್ಟನೆಟ್ ಸಮಸ್ಯೆಯಿದಲ್ಲಿ ಬಿ.ಎಸ್.ಎನ್.ಎಲ್ ಮೂಲಕ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಡಿಬಾಗದಲ್ಲಿ ಅನಧಿಕೃವಾಗಿ ಅಕ್ಕಿಯ ಮಾರಾಟ ಮತ್ತು ಸಾಗಾಟದ ಬಗ್ಗೆ ನಿಗಾ ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಪಡಿತರ ಚೀಟಿಯ ಕೆವೈಸಿ ಯಲ್ಲಿ ಶೇ.97 ರಷ್ಟು ಪ್ರಗತಿಯಾಗಿದ್ದು, ಮಾರ್ಚ್ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ...
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಕಾರವಾರ: ಜಿಲ್ಲೆಯಲ್ಲಿ ಮಾನ್ಸೂನ್ ಅವಧಿಯಲ್ಲಿ ಕಂಡು ಬರುವ ನರೆ ಮತ್ತು ಗುಡ್ಡ ಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಈಗಿನಿಂದಲೇ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಗಾಲದ ಸಂದರ್ಭದಲ್ಲಿ ರಾಷ್ಟೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮತ್ತು ನೌಕಾನೆಲೆಯ ಸಮೀಪದ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ, ಈ ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಕುರಿತಂತೆ ನೀರು ಹರಿಯುವ ಪ್ರದೇಶದಲ್ಲಿ ಯಾವುದೇ ಅಡೆ ತಡೆಗಳು ಇಲ್ಲದಂತೆ ಸ್ವಚ್ಛಗೊಳಿಸಬೇಕು, ಬಿಣಗಾ, ಚೆಂಡಿಯಾ, ಅರಗಾ ವ್ಯಾಪ್ತಿಯಲ್ಲಿ ನೀರು ಹರಿಯುವ ನಾಲೆಗಳ ಡ್ರೆಜ್ಜಿಂಗ್ ಮತ್ತು ಅಗಲೀಕರಣ ಕೆಲಸಗಳನ್ನು ಕೈಗೊಳ್ಳಬೇಕು. ಹಾಗೂ ಈ ಕಾರ್ಯವನ್ನು ನೌಕಾಪಡೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ...
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಮುಂಡಗೋಡ ತಾಲೂಕಿನಲ್ಲಿ ಸದ್ಯ SSLC ಪರೀಕ್ಷೆಯ ಸಲುವಾಗಿ ಇಡೀ ಶಿಕ್ಷಣ ಇಲಾಖೆಯೇ ತಲೆ ಕೆಡಿಸಿಕೊಂಡು 100% ಫಲಿತಾಂಶ ತರಲೇ ಬೇಕು ಅಂತಾ ಹಗಲಿರುಳು ಶ್ರಮಿಸುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇಡೀ ಪ್ರೌಢಶಾಲಾ ವಿಭಾಗದ ಶಿಕ್ಷಕ ವೃಂದ ಕಣ್ಣಿಗೆ ಎಣ್ಣೆಬಿಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ರೆಡಿ ಮಾಡ್ತಿದಾರೆ. ಸತ್ಯ ಅಂದ್ರೆ ನಮ್ಮ ಮುಂಡಗೋಡಿಗೆ ನೂತನವಾಗಿ ಬಂದಿರೋ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಜಕ್ಕೂ ನಮ್ಮ ಪಾಲಿನ ಹೆಮ್ಮೆ. ಪ್ರಬುದ್ದ ತೆಯ ಸಾಕಾರ ಮೂರ್ತಿ..! ಆದ್ರೆ, ಇದೇಲ್ಲದರ ನಡುವೆಯೂ ಕೆಲವ್ರು “ತಾವು ನಡೆದದ್ದೇ ದಾರಿ” ಅನ್ನೋ ರೀತಿಯಲ್ಲಿದ್ದಾರೆನೋ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ…? “ಫೈನಾನ್ಸ್” ಗೆ ರಿಬ್ಬನ್ ಕಟ್..! ಅಸಲು, ಮುಂಡಗೋಡ ತಾಲೂಕಿನ ಇಡೀ ಶಿಕ್ಷಕ ವೃಂದವೇ ಪರೀಕ್ಷಾ ತಯಾರಿಯಲ್ಲಿ ಬ್ಯುಸಿಯಾಗಿದ್ದರೆ, ಇಲ್ಲಿನ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಮಾತ್ರ, ಖಾಸಗಿ ಗೋಲ್ಡ್ ಲೋನ್ ಫೈನಾನ್ಸ್ ನ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಬೆಳಿಗ್ಗೆಯಿಂದಲೇ ತಮ್ಮ ಮತ್ತೋರ್ವ ಶಿಕ್ಷಕರನ್ನು ಜೊತೆಗೆ ಕರೆದುಕೊಂಡು ಬಂದು ನೂತನ ಖಾಸಗಿ ಫೈನಾನ್ಸ್ ನ ಉದ್ಘಾಟನೆಯ ರಿಬ್ಬನ್...
