ಬೆಂಗಳೂರು: ಕನ್ನಡ ಚಿತ್ರರಂಗ ಹಿರಿಯ ಪೋಷಕ ನಟಿ ಬಿ.ಜಯಾ ಇಂದು ಕೊನೆಯುಸಿರು ಎಳೆದಿದ್ದಾರೆ. ಅನೇಕ ಹಿರಿಯ ನಟರೊಂದಿಗೆ ನಟಿಸಿದ್ದ ನಟಿಯ ನಿಧನಕ್ಕೆ ಚಿತ್ರರಂಗವೇ ಕಣ್ಣೀರು ಸುರಿಸಿದೆ. ಎತ್ತರದಲ್ಲಿ ಕೊಂಚ ಕುಳ್ಳಗಿದ್ದ ಜಯಾ ಅವರು ಕುಳ್ಳಿ ಜಯಾ ಎಂದೇ ಜನಪ್ರಿಯರಾಗಿದ್ದರು. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದರು. ಹಾಸ್ಯಮಯ ಪಾತ್ರಗಳಲ್ಲೂ ಕಾಣಿಸಿಕೊಂಡು ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 1944ರಲ್ಲಿ ಜನಿಸಿದ್ದ ಜಯಾ 1958ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಣ್ಣಾವ್ರ ಅತೀ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. 6 ದಶಕಗಳ ಕಾಲ ಸಿನಿರಂಗದಲ್ಲಿ ನಿರಂತರವಾಗಿಿ ಸೇವೆ ಸಲ್ಲಿಸಿದ ಹಿರಿಮೆ ಅವರಿಗಿದೆ. ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ದಿಗ್ಗಜ ನಟರ ಜತೆ ಅಭಿನಯಸಿದ್ದ ಹಿರಿಯ ನಟಿಯನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.
Top Stories
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಬೀಜ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ-ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ: : ಕಳಪೆ ಬಿತ್ತನೆ ಬೀಜ ದಾಸ್ತಾನು, ಮಾರಾಟ ಹಾಗೂ ಅನಧಿಕೃತವಾಗಿ ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತಂತೆ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು. ಹಾವೇರಿ ಪ್ರವಾಸಿ ಮಂದಿರದಲ್ಲಿ ಮುಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ವ್ಯವಸ್ಥೆ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕಳಪೆ ಬೀಜ ಕುರಿತಂತೆ ರಾಜ್ಯ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಾಗಿದೆ. ಹಾವೇರಿ, ರಾಣೇಬೆನ್ನೂರ, ಕೊಪ್ಪಳ, ಬೀದರಗಳಲ್ಲಿ ಬಿಡಿ ಬಿತ್ತನೆ ಬೀಜ ಮಾರಾಟ, ಅನಧಿಕೃತ ಬಿತ್ತನೆ ಬೀಜಗಳ ದಾಸ್ತಾನು, ನಕಲಿ ಬಿತ್ತನೆ ಬೀಜ ಹಾಗೂ ನಕಲಿ ಗೊಬ್ಬರಗಳ ಪತ್ತೆಮಾಡಿ ಕಠಿಣ ಕ್ರಮಕೈಗೊಳ್ಳಲಾಗಿದೆ. ಈ ವರ್ಷವೂ ಈ ಅಭಿಯಾನ ಮುಂದುವರೆದಿದೆ ಎಂದು ಹೇಳಿದರು. ಬಿಡಿ ಬಿತ್ತನೆ ಬೀಜಗಳ ಮಾರಾಟ, ಅಕ್ರಮ ದಾಸ್ತಾನುಗಳ ಕುರಿತಂತೆ ಮಾಹಿತಿಗಳು ಬರುತ್ತಿವೆ. ದೂರುಗಳನ್ನು ಆಧರಿಸಿ...
ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ: ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಣೆ..!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಮಾರ್ಗಸೂಚಿ ಒಂದು ವಾರಗಳ ಕಾಲ ಮುಂದುವರಿಯಲಿದೆ. ಹೋಟೆಲ್ ಗಳಲ್ಲಿ ಸಂಜೆಯ ವರೆಗೂ ಪಾರ್ಸೆಲ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಲಾಕ್ ಡೌನ್ ಘೋಷಣೆಯ ಜೊತೆಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್: ಅಮ್ಮಾಜಿ ಕೆರೆ ಹತ್ತಿರ ಪೊಲೀಸರ ಕಣ್ಗಾವಲು..!
ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆ ಹತ್ತಿರ, ಇಂದು ಕಠಿಣ ಲಾಕ್ ಡೌನ್ ಹಿನ್ನೆಲೆಯಲ್ಲಿ 12 ಗಂಟೆ ನಂತರ ಪಟ್ಟಣದ ಒಳಗೆ ಅನಗತ್ಯವಾಗಿ ಪ್ರವೇಶಿಸುವ ವಾಹನ ಸವಾರರಿಗೆ ಪೊಲೀಸ್ರು ಬಿಸಿ ಮುಟ್ಟಿಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನ ಸವಾರರನ್ನು ತಡೆದು ಕೋವಿಡ್ನಿ ನಿಯಮಗಳನ್ನು ತಿಳಿ ಹೇಳಿದರು. ಹಾಗೆ ಸಂಚಾರ ನಿಯಮ ಪಾಲಿಸಲು ಸಾರ್ವಜನಿಕರಿಗೆ ಪೊಲೀಸ್ ಪೇದೆಗಳು ಎಚ್ಚರಿಸಿದರು.
12 ಗಂಟೆ ನಂತರವೂ ತೆರೆದಿದ್ದ ದಿನಸಿ ಅಂಗಡಿಗಳು: ಪೊಲೀಸರಿಂದ ಕ್ರಮ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಲಾಕ್ ಡೌನ್ ಸಡಿಲಿಕೆಯ ವಾರದ ಕೊನೆಯ ದಿನ ಅಗತ್ಯ ವಸ್ತುಗಳ ಖರೀಧಿಯಲ್ಲಿ ತೊಡಗಿದ್ದ ಜನ್ರು 12 ಗಂಟೆಯ ನಂತರವೂ ಅನಗತ್ಯ ತಿರುಗಾಡುತ್ತಿದ್ದ ದೃಷ್ಯ ಕಂಡು ಬಂತು. ದಿನಸಿ ಅಂಗಡಿಗಳು ಕೂಡ 12 ಗಂಟೆ ನಂತರವೂ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ಹೀಗಾಗಿ, ಮುಂಡಗೋಡ ಪ್ರೊಬೇಷನರಿ ಪಿಎಸ್ ಐ ಕುಮಾರಿ ಕಸ್ತೂರಿ, ಅಂಗಡಿಕಾರರಿಗೆ ಎಚ್ಚರಿಸಿ ಅಂಗಡಿ ಮುಂಗಟ್ಟು ಮುಚ್ಚಿಸಿದರು. ಗುಂಪು ಗುಂಪಾಗಿ ನಿಂತಿದ್ದ ಜನರನ್ನು ಎಚ್ಚರಿಸಿ ಕಳಿಸಿದ್ರು.
ಟಾಟಾ ಏಸ್ ಗಳ ಚಾಲಕರನ್ನ ಬೆದರಿಸಿ ಹಣ ದರೋಡೆ: ಆರೋಪಿಗಳ ಬಂಧನ..!
ಹುಬ್ಬಳ್ಳಿ: ನಗರದ ಗದಗ ರಿಂಗ್ ರೋಡಲ್ಲಿ ಎರಡು ಟಾಟಾ ಏಸ್ ಗಳ ಚಾಲಕರನ್ನ ಬೆದರಿಸಿ, ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಹುಬ್ಬಳ್ಳಿ ಸೆಟ್ಲಮೆಂಟ್ ಗಂಗಾಧರನಗರದ ವಿಶಾಲ ಕಾಶಿನಾಥ ಬಿಜವಾಡ ಹಾಗೂ ಕರ್ಣ ಮುಂಡಗೋಡ ಎಂದು ಗುರುತಿಸಲಾಗಿದ್ದು, ಪಲ್ಸರ್ ಬೈಕಿನಲ್ಲಿ ಹೋಗಿ ವಾಹನ ಚಾಲಕರನ್ನು ಬೆದರಿಕೆ ಹಾಕಿ ಹಣ ದೋಚುತ್ತಿದ್ದರು ಎನ್ನಲಾಗಿದೆ. ರಿಂಗ್ ರೋಡಲ್ಲಿ ಹೋಗುತ್ತಿದ್ದ ಕೃಷ್ಣಾ ಹಾಗೂ ಫಾರೂಕ ಎಂಬುವವರ ಟಾಟಾ ಏಸ್ ವಾಹನಗಳನ್ನ ನಿಲ್ಲಿಸಿ, 38 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು. ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು, ಐಟಿಸಿ ಗೋಡೌನ ಬಳಿಯಿರುವ ಸಿಸಿಟಿವಿ ಕ್ಯಾಮರಾಗಳ ಸಾಕ್ಷಿ ಹಿಡಿದು ಹಳಿಯಾಳ ರಸ್ತೆಯಲ್ಲಿ ಸಂಜೆ ಪಾರ್ಟಿ ಮಾಡುತ್ತ ಕುಳಿತ ಸಮಯದಲ್ಲಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರ ಡಿಸಿ ಕಛೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಚಿವ ಹೆಬ್ಬಾರ್ ಸಭೆ..!
ಕಾರವಾರ: ಕಾರ್ಮಿಕ ಖಾತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಶಿವರಾಮ ಹೆಬ್ಬಾರ್ ಇಂದು ಕಾರವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಕೋವಿಡ್ – 19 ನಿರ್ವಹಣೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಸದ್ಯದ ಸ್ಥಿತಿಗಳ ಕುರಿತು ಮಾಹಿತಿ ಪಡೆದು, ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು,ಸೊಂಕಿತರಿಗೆ ಚಿಕಿತ್ಸೆ, ವೈದ್ಯಕೀಯ ಸೌಕರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ, ಎಂ.ಪಿ. ಮುಲೈ ಮುಹಿಲನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಗೆ 5 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ..!
ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಉತ್ತರಕನ್ನಡ ಜಿಲ್ಲೆಗೆ ನೀಡಿರುವ ಸುಮಾರು 5 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಜಿಲ್ಲಾ ವೈದ್ಯಾಧಿಕಾರಿ ಮೂಲಕ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ , ಜಿಲ್ಲಾ ವೈದ್ಯಾಧಿಕಾರಿ, ಶರದ್ ನಾಯಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಅಸಲಿ ನೋಟಿಗೆ ಕೋಟಾನೋಟು ಮಾರಾಟ ಜಾಲ: 6 ಜನ ದಂಧೆಕೋರರ ಬಂಧನ..!
ದಾಂಡೇಲಿ: ಅಸಲಿ ನೋಟು ಪಡೆದು ನಕಲಿ ನೋಟುಗಳನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ ಕೋಟಾ ನೋಟು ಖದೀಮರ ಜಾಲವನ್ನು ದಾಂಡೇಲಿ ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ. ಅಸಲಿ ನೋಟು ಪಡೆದು , ನಕಲಿ ನೋಟು ನೀಡುತ್ತಿದ್ದ ವೇಳೆಯೇ ದಾಂಡೇಲಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಖೋಟಾನೋಟು ವ್ಯವಹಾರ ಮಾಡುತ್ತಿದ್ದ 6 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 4.5 ಲಕ್ಷ ಅಸಲಿ ನೋಟು, 72 ಲಕ್ಷದ ಖೋಟಾ ನೋಟು ವಶಕ್ಕೆ ಪಡೆಲಾಗಿದೆ. ಮಹಾರಾಷ್ಟ್ರದ ಕಿರಣ ದೇಸಾಯಿ(40), ಗಿರೀಶ ಪೂಜಾರಿ(42), ಬೆಳಗಾವಿಯ ಅಮರ ನಾಯ್ಕ(30), ಸಾಗರ ಕುಣ್ಣೂರ್ಕರ್(28), ದಾಂಡೇಲಿಯ ಶಬ್ಬೀರ್ ಕುಟ್ಟಿ(45), ಶಿವಾಜಿ ಕಾಂಬ್ಳೆ(52) ಬಂಧನಕ್ಕೊಳಗಾದವರು. ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. 4.5 ಲಕ್ಷ ಅಸಲಿ ನೋಟು ಪಡೆದು 9 ಲಕ್ಷ ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ದಾಳಿ ನಡೆಸಲಾಗಿದೆ. ಇದೇ ವೇಳೆ ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ವಶಪಡಿಸಿಕೊಂಡಿದ್ದಾರೆ....
ನಂದಿಕಟ್ಟಾದಲ್ಲಿ ಕೊರೋನಾ ಸೋಂಕಿತರಿಗೆ ಔಷಧಿ ಕಿಟ್ ವಿತರಣೆ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನ ಸೋಂಕಿತರ ಮನೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೀಡಿದ ಕೋವಿಡ್ ಕೇರ್ ಮೆಡಿಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ರೈತ ಮೂರ್ಚಾ ಅಧ್ಯಕ್ಷರಾದ ಕಲ್ಲನಗೌಡ ಬಸನ ಗೌಡ್ರ, ತಾಲೂಕ ಎಪಿಎಮ್ ಸಿ ಸದಸ್ಯರು ನಿಂಗಪ್ಪಾ ಕವಟೆ, ಪರಶುರಾಮ್ ಮೇಂತೆಕಾರ, ಸಹಕಾರ ಸಂಘದ ಸದಸ್ಯ ರಾಘವೇಂದ್ರ ಜೋಂಡಿಗನವರ, ತಾಲೂಕಾ ಯುವ ಮೂರ್ಚಾ ಕಾರ್ಯದರ್ಶಿ ಕೇದಾರಿ ಬಿ ಮುಗಳಿ ಹಾಗೂ ಕಮ್ಯೂನಿಟಿ ಹೆಲ್ತ್ ಆಪೀಸರ್ ತಾಯವ್ವಾ ಸರ್ದಾರ್, ಆಶಾ ಕಾರ್ಯಕರ್ತೆ ಸವಿತಾ ಕಮ್ಮಾರ್ ಉಪಸ್ಥಿತರಿದ್ದರು