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಕಾರವಾರ : ಇಲ್ಲಿನ ಸರ್ವೆ ಅಧಿಕಾರಿ ಒಬ್ಬರ ಕರ್ತವ್ಯಕ್ಕೆ ಪತ್ರಕರ್ತ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ನಾಯ್ಕ ಬರ್ಗಿ ಹಾಗೂ ಸಾಯಿಕಿರಣ ಬಾಬ್ರೇಕರ್ ಎನ್ನುವವರಿಗೆ ತಲಾ ಆರು ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ ತಲಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪತ್ರಕರ್ತ ಉದಯ ಬರ್ಗಿ ಅವರು ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಈ ಇಬ್ಬರ ಪರವಾಗಿ ಕುಮಟಾದ ಖ್ಯಾತ ಯುವ ನ್ಯಾಯವಾದಿ, ವಿರೇಂದ್ರ ಗಿರಿಯಣ್ಣ ನಾಯಕ, ತೋರ್ಕೆ ಅವರು ವಾದವನ್ನು ಮಂಡಿಸಿದ್ದರು. ಇವರ ವಾದ ಆಲಿಸಿದ ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಮುಂಡಗೋಡ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಅವರ ಜನ್ಮ ದಿನವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು. ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಎನ್ ದುಂಡಸಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಪ.ಪಂ ಸದಸ್ಯ ಮಹ್ಮದಗೌಸ ಮಖಾಂದಾರ, ಶಿವರಾಜ ಸುಬ್ಬಾಯವರ, ನಜೀರ್ ಅಹ್ಮದ ದರ್ಗಾವಾಲೆ, ಆಲೆಹಸನ ಬೆಂಡಿಗೇರಿ, ಧರ್ಮರಾಜ ನಡಗೇರ, ಶಾರದಾ ರಾಠೋಡ, ಸಲೀಂ ನಂದಿಗಟ್ಟಿ, ಬಸವರಾಜ ಆಸ್ತಕಟ್ಟಿ, ರಪೀಕ್ ಇನಾಮದಾರ, ಬಾಬುರಾವ ಲಾಡನವರ, ಬಸವರಾಜ ಕುಂದರ್ಗಿ ಮುಂತಾದವರು ಉಪಸ್ಥಿತರಿದ್ದರು
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ತಾಲೂಕಿನಲ್ಲೂ ಗೋಕಳ್ಳರು, ದನಗಳ್ಳರು ಬಂದಿದ್ದಾರಾ..? ಇಂತಹದ್ದೊಂದು ಅನುಮಾನ ಅಗಡಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಘಟನೆಯಿಂದ ಆತಂಕಮೂಡಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನೇ ಖದೀಮರು ಕದ್ದು ಹೋಗಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಅಗಡಿ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಗಳಗಿ ಎಂಬುವವರಿಗೆ ಸೇರಿದ ಎರಡು ಎತ್ತುಗಳನ್ನು ಶನಿವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ರಾತ್ರಿ ಮೇವು ಹಾಕಿ ನೀರು ಕುಡಿಸಿ, ಕೊಟ್ಟಿಗೆಯಲ್ಲಿ ಕಟ್ಟಿದ್ದ ರೈತ ನಿಂಗಪ್ಪ ಮನೆಯಲ್ಲಿ ಮಲಗಿದ್ದ. ಇದೇ ಹೊತ್ತಲ್ಲಿ, ತಡರಾತ್ರಿ ದಾಳಿ ಇಟ್ಟಿರೋ ಕಳ್ಳರು ಎರಡೂ ಎತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಅನ್ನೊ ಅನುಮಾನ ಮೂಡಿದೆ. ಸ್ಥಳದಲ್ಲಿ ಯಾವುದೋ ಒಂದು ವಾಹನದ ಟೈಯರ್ ಗುರುತುಗಳು ಇದ್ದು ಬಹುಶಃ ಟಾಟಾ ಎಸ್ ಅಥವಾ ಬೊಲೆರೋ ವಾಹನದಲ್ಲಿ ಎತ್ತುಗಳನ್ನು ಸಾಗಿಸಲಾಗಿದೆ ಅನ್ನೋ ಸಂಶಯ ಮೂಡಿದೆ. ಮದ್ಯದಂಗಡಿಗೆ ಬಂದು ಸ್ಕೆಚ್ ಹಾಕಿದ್ರಾ..? ಅಸಲು, ಈ ಎತ್ತುಗಳನ್ನು ಕಳ್ಳತನ ಮಾಡಿರೋದರ ಹಿಂದೆ ಬಹುತೇಕ ಪರಿಚಯದವರ ಕೈವಾಡ ಅಥವಾ ಆ ಸ್ಥಳದ ಮಾಹಿತಿ...
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಮುಂಡಗೋಡ ಪಟ್ಟಣದ ನೆಹರು ನಗರದಲ್ಲಿ ಜೇನು ನೋಣಗಳ ದಾಳಿಯಾಗಿದೆ. ಪರಿಣಾಮ ಆರು ಜನರಿಗೆ ಗಾಯವಾಗಿದೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪಟ್ಟಣದ ನೆಹರು ನಗರದ ನನ್ನೇಸಾಬ್ ಶೇಖ್ ಮನೆಯ ಹತ್ತಿರದ ಗಿಡದಲ್ಲಿ ಜೇನು ಗೂಡು ಕಟ್ಟಿತ್ತು. ಇವತ್ತು ಮದ್ಯಾನ ಬಿಸಿಲಿನ ತಾಪಕ್ಕೋ ಅಥವಾ ಯಾರಾದ್ರೂ ಕಲ್ಲೆಸೆದ ಕಾರಣಕ್ಕೋ ಜೇನು ನೋಣಗಳು ಎದ್ದಿವೆ. ಈ ಹೊತ್ತಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಆರು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯಗೊಳಿಸಿವೆ. ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿ ಅರುಣ್ ಕುಮಾರ್ ಕಾಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣ ಪಂಚಾಯತಿಅಧಿಕಾರಿಗಳು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು, ಪಟ್ಟಣದಲ್ಲಿನ ಭಯಾನಕ ಜೇನುಗೂಡುಗಳ ತೆರವು ಕಾರ್ಯ ಮಾಡಬೇಕು ಅನ್ನೋದು ಸಾರ್ವಕನಿಕರ ಆಗ್ರಹವಾಗಿದೆ.